ವಿಷಯಕ್ಕೆ ಹೋಗು

ಗೋವಿ೦ದನ್ ಸು೦ದರರಾಜನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋವಿ೦ದನ್ ಸು೦ದರರಾಜನ್
ಜನನ (1953-12-11) ೧೧ ಡಿಸೆಂಬರ್ ೧೯೫೩ (ವಯಸ್ಸು ೭೦)
ಆ೦ಧ್ರ ಪ್ರದೇಶ, ಭಾರತ
ವೃತ್ತಿಮೆಟೀರಿಯಲ್ಸ್ ಎ೦ಜಿನಿಯರ್
ಪ್ರಶಸ್ತಿಗಳುಪದ್ಮಶ್ರೀ
ಶಾ೦ತಿ ಸ್ವರೂಪ್ ಭಾಟ್ನಗರ್ ಪ್ರಶಸ್ತಿ
ಬೆಸ್ಟ್ ಮೆಟಲ್ಲರ್ಜಿಸ್ಟ್ ಪ್ರಶಸ್ತಿ
ಎಫ಼್.ಐ.ಸಿ.ಸಿ.ಐ ಮೆಟಿರಿಯಲ್ಸ್ ವಿಜ್ನಾನ ಪ್ರಶಸ್ತಿ
Indian Academy of Sciences ಫೆಲ್ಲೋ
Indian National Science Academy ಫೆಲ್ಲೋ
ಇ೦ಡಿಯನ್ ನ್ಯಾಷಿನಲ್ ಅಕಾಡೆಮಿ ಆಫ್ ಇ೦ಜಿನಿಯರಿ೦ಗ್ ಫೆಲ್ಲೋ
National Academy of Sciences ಫೆಲ್ಲೋ
Indian Institute of Metals ಫೆಲ್ಲೋ
ಎ.ಎಸ್.ಎಮ್ International (society)

ಗೋವಿಂದನ್ ಸುಂದರರಾಜನ್ ಅವರು ಇ೦ಡಿಯನ್ ಮೆಟೀರಿಯಲ್ಸ್ ಎಂಜಿನಿಯರ್ ಆಗಿದ್ದು, ಸರ್ಫೇಸ್ ಇಂಜಿನಿಯರಿಂಗ್ ಮತ್ತು ಬ್ಯಾಲಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. [] [] ಭಾರತ ಸರ್ಕಾರವು ೨೦೧೪ ರಲ್ಲಿ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು . []

ಜೀವನಚರಿತ್ರೆ

[ಬದಲಾಯಿಸಿ]

ಗೋವಿಂದನ್ ಸುಂದರರಾಜನ್ ಅವರು ಆಂಧ್ರಪ್ರದೇಶದಲ್ಲಿ ೧೧ ಡಿಸೆಂಬರ್ ೧೯೫೩ ರ೦ದು [] ಜನಿಸಿದರು. ಅವರು ೧೯೭೬ ರಲ್ಲಿ ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಟಲರ್ಜಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ, ನಂತರ ೧೯೭೯ ರಲ್ಲಿ ಸ್ನಾತಕೋತ್ತರ ಪದವಿ (ಎಮ್.ಎಸ್) ಮತ್ತು ೧೯೮೧ ರಲ್ಲಿ ಓಹಿಯೋ ಸ್ಟೇಟ್ ಯೂನಿವರ್ಸಿಟಿ, ಕೊಲಂಬಸ್, ಯು.ಎಸ್.ಎ ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.[] ಅವರು ಡಿಫೆನ್ಸ್ ಮೆಟಲರ್ಜಿಕಲ್ ರಿಸರ್ಚ್ ಲ್ಯಾಬೋರೇಟರಿ (ಡಿ.ಎಮ್.ಆರ್.ಎಲ್) ನಲ್ಲಿ ವಿಜ್ಞಾನಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ೧೯೮೨ರಲ್ಲಿ ಭಾರತಕ್ಕೆ ಮರಳಿದರು. ೧೯೯೭ ರಲ್ಲಿ ಅವರು ಇಂಟರ್ನ್ಯಾಷನಲ್ ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್ ಫಾರ್ ಪೌಡರ್ ಮೆಟಲರ್ಜಿ ಮತ್ತು ನ್ಯೂ ಮೆಟೀರಿಯಲ್ಸ್ (ಎ.ಆರ್.ಸಿ.ಐ) ನ ನಿರ್ದೇಶಕರಾಗಿ [] ಸೇರಿ, ಪ್ರಸ್ತುತ ಇದೇ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪರಂಪರೆ

[ಬದಲಾಯಿಸಿ]
GTX-35VS ಕಾವೇರಿ

ಸುಂದರರಾಜನ್ ಅವರು ವಸ್ತುಗಳು ಮತ್ತು ಸಂಯುಕ್ತಗಳ ಟ್ರಿಬಲಾಜಿಕಲ್ ನಡವಳಿಕೆಯ ಬಗ್ಗೆ ವ್ಯಾಪಕವಾದ ಸಂಶೋಧನೆಯನ್ನು ಮಾಡಿರುತ್ತಾರೆ. [] ವಿಶೇಷ ಲೇಪನಗಳಲ್ಲಿ ಪರಿಣಿತರಾಗಿರುವ ಗೋವಿಂದರಾಜನ್ ಅವರ ಸಂಶೋಧನೆಗಳು ಕಾವೇರಿ ಇಂಜಿನ್ ಪ್ರೋಗ್ರಾಂ (GTRE GTX-35VS ಕಾವೇರಿ) ಗಾಗಿ ಸುಧಾರಿತ ಥರ್ಮಲ್ ಸ್ಪ್ರೇ ಲೇಪನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ. [] ಎ.ಆರ್.ಸಿ.ಐ ಸೆಂಟರ್ ಫಾರ್ ಲೇಸರ್ ಪ್ರೊಸೆಸಿಂಗ್ ಆಫ್ ಮೆಟೀರಿಯಲ್ಸ್, ಎ.ಆರ್.ಸಿ.ಐ ಸರ್ಫೇಸ್ ಇಂಜಿನಿಯರಿಂಗ್ ವಿಭಾಗ, ಸೆಂಟರ್ ಫಾರ್ ಫ್ಯೂಯೆಲ್ ಸೆಲ್ ಟೆಕ್ನಾಲಜಿ, ಚೆನ್ನೈ ಮತ್ತು ಎ.ಆರ್.ಸಿ.ಐ ಸೆಂಟರ್ ಫಾರ್ ಸೋಲ್-ಜೆಲ್ ನ್ಯಾನೊಕಾಂಪೊಸಿಟ್ ಕೋಟಿಂಗ್‌ಗಳಂತಹ ಅನೇಕ ಮುಂದುವರಿದ ಸಂಶೋಧನಾ ಸೌಲಭ್ಯಗಳ ಸ್ಥಾಪನೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗೋವಿಂದರಾಜನ್ ಅವರ ವಿನ್ಯಾಸ ಮತ್ತು ತಯಾರಿಕೆಯ ಸಾಮರ್ಥ್ಯಗಳಿಗೆ ಇದುವೇ ಸಾಕ್ಷಿಯಾಗಿದೆ. [] ಅವರ ನಾಯಕತ್ವದಲ್ಲಿ, ಅಡ್ವಾನ್ಸ್ಡ್ ಮೆಟೀರಿಯಲ್ಸ್ ಟೆಕ್ನಾಲಜಿ ಇನ್ಕ್ಯುಬೇಟರ್ (ಎ.ಎಮ್.ಟಿ), ಎ.ಆರ್.ಸಿ.ಐ ಉದ್ಯಮವನ್ನು ಸ್ಥಾಪಿಸಲಾಯಿತು. ಇದು ಪ್ರಸ್ತುತ ಐದು ಕಂಪನಿಗಳಿಗೆ ನೆಲೆಯಾಗಿದೆ. ಅವರು ಎ.ಆರ್.ಸಿ.ಐ ಪರವಾಗಿ ತಂತ್ರಜ್ಞಾನಗಳನ್ನು ವಾಣಿಜ್ಯೀಕರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಇನ್ಕ್ಯುಬೇಟರ್ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಐದು ಕಂಪನಿಗಳು ಎ.ಆರ್.ಸಿ.ಐ ನ ತಂತ್ರಜ್ಞಾನ ವರ್ಗಾವಣೆಯ ಫಲಾನುಭವಿಗಳಾಗಿವೆ. []

ಗೋವಿಂದರಾಜನ್ ಅವರು ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ ಅಲ್ಲದೆ ೫ ಪೇಟೆಂಟ್‌ಗಳನ್ನು ಸಹ ಹೊಂದಿದ್ದಾರೆ. [] [೧೦] [೧೧]

  • "Process for continuous coating deposition and an apparatus for carrying out the process" (Press release). International Advanced Research Centre for Powder Metallurgy and New Materials (ARCI). 14 October 2009. Retrieved 1 November 2014.
  • "Process for Continuous Coating Deposition and an Apparatus for Carrying Out the Process" (Press release). International Advanced Research Centre for Powder Metallurgy and New Materials (ARCI). 17 August 2012. Retrieved 1 November 2014.
  • "Process for Continuous Coating Deposition and an Apparatus for Carrying Out the Process" (Press release). International Advanced Research Centre for Powder Metallurgy and New Materials (ARCI). 14 October 2009. Retrieved 1 November 2014.
  • "Process for forming coatings on metallic bodies and an apparatus for carrying out the process" (Press release). International Advanced Research Centre for Powder Metallurgy and New Materials (ARCI). 2 August 2002. Retrieved 1 November 2014.
  • "Process for forming coatings on metallic bodies and an apparatus for carrying out the process" (Press release). International Advanced Research Centre for Powder Metallurgy and New Materials (ARCI). 2 August 2002. Retrieved 1 November 2014.

ಸುಂದರರಾಜನ್ ಅವರು ಅನೇಕ ಸೆಮಿನಾರ್‌ಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ, ಅಲ್ಲಿ ಅವರು ಮುಖ್ಯ ಭಾಷಣಗಳನ್ನೂ ಮಾಡಿದ್ದಾರೆ. [] [೧೨] ಅವರು ಹಲವಾರು ಲೇಖನಗಳನ್ನು ಪ್ರಕಟಿಸಿದ್ದು, ೧೭೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅವು [] ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪೀರ್ ರಿವ್ಯೂಡ್ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ. [೧೩] [೧೪] [೧೫] [೧೬]

ಪ್ರಶಸ್ತಿಗಳು ಮತ್ತು ಮನ್ನಣೆಗಳು

[ಬದಲಾಯಿಸಿ]

ಗೋವಿಂದನ್ ಸುಂದರರಾಜನ್ ಅವರು ೧೯೯೪ರಲ್ಲಿ [] ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಭಾರತ ಸರ್ಕಾರದ ಗೌರವಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ಅವರು ೧೯೯೫ ರಲ್ಲಿ ಅತ್ಯುತ್ತಮ ಮೆಟಲರ್ಜಿಸ್ಟ್ ಪ್ರಶಸ್ತಿ ಮತ್ತು ೨೦೦೪ರಲ್ಲಿ [] ಮೆಟೀರಿಯಲ್ಸ್ ಸೈನ್ಸ್‌ಗಾಗಿ ಎಫ಼್.ಐ.ಸಿ.ಸಿ.ಐ ಪ್ರಶಸ್ತಿಯನ್ನು ಪಡೆದಿದ್ದಾರೆ. ೧೯೯೨ ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ೧೯೯೬ ರಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ, ೧೯೯೯ ರಲ್ಲಿ ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್, ೨೦೦೨ ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಹಾಗು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಟಲ್ಸ್ ಮತ್ತು ೨೦೦೫ ರಲ್ಲಿ ಎ.ಎಸ್.ಎಮ್ ಇಂಟರ್ನ್ಯಾಷನಲ್ ಸಂಸ್ಥೆಗಳು ಸುಂದರರಾಜನ್ ಅವರಿಗೆ ಫೆಲೋಶಿಪ್ ನೀಡಿ ಗೌರವಿಸಿವೆ. ೨೦೦೬-೨೦೧೧ರ ಅವಧಿಯಲ್ಲಿ ಜೆಸಿ ಬೋಸ್ ಫೆಲೋಶಿಪ್ ಕೂಡ ಪಡೆದಿದ್ದಾರೆ. [] ಭಾರತ ಸರ್ಕಾರವು ಸುಂದರರಾಜನ್ ಅವರನ್ನು ೨೦೧೪ ರ ಗಣರಾಜ್ಯೋತ್ಸವದ ಗೌರವಗಳಲ್ಲಿ ಸೇರಿಸುವ ಮೂಲಕ ಹಾಗು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. [೧೭]

ಉಲ್ಲೇಖಗಳು

[ಬದಲಾಯಿಸಿ]
  1. "SS Bhatnagar Prize". SS Bhatnagar Prize. 1994. Retrieved 1 November 2014.
  2. "Indian Academy of Sciences". Indian Academy of Sciences. 2014. Retrieved 1 November 2014.
  3. "Padma 2014". Press Information Bureau, Government of India. 25 January 2014. Archived from the original on 2 March 2014. Retrieved 28 October 2014.
  4. "Indian Academy of Sciences". Indian Academy of Sciences. 2014. Retrieved 1 November 2014."Indian Academy of Sciences". Indian Academy of Sciences. 2014. Retrieved 1 November 2014.
  5. "Indian Institute of Science". Indian Institute of Science. 2014. Archived from the original on 24 ಸೆಪ್ಟೆಂಬರ್ 2015. Retrieved 1 November 2014.
  6. "International Advanced Research Centre for Powder Metallurgy and New Materials". International Advanced Research Centre for Powder Metallurgy and New Materials. 2014. Archived from the original on 2 ನವೆಂಬರ್ 2014. Retrieved 1 November 2014.
  7. ೭.೦ ೭.೧ "SS Bhatnagar Prize". SS Bhatnagar Prize. 1994. Retrieved 1 November 2014."SS Bhatnagar Prize". SS Bhatnagar Prize. 1994. Retrieved 1 November 2014.
  8. ೮.೦ ೮.೧ ೮.೨ ೮.೩ ೮.೪ ೮.೫ ೮.೬ "Indian Institute of Science". Indian Institute of Science. 2014. Archived from the original on 24 ಸೆಪ್ಟೆಂಬರ್ 2015. Retrieved 1 November 2014."Indian Institute of Science" Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.. Indian Institute of Science. 2014. Retrieved 1 November 2014.
  9. "Patent Buddy". Patent Buddy. 2014. Retrieved 1 November 2014.
  10. "Fresh Patents". Fresh Patents. 2014. Archived from the original on 2 ನವೆಂಬರ್ 2014. Retrieved 1 November 2014.
  11. "Justia Patents". Justia Patents. 2014. Retrieved 1 November 2014.
  12. "speech" (PDF). Ceramics.org. 2011. Archived from the original (PDF) on 24 ಜೂನ್ 2016. Retrieved 1 November 2014.
  13. Ibram Ganesh; Susana M Olhero; Aurora B Araújo; Maria R Correia; Govindan Sundararajan; José M F Ferreira (2008). "Chemisorption of phosphoric acid and surface characterization of As passivated AlN powder against hydrolysis". Langmuir. Retrieved 1 November 2014.
  14. Ibram Ganesh; Govindan Sundararajan (7 June 2010). "Hydrolysis-Induced Aqueous Gelcasting of β-SiAlON–SiO2 Ceramic Composites: The Effect of AlN Additive". Journal of the American Ceramic Society. 93 (10): 3180–3189. doi:10.1111/j.1551-2916.2010.03885.x.
  15. Ibram Ganesh; Polkampally P. Kumar; Ibram Annapoorna; Jordan M. Sumliner; Mantripragada Ramakrishna; Neha Y. Hebalkar; Gade Padmanabham; Govindan Sundararajan (2013). "Preparation and characterization of Cu-doped TiO2 materials for electrochemical, photoelectrochemical, and photocatalytic applications". Applied Surface Science. 293: 229–247. doi:10.1016/j.apsusc.2013.12.140. Retrieved 1 November 2014.
  16. Sudharshan Phani Pardhasaradhi (2008). "Optical Diagnostics Study of Gas Particle Transport Phenomena in Cold Gas Dynamic Spraying and Comparison with Model Predictions". Journal of Thermal Spray Technology. 17 (4): 551–563. doi:10.1007/s11666-008-9206-0.
  17. "Padma 2014". Press Information Bureau, Government of India. 25 January 2014. Archived from the original on 2 March 2014. Retrieved 28 October 2014."Padma 2014". Press Information Bureau, Government of India. 25 January 2014. Archived from the original on 2 March 2014. Retrieved 28 October 2014.

ಹೆಚ್ಚಿನ ಓದುವಿಕೆ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  • "Speech" (PDF). Ceramics.org. 2011. Archived from the original (PDF) on 24 ಜೂನ್ 2016. Retrieved 1 November 2014.