ಗೊರೂರು ಅಣೆಕಟ್ಟು

ವಿಕಿಪೀಡಿಯ ಇಂದ
Jump to navigation Jump to search
ಗೂರೂರು ಅಣೆಕಟ್ಟು ತುಂಬಿದಾಗ ಗೇಟುಗಳನ್ನು ತೆರೆದು ನೀರು ಬಿಡುತ್ತಿರುವ ದೃಶ್ಯ

ಜಿಲ್ಲಾ ಕೇಂದ್ರ ಹಾಸನ ದಿಂದ ೨೪ ಕಿ.ಮೀ. ದೂರದಲ್ಲಿರುವ ಗೊರೂರು ಹೇಮಾವತಿ ಅಣೆಕಟ್ಟು ನಿರ್ಮಾಣವಾಗಿರುವುರಿಂದ ಈ ಊರು ಈಗ ಪ್ರಸಿದ್ದಿಯಾಗಿದೆ.ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹುಟ್ಟಿ ಬೆಳೆದು,ಕೊನೆಯವರೆಗೂ ಆ ಗ್ರಾಮದಲ್ಲಿ ಬದುಕಿದ್ದರಿಂದ ಸಾಹಿತ್ಯಿಕ ವಲಯದಲ್ಲಿಯೂ ಈ ಊರು ಗುರುತಿಸಿಕೊಂಡಿದೆ.

ಇತಿಹಾಸ[ಬದಲಾಯಿಸಿ]

ಹಾಸನ-ಮಡಿಕೇರಿ ರಸ್ತೆಯಲ್ಲಿರುವ ಗೊರೂರಿನಲ್ಲಿ ಹೇಮಾವತಿ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣಕ್ಕೆ ಸರ್ಕಾರ ೧೯೬೮ರಲ್ಲಿ ಮಂಜೂರಾತಿ ನೀಡಿದ್ದು ಅಣೆಕಟ್ಟು ನಿರ್ಮಾಣ ಪೂರ್ಣಗೊಂಡಿದ್ದು ೧೯೮೫ರಲ್ಲಿ.ಈ ಯೋಚನೆ ಮಂಜೂರಾತಿ ನೀಡುವಾಗ ನಿಗದಿಪಡಿಸಿದ್ದ ಯೋಜನಾ ವೆಚ್ಚ ೧೬.೩೦ ಕೋಟಿ ರೂ. ಈಗ ೪೦.೦೦ ಕೋಟಿ ರೂ.ವೆಚ್ಚವಾಗಿದ್ದರೂ ನಾಲಾ ಕಾಮಗಾರಿಗಳಿನ್ನೂ ಪೂರ್ಣಗೊಂಡಿಲ್ಲ.ಹೇಮಾವತಿ ಯೋಜನೆಯ ಎಡದಂಡೆ ನಾಲೆಗೆ ಹೊಳೆನರಸೀಪುರ ತಾಲೂಕು ಮಾವಿನಕೆರೆ ಬಳಿ ನಿರ್ಮಿಸಿರುವ ಸುಮಾರು ೧ ಕಿ.ಮೀ. ಉದ್ದದ ಬೃಹತ್ ಮೇಲ್ಗಾಲುವೆ ಹಾಗೂ ಚನ್ನರಾಯಪಟ್ಟಣ ತಾಲೂಕು ಬಾಗೂರು-ನವಿಲೆ ನಡುವೆ ನಿರ್ಮಿಸಿರುವ ೧೦ ಕಿ.ಮೀ. ಉದ್ದದ ಸುರಂಗ ಈ ಯೋಜನೆಯ ಪ್ರಮುಖ ಮೈಲಿಗಲ್ಲು.

ಅಣೆಕಟ್ಟಿನ ಬಗ್ಗೆ ಹೆಚ್ಚಿನ ವಿವರ[ಬದಲಾಯಿಸಿ]

ಹೇಮಾವತಿ ಅಣೆಕಟ್ಟೆಯ ನೀರು ಸಂಗ್ರಹಣಾ ಸಾಮರ್ಥ್ಯ ೩೭.೧೦ ಟಿ.ಎಂ.ಸಿ. ಅಡಿಗಳು.ಅಣೆಕಟ್ಟೆಯ ಎತ್ತರ ೪೪.೫ ಮೀ.(೧೪೬ ಅಡಿಗಳು) ಅಣೆಕಟ್ಟೆಯ ಉದ್ದ ೪೯೬೨ ಮೀಟರ್.ಒಟ್ಟು ೭೮,೯೫೨ ಎಕರೆಗೆ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದ್ದು ಆ ಪೈಕಿ ಹಾಸನ ಜಿಲ್ಲೆಯ ೧,೫೫,೦೩೦ ಎಕರೆ,ತುಮಕೂರು ಜಿಲ್ಲೆಯ ೩,೧೭,೬೭೨ ಎಕರೆ, ಮಂಡ್ಯ ಜಿಲ್ಲೆಯ ೨,೩೦,೮೮೫ ಎಕರೆ ಹಾಗೂ ಮೈಸೂರು ಜಿಲ್ಲೆಯ ೫,೬೬೫ ಎಕರೆಗೆ ನೀರಾವರಿ ಒದಗಿಸುವ ಈ ಯೋಜನೆ ಬಹುತೇಕ ಅನುಷ್ಠಾನಗೊಂಡಿದೆ. ಗೊರೂರಿನಲ್ಲಿ ಶ್ಯೀ ಯೋಗನರಸಿಂಹಸ್ವಾಮಿ ದೇವಾಲಯ ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೆ.