ಗೆರಿಲ್ಲಾ ಮಾರ್ಕೆಟಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೆರಿಲ್ಲಾ ಮಾರ್ಕೆಟಿಂಗ್

ಗೆರಿಲ್ಲಾ ಮಾರ್ಕೆಟಿಂಗ್[ಬದಲಾಯಿಸಿ]

ಗೆರಿಲ್ಲಾ ವ್ಯಾಪಾರೋಧ್ಯಮ ವೆಚ್ಚ ಕಡಿಮೆ ಬಜೆಟ್ ಒಂದು ಅಸಾಂಪ್ರದಾಯಿಕ ರೀತಿಯಲ್ಲಿ ತಮ್ಮ ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಉತ್ತೇಜಿಸಲು ಸಣ್ಣ ವ್ಯವಹಾರಗಳಿಗೆ ವಿನ್ಯಾಸ ಒಂದು ಜಾಹೀರಾಯತು ತಂತ್ರ ಪರಿಕಲ್ಪನೆಯಾಗಿದೆ.ಇದು ಶಕ್ತಿ ಮತ್ತು ಕಲ್ಪನೆಯನ್ನು ಒತ್ತು ಸಾರ್ವಜನಿಕರ ಗಮನ ಸೆಳೆಯುವ ಮೇಲೆ ಹೆಚ್ಚು ವೈಯಕ್ತಿಕ ಮತ್ತು ಸ್ಮರಣೀಯ ಮಟ್ಟದಲ್ಲಿ ಕೆಲವು ದೊಡ್ಡ ಕಂಪನಿಗಳು ಅಸಾಂಪ್ರದಾಯಿಕ ಜಾಹೀರತು ತಂತ್ರಗಳನ್ನು ಬಳಸುತ್ತಾರೆ,ಗೆರಿಲ್ಲಾ ಮಾರ್ಕೆಟಿಂಗ್ ಎಂದು ಘೋಷಿಸಿದೆ ಆದರೆ ಆ ಕಂಪನಿಗಳು ಹೆಚ್ಚಿನ ಬಜೆಟ್ ಹೊಂದಿರುತ್ತದೆ ಮತ್ತು ಬ್ರ್ಯಾಂಡ್ ಈಗಾಗಲೇ ಗೋಚರಿಸುತ್ತದೆ.

ಗೆರಿಲ್ಲಾ ಮಾರ್ಕೆಟಿಂಗ್ ಚಟುವಟಿಕೆಗಳನ್ನು ಬೀದಿಗಳಲ್ಲಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಮಾಡಲಾಗುತ್ತದೆ,ಹಾಗು ಶಾಪಿಂಗ್ ಕೇಂದ್ರಗಳಲ್ಲಿ ಉದ್ಯಾನವನಗಳಲ್ಲಿ ಅಥವಾ ಬೀಚ್ ಗಳಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತದೆ.ಗೆರಿಲ್ಲಾ ಮಾರ್ಕೆಟಿಂಗ್ ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸಲು ಅನೇಕ ಕೌಷಲ್ಯಗಳು ಮತ್ತು ಅಭ್ಯಾಸಗಳು ಬಳಸುಕೊಳುತ್ತದೆ.ಈ ಮಾರ್ಕೆಟಿನ ಪ್ರಥಮ ಗುರಿ ಗ್ರಾಹಕರಲ್ಲಿ ಭಾವನಾತ್ಮಕ ಪ್ರತಿಕ್ರಿಯೆಯನ್ನು ಹೆಚ್ಚಿಸುವುದು ಮತ್ತು ಮಾರ್ಕೆಟಿನ ಕೊನೆಯ ಗುರಿ ಗ್ರಾಹಕರ ಮನದಲ್ಲಿ ಅವರ ಬ್ರ್ಯಾಂಡ್ ಅನೇಕ ರೀತಿಯಲ್ಲಿ ಉಳಿದುಕೊಳ್ಳ್ಳುವುದು. ಗೆರಿಲ್ಲಾ ಮಾರ್ಕೆಟಿನ ಪ್ರಮುಖ ಸವಾಲು ಎಂದರೆ,ಸರಿಯಾದ ಜಾಗ ಮತ್ತು ಸಮಯದಲ್ಲಿ ತಮ್ಮ ಕಾರ್ಯಚರಣೆಯನ್ನು ಯಾವುದೇ ಕಾನೂನು ಸಮಸ್ಯೆ ಇಲ್ಲದೆ ನಿರ್ವಹಿಸುವುದು .

ಗೆರಿಲ್ಲಾ ಮಾರ್ಕೆಟಿಂಗ್ ಸಾಂಪ್ರದಾಯಿಕ ಮಾರ್ಕೆಟಿಂಗ್ ಪ್ರಯತ್ನಗಳಿಗಿಂತ ಸ್ವಲ್ಪ ಬಿನ್ನವಾಗಿರುತ್ತದೆ.ಗೆರಿಲ್ಲಾ ಮಾರ್ಕೆಟಿಂಗ್ ಸಾಂಪ್ರದಾಯಿಕ ಲಾಭಗುರಿಯ ಹಿಂದೆ ಹೋಗುವುದು ಮರಾಟ ಮತ್ತು ಬೆಳವಣಿಗೆ ಆದರೆ ಇದನ್ನು ಮಾಡುವ ರೀತಿ ಅಸಾಂಪ್ರದಾಯಿಕ ರೀತಿಯಲ್ಲಿ ಆಗಿರುತ್ತದೆ.ಕತ್ತಲೆಯಾದ ಆರ್ಥಿಕ ದಿನಗಳಲ್ಲಿ ಅರ್ಪಣೆಗಳ್ಲನ್ನು ವಿಸ್ತರಿಸುವುದನ್ನು ಹೆಚ್ಚಿಸುವುದು ಇದರಲ್ಲಿ ಗ್ರಹಕರಲ್ಲಿ ಪ್ರತಿಖರೀದಿಯನ್ನು ಹೆಚ್ಚಿಸುವುದು.ಈ ಮಾರ್ಕೆಟಿಂಗ್ ಹೇಳುವುದು ಎನೆಂದರೆ ನೀವು ಹಣವನ್ನು ಹೂಡಿಕೆ ಮಾಡುವ ಬದಲು ಸಮಯ ಶಕ್ತಿ ಕಲ್ಪನೆ ಮತ್ತು ಜ್ನಾನವನ್ನು ಹೂಡಿಕೆ ಮಾಡಿ ಇದರಲ್ಲಿ ಪ್ರಮುಖ ಉದ್ದೇಶವು ಮಾರಟವಲ್ಲ ಲಾಭವಾಗಿರುತ್ತದೆ.ಈ ರೀತಿಯಾದ ಪ್ರತಿ ವಹಿವಾಟಿನಲ್ಲಿ ರೀತಿಯಾಗಿ ಬೆಳಯಬಹುದು ಅಥವ ಆರ್ಥಿಕವಾಗಿ ಬೆಳಯಬಹುದು.

ಪ್ರತಿ ವರ್ಷವು ಒಬ್ಬ ಗ್ರಾಹಕನೊಂದಿಗೆ ಆದಷ್ಟು ಹೆಚ್ಚಿನ ವಹಿವಾಟಿನ ಮಾಡಬೇಕು ಈ ಕಾರ್ಯವನ್ನು ಮಾಡುವಲ್ಲಿ ಬಳೆಸುವ ಪ್ರಮುಖ ಅಸ್ತ್ರ ದೂರವಾಣಿ.ದೂರವಾಣಿ ಒಂದು ಗಮನಾರ್ಹವಾಗಿ ಪರಿಣಾಮಕಾರಿ ಅನುಸರಣ ವೆಪನ್.ದೂರವಾಣಿಯನ್ನು ಎಲ್ಲಾ ಗ್ರಹಕರ ವಹಿವಾಟಿಗೆ ಉಪಯೋಗಿಸಬಾರದು.ಆದರೆ ಸಂಶೋದನೆ ಹೇಳುವುದು ಎನೆಂದರೆ ಈ ರೀತಿಯಗಿ ಮಾಡುವುದರಿಂದ ನಿಮ್ಮ ಮಾರಟ ಮತ್ತು ಲಾಭ ಹೆಚ್ಚಾಗುತ್ತದೆ.ದೂರವಾಣಿ ಅನುಸರಣಾ ಒಂದು ಕಷ್ಟದ ಕೆಲಸ ಆದರೆ ಇದು ಪರಿಣಾಮಕಾರಿ. ಗೆರಿಲ್ಲಾ ಮಾರ್ಕೆಟಿಂಗ್ ಕೇಕ್ ತಿನ್ನುವಷ್ಟು ಸುಲಭವಲ್ಲ.ಇ-ಮೇಲ್, ದೂರವಾಣಿಗೆ ಪ್ರಮುಖವಾದ ಎದುರಾಳಿ,ದೂರವಾಣಿಯನ್ನು ಮೀರಿಸಬಲ್ಲ ಒಂದು ವಿಧಾನ ಆದರೆ ಇದರಲ್ಲಿ ಬಹಳ ಖರ್ಚು ಇದೆ ಇದು ತ್ವರಿತ.ಇ-ಮೇಲ್ ನಮ್ಮ ಕಾಳಜಿಯನ್ನು ತೋರಿಸುತದೆ ಮತ್ತು ನಮ್ಮ ಸಂಬಂಧಗಳನ್ನು ಬಳಿಷ್ಟಗೊಳಿಸುತ್ತದೆ.

ಗೆರಿಲ್ಲಾ ಅವರಿಗೆ ಗೊತ್ತು ತಮ್ಮ ಇಂದಿನ ಗ್ರಾಹಕರಿಗೆ ಹೆಚಿನಾ ಲಾಭ ಪಡೆದುಕೊಳ್ಳಬಹುದು.ಅವರು ಗ್ರಾಹಕರನ್ನು ದೇವರಾಗಿ ಪರಿಗಣಿಸುತ್ತಾರೆ.ಇವರು ವಿಶ್ವದರ್ಜೆಯ ನಿಪುಣರಾಗಿರುತ್ತಾರೆ.ತಮ್ಮ ಗ್ರಾಹಕರ ಖರೀದಿಯನ್ನು ಹೆಚಿಸುವ ರೀತಿಯಲ್ಲಿ ಎಕೆಂದರೆ ಒಬ್ಬ ಹೊಸ ಗ್ರಾಹಕನಿಗೆ ಉತ್ಪನ್ನವನ್ನು ಮಾರಾಟವನ್ನು ಮಾಡುವುದರಲ್ಲಿ ಆರು ಪಟ್ಟು ಹೆಚ್ಚಿನ ವೆಚ್ಚವಾಗುತ್ತದೆ ಇದರ ಬದಲಾಗಿ ಒಬ್ಬ ಹಳೆಯ ಗ್ರಾಹಕನನ್ನು ಸಂತೋಷಗಳಿಸುವುದು ಕಮ್ಮಿ ಖರ್ಚು ಆಗುತದೆ.ಗೆರಿಲ್ಲಾ ಮಾರ್ಕೆಟ್ ಮಾಡುವವರಿಗೆ ಒಬ್ಬ ಅಪರಿಚಿತರನ್ನು ತಮ್ಮ ಸ್ನೇಹಿತನಾಗಿ ಮಾಡುವ ಕಲೆ ತಿಳಿದಿರುತದೆ.ಇದರಿಂದ ಮಾರ್ಕೆಟಿಂಗ್ ವೆಚ್ಚ ಕಡಿತವಾಗುತ್ತದೆ ಮತ್ತು ಗ್ರಾಹಕರ ಹಾಗು ಉತ್ಪದಿಸುವವರ ಸಂಬಂಧ ಬೆಳೆಯುತ್ತದೆ.ನಿಮ್ಮ ಗ್ರಾಹಕರು ತಮ್ಮ ಇ-ಮೇಲ್ ಅನ್ನು ನೋಡಿದಾಗ ಹಲವಾರು ಅನಗತ್ಯ ಮೇಲ್ ಇರುತ್ತವೆ.ಆದರು ಅವರು ನಿಮ್ಮ ಇ-ಮೇಲ್ ಅನ್ನು ಅಳಿಸುವದಿಲ್ಲ ಎಕೆಂದರೆ ನೀವು ಅವರಿಗೆ ಪರಿಚಿತರಾಗಿರುತೀರ.

ಇದರಿಂದ ಗ್ರಾಹಕರ ತಮ್ಮ ಖರೀದಿಯನ್ನು ಸ್ವಯಂಪ್ರೇರಿತರಾಗಿ ಹೆಚ್ಚಿಸಿಕೊಳ್ಳುತ್ತಾರೆ.ಅವರು ಹೊಸ ಹೊಸ ಉತ್ಪನ್ನವನ್ನು ನೋಡುತ್ತಾರೆ ಮತ್ತು ಅದನ್ನು ಖರೀದಿಸುತ್ತಾರೆ.ಗ್ರಾಹಕರು ತಮ್ಮಗೆ ತಿಳಿದಿರುವ ಕಂಪನಿಯ ಜೊತೆ ವ್ಯವಹಾರ ಮಾಡಲು ಉತ್ಸುಕರಾಗಿರುತ್ತಾರೆ ಗೆರಿಲ್ಲಾ ಅವರಿಗೆ ಹೊಸ ಹೊಸ ಲಾಭವನ್ನು ತರುವ ಮೂಲಗಳನ್ನು ಸಿದ್ದಪಡಿಸುವುದು ತಿಳಿದಿರುತ್ತದೆ ಅವರು ಬೇರೆ ಅವರ ಜೊತೆಯಲ್ಲಿ ಸೇರಿ ತಮ್ಮ ಮಾರ್ಕೆಟಿನ ಪಾಲನ್ನು ಹೆಚ್ಚಿಸಿಕೊಳ್ಲುತ್ತಾರೆ ಹಾಗು ಮಾರ್ಕೆಟಿನ ಬಂಡವಾಳವನ್ನು ಕಡಿತ ಗೊಳಿಸುತ್ತಾರೆ.

ಉದಾ: ಹಲವಾರು ಸಂಸ್ಥೆಗಳು ಗೆರಿಲ್ಲಾ ಮಾರ್ಕೆಟಿಂಗ್ ಅಥವಾ ಸ್ಟ್ರೀಟ್ ಮಾರ್ಕೆಟಿಂಗ್ ತಂತ್ರಗಳನ್ನು ಇದರಲ್ಲಿ ಸಂಸ್ಥೆಗಳು ಸಣ್ನ ಕಂಪನಿಯಾಗಿವೆ ಆದರೆ ಗೆರಿಲ್ಲಾ ಮತ್ತು ಸ್ಟ್ರೀಟ್ ಮಾರ್ಕೆಟಿಂಗ್ ತಂತ್ರದಲ್ಲಿ ಕೆಲವು ದೊಡ್ದ ಕಂಪನಿಗಳಾಗಿವೆ. ಗೆರಿಲ್ಲಾ ಮಾರ್ಕೆಟಿಂಗ್ ಒಂದು ಸಾಂಪ್ರದಾಯಕ ತಂತ್ರ ಇದರ ಪ್ರಮುಖ ಗುರಿ ಗ್ರಾಹಕರಲ್ಲಿ ಕಂಪನಿಯ ಚಟ್ಟುವಟಿಕೆಗಳನ್ನು ಅರಿವು ಮೂಡಿಸುವುದು.

OPFOR Worldwide Equipment Guide

ಗೆರಿಲ್ಲಾ ಮಾರ್ಕೆಟಿಂಗ್ ಮೂಲಗಳು[ಬದಲಾಯಿಸಿ]

 • ಮೊದಲಿಗೆ ಗೆರಿಲ್ಲಾ ಎಂಬ ಪದವು ಬಳಾಕೆಯಾಗಿದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಸ್ಪೈನ್ ಮತ್ತು ಪೋರ್ಟುಗಲ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವಾಗ ಈ ಪದದ ಅರ್ಥ ಯುದ್ಧ ಎಂದು ಸ್ಪಾನಿಶ್ ನಲ್ಲಿ ಈ ಪದವನ್ನು ಒಂದು ಯುದ್ಧ ತಂತ್ರಕ್ಕೆ ಹೋಲಿಸುತ್ತಾರೆ. ಈ ತಂತ್ರದಲ್ಲಿ ಒಂದು ಚಿಕ್ಕ ಸೈನ್ಯವು ತನ್ನ ಎದುರಾಳಿ ಆದ ದೊಡ್ಡ ಸೈನ್ಯದ ಮೇಲೆ ಉಪಯೋಗಿಸುವ ತಂತ್ರ.
 • ಈ ಪದವು ಪ್ರಚಾರಕ್ಕೆ ಬಂದಿದ್ದು (1928-1967)ರಲ್ಲಿ, ಎರ್ನೆಸ್ಟೊ ಛೆ ಗುಎವರ ಇವನು ಈ ಗೆರಿಲ್ಲಾ ತಂತ್ರವನ್ನು ಎದುರಾಳಿಯ ರಾಜಕೀಯ ಬಲವನ್ನು ಕಡಿತಗೊಳಿಸಲು ಉಪಯೋಗಿಸಿಕೊಂಡನು. ಇವನ ಹತ್ತಿರ ಸಂಪನ್ಮೂಲಗಳು ಇರಲಿಲ್ಲ. ಉದಾಹರಣೆಗೆ: ಹಣ, ಅಸ್ತ್ರಗಳು ಮತ್ತು ಸೈನಿಕರು ಇರಲಿಲ್ಲ. ಆದರೂ ಎರ್ನೆಸ್ಟೊ ಛೆ ಗುಎವರ ತನ್ನ ಚಿಕ್ಕ ಸೈನ್ಯದೊಂದಿಗೆ ತನ್ನ ಎದುರಾಳಿಯ ಮೇಲೆ ವಿಜಯನಾದ. ಮಾರ್ಕೆಟಿಂಗ್ ನಾಯಕತ್ವ ಸ್ಪರ್ಧಿಸಲು ಹೊಸ ತಂತ್ರ ಅಗತ್ಯವಿದೆ.
 • ಗೆರಿಲ್ಲಾ ಮಾರ್ಕೆಟಿಂಗ್ ನಲ್ಲಿ ಒಂದು ವಿಧ ಆಂಬಿಯೆಂಟ್ ಮಾರ್ಕೆಂಟಿಂಗ್. ಈ ವಿಧದಲ್ಲಿ ಹೊರ ಜಾಹೀರಾತನ್ನು ಉಪಯೋಗಿಸುತ್ತೇವೆ. ಈ ತಂತ್ರದ ಮೂಲ ಗುರಿ ಗ್ರಾಹಕರಲ್ಲಿ ಅನಿರೀಕ್ಷಿಸುವುದು. ಹೇಗೆಂದರೆ ಜಾಹೀರಾತುಗಳನ್ನು ಬೇರೆ ಬೇರೆ ಜಾಗಗಳಲ್ಲಿ ಸ್ಥಾಪಿಸುವುದು ಗ್ರಾಹಕರು ಜಾಹೀರಾತನ್ನು ಯಾವ ಜಾಗಗಳಲ್ಲಿ ನಿರೀಕ್ಷಿಸುವುದಿಲ್ಲವೋ ಅಂಥಹ ಜಾಗಗಳಲ್ಲಿ ಸ್ಥಾಪಿಸುವುದು. ಈ ತಂತ್ರ ಸಫಲಗೊಳ್ಳಲು ಒಂದು ಒಳ್ಳೆಯ ಜಾಹೀರಾತು ಬೇಕಾಗಿದೆ. ಮತ್ತು ಸಾಮಾಜಿಕ ಪರಿಸರ ಮತ್ತು ಗುರಿ ಜನ ಸಂಖ್ಯೆಯ ಅಗತ್ಯವಾಗಿವೆ.
 • ಗೆರಿಲ್ಲಾ ಮಾರ್ಕೆಟ್ಟಿನ ಮತ್ತೊಂದು ವಿಧ ಸಂವೇಧನೆ ಮಾರ್ಕೆಟಿಂಗ್. ಈ ಸಂವೇದನೆ ಮಾರ್ಕೆಟ್ಟಿನ ಪ್ರಮುಖ ಗುರಿ ಪಾದಾಚಾರಿಗಳಿಗೆ ಅಚ್ಚರಿ ಮೂಡಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಚಟುವಟಿಕೆಗಳನ್ನು ಬಳಸಿ ಅದು ಜನಪ್ರಿಯತೆ ಮಟ್ಟವನ್ನು ಮೀರಿಸುತ್ತದೆ. ಉದಾಹರಣೆ: ಒಬ್ಬ ಕಲಾವಿದನು ಸಿನಿಮಾ ಮಂದಿರದ ಮುಂದೆ ನಾಟಕವನ್ನು ತೋರಿಸಿ ಜನರನ್ನು ಸಿನಿಮಾ ಮಂದಿರದ ಮುಂದೆ ಸೆಳೆದುಕೊಳ್ಳುತ್ತಾನೆ ಮತ್ತು ಚಿಕ್ಕ ಸಂಘಗಳು ಸಾಮಾಜಿಕ ಸ್ಥಳಗಳಲ್ಲಿ ಕೆಲವು ಅನಿರೀಕ್ಷಿತವಾದ ಕೆಲಸಗಳನ್ನು ಮಾಡಿ ಪಾದಚಾಲಕರ ಗಮನವನ್ನು ಸೆಳೆಯುತ್ತಾರೆ, ಈ ಕೆಲಸಗಳು ಕೇವಲ ನಿಮಿಷಗಳಲ್ಲಿ ಮುಗಿದೋಗುತ್ತವೆ.
 • ಮಾರ್ಕೆಟೆರ್ ಈ ತಂತ್ರವನ್ನು ಚನ್ನಾಗಿ ಬಳಸುತ್ತಾರೆ. ಈ ತಂತ್ರವನ್ನು ಉಪಯೋಗಿಸಿ ಪಾದಾಚಾರಿಗಳ, ಪ್ರಯಾಣಿಕರ ಗಮನ ಸೆಳೆದು ಅವರು ನೀಡಬೇಕಾದ ಸಂದೇಶಗಳನ್ನು ನೀಡುತ್ತಾರೆ. ಕೆಲವೊಮ್ಮೆ ಆಂಬಿಯೆಂಟ್ ಮಾರ್ಕೆಟಿಂಗ್ ಅನ್ನು ಹೊಡೆದು ಓಡಿ ಹೋಗು ಎಂದು ಕರೆಯುತ್ತಾರೆ. ಏಕೆಂದರೆ ಇದಕ್ಕೆ ನಿಗಿದಿತವಾದ ಸ್ಥಳ, ಜಾಗ ಮತ್ತು ಜನರು ಅಗತ್ಯವಿರುವುದಿಲ್ಲ. ಇದು ಕೆಲವು ಒಂದು ಸಾರಿ ಮಾಡುವಂತ ಕ್ರಿಯೆ.

'ಗ್ರಾಹಕ ಗ್ರಹಿಕೆ ಮೇಲೆ ಗೆರಿಲ್ಲಾ ಮಾರ್ಕೆಟ್ಟಿನ ಪರಿಣಾಮ[ಬದಲಾಯಿಸಿ]

ಗೆರಿಲ್ಲಾ ಮಾರ್ಕೆಟಿಂಗ್ ಒಂದು ಬೆಳೆಯುತ್ತಿರುವ ತಂತ್ರ. ಈ ತಂತ್ರವನ್ನು ಜಾಹೀರಾತು ಉಧ್ಯಮ ಬಳಸಿಕೊಳ್ಳುತ್ತದೆ. ಸ್ಟೆಲ್ಥ್ ಮಾರ್ಕೆಟಿಂಗ್ ಕೂಡ ಒಂದು ಪ್ರಸಿದ್ಧವಾದ ತಂತ್ರ. ಇದನ್ನು ಗೆರಿಲ್ಲಾ ಮಾರ್ಕೆಟಿಂಗ್ ಅಲ್ಲಿ ಉಪಯೋಗಿಸಿಕೊಳ್ಳುತ್ತಾರೆ. ಸೆಲೆಬ್ರೆಟಿ ಮಾರ್ಕೆಟಿಂಗ್ ಅನ್ನು ಮಾರ್ಕೆಟ್ ನಾಯಕರು ಬಳಸುತ್ತಾರೆ. ಈ ತಂತ್ರವನ್ನು ಗ್ರಾಹಕ ಗ್ರಹಿಕೆ ಮೇಲೆ ಪರಿಣಾಅಮ ಬೀಳಲು ಬಳಸಿಕೊಳ್ಳುತ್ತಾರ. ಗೆರಿಲ್ಲಾ ಮಾರ್ಕೆಟಿಂಗ್ ಒಂದು ಸುಪ್ರಸಿದ್ಧ ಮಾರ್ಕಟಿಂಗ್ ವಿಧಾನ. ಇದರಲ್ಲಿ ಜಾಹೀರಾತು ಮಾರುಕಟ್ಟೆ ಮಾಧ್ಯಮ, ನೇರೆ ಮಾರುಕಟ್ಟೆ ಸಾರ್ವಜನಿಕ ಸಂಪರ್ಕ ಮತ್ತು ಬೇರೆ ವಿಧಾನಗಳನ್ನು ಬಳಸಿಕೊಳ್ಳುತ್ತೇವೆ. ಗೆರಿಲ್ಲಾ ಮಾರ್ಕೆಟ್ಟಿನ ಒಳಗೆ ಸ್ಟೆಲ್ಥ್ ಮಾರ್ಕೆಟಿಂಗ್ ಎಂಬ ವಿಧಾನ ಬರುತ್ತದೆ. ಈ ವಿಧಾನವು ಮುಖದಿಂದ ಮುಖಕ್ಕೆ ಮಾಡುವ ಮಾರ್ಕೆಟಿಂಗ್ ವಿಧಾನ. ಇದು ಮಾರ್ಕೆಟಿಂಗ್ ಎಂದು ಕಾಣಿಸಿಕೊಳ್ಳುವುದಿಲ್ಲ.

ಗೆರಿಲ್ಲಾ ಮಾರ್ಕೆಟ್ಟಿನ ಇತಿಹಾಸ[ಬದಲಾಯಿಸಿ]

ಗೆರಿಲ್ಲಾ ಮಾರ್ಕೆಟಿಂಗ್ ಎಂಬ ಪದವನ್ನು ಮೊದಲನೇ ಬಾರಿಗೆ ಉಪಯೋಗ ಮಾಡಿದವರು ಕೊನ್ರಾಡ್ ಲೆವಿನ್ಸೋ 1986ರಲ್ಲಿ. ತಮ್ಮ ಜಗತ್ಪ್ರಸಿದ್ಧ ಪುಸ್ತಕ ಗೆರಿಲ್ಲಾ ಅಡ್ವೆರ್ಟಿಂಗ್ ಅನ್ನು ಬಿಡುಗಡೆ ಮಾಡಿದಾಗ ಲೆವಿನ್ಸೊಸ್ ಪುಸ್ತಕದಲ್ಲಿ ಅವರು ತೋರಿಸಿದ್ದು ಏನೆಂದರೆ ಒಂದು ಚಿಕ್ಕ ಕಂಪನಿಯು ತನ್ನ ಎದುರಾಳಿಯಾದ ದೊಡ್ಡ ಕಂಪನಿಯೊಂದಿಗೆ ಪೈಪೋಟೀ ಹೇಗೆ ನಡೆಸಬೇಕೆಂದು. ಜಾಹೀರಾತುಗಾರರು ಈ ಪುಸ್ತಕದಿಂದ ಅನೇಕ ವಿಷಯಗಳು ತೆಗೆದುಕೊಂಡು ಹೊಸದಾದ ಜಾಹೀರಾತು ವಸ್ಥುಗಳನ್ನು, ಕ್ರಮಗಳಾನ್ನು ಸೃಸ್ಟಿಸಿದರು. ಗೆರಿಲ್ಲಾ ಮಾರ್ಕೆಟಿಂಗ್ ಎಂಬ ಹೆಸರು ಗೆರಿಲ್ಲಾ ಯುದ್ಧ ತಂತ್ರದಿಂದ ಮೂಡಿಧೆ. ಗೆರಿಲ್ಲಾ ಮಾರ್ಕೆಟಿಂಗ್ vs. ವೈರಲ್ ಮಾರ್ಕೆಟಿಂಗ್ ಗೆರಿಲ್ಲಾ ಮಾರ್ಕೆಟಿಂಗ್ ಮತ್ತು ವೈರಲ್ ಮಾರ್ಕೆಟಿಂಗ್ ಹೆಚ್ಚು ಕಡಿಮೆ ಒಂದೇ ರೀತಿಯಾಗಿ ಕೆಲಸ ಮಾಡುತ್ತವೆ. ಗೆರಿಲ್ಲಾ ಮಾರ್ಕೆಟಿಂಗ್ ತನ್ನ ಗ್ರಾಹಕರಿಗೆ ಸಂದೇಶವನ್ನು ನೀಡುತ್ತದೆ. ವೈರಲ್ ಮಾರ್ಕೆಟಿಂಗ್ ಜನರನ್ನು ತನ್ನ ಸಂದೇಶವನ್ನು ಪ್ರಚಾರಿಸಲು ಪ್ರೋತ್ಸಾಹಿಸುತ್ತದೆ. ಮುಖ್ಯವಾಗಿ ಹೇಳುವುದೇನೆಂದರೆ ಗೆರಿಲ್ಲಾ ಮಾರ್ಕೆಟಿಂಗ್ ಮಾಡುವ ಉದ್ದೇಶ ವೈರಲ್ ಮಾರ್ಕೆಟಿಂಗ್ ಆಗಲು.

ಗೆರಿಲ್ಲಾ ಮಾರ್ಕೆಟ್ಟಿನ ಮೂಲ ವಿಷಯಗಳು[ಬದಲಾಯಿಸಿ]

 1. ಗೆರಿಲ್ಲಾ ಮಾರ್ಕೆಟ್ಟಿನ ಉದ್ದೇಶ ಶಿಕ್ಷಣ ಕೊಡುವುದಲ್ಲಾ ಜನರನ್ನು ಮನರಂಜನೆಗೊಳಿಸುವುದು ಮತ್ತು ಅವರನ್ನು ಪ್ರೋತ್ಸಾಹಿಸುವುದು.
 2. ಸೃಜನಶೀಲ ಆಲೋಚನೆಗೆ ಗೆರಿಲ್ಲಾ ಮಾರ್ಕೆಟಿಂಗ್ ಪ್ರೋತ್ಸಾಹ ನೀಡುತ್ತದೆ.
 3. ಗೆರಿಲ್ಲಾ ಮಾರ್ಕೆಟಿಂಗ್ ಜನರನ್ನು ಮಾತನಾಡಲು ಪ್ರೋತ್ಸಾಹಗೊಳಿಸುತ್ತದೆ. ಸಾಮಾನ್ಯಾವಾಗಿರುವುದನ್ನು ಅಸಾಮಾನ್ಯವಾಗಿ ಪರಿವರ್ತಿಸುತ್ತದೆ.
 4. ಸ್ವಾಭಾವಿಕ ಮತ್ತು ಅನಿರೀಕ್ಷಿತ ಗೆರಿಲ್ಲಾ ಮಾರ್ಕೆಟ್ಟಿನ ಮುಖ್ಯ ವಸ್ತುಗಳು.

ಗೆರಿಲ್ಲಾ ಮಾರ್ಕೆಟ್ಟಿನ ವಿವಿಧ ವಿಧಗಳು[ಬದಲಾಯಿಸಿ]

 • ಆಸ್ಟ್ರೋಟರ್ಫಿಂಗ್:

ಈ ತಂತ್ರವನ್ನು ಉಪಯೋಗಿಸಿ ರಾಜ ಕಾರಣೀಗಳು ತಮಗೆ ಹೆಚ್ಚಿನ ಬೆಂಬಲ ಇದೆ ಎಂದು ಜನರಿಗೆ ಹೇಳಿಕೊಡುತ್ತಾರೆ. ಈ ತಂತ್ರದಲ್ಲಿ ಜನರಿಗೆ ಹಣವನ್ನು ನೀಡಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ಜನಪ್ರಿಯ ಚಳುವಳಿ ರೀತಿಗಳಲ್ಲಿ ಒಂದು ಅನೇಕ ಕಂಪನಿಗಳು ಹಾಗು ರಾಜಕಾರಣಿಗಳು ಕೆಲವುಸಲ ಜನರಿಗೆ ಹಣವನ್ನು ನೀಡಿ ಬ್ಲಾಗನ್ನು ಬರಿಸಿಕೊಳ್ಳುತ್ತಾರೆ. ಈ ಬ್ಲಾಗ್ ನಿಜವಾದ ಬ್ಲಾಗ್ ಎಂದು ಅನಿಸುತ್ತದೆ. ಮತ್ತು ಇದರಲ್ಲಿ ಬರೆಯುವ ಜನರು ತೃಪ್ತಿಯಾದ ಗ್ರಾಹಕರೆಂದು ಕರೆದುಕೊಳ್ಳುತ್ತಾರೆ. ಈ ಬ್ಲಾಗನ್ನು ಫ್ಲಾಗ್ಸ್ ಅಥವಾ ಫೇಕ್ ಬ್ಲಾಗ್ ಎಂದು ಹೇಳುತ್ತಾರೆ.

 • ಆಂಬಿಯೆಂಟ್ ಮಾರ್ಕೆಟಿಂಗ್:

ಈ ತಂತ್ರವನ್ನು ಬ್ರಾಂಡ್ ಪ್ರಸಿದ್ಧಗೊಳಿಸಲು ಉಪಯೋಗಿಸಿಕೊಳ್ಳುತ್ತಾರೆ, ಉತ್ಪನ್ನಗಳನ್ನು ಹೆಚ್ಚಿಗೆ ತೋರಿಕೊಳ್ಳದೆ. ಸಾಮಾನ್ಯವಾಗಿ ಆಂಬಿಯೆಂಟ್ ಮಾರ್ಕೆಟಿಂಗ್ ಜಾಹೀರಾತುಗಳು ಸಾಮಾನ್ಯ ಜಾಹೀರಾತುಗಳಿಗಿಂತ ಇರುವುದಿಲ್ಲ. ಈ ಜಾಹೀರಾತುಗಳನ್ನು ಹೆಚ್ಚಾಗಿ ಜನರು ಮರೆಯುವುದಿಲ್ಲ. ಆಂಬಿಯೆಂಟ್ ಮಾರ್ಕೆಟ್ಟಿನ ಕೇಂದ್ರ ಹೆಚ್ಚಾಗಿವೆ ಏಕೆಂದರೆ ಇದನ್ನು ಮಾಡಲು ಏನು ಬೇಕಾದರೂ ಮತ್ತು ಯಾವುದನ್ನು ಬೇಕಾದರೂ ಉಪಯೋಗಿಸಿಕೊಳ್ಳಬಹುದು. ಆಂಬಿಯೆಂಟ್ ಮಾರ್ಕೆಟಿಂಗ್ ಜನಮನದಲ್ಲಿ ತುಂಬಾ ಸಮಯದ ಕಾಲ ಉಳಿದುಕೊಳ್ಳುತ್ತದೆ. ಅನೇಕ ಸಲ ಜನರಿಗೆ ಗೊತ್ತಾಗುವುದಿಲ್ಲ. ಅವರು ಇಂಥಹ ಉತ್ಪನ್ನಗಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಇದು ಆಧುನಿಕ ಪ್ರಚಾರಗಳಲ್ಲಿ ಒಂದು ಜಗತ್ ಪ್ರಸಿದ್ಧವಾದ ಒಂದು ತಂತ್ರ.

 • ಎಕ್ಸ್ಪೆರೀಯೆಂಟಲ್ ಮಾರ್ಕೆಟಿಂಗ್:

ಒಂದು ಕಡೆ ಮಾಹಿತಿ ಕೊಡುವುದರ ಮೂಲಕ ಗ್ರಾಹಕರನ್ನು ಶಿಕ್ಷಿಸುವುದು ಮುಖ್ಯ ಉದ್ದೇಶ. ಈ ತಂತ್ರವನ್ನು ವ್ಯಾಖ್ಯಾನಿಸುವುದು ತುಂಬಾ ಕಷ್ಟದ ಕೆಲಸ. ಈ ತಂತ್ರವನ್ನು ಜನರಿಗೆ ತಮ್ಮ ಅನುಭವ ತೋರಿಸಲು ಭಾವನೆಯ ವ್ಯಕ್ತವನ್ನು ಪಡೆಸಲು ಒಂದು ಅವಕಾಶ. ಈ ತಂತ್ರವು ತುಂಬಾ ಪ್ರಸಿದ್ಧವಾಗಿಲ್ಲ ಮತ್ತು ಈ ತಂತ್ರ ದೊಡ್ಡ ಕಂಪನಿಗಳು ಮಾಡುತ್ತವೆ. ಈ ತಂತ್ರ ಉಪಯೋಗಿಸಿದರೆ ತುಂಬಾ ಖರ್ಚು-ವೆಚ್ಚ ಆಗುತ್ತದೆ.

ಈ ಮೇಲಿನ ಎಲ್ಲಾ ಮಾಹಿತಿಯಿಂದ ನಮಗೆ ತಿಳಿಯುವುದೇನೆಂದರೆ ಗೆರಿಲ್ಲಾ ಮಾರ್ಕೆಟಿಂಗ್ ಅತ್ಯಂತ ಪ್ರಮುಖವಾದ ಮಾರ್ಕೆಟಿಂಗ್ ವಿಧ.

ಉಲ್ಲೇಖ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]