ಗೌರವಧನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೌರವಧನವು ಅನುಗ್ರಹದಿಂದ ಸಲ್ಲಿಸಿದ ಹಣ, ಅಂದರೆ, ಕೊಡುವವನು ಯಾವುದೇ ಬಾಧ್ಯತೆ ಅಥವಾ ಕಾನೂನಾತ್ಮಕ ಕರ್ತವ್ಯವನ್ನು ಹೊಂದಿದ್ದಾನೆ ಎಂದು ಗುರುತಿಸಲ್ಪಡದೆ, ಸ್ವಯಂಸೇವಕನ ಅರ್ಹತೆಯಿಂದ ಮಾಡಿದ ಅವನ/ಅವಳ ಸೇವೆಗಳಿಗಾಗಿ ಅಥವಾ ಸಾಂಪ್ರದಾಯಿಕವಾಗಿ ರುಸುಮು ಅಗತ್ಯವಿಲ್ಲದ ಸೇವೆಗಳಿಗಾಗಿ ಒಬ್ಬ ವ್ಯಕ್ತಿಗೆ ಮಾಡುವ ಸಂದಾಯ. ಇದು ಶಾಲೆಗಳು ಅಥವಾ ಕ್ರೀಡಾ ಸಂಘಗಳಲ್ಲಿ ಶಿಕ್ಷಕರು ಹಾಗೂ ತರಬೇತುದಾರರಿಗೆ ನೀಡುವ ಸಂಭಾವನೆಯ ಸಾಮಾನ್ಯ ಅಭ್ಯಾಸವಾಗಿದೆ.[೧] ಮತ್ತೊಂದು ಉದಾಹರಣೆಯೆಂದರೆ ಒಂದು ಸಮಾವೇಶ ಸಭೆಯಲ್ಲಿ ತಮ್ಮ ಪ್ರಯಾಣ, ವಸತಿ, ಅಥವಾ ಸಿದ್ಧತಾ ಸಮಯದ ವೆಚ್ಚವನ್ನು ತುಂಬಿಸಲು ಅತಿಥಿ ಭಾಷಣಕಾರರಿಗೆ ಮಾಡಲಾದ ಸಂದಾಯ. ಕ್ರಿಶ್ಚಿಯನ್ ಚರ್ಚ್‌ನ ಶವಸಂಸ್ಕಾರಗಳು ಮತ್ತು/ಅಥವಾ ಸ್ಮಾರಕ ಆರಾಧನೆಯ ಸೇವೆಗಳಿಗೆ ಹಲವುವೇಳೆ ಗೌರವಧನದ ರೂಪದಲ್ಲಿ ಸಂದಾಯ ಮಾಡಲಾಗುತ್ತದೆ, ಏಕೆಂದರೆ ಮೇಲಧಿಕಾರಿ, ಸಂಗೀತಗಾರರು, ಆರ್ಗನ್ ವಾದಕ, ತನಿ ಗಾಯಕ ಮತ್ತು ಇತರರು ದುಃಖಪಡುತ್ತಿರುವ ಕುಟುಂಬಗಳಿಗೆ ನೀಡಿದ ಸೇವೆಗಳಿಗಾಗಿ ಯಾವುದೇ ನಿರ್ಧಾರಿತ ಶುಲ್ಕವನ್ನು ಹೊಂದಿರುವುದಿಲ್ಲ. ಅದೇ ರೀತಿ, ವಿವಾಹ ಸಮಾರಂಭದ ಪುರೋಹಿತರಿಗೆ ಕೆಲವೊಮ್ಮೆ ಗೌರವಧನದ ಮೂಲಕ ಪಾವತಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಗೌರವಧನ&oldid=1054945" ಇಂದ ಪಡೆಯಲ್ಪಟ್ಟಿದೆ