ಗೇವಿಯಾಲಿಸ್

ವಿಕಿಪೀಡಿಯ ಇಂದ
Jump to navigation Jump to search
ಘರಿಯಾಲ್
Gharial san diego.jpg
Conservation status
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Animalia
ವಂಶ: Chordata
ವರ್ಗ: Reptilia
ಗಣ: Crocodilia
ಕುಟುಂಬ: Gavialidae
ಕುಲ: Gavialis
ಪ್ರಭೇದ: G. gangeticus
ದ್ವಿಪದ ಹೆಸರು
Gavialis gangeticus
(Gmelin, 1789)
Gavialis gangeticus Distribution.png

ಗೇವಿಯಾಲಿಸ್ ಕ್ರಾಕೊಡಿಲಿಯ ಗಣದ ಗೇವಿಯಾಲಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಮೊಸಳೆ. ಗೇವಿಯಾಲಿಸ್ ಗ್ಯಾಂಜೆಟಿಕಸ್ ಇದರ ವೈಜ್ಞಾನಿಕ ನಾಮ.ಸ್ಥಳೀಯವಾಗಿ ಇದನ್ನು ಘರಿಯಾಲ್ ಎಂದೂ ಕರೆಯುತ್ತಾರೆ. ಭಾರತ, ಬರ್ಮ ಮತ್ತು ಮಲೇಷ್ಯಯಗಳ ನದಿಗಳಲ್ಲಿ ವಾಸಿಸುತ್ತದೆ. ಭಾರತದ ಗಂಗಾನದಿಯಲ್ಲಿ ಇದನ್ನು ಕಾಣಬಹುದು. ತೆಳುವಾದ ಮತ್ತು ಉದ್ದವಾದ ದೇಹವುಳ್ಳ ಪ್ರಾಣಿಯಿದು. ದೇಹದ ಉದ್ದ 5-6 ಮೀ (15-20'). ಮೂತಿಯೂ ಕಿರಿದಾಗಿ ಉದ್ದವಾಗಿದೆ. ಗಂಡು ಗೇವಿಯಲಿನ ಮೂತಿಯ ತುದಿಯಲ್ಲಿ ಒಂದು ರೀತಿಯ ಸಣ್ಣ ಕುಡಿಕೆಯಂಥ ಗುಬುಟು ಇದೆ. ಆದ್ದರಿಂದ ಇದನ್ನು ಹಿಂದಿ ಭಾಷೆಯಲ್ಲಿ ಗಡಿಯಲ್ (ಗಡಿ-ಗಡಿಗೆ) ಎಂದು ಕರೆಯಲಾಗುತ್ತದೆ. ಎರಡು ದವಡೆಗಳಲ್ಲೂ ಹೆಚ್ಚುಕಡಿಮೆ ಸಮಗಾತ್ರದ ಹಲ್ಲುಗಳಿವೆ. ಕಾಲುಗಳಲ್ಲಿನ ಬೆರಳುಗಳೆಲ್ಲವೂ ಪೊರೆ ಯೊಂದರಿಂದ ಕೂಡಿಕೊಂಡಿದ್ದು ಈಜಲು ಸಹಾಯಕವಾಗಿರುವ ಜಾಲಪಾದಗಳಾಗಿವೆ. ಮೂಗಿನ ಹೊಳ್ಳೆಗಳು ಮೃದುವಾಗಿದ್ದು ಬೇಕೆಂದಾಗ ಊದಿಕೊಳ್ಳಬಲ್ಲವು. ಮೀನುಗಳೇ ಗೇವಿಯಲಿನ ಪ್ರಧಾನ ಆಹಾರ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: