ಗೂರ್ಖಾ ಸಮರ
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
Anglo-Nepalese War | |||||||
---|---|---|---|---|---|---|---|
Balbhadra Kunwar, Gurkha commander of the Anglo-Nepalese War | |||||||
| |||||||
ಯುದ್ಧಾಕಾಂಕ್ಷಿಗಳು | |||||||
British East India Company | Kingdom of Nepal | ||||||
ದಂಡನಾಯಕರು ಮತ್ತು ನಾಯಕರು | |||||||
Francis Rawdon-Hastings David Ochterlony Rollo Gillespie† Bennet Marley John Sullivan Wood |
Bhimsen Thapa Amar Singh Thapa Ranjur Singh Thapa Bhakti Thapa† | ||||||
ಸಂಖ್ಯಾಬಲ | |||||||
2,179 (First campaign)[೧] 17,000 (Second campaign)[೧] | 12,000[ಸೂಕ್ತ ಉಲ್ಲೇಖನ ಬೇಕು] | ||||||
ಸಾವುನೋವುಗಳು ಮತ್ತು ನಷ್ಟಗಳು | |||||||
Unknown | Unknown |
ಗೂರ್ಖಾ ಸಮರ (೧೮೧೪–೧೮೧೬),ಹಲವು ಬಾರಿ ಇದನ್ನು ಗೊರ್ಖಾ ಸಮರ ಎಂದೂ ಅಥವಾ ಆಂಗ್ಲೊ-ನೇಪಾಳಿಗಳ ಸಮರ ಎನ್ನಲಾಗುತ್ತದೆ.ಇದು ನೇಪಾಳದ ರಾಜ್ಯಾಡಳಿತ (ಸದ್ಯ ಫೆಡರಲ್ ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ನೇಪಾಳ)ಮತ್ತು ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿ ನಡುವೆ ನಡೆದಿತ್ತು.ಗಡಿಯಲ್ಲಿನ ಉದ್ವಿಗ್ನತೆ ಮತ್ತು ರಾಜ್ಯ ವಿಸ್ತರಣೆ ಕುರಿತಂತೆ ಈ ಸಮರ ನಡೆದಿತ್ತು. ಈ ಸಮರವು ನಂತರ ಟ್ರೀಟಿ ಆಫ್ ಸುಗೌಲಿ ಯ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ೧೮೧೬ ರಲ್ಲಿ ಕೊನೆಗೊಂಡಿತು.ನೇಪಾಳದ ಒಂದ್ಮೂರಾಂಶದಷ್ಟು ಪ್ರದೇಶನ್ನು ಬ್ರಿಟಿಶ್ ರಿಗೆ ನೀಡುವ ಕರಾರಿನ ಮೇಲೆ ಈ ಒಡಂಬಂಡಿಕೆಯಾಗಿತ್ತು.
ಐತಿಹಾಸಿಕ ಹಿನ್ನೆಲೆ
[ಬದಲಾಯಿಸಿ]ನೇಪಾಳದ ಶಾಹ್ ಯುಗದ ಪ್ರಾರಂಭವು ಕಠ್ಮಂಡುವಿನ್ ಕೊಳ್ಳ ಪ್ರದೇಶವನ್ನು ಅತಿಕ್ರಮಿಸುವುದರ ಮೂಲಕ ಆರಂಭಗೊಂಡಿತು.ಇದರಲ್ಲಿ ಮಲ್ಲಾ ಒಕ್ಕೂಟದ ರಾಜಧಾನಿ ಪ್ರಾಂತವು ಆಗ ನೇಪಾಳನ್ನು ಆಳುತ್ತಿತ್ತು.ಅಂದರೆ ನೇಪಾಳವು ಮಧ್ಯಯುಗದಲ್ಲಿ ಶಾಹ್ ಅವರ ಆಳ್ವಿಕೆಗೆ ಒಳಗಾಗಿತ್ತು.
ಆಗ ಗೂರ್ಖಾಗಳ ದಾಳಿಗೆ ಪ್ರತಿಯಾಗಿ ಸಹಾಯ ನೀಡುವಂತೆ ಮಲ್ಲಾ ಒಕ್ಕೂಟ ಪ್ರದೇಶವು ಬ್ರಿಟಶ್ ರಿಗೆ ೧೭೬೭ ರಲ್ಲಿ ಮನವಿ ಮಾಡಿದ್ದೇ ಅಲ್ಲಿನ ಈ ಅನಾರೋಗ್ಯಕರ ಸಮರದ ಉದ್ಭವಕ್ಕೆ ಕಾರಣವಾಯಿತು.ಅದಲ್ಲದೇ ಸುಮಾರು ೨,೫೦೦ ಸೈನಿಕರೊಂದಿಗೆ ಈ ಗೂರ್ಖಾ ಪಡೆಯ ನಾಯಕ ಕಿನ್ಲೊಚ್ ನೇತೃತ್ವದಲ್ಲಿ ದಾಳಿಗೆ ಸಜ್ಜಾಯಿತು. ಈ ದಂಡಯಾತ್ರೆಯು ಒಂದು ವಿನಾಶಕಾರಿಯಾಗಿ ಪರಿಣಮಿಸಿತು,ಈ ಗೂರ್ಖಾ ಸೈನ್ಯಪಡೆ ಸುಲಭವಾಗಿ ಅಲ್ಲಿನ ಜನರು ಯಾರು ಮಲೇರಿಯಾದಿಂದ ಪೀಡಿತರಾಗಿರಲಿಲ್ಲವೋ ಅಥವಾ ಯಾರು ತಮ್ಮ ಕುಟುಂಬದಿದ ದೂರವಾಗಿದ್ದರೋ ಅವರ ಮೇಲೆ ದಾಳಿ ನಡೆಸಿ ಯಶಸ್ವಿಯಾಯಿತು. ಈ ನಿರರ್ಥಕ ಬ್ರಿಟಿಶ್ ಪಡೆಯು ಗೊರ್ಖಾಗಳಿಗೆ ಬಂದೂಕು,ತುಪಾಕಿಗಳನ್ನು ನೀಡಿತ್ತಾದರೂ ಅದರಲ್ಲಿ ಸಂಶಯದ ಬೀಜ ಬಿತ್ತಿ ತಮ್ಮ ಭವಿಷ್ಯತ್ ನ ವಿರೋಧಿಗಳೆಂಬುದನ್ನು ಅದು ಚೆನ್ನಾಗಿ ಅರಿತುಕೊಂಡಿತ್ತು.
ಗೂರ್ಖಾ ರಾಜ್ಯದೊಂದಿಗಿನ ಈ ನೇಪಾಳದ ದಾಳಿಯು ಗೂರ್ಖಾ ಭೂಪ್ರದೇಶವನ್ನು ನೇಪಾಳ ಎಂದು ಮರುನಾಮಕರಣ ಮಾಡಿ ತನ್ನ ರಾಜಧಾನಿಯನ್ನು ಗೂರ್ಖಾದಿಂದ ಕಠ್ಮಂಡುವಿಗೆ ಸ್ಥಳಾಂತರಿಸಿತು. ಅದಲ್ಲದೇ ಆರ್ಥಿಕವಾಗಿ ಸಬಲ ಮಧ್ಯಯುಗೀನ ನೇಪಾಳ ಈ ಗೂರ್ಖಾ ಸೈನ್ಯಪಡೆಗೆ ತಮ್ಮ ಸಮರ ಕಲೆಗಳ ತರಬೇತಿಗಾಗಿ ಈ ಪ್ರದೇಶಾದ್ಯಂತ ನೆರವು ಕಲ್ಪಿಸಿತು. ಈ ಸಮರ ಕಲೆ ಬಗೆಗಿನ ಈ ಪ್ರಚಾರವು ಪೂರ್ವ ಭಾಗದಲ್ಲಿ ಸಂಪೂರ್ಣ ವಿಫಲವಾಯಿತು. ಲಿಂಬುವಾನ್ ಸೈನ್ಯದೊಂದಿಗಿನ ಹಲವು ಸೋಲುಗಳ ನಂತರ ಗೂರ್ಖಾ ಸೈನ್ಯವು ಶಾಂತಿ ಒಪ್ಪಂದವೊಂದಕ್ಕೆ ಬಂದು ಲಿಂಬುವಾನ್ ರಾಜ್ಯಗಳನ್ನು ಪರಸ್ಪರ ಒಪ್ಪಿಗೆ ಮೇರೆಗೆ ನೇಪಾಳದಡಿ ತಂದಿತು. ಪಶ್ಚಿಮದಲ್ಲಿ ಸುಮಾರು ಎಲ್ಲಾ ಆಡಳಿತಗಾರರು ಕಾಳಿ ನದಿ ದಂಡೆಗುಂಟ ಇದ್ದ ಆಡಳಿತ ಪ್ರದೇಶಗಳು ಶರಣಾಗತಿಗೆ ಒಪ್ಪಿದವು ಇಲ್ಲವೆ ೧೭೯೦ ರಲ್ಲಿ ಅಲ್ಲಿಂದ ಜಾಗ ಖಾಲಿ ಮಾಡುವಂತಾಯಿತು. ಪಶ್ಚಿಮ ಭಾಗದ ಅಂಚಿನಲ್ಲಿದ್ದ ಕುಮೊನ್ ಪ್ರದೇಶ ಮತ್ತು ಅದರ ರಾಜಧಾನಿ ಅಲ್ಮೊರಾ ಗೂರ್ಖಾಗಳಿಗೆ ತಮ್ಮನ್ನು ಒಪ್ಪಿಸಿಕೊಂಡವು.
ಉತ್ತರದಲ್ಲಿ ಅತಿಕ್ರಮಣ ದಾಳಿಗಳು ಟಿಬೆಟ್‌ನ್ನು ಜರ್ಜರಿತ ಮಾಡಲೆತ್ನಿಸಿದವು.(ಇಲ್ಲಿ ಬಹುಕಾಲದಿಂದ ವ್ಯಾಪಾರ ಮತ್ತು ಪರ್ವತದ ದಾಟುಮಾರ್ಗಗಳ ನಿಯಂತ್ರಣಕ್ಕಾಗಿ ಕಾದಾಟ ನಡೆದಿತ್ತು)ಹೀಗಾಗಿ ಚೀನಾದ ಚಕ್ರವರ್ತಿ ಪೆಕಿಂಗ್ ನಲ್ಲಿ ಕಾರ್ಯಾಚರಣೆಗೆ ಇಳಿವಂತಾಯಿತು. ಆತ ದೊಡ್ಡ ಸೈನ್ಯವೊಂದನ್ನು ೧೭೯೨ ರಲ್ಲಿ ಕಳಿಸಿದ. ಅಲ್ಲಿ ಟಿಬೆಟ್ ನಿಂದ ನೇಪಾಳಿಗಳನ್ನು ಅಟ್ಟಲು ಕ್ರಮ ಕೈಗೊಂಡು ೫ ಕಿ.ಮೀ ಹತ್ತಿರದ ರಾಜಧಾನಿ ಕಠ್ಮಂಡುವಿಗೆ ತನ್ನ ಕಾರ್ಯಾಚರಣೆ ವರ್ಗಾಯಿಸಿದ. ಆಗ ಆಳರಸ ಬಹುದೂರ್ ಶಾಹ್ (ಪೃಥ್ವಿ ನಾರಾಯಣನ ಪುತ್ರ) ಬ್ರಿಟಿಶ್ ಗವರ್ನರ್-ಜನರಲ್ ಆಫ್ ಇಂಡಿಯಾದ ಫ್ರಾನ್ಸಿಸ್ ರಾವ್ಡೊನ್-ಹೇಸ್ಟಿಂಗ್ ಲಾರ್ಡ್ ಮೊಯೆರಾ ಗೆ ಸಹಾಯಕ್ಕಾಗಿ ಮನವಿ ಮಾಡಿಕೊಂಡನು. ಚೀನಾದೊಂದಿಗಿನ ಕಲಹವನ್ನು ತಡೆಯಲು ಕಾತುರನಾಗಿದ್ದ ಲಾರ್ಡ್ ಮೊಯೆರಾ ಕ್ಯಾಪ್ಟನ್ ಕಿರ್ಕ್ ಪ್ಯಾಟ್ರಿಕ್ ನನ್ನು ಮಧ್ಯಸ್ಥಿಕೆಗಾಗಿ ಕಳಿಸಿಕೊಟ್ಟನು.ಆದರೆ ಆತ ಇಲ್ಲಿ ಬರುವ ವೇಳೆಗೆ ಚೀನಾದೊಂದಿಗಿನ ಯುದ್ದ ಮುಗಿದುಹೋಗಿತ್ತು. ನೇಪಾಳಿಯರು ಟಿಬೆಟ್ ನಲ್ಲಿ ಹೊಂದಿದ್ದ ವ್ಯಾಪಾರಿ ಸ್ವಾಮ್ಯಗಳನ್ನು ಒತ್ತಾಯಪೂರ್ವಕವಾಗಿ ಬಿಟ್ಟುಕೊಡುವ ಒಪ್ಪಂದವೊಂದಕ್ಕೆ ಸಹಿ ಹಾಕಲು ಅವರನ್ನು ನಿರ್ದಾಕ್ಷಿಣ್ಯವಾಗಿ ಒತ್ತಾಯಿಸಲಾಯಿತು.ಅಷ್ಟೇ ಅಲ್ಲದೇ ಪ್ರತಿ ೫ ವರ್ಷಕ್ಕೊಮ್ಮೆ ಪೆಕಿಂಗ್ ಗೆ ಕಪ್ಪು ಕಾಣಿಕೆ ಸಲ್ಲಿಸುವಂತೆ ಒತ್ತಾಯಿಸಲಾಯಿತು.
ಇಂತಹ ಟಿಬೆಟ್ ನಡುವಿನ ವಹಿವಾಟಿನ ಸಂಬಂಧವನ್ನು ಮುರಿಯಲು ಗರವಾಲ್ ರಾಜ್ಯದ ಮೇಲೆ ಈ ಮೊದಲು ದಾಳಿ ಮಾಡಲು ಯೋಜನೆ ಹಾಕಲಾಗಿತ್ತು.ಆದರೆ ೧೮೦೩ ರಲ್ಲಿ ಗರವಾಲ್ ನ ರಾಜನಾಗಿದ್ದ ಪ್ರದ್ಯುಮ್ನ ಶಾಹ್ ಕೂಡಾ ಸೋಲಿಸಲ್ಪಟ್ಟಿದ್ದನು. ಆತನನ್ನು ಜನವರಿ ೧೮೦೪ ನ ಹೋರಾಟದಲ್ಲಿ ಕೊಲ್ಲಲಾಯಿತು,ನಂತರ ಎಲ್ಲಾ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಪಶ್ಚಿಮದಲ್ಲಿ ಜನರಲ್ ಅಮರ ಸಿಂಗ್ ಥಾಪಾ ಕಾಂಗ್ರಾದ ವರೆಗೂ ಭೂಪ್ರದೇಶದ ಒಡೆತನ ಹೊಂದಿದ್ದನು.ಈ ಪ್ರದೇಶವು ಪರ್ವತ ಭಾಗದಲ್ಲಿ ಅತ್ಯಂತ ಬಲಿಷ್ಠ ಕೋಟೆ ರಕ್ಷಣೆ ಪಡೆದಿತ್ತು.ಅದರ ಮೇಲೆ ಆಕ್ರಮಣ ಮಾಡಲಾಯಿತು.(ಆದಾಗ್ಯೂ ೧೮೦೯ ರಲ್ಲಿ ರಂಜಿತ್ ಸಿಂಗ್ ಪಂಜಾಬ್ ನಲ್ಲಿನ ಸಿಖ್ಖರ ರಾಜ್ಯದ ಆಡಳಿತಗಾರನಾಗಿದ್ದ ಆತ ಮಧ್ಯ ಪ್ರವೇಶಿಸಿ ನೇಪಾಳಿಗಳನ್ನು ಸಟ್ಲೆಜ್ ನದಿ ಪಾತ್ರ ಪ್ರದೇಶದಿಂದ ಓಡಿಸಿ ಬಿಟ್ಟನು.)
ಬ್ರಿಟಿಶ್ ರೂ ಕೂಡಾ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವಲ್ಲಿ ನಿರತರಾಗಿದ್ದರು. ಅದೇ ತಾನೆ ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿ ವಶಪಡಿಸಿಕೊಂಡ ನವಾಬ್ ಆಫ್ ಅವಧ್ ನ ಭೂಪ್ರದೇಶವು ಗೊರ್ಖಪೂರ್ ಎಂಬುದು ಪಾಲ್ಪಾ ರಾಜ್ಯದ ರಾಜನಿಗೆ ಅತ್ಯಂತ ಹತ್ತಿರವಾಗಿಬಿಟ್ಟಿತ್ತು.ಗೊರ್ಖಾ ಹೃದಯಭಾಗದಲ್ಲಿ ಉಳಿದ ಕಟ್ಟಕಡೆಯ ಸ್ವತಂತ್ರ ಭೂಪ್ರದೇಶ ಇದಾಗಿತ್ತು. ಬ್ರಿಟಿಶ್ ರೊಂದಿಗಿನ ರಾಜಾನ ಘರ್ಷಣೆಯು ಅತನನ್ನು ಗೂರ್ಖಾಗಳು ಸೆರೆಮನೆಯಲಿಡುವಂತಾಯಿತು.ನಂತರ ಆತನನ್ನು ಕೊಲ್ಲಲಾಯಿತು. ಆಗ ೧೮೦೬ ರಿಂದ ೧೮೩೭ ರ ವರೆಗೆ ನೇಪಾಳದ ಪ್ರಧಾನಿಯಾಗಿದ್ದ ಭೀಮಸೇನ್ ಥಾಪಾ ತನ್ನ ತಂದೆಯನ್ನೇ ಪಾಲ್ಪಾದ ರಾಜ್ಯಪಾಲನನ್ನಾಗಿ ಮಾಡಿದ.ಹೀಗಾಗಿ ಎರಡೂ ಶಕ್ತಿಗಳ ನಡುವೆ ಗಡಿಗಾಗಿ ಗಂಭೀರ ಸ್ವರೂಪದ ಘರ್ಷಣೆಗಳಾದವು.
ಈ ವ್ಯಾಜ್ಯಗಳಿಗೆ ಕಾರಣವೆಂದರೆ ಗೂರ್ಖಾ ಮತ್ತು ಬ್ರಿಟಿಶ್ ರ ನಡುವೆ ಗಡಿಯ ಬಗ್ಗೆ ಪ್ರತ್ಯೇಕ ನಿರ್ಧಿಷ್ಟ ಗಡಿಗುರುತುಗಳಿರಲಿಲ್ಲ. ನೇಪಾಳದ ಮೇಲೆ ಒಂದು ಗಡಿ ಆಯೋಗವನ್ನು ಒತ್ತಾಯಪೂರ್ವಕವಾಗಿ ಗವರ್ನರ್ ಜನರಲ್ ಹೇರಲು ಪ್ರಯತ್ನಿಸಿದಾಗ ಅದು ಸಮಸ್ಯೆಗೆ ಯಾವುದೇ ಪರಿಹಾರ ನೀಡದೇ ಹೋಯಿತು. ಗೂರ್ಖಾಗಳು ಫಲವತ್ತಾದ ಭೂಮಿ ತೆರೈ ಮೇಲೆ ದಾಳಿ ನಡೆಸಿದಾಗ ಗಡಿಯಲ್ಲಿ ಮತ್ತಷ್ಟು ಉದ್ವಿಗ್ನ ವಾತಾವರಣ ಉಂಟಾಯಿತು.ನೇಪಾಳದ ಪರ್ವತ ಪ್ರದೇಶ ಮತ್ತು ಭಾರತದ ನಡುವೆ ಈ ಪ್ರದೇಶ ಬರುತ್ತದೆ.ಯಾಕೆಂದರೆ ಬ್ರಿಟಿಶ್ ರಿಗೆ ತಮ್ಮ ಸಂಪರ್ಕ ಕೊಂಡಿಗಳನ್ನು ಕೊಲ್ಕತ್ತಾ ಮತ್ತು ಈಶಾನ್ಯ ಭಾಗದಲ್ಲಿ ಉಳಿಸಿಕೊಳ್ಳುವ ಭಯ ಉಂಟಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಅಲ್ಲಿ ನಿಖರವಾದ ಗಡಿ ಹಂಚಿಕೆಗಳಿರಲಿಲ್ಲ ಆದ್ದರಿಂದ ಸಂಬಂಧಪಟ್ಟ ಅಧಿಕಾರಗಳ ಮಧ್ಯೆ ಯುದ್ದ-ಕಾದಾಟ-ದ್ವೇಷ ಅನಿವಾರ್ಯವಾಯಿತು.
ಯುದ್ದ
[ಬದಲಾಯಿಸಿ]ಅದೇ ವೇಳೆಗೆ ಗೂರ್ಖಾಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ನಡೆದರು.ಪೂರ್ವದಲ್ಲಿ ಸಿಕ್ಕಿಮ್,ಪಶ್ಚಿಮದಲ್ಲಿ ಕುಮಾನ್ ಮತ್ತು ಗರವಾಲ್ ಅಲ್ಲದೇ ದಕ್ಷಿಣದಲ್ಲಿ ಬ್ರಿಟಿಶ್ ರ ವ್ಯಾಪ್ತಿಯ ಒಧ್ ವರೆಗೂ ತಮ್ಮ ಭೂಪ್ರದೇಶ ವಿಸ್ತರಿಸಿದರು.ಆದರೆ ಬ್ರಿಟಿಶ ಈಸ್ಟ್ ಇಂಡಿಯಾ ಕಂಪನಿ ಮಾತ್ರ ಭಾರತದಲ್ಲಿ ತನ್ನ ಪ್ರಧಾನ ಸ್ಥಳಗಳಾದ ಕೊಲ್ಕತ್ತಾ ಮದ್ರಾಸ್ ಮತ್ತು ಮುಂಬಯಿಗಳಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು. ಇಂತಹ ಬ್ರಿಟಿಶ್ ಸಾಮ್ರಾಜ್ಯ ವಿಸ್ತರಣೆಯನ್ನು ಭಾರತದಲ್ಲಿ ಬಲವಾಗಿ ಪ್ರತಿಭಟಿಸಲಾಗಿತ್ತು.ಇದರಲ್ಲಿ ಮೂರು ಆಂಗ್ಲೊ-ಮರಾಠಾ ಯುದ್ದಗಳು ಅಲ್ಲದೇ ಪಂಜಾಬ್ ನಲ್ಲಿ ರಂಜಿತ್ ಸಿಂಗ್ ಮತ್ತು ಸಿಖ್ ಸಾಮ್ರಾಜ್ಯಗಳು ತಮ್ಮದೇ ಆದ ಸ್ವಂತ ಆಕಾಂಕ್ಷೆಗಳನ್ನು ಹೊಂದಿದ್ದವು. ಹೀಗಾಗಿ ಬ್ರಿಟಶ್ ರಿಗೆ ಈ ಗೂರ್ಖಾ ಸಮರವನ್ನು ಶೀಘ್ರವಾಗಿ ಮತ್ತು ಯಶಸ್ವಿಯಾಗಿ ನಿಲ್ಲಿಸಲೇಬೇಕಾದ ಅನಿವಾರ್ಯತೆ ಉಂಟಾಯಿತು.
ಆವಾಗ ಕಠ್ಮಂಡುವಿನ ದರ್ಬಾರ್ ನಲ್ಲಿ ನಡೆದ ಗೂರ್ಖಾ ಪಡೆಯೊಂದಿಗಿನ ಸಂವಾದವು ಬ್ರಿಟಿಶ್ ರನ್ನು ಮಟ್ಟ ಹಾಕುವ ಬಗ್ಗೆ ಆಲೋಚಿಸಿತು.ಅಮರ್ ಸಿಂಗ್ ಒಬ್ಬರೇ ಅಲ್ಲದೇ ಇನ್ನಿತರರು "ಅವರು ತಮ್ಮ ಸ್ವಂತ ಶಕ್ತಿ ಮತ್ತು ಅಧಿಕಾರ ಚಲಾಯಿಸಲು ಹಿಂಜರಿಯುವುದಿಲ್ಲ.ನಾವು ಪರ್ವತ ಪ್ರದೇಶದ ರಾಜರುಗಳೊಂದಿಗೆ ಒಪ್ಪಂದ ಮಾಡಿ ಇಂತಹ ಯುದ್ದಕ್ಕೆ ಸಿದ್ದವಾಗಬೇಕೆಂದು ಘೋಷಿಸಿದರು." ಇಂತಹ ಪರಿಸ್ಥಿತಿಗೆ ಪ್ರಧಾನ ಮಂತ್ರಿ ಭೀಮಸೇನ್ ಥಾಪಾ ಪ್ರತಿಕ್ರಿಯಿಸಿ,-"...ನಮ್ಮ ಪರ್ವತಗಳು ಮತ್ತು ಭದ್ರ ಕೋಟೆಗಳು ದೇವರ ಕೈಯಿಂದ ನಿರ್ಮಾಣಗೊಂಡಿವೆ.ಇವುಗಳನ್ನು ಯಾರಿಂದಲೂ ಜಯಿಸಲಾಗದೆಂದು ಅವರು ಘೋಷಿಸಿದರು". ನೇಪಾಳಿಯನ್ ರಿಗೆ ಬ್ರಿಟಿಶ್ ರಗಿಂತ ಅಲ್ಲಿನ ಪರ್ವತ ಪ್ರದೇಶ ಮತ್ತು ಕಣಿವೆಗಳ ಬಗ್ಗೆ ಹೆಚ್ಚಿನ ಮಾಹಿತಿ-ತಿಳಿವಳಿಕೆ ಇದೆ ಎಂಬುದನ್ನು ಗೊರ್ಖಾಗಳ ಪ್ರಧಾನ ಮಂತ್ರಿಯ ಅರಿವಿಗೆ ಬಂದಿತ್ತು.ಈ ಮೊದಲು ನಡೆದ ಯುದ್ದಗಳಲ್ಲಿ ನೇಪಾಳಿಗಳ ಪರಿಣತಿಯನ್ನು ಅವರು ಗಮನಿಸಿದ್ದಾರೆ.ಆದರೆ ಈ ಬ್ರಿಟಿಶ್ ರು ಕೇವಲ ತಮ್ಮ ಪ್ರತಿಷ್ಠೆ ಮೆರೆಯುತ್ತಾರೆಯೇ ವಿನಹ ಆಧುನಿಕ ಆಯುಧಗಳ ಬಳಕೆಯಿಂದಲೂ ದೂರವಿದ್ದಾರೆಂಬುದೂ ಅವರ ಅರಿವಿಗೆ ಬಂತು.
ಮೊದಲ ದಾಳಿಯ ಪ್ರಚಾರಾಂದೋಲನ
[ಬದಲಾಯಿಸಿ]ಬ್ರಿಟೀಷ್ ಸೇನೆ
[ಬದಲಾಯಿಸಿ]ವಿಭಿನ್ನ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ಮಾಡುವುದರಿಂದ ಈ ಗೊರ್ಖಾಗಳನ್ನು ಗೊಂದಲಕ್ಕೀಡು ಮಾಡಬೇಕೆಂಬ ಯೋಜನೆ ಅವರಿಗಿತ್ತು.ಇದರಿಂದ ಅವರ ಪಡೆಗಳ ಸ್ಥಿರತೆಯನ್ನು ಕದಡಬಹುದೆಂದೂ ಬ್ರಿಟಿಶ್ ರು ಆಲೋಚಿಸಿದ್ದರು. ಮೊದಲ ವಿಭಾಗವನ್ನು ಮೇಜರ್ ಜನರಲ್ ಡೇವಿಡ್ ಒಕ್ಟೊರ್ಲೊನಿ ಅವರ ಮುಂದಾಳತ್ವದಲ್ಲಿ ಸುಮಾರು ೯೫೦ ಭಾರತೀಯ ಸಿಪಾಯಿಗಳ ತಂಡವು ಸಿದ್ದವಾಗಿತ್ತು.ಅಲ್ಲದೇ ಕೆಲವು ಯುದ್ದ ಫಿರಂಗಿ ಸಾಮಗ್ರಿಗಳನ್ನೂ ಹೊಂದಿತ್ತು. ಅವರು ಗೂರ್ಖಾ ದೇಶದ ಪಶ್ಚಿಮ ಭಾಗಕ್ಕೆ ಪ್ರವೇಶಿಸುವ ಸನ್ನಾಹದಲ್ಲಿದ್ದರು.[೧]
ಎರಡನೆಯ ವಿಭಾಗವು ಒಟ್ಟು ೨೪೭ ಪಡೆಗಳನ್ನು ಮೇಜರ್ ಜನರಲ್ ರೊಗರ್ ಗಿಲ್ಲೆಸ್ಪೈ ಅವರ ಮುಂದಾಳತ್ವದಲ್ಲಿತ್ತು. ಈ ಕಾಲ್ದಳ ಸೈನ್ಯಪಡೆಯು ಬ್ರಿಟಿಶ್ ನ ಒಂದು ಬಟಾಲಿಯನ್ ಆಗಿ ವಿಭಾಗಿಸಲ್ಪಟ್ಟಿತ್ತು.ಅಲ್ಲದೇ ನಾಲ್ಕು ಪದಾತಿ ದಳಗಳನ್ನು ನೇಮಿಸಲಾಗಿತ್ತು. ಅವರು ಡೆಹರಾ ಡೂನ್ ಮತ್ತು ಜೈಥಕ್ ಕೋಟೆ ವಶಪಡಿಸಿಕೊಳ್ಳುವ ಸನ್ನಾಹದಲ್ಲಿದ್ದರು.[೧]
ಮೂರನೆಯ ವಿಭಾಗವು ೧೧೪ ಟ್ರೂಪ್ ಗಳ ಪಡೆಯನ್ನು ಮೇಜರ್ ಜನರಲ್ ಜಾನ್ ಸುಲ್ಲಿವನ್ ವುಡ್ ಅವರು ಮುಖ್ಯಸ್ಥರಾಗಿದ್ದರು. ಆತನು ತನ್ನ ಸೈನ್ಯವನ್ನು ಒಂದು ಬ್ರಿಟಿಶ್ ಫಿರಂಗಿ ಪಡೆ ಮತ್ತು ಐದು ಭಾರತೀಯ ಶಾಖೆಗಳನ್ನಾಗಿ ವಿಂಗಡಿಸಿದರು. ಈ ಸೈನ್ಯವು ಗೂರ್ಖಪೂರ್ ದಿಂದ ಮೊದಲಮಾಡಿ ಕಠ್ಮಂಡುವಿನ ವರೆಗೆ ತನ್ನ ಜೈತ್ರ ಯಾತ್ರೆಯನ್ನು ಕೈಗೊಂಡಿತ್ತು.[೧]
ನಾಲ್ಕನೆಯ ಮತ್ತು ಬಹುಶಃ ಅತಿ ಬಲಿಷ್ಠ ವಿಭಾಗವು ಮೇಜರ್ ಜನರಲ್ ಹಾರ್ಲೆಯ್ ಅವರ ನಾಯಕತ್ವದಲ್ಲಿತ್ತು. ಇದು ಒಟ್ಟು ೮೬೮ ಟ್ರೂಪ್ ಗಳನ್ನು ಒಳಗೊಂಡಿತ್ತು.ನಾಲ್ಕು ಭಾರತೀಯ ಬಟಾಲಿಯನ್ಸ್ ಮತ್ತು ಫಿರಂಗಿಯನ್ನೊಳಗೊಂಡ ಒಂದು ಬ್ರಿಟಿಶ್ ಬಟಾಲಿಯನ್ ಇದರ ಬೆಂಬಲಕ್ಕಿತ್ತು. ಇದು ಮಕ್ವಾನಪೂರ್ ಮೂಲಕ ಕಠ್ಮಂಡುವನ್ನು ಜಯಿಸುವ ಗುರಿ ಹೊಂದಿತ್ತು.[೧] ಬ್ರಿಟಿಶ್ ಪಡೆಗಳಿಗೆ ಲಾರ್ಡ್ ಮೊಯಿರಾ ಕಮಾಂಡರ್ ಇನ್ ಚೀಫ್ ಆಗಿದ್ದರು. ಈ ಎಲ್ಲಾ ವಿಭಾಗಗಳಲ್ಲಿ ಬಹುತೇಕ ಭಾರತೀಯ ಸಿಪಾಯಿಗಳೇ ಇದ್ದರು. ಒಕ್ಟೆರ್ಲೊನಿಯ ಸೈನ್ಯ ಪಡೆಯ ಒಂದೇ ಒಂದು ವಿಭಾಗದಲ್ಲಿ ಒಬ್ಬನೇ ಒಬ್ಬ ಬ್ರಿಟಿಶ್ ಬಟಾಲಿಯನ್ ಗೆ ಸಂಬಂಧಿಸಿದವನಿರಲಿಲ್ಲ.
ಬ್ರಿಟಿಶ್ ರ ಮೊದಲ ದಾಳಿಯ ಯೋಜನೆಯೆಂದರೆ ಸುಮಾರು ೧,೫೦೦ ಕಿ.ಮೀ (೯೩೦ ಮೈಲಿಗಳು)ಗಡಿಯುದ್ದಕ್ಕೂ ಎರಡು ಮುಂಚೂಣಿಗಳ ಸೈನ್ಯಗಳನ್ನು ಆಕ್ರಮಣ ಮಾಡುವ ಬಗೆಗಾಗಿತ್ತು. ಪೂರ್ವ ಭಾಗದ ದಳದ ಮೇಜರ್ ಜನರಲ್ ಬೆನ್ನೆಟ್ ಹಾರ್ಲೆಯ್ ಮತ್ತು ಮೇಜರ್ ಜನರಲ್ ಜಾನ್ ಸುಲ್ಲಿವನ್ ವುಡ್ ಅವರು ತಮ್ಮ ತಮ್ಮ ಪಡೆಗಳನ್ನು ಅನುಕ್ರಮವಾಗಿ ಕಠ್ಮಂಡುವಿನ ಹೃದಯ ಭಾಗದ ಕೊಲ್ಲಿ ಪ್ರದೇಶ ತರೈನೆಡೆಗೆ ಹೊರಳಿಸಿದರು. ಮೇಜರ್-ಜನರಲ್ ರೂಲ್ಲೊ ಗಿಲ್ಲೆಸ್ಪಿಯ್ ಮತ್ತು ಕರ್ನಲ್ ಡೇವಿಡ್ ಒಕ್ಟೊರ್ಲೊನಿ ತಮ್ಮ ದಳಗಳನ್ನು ಪಶ್ಚಿಮದೆಡೆಗೆ ತಿರುಗಿಸಿದರು. ಈ ಪಡೆಗಳು ಅಮರ್ ಸಿಂಗ್ ಥಾಪಾ ಅವರ ನೇತೃತ್ವದ ಗೊರ್ಖಾ ಪಡೆಗೆ ಎದುರಾದವು.
ಆಕ್ರಮಣಗಳು
[ಬದಲಾಯಿಸಿ].ಜನರಲ್ ಗಿಲ್ಲೆಸ್ಪೆಯ್ ಅವರ ಸೈನ್ಯ ತುಕುಡಿಯು ಮೊದಲ ಬಾರಿಗೆ ಗೊರ್ಖಾ ಪ್ರದೇಶವನ್ನು ಪ್ರವೇಶಿಸಿತು. ಆತನ ಸೈನ್ಯಪಡೆಯು ಡೆಹಾರಾಡೊನ್ ನನ್ನು ದಾಟಿ ನಾಲಾ ಪಾನಿಯಲ್ಲಿದ್ದ ಅಮರ್ ಸಿಂಗ್ ಅವರ ನೇತೃತ್ವದ ಗುರ್ಖಾ ಪಡೆಗಳನ್ನು ಎದುರಿಸಬೇಕಾಯಿತು. ಆತ ನಾಲ್ಕು ಪ್ರತ್ಯೇಕ ಘಟಕಗಳನ್ನು ವಿಭಾಗಿಸಿದ.ಅಲ್ಲದೇ ನಾಲ್ಕು ವಿವಿಧ ಗೊರ್ಖಾ ಸ್ಥಾನಗಳ ಮೇಲೆ ಬಂದೂಕಿನ ಸಂಕೇತದ ಮೇಲೆ ದಾಳಿ ನಡೆಸುವಂತೆ ಆಜ್ಞಾಪಿಸಿದ. ಆದಾಗ್ಯೂ ಕೇವಲ ಎರಡು ತುಕುಡಿಗಳು ಮಾತ್ರ ಈ ದಾಳಿಯಲ್ಲಿ ಪಾಲ್ಗೊಂಡವು.ಆತನ ಸೈನ್ಯಗಳನ್ನು ಗೊರ್ಖಾ ಪಡೆಗಳು ಸೆದೆಪಡೆದವು. ಗವರ್ನರ್-ಜನರಲ್ ಅಧಿಕೃತವಾಗಿ ೧ ನವೆಂಬರ್ 1814 ರಂದು ಯುದ್ದ ಸಾರಿದ ಒಂದು ದಿನದ ಮುಂಚೆಯೇ ಜನರಲ್ ಗಿಲ್ಲೆಸ್ಪಿಯ್ ಈ ಹೋರಾಟದಲ್ಲಿ ಕೊಲ್ಲಲ್ಪಟ್ಟನು. ಅದರ ಮಧ್ಯದಲ್ಲಿ ಗಿಲ್ಲೆಸ್ಪಿಯ ನ ಉತ್ತಾರಾಧಿಕಾರಿಯಾಗಿ ಮೇಜರ್-ಜನರಲ್ ಗ್ಯಾಬ್ರಿಯಲ್ ಮಾರ್ಟಿಂಡೇಲ್ ಇದರ ನಾಯಕತ್ವ ಪಡೆದಿದ್ದರು.ಕರ್ನಲ್ ಸೆಬ್ರ್ರೈಟ್ ಮಾವ್ಬೆ ಕಲಂಗಾವನ್ನು ಅಲ್ಲಿ ಕುಡಿಯುವ ನೀರಿನ ಪೂರೈಕೆ ನಿಲ್ಲಿಸುವ ಹಿಂಸೆ ಮೂಲಕ ಅದನ್ನು ವಶಪಡಿಸಿಕೊಂಡಿದ್ದನು. ಅದೇ ತಕ್ಷಣ ಮಾರ್ಟಿಂಡೇಲ್ ಅಲ್ಲಿಗೆ ಆಗಮಿಸಿದ.ಅಲ್ಲದೇ ಜೈಥಕ್ ಕದನದಲ್ಲಿ ರಂಜುರ್ ಸಿಂಗ್ ಥಾಪಾನ ೨,೦೦೦ ಪುರುಷರ ಕಾಲ್ದಳದ ಮೇಲೆ ಆತ ದಾಳಿ ಮಾಡಿದ. ಬ್ರಿಟಿಶ್ ರ ಈ ಭೀಕರ ಬಾಂಬ್ ದಾಳಿ ಗೊರ್ಖಾ ಸೈನ್ಯವನ್ನು ಹಿಂದೇಟು ಹಾಕುವಂತೆ ಮಾಡಿದವು.ಆದರೆ ಅವರು ಅದೇ ತೆರನಾದ ದಾಳಿಯಿಂದ ಬ್ರಿಟಿಶ್ ರನ್ನು ಎದುರಿಸುವುದು ದುಃಸಾಧ್ಯವಾಗಿತ್ತು.ಬ್ರಿಟಿಶ್ ರಿಗೆ ಇಲ್ಲಿನ ಪ್ರಾದೇಶಿಕ ಮಾಹಿತಿ ಇಲ್ಲವೆನ್ನುವುದು ಅವರಿಗೆ ಮನದಟ್ಟಾಗಿತ್ತು.
.ಬ್ರಿಟಿಶ್ ಜನರಲ್ಸ್ ಗಳು ಪೂರ್ವ ಭಾಗದಲ್ಲಿನ ಗುಡ್ಡ ಬೆಟ್ಟ ಪರ್ವತಗಳ ಕಣಿವೆ ಪ್ರದೇಶಗಳಲ್ಲಿ ಸೆಣಸಬೇಕಾಯಿತು,ಅದರೊಂದಿಗೆ ಅವರಿಗೆ ಈ ಪರ್ವತ ಶ್ರೇಣಿಗಳು ಸುರಕ್ಷತೆಯನ್ನೂ ನೀಡಿದವು. ವುಡ್ ಮತ್ತು ಮಾರ್ಲೆಯ್ ಇವರಿಬ್ಬರೂ ವೈರಿಯನ್ನು ಆಕ್ರಮಿಸಲು ಮೊದಲು ಒಪ್ಪಲಿಲ್ಲ. ಬುಟ್ವಾಲ್ ಗೆ ಎರಡು ಬಾರಿ ದಾಳಿಗೆ ಪ್ರಯತ್ನಿಸಿದ ವುಡ್ ನಂತರ ಗೊರ್ಖಪೂರ್ ನಲ್ಲಿ ರಕ್ಷಣೆಗಾಗಿ ಅಲ್ಲಿಯೇ ಆಶ್ರಯ ಪಡೆಯುವಂತಾಯಿತು. ಆತನ ಸ್ವದೇಶಿ ಮಿತ್ರ ಮೇಜರ್-ಜನರಲ್ ಹಾರ್ಲೆಯ್ ಕೂಡಾ ತನ್ನ ಗುರಿ ತಲುಪಲು ಸಾಧ್ಯವಾಗಲಿಲ್ಲ. ಆತ ಮುಂದುವರೆದ ನಂತರ ಸಾಮನಪೊರ್ ಮತ್ತು ಪೆರ್ಸಾದಲ್ಲಿನ ಕೇಂದ್ರ ಕಚೇರಿಗಳು ಬೆಂಬಲವಿಲ್ಲದೇ ವಿನಾಶಗೊಂಡವು.ಹೀಗಾಗಿ ಆತ ತಕ್ಷಣದಲ್ಲೇ ನಿಷ್ಕ್ರಿಯಗೊಂಡು ತನ್ನ ಪ್ರಧಾನ ಶಿಬಿರವನ್ನೇ ತೊರೆಯಬೇಕಾಯಿತು.[೧]
ಕಂಪನಿಯ ಆಶಾದಾಯಕ ಕಣ್ಣುಗಳು ಈಗ ಕೇವಲ ೯೫೦ ಸಿಪಾಯಿಗಳನ್ನು ಒಳಗೊಂಡ ಕರ್ನಲ್ ಒಕ್ಟೆರ್ಲೊನಿಯ ಪಡೆಯ ಮೇಲಷ್ಟೇ ಕೇಂದ್ರೀಕೃತವಾದವು. ಇನ್ನುಳಿದ ಜನರಲ್ಸ್ ಗಳಂತೆ ಒಕ್ಟರ್ಲೊನಿಯು ಪರ್ವತ ಪ್ರದೇಶಗಳಲ್ಲಿ ಹೆಚ್ಚಾಗಿದ್ದ ಅಮರ್ ಸಿಂಗ್ ನ ಸೈನ್ಯವನ್ನು ನಿಧಾನವಾಗಿ 1815 ರಲ್ಲಿ ಹಿಮ್ಮೆಟ್ಟಿಸುವಲ್ಲಿ ಸಫಲನಾದ.ಇದೇ ವೇಳೆಗೆ ಗೊರ್ಖಾದ ಜನರಲ್ ತನ್ನ ಮೂಲ ಕೋಟೆ ಮಾಲೌನ್ ಗೆ ಹಿಂದಿರುಗುವಂತಾಯಿತು.[೧]
ನಡೆಯುತ್ತಿದ್ದ ಡೈಯೊಂಥಾಲ್ ಹೋರಾಟವು ನಿರ್ಣಾಯಕವಾಗಿತ್ತು. ಅಮರ್ ಸಿಂಗ್ ನ ಸಮರ್ಥ ಸೇನಾದಿಪತಿ ಭಕ್ತಿ ಥಾಪಾ, ಡೈಯೊಂಥಾಲ್ ನಿಂದ ಬ್ರಿಟಿಶ್ ರನ್ನು ಓಡಿಸಲು ಮಾಡಿದ ಪ್ರಯತ್ನಗಳು ಮಲೌನ್ ಕೋಟೆಯ ರಕ್ಷಣೆಯಲ್ಲಿ ಅಷ್ಟಾಗಿ ಕೆಲಸ ಮಾಡಲಿಲ್ಲ. ಭಕ್ತಿ ಥಾಪಾ ಈ ದಾಳಿ ಪ್ರಕ್ರಿಯೆಯಲ್ಲಿ ೧೬ ಏಪ್ರಿಲ್ ನಲ್ಲಿ ಹತನಾದ.ಆಗ ಕೆಲದಿನಗಳ ಕಾಲ ಕೋಟೆ ತನ್ನ ವಶವನ್ನು ಕಳೆದುಕೊಂಡಿತ್ತು. ಆದಾಗ್ಯೂ ಅಲ್ಮೊರಾವು ಕರ್ನಲ್ ಜಸ್ಪೆರ್ ನಿಕೊಲ್ಸ್ ನ ವಶವಾಯಿತೆಂದು ಘೋಷಣೆಯಾಯಿತು.ಸುಮಾರು ೨,೦೦೦ ನಿಯಮಿತ ಸೈನ್ಯದ ಸಿಪಾಯಿಗಳು ಏಪ್ರಿಲ್ ೨೬ ರಂದು ಇದನ್ನು ವಶಪಡಿಸಿಕೊಂಡರು.ಆಗ ಅಮರ್ ಸಿಂಗ್ ಥಾಪಾನೆಗೆ ತಾನು ಬಂದೂಕುಧಾರಿ ಸಿಪಾಯಿಗಳಿಂದ ಸುತ್ತುವರೆದು ಜೀವ ಭಯದಲ್ಲಿದ್ದೇನೆಂದು ಅರಿವಾಯಿತು. ಆದರೆ ಮಲೌನಾ ಮತ್ತು ಜೈಥಕ್ ಕೋಟೆಗಳ ರಕ್ಷಣೆಯಲ್ಲಿ ತಂದೆ ಅಮರ್ ಸಿಂಗ್ ಮತ್ತು ಪುತ್ರ ರಂಜುರ್ ಅವರ ಸಾಹಸ ಮೆಚ್ಚಿದ ಒಕ್ಟೊರ್ಲೊನಿ ಇವರಿಬ್ಬರನ್ನು ಅವರ ಮನೆಗೆ ತಲುಪಿಸಿದ.(ರಂಜುರ್ ಮಲೌನಾ ಕೋಟೆಯಲ್ಲಿ ತಂದೆಗೆ ನೆರವಾಗಿದ್ದ)ಅವರ ಸೈನ್ಯ ಮತ್ತು ಆಯುಧಗಳೊಂದಿಗೆ ವಾಪಸು ಕಳಿಸಿದ. ಇದೇ ದಾಳಿಯ ಸಾಹಸದಿಂದ ಒಕ್ಟ್ರರ್ಲೊನಿಯನ್ನು ಮೇಜರ್ ಜನರಲ್ ಗೆ ಬಡ್ತಿ ನೀಡಲಾಯಿತು.[೨]
ಎರಡನೆಯ ದಾಳಿ
[ಬದಲಾಯಿಸಿ]ಒಕ್ಟ್ರರ್ಲೊನಿಯ ಯಶಸ್ವಿ ದಾಳಿಗಳನ್ನು ನಿಲ್ಲಿಸುವ ಸಲುವಾಗಿ ಕಠ್ಮಂಡು ದರ್ಬಾರ್ ನಲ್ಲಿ ನಡೆಸಿದ ೨೮ ನವೆಂಬರ್,೧೮೧೫ ರ ಶಾಂತಿ ಸಂಧಾನ ವಿಫಲವಾಯಿತು. ಈ ಸಹಿಯ ಸಂಹಿತದ ನಂತರದಲ್ಲೇ ಎರಡನೆಯ ದಾಳಿಗೆ ಆರಂಭ ಮಾಡಲಾಯಿತು. ಲಾರ್ಡ್ ಮೊಯರಾ ಅವರು ಒಕ್ಟ್ರರ್ಲೊನಿಗೆ ಸುಮಾರು ೧೭,೦೦೦ ಬಲಿಷ್ಟ ಪಡೆಯನ್ನು ಒದಗಿಸಿ ದಾಳಿಗೆ ಪ್ರೊತ್ಸಾಹಿಸಿದರು.ಆದರೆ ಮತ್ತೆ ಬಹಳಷ್ಟು ಜನ ಅದರಲ್ಲಿ ಭಾರತೀಯ ಸಿಪಾಯಿಗಳಾಗಿದ್ದರು.[೩]
ಫೆಬ್ರವರಿ ೧೮೧೬ ರಲ್ಲಿನ ದಾಳಿ ಒಕ್ಟ್ರರ್ಲೊನಿಯು ಪರ್ವತ ಪ್ರದೇಶಗಳ ಕಡಿದಾದ ಪ್ರದೇಶಗಳ ಮಾರ್ಗಗಳ ಮೂಲಕ ಅನಿಯಮಿತ ಅನುಭವದಿಂದ ಆಕ್ರಮಿಸಬೇಕಾಯಿತು. ಅಲ್ಲಿನ ವಿಫಲತೆಯು ಬ್ರಿಟಿಶ್ ರಿಗೆ ವಿನಾಶಕಾರಿ ಎಂಬುದು ಮನದಟ್ಟಾಗಿತ್ತು. ಆದರೆ ಬ್ರಿಟಿಶ್ ರ ಈ ಗುರಿ ದಾಟುವಿಕೆ ಯಶಸ್ವಿಯಾಗಿ ಅವರು ನೇರವಾಗಿ ಹಿಂದಿನಿಂದ ಗೂರ್ಖಾಗಳ ಮೇಲೆ ದಾಳಿ ಮಾಡಲು ಸಾಧ್ಯವಾಯಿತು. ಆತ ಮಕ್ವಾನಪೂರ್ ನ್ನು ವಶಪಡಿಸಿಕೊಂಡ. ಆದರೆ ಇದರಲ್ಲಿ ಬಿರುಸಿನ ದಾಳಿಯಲ್ಲಿ ನಲ್ವತ್ತೈದು ಸೈನಿಕರು ಮತ್ತು ಇಬ್ಬರು ಅಧಿಕಾರಿಗಳು ಪ್ರಾಣ ಕಳೆದುಕೊಳ್ಳಬೇಕಾಯಿತು.[೩]
ಯಾವಾಗ ಜನರಲ್ ಒಕ್ಟ್ರರ್ಲೊನಿ ಮಕ್ವಾನಪೂರೆಡೆಗೆ ಧಾವಿಸಿದನೋ ಆಗ ಸಿಕ್ಕಿಮ್ ನ ಚೊಗ್ಯಾಲ್ (ರಾಜ) ಪೂರ್ವದಲ್ಲಿದ ನೇಪಾಳಿ ಸೈನ್ಯವನ್ನು ಹಿಮ್ಮೆಟ್ಟಿಸಿದ. ಅಮರ್ ಸಿಂಗ್ ಥಾಪಾ ಈ ದಾಳಿಗಳಲ್ಲಿ ಭಾಗವಹಿಸಲಿಲ್ಲ.ಆತ ವಿಶ್ರಾಂತಿಗಾಗಿ ದೇವಾಲಯವೊಂದಕ್ಕೆ ಮರಳಿದ,ಆದರೆ ಯುದ್ದ ಮುಗಿದ ಕೆಲವೇ ದಿನಗಳಲ್ಲಿ ಮರಣವನ್ನಪ್ಪಿದ.[೩]
ಮಕ್ವಾನಪೂರ್ ದ ನಿರ್ಣಾಯಕ ದಾಳಿ ೨೮ ಫೆಬ್ರವರಿ ೧೮೧೬ ರಲ್ಲಾದಾಗ ನೆರೆಯ ಹರಿಹರಪೂರ್ ನ ಕೋಟೆ ಕೂಡಾ ವಶಪಡಿಸಿಕೊಂಡ ಕಾರಣ (ರಂಜುರ್ ಸಿಂಗ್ ತನ್ನ ಹುದ್ದೆ ತ್ಯಾಗ ಮಾಡಿದ ನಂತರ)ನೇಪಾಳಕ್ಕೆ ತೀರ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾಯಿತು. ರಾಜಧಾನಿ ಕಠ್ಮಂಡುವಿನ ಮೇಲಿನ ಬ್ರಿಟಿಶ್ ಬೆದರಿಕೆಗಳು ಈ ಶಾಂತಿ ಸಂಧಾನವನ್ನು ಯಾವುದೇ ವಿಳಂಬ, ಪ್ರತಿಕ್ರಿಯೆಯಿಲ್ಲದೇ ಸಹಿ ಹಾಕುವ ಪ್ರಸಂಗ ಬಂದೊದಗಿತು.[೩]
ಪರಿಣಾಮಗಳು
[ಬದಲಾಯಿಸಿ]ಸುಗೌಲಿ ಒಡಂಬಡಿಕೆ
[ಬದಲಾಯಿಸಿ]ಸುಗೌಲ್ ನ ಒಡಂಬಡಿಕೆಯನ್ನು ೪ಮಾರ್ಚ್ ೧೮೧೬ ರಲ್ಲಿ ಊರ್ಜಿತಗೊಳಿಸಲಾಯಿತು. ಹೀಗೆ ನೇಪಾಳ ಸಿಕ್ಕಿಮ್,ಕುಮೊನ್ ನ ಪ್ರದೇಶಗಳು ಮತ್ತು ಗರವಾಲ್ ಅಲ್ಲದೇ ತೆರೈ ನ ಬಹುತೇಕ ಭೂಪ್ರದೇಶಗಳನ್ನು ಕಳೆದುಕೊಂಡಿತು.ತರೈ ಪ್ರದೇಶದಿಂದ ಉಂಟಾಗುವ ಆದಾಯದ ಹಾನಿಗೆ ಪ್ರತಿಯಾಗಿ ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಯು ಪ್ರತಿವರ್ಷ ೨೦೦,೦೦೦ ರೂಪಾಯಿ ಪರಿಹಾರ ನೀಡಲು ಒಪ್ಪಿಕೊಂಡಿತು. ಆದರೆ ತರೈ ಭೂಪ್ರದೇಶಗಳ ಆಳ್ವಿಕೆ ಕಷ್ಟಕರವಾಗಿತ್ತು.ಅದರಲ್ಲಿನ ಕೆಲವನ್ನು ೧೮೧೬ ರಲ್ಲಿ ಮರಳಿಸಲಾಯಿತಲ್ಲದೇ ವಾರ್ಷಿಕ ಪರಿಹಾರವನ್ನು ರದ್ದುಪಡಿಸಲಾಯಿತು.
ಮೆಕಿ ನದಿಯು ಪೂರ್ವದ ಗಡಿಯಾಗಿ ಮಾರ್ಪಟ್ಟಿತು.ನಂತರ ಮಹಾಕಾಳಿ ನದಿಯು ನೇಪಾಳನ ಪಶ್ಚಿಮ ಗಡಿಯಾಗಿ ಮಾರ್ಪಟ್ಟಿತು. ಕಠ್ಮಂಡು ಒತ್ತಾಯಪೂರ್ವಕವಾಗಿ ಬ್ರಿಟಿಶ್ ರೆಸಿಡೆಂಟ್ -ಮುದ್ರಿಕೆಯನ್ನು ಸ್ವೀಕರಿಸುವಂತಾಯಿತು.-ಈ ಬ್ರಿಟಿಶ್ ಚಿನ್ಹೆಯು ಒಂದು ತರಹದ ಅಗೌರವ ಸೂಚಕ ಸಂಕೇತವಾಗಿತ್ತು.ಇದರಿಂದ ಬ್ರಿಟಿಶ್ ಅಧಿಕಾರಾಡಳಿತವನ್ನು ಒಪ್ಪಿಕೊಳ್ಳುವ ಹೇಯ ಕೃತ್ಯವಾಗಿತ್ತು.ಕೊಲ್ಕತ್ತಾದಲ್ಲಿನ ಬ್ರಿಟಿಶ್ ಆಡಳಿತದ ಬಗ್ಗೆ ಅದು ತನ್ನ ಪ್ರಭಾವ ತೋರಲು ಈಸ್ಟ್ ಇಂಡಿಯಾ ಕಂಪನಿ ಇದನ್ನು ಹೇರಿತ್ತು.
ಆಗ ಬ್ರಿಟಿಶ್ ರು ಭಾರತಕ್ಕೆ ಸ್ವಾತಂತ್ರ್ಯ ನೀಡಿ, ನಂತರ ಭಾರತದಿಂದ ತೆರಳಿದಾಗ ನೇಪಾಳದಲ್ಲಿನ ಈಸ್ಟ್ ಇಂಡಿಯಾ ಕಂಪನಿಯು ಎಲ್ಲಾ ಒಡಂಬಡಿಕೆಗಳನ್ನು ಮುರಿಯಬೇಕಾಯಿತು.ಯುದ್ದದಲ್ಲಿ ನೇಪಾಳ ಕಳೆದುಕೊಂಡ ಎಲ್ಲಾ ಭೂಪ್ರದೇಶಗಳನ್ನು ಅದಕ್ಕೆ ಮರಳಿಸಲಾಯಿತು. ಆದರೂ ಕೂಡಾ ನೇಪಾಳ ತಾನು ಈಸ್ಟ್ ಇಂಡಿಯಾಗೆ ಕಳೆದುಕೊಂಡ ಪ್ರದೇಶಗಳನ್ನು ಒಂದು ಶತಮಾನದ ಕಾಲ ಗಮನ ಹರಿಸಲಿಲ್ಲ.
ಗೂರ್ಖಾ ಪ್ರದೇಶಗಳಲ್ಲಿನ ಹೋರಾಟಗಳು
[ಬದಲಾಯಿಸಿ]ಪ್ರಧಾನಿ ಭೀಮಸೇನ್ ಥಾಪಾ ರಾಣಿ ಪ್ರಭುತ್ವ ಹೊಂದಿದ್ದ ತ್ರಿಪುರ ಸುಂದರಿಯವರ ಬೆಂಬಲದಿಂದ ನೇಪಾಳ ಸೋತರೂ ಆ ಭೂಭಾಗಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಇನ್ನುಳಿದ ಕುಟುಂಬಗಳು ಅದರಲ್ಲಿಯೂ ಪಾಂಡೆಗಳು ಭೀಮಸೇನ್ ಥಾಪಾ ಬ್ರಿಟಿಶ್ ರಿಗೆ ಶರಣಾಗಿದ್ದನ್ನು ಸಹಿಸಲಿಲ್ಲ. ಆದರೂ ಪ್ರಧಾನಮಂತ್ರಿಗಳು ದೊಡ್ಡ ಪ್ರಮಾಣದ ಸೈನಿಕ ಬಲವನ್ನು ಇಟ್ಟುಕೊಂಡು ತಮ್ಮ ಅಧಿಕಾರವನ್ನು ಅವರು ಉಳಿಸಿಕೊಳ್ಳುವವರಲ್ಲಿ ಸಫಲರಾಗಿದ್ದರು.ಆಧುನಿಕವಾದ ಈ ಸೈನ್ಯಪಡೆ ಮತ್ತು ರಾಜಕೀಯವಾಗಿ ಪ್ರಾಬಲ್ಯ ಹೊಂದಿದ್ದ ದರ್ಬಾರ ಅಲ್ಪಸಂಖ್ಯಾತ ಸರ್ಕಾರದ ರಾಜ ರಾಜೇಂದ್ರ ಬಿಕ್ರಮ್ ಶಾಹ್ ಅವರ ಹಿಡಿತದಲ್ಲಿತ್ತು.(ಆಡಳಿತಾವಧಿ ೧೮೧೬-೧೮೪೭) ಇನ್ನೂ ಹೆಚ್ಚೆಂದರೆ ಅವರು ಪಾಂಡೆಗಳನ್ನು ಅಧಿಕಾರದಿಂದ ಮೊಟಕುಗೊಳಿಸಿ ತನ್ನದೇ ಆದ ಕುಟುಂಬದ ಸದಸ್ಯರನ್ನು ವಿವಿಧ ಆಯಕಟ್ಟಿನ ಅಧಿಕಾರ ಕೇಂದ್ರಗಳಿಗೆ ನೇಮಕ ಮಾಡಿದರು.
ಯಾವಾಗ ರಾಣಿ ತ್ರಿಪುರ ಸುಂದರಿ ೧೮೩೨ ರಲ್ಲಿ ಮೃತಪಟ್ಟರೋ ಆಗ ಭೀಮಸೇನ ಥಾಪಾ ತಮ್ಮ ಪ್ರಭಾವವನ್ನು ಕಳೆದುಕೊಳ್ಳಲು ಆರಂಭಿಸಿದರು. ಆಗ ಬ್ರಿಯಾನ್ ಹೊಗ್ಸನ್ ೧೮೩೩ ರಲ್ಲಿ ಬ್ರಿಟಿಶ್ ರೆಸಿಡೆಂಟ್ ಆಗಿ ಭೀಮಸೇನ್ ಥಾಪಾ ಅವರ ವಿರೋಧಿಗಳಿಗೆ ನೆರವು ನೀಡಲು ಆರಂಭಿಸಿದರು.ನಂತರ ೧೮೩೭ ರಲ್ಲಿ ರಾಜನು ತಾನು ಸ್ವತಂತ್ರವಾಗಿ ರಾಜ್ಯಾಡಳಿತ ನಡೆಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದನಲ್ಲದೇ ಈ ಪ್ರಧಾನ ಮಂತ್ರಿಯ ಆಡಳಿತ ಮತ್ತು ಆತನ ಸಂಬಂಧಿ ಸೇನಾಧಿಪತಿಯವರನ್ನು ನಿರಾಕರಿಸುವುದಾಗಿ ಘೋಷಿಸಿದ. ರಾಣಿಯ ಹಿರಿಯ ಪುತ್ರ ನಿಧನರಾದಾಗ ಭೀಮಸೇನ್ ಥಾಪಾ ಅವರೇ ಯುವರಾಜನ ವಿಷಪ್ರಾಶನಕ್ಕೆ ಮುಂದಾದರೆಂಬ ಮಿಥ್ಯೆ ಸುದ್ದಿಗಳು ಹಬ್ಬಿದವು. ಈ ಅಪವಾದದಿಂದ ದೂರವಾದರೂ ಥಾಪಾ ಕುಟುಂಬದವರು ಸಂಕ್ಷೋಭೆಗೊಳಗಾದದರು. ಯಾವಾಗ ಪಾಂಡೆ ಕುಟುಂಬದ ಮುಖ್ಯಸ್ಥ ರಾನಾ ಜಂಗ್ ಪಾಂಡೆ ಪ್ರಧಾನ ಮಂತ್ರಿಯಾದರೋ ಆಗ ಭೀಮಸೇನ್ ಥಾಪಾರನ್ನು ಮತ್ತೆ ಸೆರೆಮನೆಗೆ ತಳ್ಳಿದರು.ಭೀಮಸೇನ್ ಥಾಪಾ ೧೮೩೯ ರ ಆಗಸ್ಟ್ ನಲ್ಲಿ ಆತ್ಮಹತ್ಯೆಗೆ ಶರಣಾದರು.
ಹೀಗೆ ಡೇವಿಡ್ ಒಕ್ಟರ್ಲೊನಿ ಎರಡೂ ಸಂಸತ್ತುಗಳ ಅಭಿನಂದನೆ ಸ್ವೀಕರಿಸುವ ಮೂಲಕ ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಯಿಂದ ಮೊದಲ ಬಾರಿಗೆ GCB ಬಹುಮಾನಕ್ಕೆ ಪಾತ್ರನಾಗಿದ್ದ.ಲಾರ್ಡ್ ಮೊಯಿರಾ ಆತನನ್ನು ದೆಹಲಿಯಲ್ಲಿ ರೆಸಿಡೆಂಟ್ ಆಗಿ ನೇಮಿಸಿದಾಗ ಆತ ಕಂಪನಿಯಲ್ಲಿಯೇ ಅತ್ಯಂತ ವರಿಷ್ಠ ಪದವಿ ಪಡೆದ ಗತ್ತಿನಲ್ಲಿ ವಾಸಿಸಲಾರಂಭಿಸಿದ. ಯಾವಾಗ ಲಾರ್ಡ್ ಮೊಯಿರಾ ಭಾರತಬಿಟ್ಟಾಗ-ಲಾರ್ಡ್ ಅಮ್ಹೆರ್ಸ್ಟ್ ೧೮೨೩ ರಲ್ಲಿ ಗವರ್ನರ್ ಜನರಲ್-ಆಗಿ ಉತ್ತರಾಧಿಕಾರಿಯಾದ.ಅದೇ ವೇಳೆಗೆ-ಒಕ್ಟ್ರರ್ಲೊನಿಯೆಡೆಗಿನ ಒಲವು ಕಡಿಮೆಯಾಯಿತು.
ನಂತರ ೧೮೨೫ ರಲ್ಲಿ ಭರತಪುರದ ರಾಜನು ಮೃತಪಟ್ಟ ನಂತರ ಆತನ ಆರು ವರ್ಷದ ಪುತ್ರನನ್ನು ಗದ್ದುಗೆಗೆ ತರಲು ಒಕ್ಟ್ರರ್ಲೊನಿ ಬೆಂಬಲ ನೀಡಿದ ಆಗ ಆತನ ಸಂಬಂಧಿ ದುರ್ಜನ್ ಸಾಲ್ ಗದ್ದುಗೆಗೇರಿದ. ಯಾವಾಗ ದುರ್ಜನ್ ಸಾಲ್ ಒಕ್ಟ್ರರ್ಲೊನಿಯ ಬೇಡಿಕೆಗಳನ್ನು ಈಡೇರಿಸಲು ವಿಫಲನಾದಾಗ ಬ್ರಿಟಿಶ್ ಜನರಲ್ ಭರತಪುರದೆಡೆಗೆ ಸಾಗಿ ಬರುವ ಯೋಜನೆ ಹಾಕಿದ. ಆದರೆ ಆತ ಹೊಸ ಗವರ್ನರ್-ಜನರಲ್ ಅವರಿಂದ ಬೆಂಬಲ ಪಡೆಯಲಿಲ್ಲ.ಯಾವಾಗ ಆಮ್ಹ್ರೆಸ್ಟ್ ಆತನ ಆಜ್ಞೆಗಳನ್ನು ನಿರಾಕರಿಸಿದನೋ ಆಗ ಒಕ್ಟರ್ಲೊನಿ ನಿರೀಕ್ಷಿಸಿದಂತೆ ರಾಜಿನಾಮೆ ನೀಡಿದ. ಈ ಪ್ರಕರಣವು ಅನಾರೋಗ್ಯದಲ್ಲಿದ್ದ ಜನರಲ್ ಮೇಲೆ ದುಷ್ಪರಿಣಾಮ ಬೀರಿತಲ್ಲದೇ ಆತ ತಕ್ಷಣದಲ್ಲೇ ೧೪ ಜುಲೈ ೧೮೨೫ ರಲ್ಲಿ ಮೃತಪಟ್ಟನು. ತರುವಾಯ ಕೊಲ್ಕತ್ತಾದಲ್ಲಿ ೧೬೫-ಅಡಿ-ಎತ್ತರದ ಸ್ಮಾರಕವನ್ನು ನಿರ್ಮಿಸಲಾಯಿತು.ಸರ್ ಡೇವಿಡ್ ಒಕ್ಟ್ರರ್ಲೊನಿಯ ಐತಿಹಾಸಿಕ ದಾಖಲೆಯೆಂದರೆ ಬ್ರಿಟಿಶ್ ಮತ್ತು ಭಾರತೀಯ ಸೇನೆಗಳಲ್ಲಿ ನಿರಂತರವಾಗಿ ಗೂರ್ಖಾಗಳ ನೇಮಕ ಮಾಡುವುದೇ ಆಗಿತ್ತು.
ಒಕ್ಟ್ರರ್ಲೊನಿಯ ರಾಜಿನಾಮೆ ನಂತರ ತಕ್ಷಣದಲ್ಲೇ ಅಮಹರ್ಸ್ಟ್, ಒಕ್ಟ್ರರ್ಲೊನಿ ಏನು ಮಾಡಬೇಕೆಂದಿದ್ದನೋ ಅದನ್ನೇ ಮಾಡಲು ಸಿದ್ದನಾದ.ಅಲ್ಲದೇ ಭರತಪುರದ ಮೇಲೆ ದಾಳಿಗೆ ತಯಾರಿ ನಡೆಸಿದ.[೪]
ಗೂರ್ಖಾ ನೇಮಕಾತಿ
[ಬದಲಾಯಿಸಿ]ಡೇವಿಡ್ ಒಕ್ಟ್ರರ್ಲೊನಿ ಮತ್ತು ರಾಜಕೀಯ ಪ್ರತಿನಿಧಿ ವಿಲಿಯಮ್ ಫ್ರೇಸರ್ ಅವರುಗಳು ಬ್ರಿಟಿಶ್ ಸೇವೆಯಲ್ಲಿರುವ ಗೂರ್ಖಾಗಳ ಶಕ್ತಿ ಸಾಮರ್ಥ್ಯಗಳನ್ನು ತಕ್ಷಣವೇ ಗುರುತಿಸಿದರು. ಯುದ್ದದ ಸಂದರ್ಭದಲ್ಲಿ ಗೂರ್ಖಾ ಸೈನ್ಯದಿಂದ ದೂರ ಬಂದವರನ್ನು ತಮ್ಮ ಅನಿಯಮಿತ ಪಡೆಗಳಿಗಾಗಿ ನೇಮಕ ಮಾಡಿ ಬಳಸಲು ಯೋಜಿಸಿದರು. ಆತನಿಗೆ ಇವರ ಬಗ್ಗೆ ಅಪಾರ ನಂಬಿಕೆ ಇತ್ತು.ಅವರ ನಿಷ್ಠೆ ಪರಿಗಣಿಸಿ ಏಪ್ರಿಲ್ ೧೮೧೫ ರಲ್ಲಿ ಲೆಫ್ಟನಂಟ್ ರಾಸ್ ಅವರ ನೇತೃತ್ವದಲ್ಲಿ ನಾಸಿರಿ ರೆಜಿಮೆಂಟ್ ಎಂದು ಹೆಸರಿಸಲಾಯಿತು. ಇದೇ ರೆಜಿಮೆಂಟ್ ನಂತರ ಮೊದಲ ಕಿಂಗ್ ಜಾರ್ಜ್ ಅವರ ಓನ್ ಗೂರ್ಖಾ ರೈಫಲ್ಸ್ ಆಗಿ ಪರಿವರ್ತನವಾಯಿತು.ಇದು ಲೆಫ್ಟಿನಂಟ್ ಲಾಟೈ ನಾಯಕತ್ವದಲ್ಲಿ ಮಲೌನ್ ಕೋಟೆಗೆ ಮುತ್ತಿಗೆ ಹಾಕಿತು.ಈತ ಒಕ್ಟ್ರರ್ಲೊನಿಗೆ ಒಂದು ವರದಿ ಒಪ್ಪಿಸಿ ಇವರು "ಅತ್ಯಂತ ನಿಷ್ಟರು ಮತ್ತು ಇವರ ದಾಳಿಯು ಅತ್ಯಂತ ತೃಪ್ತಿಕರವಾಗಿದೆ" ಎಂದು ವಿವರಿಸಿದ್ದ.
ಸುಮಾರು ೫,೦೦೦ ಪುರುಷರು ಬ್ರಿಟಿಶ್ ಸೇನೆಯಲ್ಲಿ ಸೇವೆಗಾಗಿ ೧೮೧೫ ರಲ್ಲಿ ಪ್ರವೇಶಿಸಿದರು.ಅದರಲ್ಲಿ ಬಹುತೇಕರು'ನಿಜವಾದ'ಗೂರ್ಖಾಗಳಾಗಿರಲಿಲ್ಲ,ಆದರೆ ಕುಮೊನಿಗಳು,ಗರವಾಲಿಗಳು ಮತ್ತಿತರ ಹಿಮಾಲಯ ಪರ್ವತ ಪ್ರದೇಶದ ಪುರುಷರಾಗಿದ್ದರು. ಇವೇ ಗುಂಪುಗಳು ನಂತರ ಒಟ್ಟಾಗಿ ಗೂರ್ಖಾ ಎಂಬ ಪದನಾಮದಡಿ ಸೇರಿ ಬ್ರಿಟಿಶ್ ಇಂಡಿಯನ್ ಸೈನ್ಯಪಡೆಯ ಬೆನ್ನುಮೂಳೆಯಾಗಿ ಆಧಾರವಾಗಿದ್ದರು.
ಒಕ್ಟ್ರರ್ಲೊನಿಯ ಗೂರ್ಖಾ ಬಟಾಲಿಯನ್ಸ್,ವಿಲಿಯಮ್ ಫ್ರೇಸರ್ ಮತ್ತು ಲೆಫ್ಟಿನಂಟ್ ಫ್ರೆಡ್ರಿಕ್ ಯಂಗ್ ಇವರೂ ಸಿರ್ಮೂರ್ ಬಟಾಲಿಯನ್ ನನ್ನು ಪ್ರವರ್ಧನಮಾನಕ್ಕೆ ತಂದರು.ಇದೇ ನಂತರ ೨ನೆಯ ಕಿಂಗ್ ಎಡ್ವರ್ಡ್ VII'ನ ಓನ್ ಗೂರ್ಖಾ ರೈಫಲ್ಸ್ ಆಗಿ ಹೆಸರಾಯಿತು.ಇನ್ನೂ ಅಧಿಕ ಬಟಾಲಿಯನ್ ಎಂದರೆ ಕುಮೊನ್ ಬಟಾಲಿಯನ್ ನನ್ನು ಕೂಡಾ ರಚಿಸಿ ಅದನ್ನು ೩ನೆಯ ಕ್ವೀನ್ ಅಲೆಕ್ಸಾಂಡ್ರಾಸ್ ಓನ್ ಗೂರ್ಖಾ ರೈಫಲ್ಸ್ ಎಂದು ಕರೆಯಲಾಯಿತು. ಇವರೆಲ್ಲಾರೂ ಈ ಎರಡನೆಯ ಪ್ರಚಾರಾಂದೋಲನದಲ್ಲಿ ಪಾಲ್ಗೊಂಡರೂ ಯುದ್ದ ಮಾಡಲಿಲ್ಲ
ಟಿಪ್ಪಣಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- Naravane, M. S. (2006). Battles of the honourable East India Company: making of the Raj. APH Publishing. pp. 189–191. ISBN 9788131300343.
- ಗೌಲ್ಡ್, ಟೊನಿ. (೨೦೦೦). ಇಂಪಿರಿಯಲ್ ವಾರಿಯರ್ಸ್–ಬ್ರಿಟೇನ್ ಅಂಡ್ ದಿ ಗೂರ್ಖಾಸ್ . ಗ್ರಾಂಟಾ ಬುಕ್ಸ್ ISBN ೧-೮೬೨೦೭-೩೬೫-೧
- ಪೆಂಬ್ಲೆ, ಜಾನ್. ( ೨೦೦೯). ಫಾರ್ ಗೆಟ್ಟಿಂಗ್ ಅಂಡ್ ರಿಮೆಂಬರಿಂಗ್ ಬ್ರಿಟೇನ್ಸ್ ಗೂರ್ಖಾ ವಾರ್. ಏಶಿಯನ್ ಅಫೇರ್ಸ್ , ೪೦(೩), ೩೬೧–೩೭೬. ಅಬ್ ಸ್ಟ್ರ್ಯಾಕ್ಟ್ ಅವೈಲೇಬಲ್ ಹಿಯರ್ (ಮರೆಪದದ್ದು ೧೨-೨೨-೨೦೦೯).
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages with reference errors
- Pages using the JsonConfig extension
- CS1 errors: unrecognized parameter
- CS1 errors: missing title
- Articles with hatnote templates targeting a nonexistent page
- Articles with multiple maintenance issues
- Pages using multiple issues with unknown parameters
- Articles with unsourced statements from January 2011
- Articles with invalid date parameter in template
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 2009ರಲ್ಲಿನ ಘರ್ಷಣೆಗಳು
- ಯುನೈಟೆಡ್ ಕಿಂಗ್ಡಂನ್ನು ಒಳಗೊಂಡಿರುವ ಯುದ್ಧಗಳು
- ಹಿಸ್ಟ್ರಿ ಆಫ್ ನೇಪಾಲ್
- ಹಿಸ್ಟ್ರಿ ಆಫ್ ಉತ್ತರಖಾಂಡ್
- ವಾರ್ಸ್ ಇನ್ವಾಲ್ವಿಂಗ್ ನೇಪಾಲ್
- 19ತ್-ಸೆಂಚುರಿ ಮಿಲಿಟರಿ ಹಿಸ್ಟ್ರಿ ಆಫ್ ದಿ ಯುನೈಟೆಡ್ ಕಿಂಗ್ಡಮ್
- ಗೂರ್ಖಾ
- ಇತಿಹಾಸ