ವಿಷಯಕ್ಕೆ ಹೋಗು

ಗೋಟುವಾದ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಟುವಾದ್ಯ
ಗೋಟುವಾದ್ಯ
N. Ravikiran (center) playing the navachitravina.

ಗೋಟುವಾದ್ಯ ಇದನ್ನು ವೀಣೆಯ ಒಂದು ಪ್ರಭೇದವೆನ್ನಬಹುದು. ಇದಕ್ಕೆ ಮಹಾನಾಟಕ ವೀಣೆ ಎಂದೂ ಹೆಸರಿದೆ. ಇದು ಆಕಾರ ಹಾಗೂ ರಚನೆಗಳಲ್ಲಿ ವೀಣೆಯಂತಿದ್ದರೂ ಇದರಲ್ಲಿ ಮೆಟ್ಟಿಲುಗಳಿರುವುದಿಲ್ಲ. ಸ್ವರಸ್ಥಾನಗಳಲ್ಲಿ ತಂತಿಯನ್ನೊತ್ತಲು ಸಿಲಿಂಡರಿನ ಆಕಾರದ ಮರದ ಚೂರನ್ನು ಉಪಯೋಗಿಸುವುದರಿಂದ ಇದಕ್ಕೆ ಗೋಟುವಾದ್ಯ ಎಂದು ಹೆಸರು ಬಂದಿದೆ. ಇದರ ಧ್ವನಿವೀಣೆಯ ಧ್ವನಿಗಿಂತ ಗಾಢವಾದುದು. ಒಟ್ಟಿನಲ್ಲಿ ೨೧ ತಂತಿಗಳಿರುತ್ತವೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]