ಗೈಟ್ಟೂನ್ ದಾರ್ಟ್ಸೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Lettere di Fra Guittone d'Arezzo, 1745
Rime

ಗೈಟ್ಟೂನ್ ದಾರ್ಟ್ಸೂ1235-94. ಇಟಾಲಿಯನ್ ಕವಿ. ಹುಟ್ಟಿದ್ದು ಟಸ್ಕನಿಯಲ್ಲಿ. ಇಟಲಿಯ ಪ್ರೇಮಕಾವ್ಯದಲ್ಲಿ ಪ್ರಣಯದ ಬಗ್ಗೆ ಒಂದು ರೀತಿಯ ಗಂಭೀರತೆ, ಅಭಿವ್ಯಕ್ತಿಯಲ್ಲಿ ಖಚಿತತೆ ಮತ್ತು ಪ್ರಾಮಾಣಿಕತೆ-ಇವುಗಳ ಹೊಸತನ ಕಾಣಿಸಿಕೊಳ್ಳುವ ಮೊದಲು ಟಸ್ಕನ್ ಶಿಷ್ಟಾಚಾರ ಕವಿತಾ ಪರಂಪರೆಯನ್ನು ಈತ ಸ್ಥಾಪಿಸಿದ. 1265ರಲ್ಲಿ ಮಿಲಿಟಸ್ ಮೇರಿ ವರ್ಜಿನಳ ಸೈನಿಕ ಮತ್ತು ಧಾರ್ಮಿಕ ಕಟ್ಟಳೆಗಳಿಗೆ ಸೇರಿರುವ ವರೆಗಿನ ಅವಧಿಯಲ್ಲಿ ಈತ ಬಹುಪಾಲು ಪ್ರೇಮಗೀತೆಗಳನ್ನೂ ಸಾನೆಟ್ಟುಗಳನ್ನೂ ಬರೆದ; ಅನಂತರದ ಕಾಲದಲ್ಲಿ ಕ್ಲಿಷ್ಟ ನೈತಿಕ ಗೀತೆಗಳ ರಚನೆಯಲ್ಲಿ ತೊಡಗಿದ. ಈತನ 41 ಕಾಗದಗಳು ಇಟಾಲಿಯನ್ ಪತ್ರಸಾಹಿತ್ಯದಲ್ಲಿಯೇ ಅತ್ಯಂತ ಹಳೆಯವು. ಈತನನ್ನು ಸ್ತುತಿ ಗೀತೆಗಳು ಎಂಬ ಪದ್ಯಜಾತಿಯ (ಲಾಡ್) ಜನಕನೆನ್ನಲಾಗಿದೆ. ದಾಂಟೆ ಮಹಾಕವಿ ಈತನನ್ನು ಪ್ರಬಲವಾಗಿ ಖಂಡಿಸಿದ್ದಾನೆ. ಫ್ರಾನ್ಸಿಸ್ಕೊ ಡ ಸ್ಯಾಂಕ್ವಿಸ್ ಈತನ ಸೂಕ್ಷ್ಮ ತರ್ಕ ವೈಖರಿಯನ್ನು ಮೆಚ್ಚಿದ್ದನಾದರೂ ಈತ ಕವಿಯೇ ಅಲ್ಲವೆಂದು ಹೇಳಿದ್ದಾನೆ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: