ಗೋರಖಪುರ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋರಖಪುರ ಜಿಲ್ಲೆ

गोरखपुर ज़िला
Location of ಗೋರಖಪುರ district in ಉತ್ತರ ಪ್ರದೇಶ
Location of ಗೋರಖಪುರ district in ಉತ್ತರ ಪ್ರದೇಶ
ದೇಶಭಾರತ
ರಾಜ್ಯಉತ್ತರ ಪ್ರದೇಶ
ಆಡಳಿತ ವಿಭಾಗಗೋರಖಪುರ
ಜಿಲ್ಲಾ ಕೇಂದ್ರಗೋರಖಪುರ
ತಾಲೂಕುಗಳು7
Government
 • ಲೋಕಸಭಾ ಕ್ಷೇತ್ರ/ಗಳುGorakhpur, Bansgaon
ಜನಸಂಖ್ಯಾ ವಿಜ್ಞಾನ
 • ಸಾಕ್ಷರತೆ73.25%.
 • ಲಿಂಗಾನುಪಾತ944
ಮುಖ್ಯ ಹೆದ್ದಾರಿಗಳುNH 28,NH 233B
Website[೧]

ಗೋರಖಪುರ ಜಿಲ್ಲೆಉತ್ತರ ಪ್ರದೇಶದ ಒಂದು ಆಡಳಿತ ವಿಭಾಗ, ಜಿಲ್ಲೆ ಮತ್ತು ಅದರ ಮುಖ್ಯ ಪಟ್ಟಣ.

ಜನಸಂಖ್ಯೆ ಮತ್ತು ವಿಸ್ತೀರ್ಣ[ಬದಲಾಯಿಸಿ]

ಗೋರಖ್‍ಪುರ ಜಿಲ್ಲೆಯ ವಿಸ್ತೀರ್ಣ 3,321 ಚ.ಕಿಮೀ. ಜನಸಂಖ್ಯೆ 44,36,275 (2011).

ಮೇಲ್ಮೈ ಲಕ್ಷಣಗಳು[ಬದಲಾಯಿಸಿ]

ಉತ್ತರ ಪ್ರದೇಶದ ಈಶಾನ್ಯ ದಿಕ್ಕಿನಲ್ಲಿ ಹಿಮಾಲಯದ ದಕ್ಷಿಣದ ತಪ್ಪಲಿನಲ್ಲಿರುವ ಈ ಜಿಲ್ಲೆ ಬಹುತೇಕ ಸಮಭೂಮಿ. ಅಲ್ಲಲ್ಲಿ ಕೆಲವು ಮರಳುಗುಡ್ಡೆಗಳಿವೆ. ರಾಪ್ತಿ, ಆಮೀ ಮತ್ತು ಘಾಘ್ರ ನದಿಗಳು ಇಲ್ಲಿ ಹರಿಯುತ್ತವೆ. ಉತ್ತರದಲ್ಲಿ ಅಲ್ಲಲ್ಲಿ ಕಾಡುಗಳುಂಟು. ಬೇಸಿಗೆಯಲ್ಲಿ ಹೆಚ್ಚು ಸೆಕೆಯಾಗುವುದಿಲ್ಲ. ವಾರ್ಷಿಕ ಮಳೆ 50". ನೆಲ ಫಲವತ್ತಾಗಿದೆ. ಆದರೆ ಪದೇ ಪದೇ ಸಂಭವಿಸುವ ಪ್ರವಾಹಗಳಿಂದಾಗಿ ಬೇಸಾಯಕ್ಕೆ ಅಡಚಣೆ ಒದಗುವುದುಂಟು.

ವಾಣಿಜ್ಯ[ಬದಲಾಯಿಸಿ]

ಬತ್ತ, ಬಾರ್ಲಿ, ಗೋದಿ, ಕಬ್ಬು ಮುಖ್ಯ ಬೆಳೆಗಳು. ಜಿಲ್ಲೆಯಲ್ಲಿ ಹಲವು ಸಕ್ಕರೆ ಕಾರ್ಖಾನೆಗಳಿವೆ. ಬುದ್ಧ ಪರಿನಿರ್ವಾಣ ಹೊಂದಿದ ಸ್ಥಳವಾದ ಕಾಸಿಯಾ ಎಂಬುದು ಗೋರಖ್‍ಪುರ ನಗರದ ಪೂರ್ವಕ್ಕೆ 55 ಕಿಮೀ ದೂರದಲ್ಲಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: