ಗೂಂಜ್ (ಎನ್.ಜಿ.ಒ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Goonj
FoundedAnshu Gupta
ಸ್ಥಳ
  • New Delhi
ಅಧಿಕೃತ ಜಾಲತಾಣgoonj.org

ಗೂಂಜ್ ಭಾರತದ ದೆಹಲಿಯ ಪ್ರಧಾನ ಕಚೇರಿಯನ್ನು ಹೊಂದಿರುವ ಸರ್ಕಾರೇತರ ಸಂಸ್ಥೆಯಾಗಿದ್ದು ಭಾರತದಾದ್ಯಂತ ೨೩ ರಾಜ್ಯಗಳ ಕೆಲವು ಭಾಗಗಳಲ್ಲಿ ವಿಪತ್ತು ಪರಿಹಾರ, ಮಾನವೀಯ ನೆರವು ಮತ್ತು ಸಮುದಾಯ ಅಭಿವೃದ್ಧಿಯನ್ನು ಕೈಗೊಳ್ಳುತ್ತದೆ. ಇದನ್ನು ೧೯೯೯ ರಲ್ಲಿ ಅಂಶು ಗುಪ್ತಾರವರು ಸ್ಥಾಪಿಸಿದರು. [೧] ಗೂಂಜ್ ಒಂದಿಗಿನ ಅವರ ಕೆಲಸಕ್ಕಾಗಿ ಅವರಿಗೆ ೨೦೧೫ ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ನೀಡಲಾಯಿತು. ಇವರಿಗೆ ಭಾರತದ ಸೊಸೈಟಿ ಎಂಟರ್ಪ್ರೆನರ್ ಆಫ್ ದಿ ಇಯರ್ ೨೦೧೨ ಎಂಬ ಹೆಸರನ್ನು ವಿಶ್ವ ಆರ್ಥಿಕ ವೇದಿಕೆಯ ಸಹೋದರಿ ಸಂಸ್ಥೆಯಾದ ಸ್ಕ್ವಾಬ್ ಫೌಂಡೇಶನ್ ೨೦೧೨ ರಲ್ಲಿ ನೀಡಿತು. [೨] [೩]

ಇತಿಹಾಸ[ಬದಲಾಯಿಸಿ]

೧೯೯೯ ರಲ್ಲಿ ಅಂಶು ಗುಪ್ತಾ ರಚಿಸಿದ ಗೂಂಜ್, ೬೭ ಬಟ್ಟೆಗಳಿಂದ ಪ್ರಾರಂಭವಾಗಿದ್ದು, ಈಗ ಪ್ರತಿವರ್ಷ ೩೫೦೦ ಟನ್‌ಗಳಷ್ಟು ವಸ್ತುಗಳನ್ನು ವ್ಯವಹರಿಸುತ್ತದೆ. ಇದನ್ನು ಸೊಸೈಟೀಸ್ ಕಾಯ್ದೆಯಡಿ ನೋಂದಾಯಿಸಲಾಗಿದೆ ಮತ್ತು ವಿಭಾಗ ೮೦ ಜಿ, ೧೨ ಎ ಮತ್ತು ಎಫ್.ಸಿ.ಆರ್.ಎ ಅಡಿಯಲ್ಲಿ ವಿದೇಶಿ ಕೊಡುಗೆಗಳಿಗಾಗಿ ವಿನಾಯಿತಿಯನ್ನು ನೋಂದಾಯಿಸಲಾಗಿದೆ.

೨೦೦೪ ರ ಸುನಾಮಿ, ಗೂಂಜ್ ಅವರ 'ನಾಟ್ ಜಸ್ಟ್ ಎ ಪೀಸ್ ಆಫ್ ಕ್ಲಾತ್' (ಎನ್‌.ಜೆ.ಪಿ.ಸಿ) ಹೊರಹೊಮ್ಮಲು ದಾರಿ ಮಾಡಿಕೊಟ್ಟಿತು. ಪರಿಹಾರ ಹಂತದಲ್ಲಿ ಚೆನ್ನೈ ಕೇಂದ್ರವು ಹಳೆಯದಾದರೂ ಬಳಸಬಹುದಾದ ಬಟ್ಟೆಗಳಿಂದ ತುಂಬಿತ್ತು. ಈ ಬಟ್ಟೆಗಳನ್ನು ನಂತರ ತೊಳೆದು ಪ್ಯಾಡ್‌ಗಳಾಗಿ ಮರುಬಳಕೆ ಮಾಡಿ ನಂತರ ಹತ್ತಿ ಚೀಲಗಳಲ್ಲಿ ಇರಿಸಿ ಗೂಂಜ್ ಡಿಗ್ನಿಟಿ ಕಿಟ್ ಅನ್ನು ರೂಪಿಸಲಾಯಿತು. ೨೦೧೪ ರ ಹೊತ್ತಿಗೆ ೪ ಮಿಲಿಯನ್ ಪ್ಯಾಡ್ಗಳು ವಾಣಿಜ್ಯ ನೈರ್ಮಲ್ಯ ಪ್ಯಾಡ್ಗಳನ್ನು ಪಡೆಯಲು ಸಾಧ್ಯವಾಗದ ಬಡವರಿಗೆ ನಾಮಮಾತ್ರ ವೆಚ್ಚ ಎರಡು ರೂಪಾಯಲ್ಲಿ ವಿತರಿಸಿತು. ಈ ಅಭಿಯಾನವು ತರುವಾಯ ವಿಶ್ವ ಬ್ಯಾಂಕಿನ ಜಾಗತಿಕ ಅಭಿವೃದ್ಧಿ ಮಾರುಕಟ್ಟೆ ಪ್ರಶಸ್ತಿ (೨೦೦೯) ಮತ್ತು ಚೇಂಜ್ ಮೇಕರ್ಸ್ ಇನ್ನೋವೇಶನ್ ಅವಾರ್ಡ್ (೨೦೦೯) ಅನ್ನು ಗೆದ್ದುಕೊಂಡಿತು. ನಾಸಾ, ನೈಕ್ ಮತ್ತು ಯು.ಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವೆಲಪ್ಮೆಂಟ್ ಪ್ರಾಯೋಜಿಸಿದ "ಬಿಯಾಂಡ್ ವೇಸ್ಟ್" ಥೀಮ್ ನಲ್ಲಿ ೨೦೧೨ ರಲ್ಲಿ ಲಾಂಚ್ ಇನ್ನೋವೇಷನ್ ಚಾಲೆಂಜ್ Archived 2019-08-18 ವೇಬ್ಯಾಕ್ ಮೆಷಿನ್ ನಲ್ಲಿ. ಆಗಿತ್ತು. [೪]

೨೦೦೯ ರಲ್ಲಿ ಜಾಯ್ ಆಫ್ ಗಿವಿಂಗ್ ವೀಕ್‌ಗೆ ಸೇರ್ಪಡೆಗೊಂಡ ಮೊದಲ ಸಂಸ್ಥೆಗಳಲ್ಲಿ ಇದು ಕೂಡ ಒಂದು. [೫] ನಂತರ ಗಾಂಧಿ ಜಯಂತಿ ಅಕ್ಟೋಬರ್ ೨-೮ ರಿಂದ ಪ್ರಾರಂಭವಾಗುವ ವಾರ್ಷಿಕ ವಾರದ ದೇಣಿಗೆ ಚಾಲನೆಯ ದಾನ್ ಉತ್ಸವ್ (ದೇಣಿಗೆ ಉತ್ಸವ) ಎಂದು ಮರುನಾಮಕರಣ ಮಾಡಲಾಯಿತು. ವಾರದಲ್ಲಿ ಗೂಂಜ್ ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುತ್ತಾರೆ. ಅಲ್ಲಿ ಭಾರತದಾದ್ಯಂತ ಜನರು ತಮ್ಮ ಮನೆಗಳಿಂದ, ಕಚೇರಿಗಳಿಂದ ಮತ್ತು ನಗರ ಪ್ರದೇಶದ ಶಾಲೆಗಳಿಂದ ಕಡಿಮೆ ಬಳಕೆಯಾಗದ ಸರಕು ಮತ್ತು ಬಟ್ಟೆಗಳನ್ನು ಗ್ರಾಮೀಣ ಮತ್ತು ಬಡ ಪ್ರದೇಶಗಳಿಗೆ ವಿತರಿಸಲು ಕೊಡುಗೆ ನೀಡುತ್ತಾರೆ.

ಉಪಕ್ರಮಗಳು[ಬದಲಾಯಿಸಿ]

ಮುಟ್ಟಿನ ನೈರ್ಮಲ್ಯದ ಬಗ್ಗೆ ಉತ್ತಮ ಅಭ್ಯಾಸಗಳ ಕುರಿತು ಚರ್ಚೆ

ಕ್ಲೋತ್ ಫಾರ್ ವರ್ಕ್[ಬದಲಾಯಿಸಿ]

ಗೂಂಜ್ ಕ್ಲೋತ್ ಫಾರ್ ವರ್ಕ್ (ಸಿ.ಎಫ್‌.ಡಬ್ಲ್ಯು) ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದು ಅಭಿವೃದ್ಧಿಯ ಎರಡು ಹೊಸ ಕರೆನ್ಸಿಗಳಾದ ವಸ್ತು ಮತ್ತು ಶ್ರಮವನ್ನು ವಿಕಸನಗೊಳಿಸಿತು. ಸಿ.ಎಫ್‌.ಡಬ್ಲ್ಯುನಲ್ಲಿ ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಮೂಲಸೌಕರ್ಯ ಸುಧಾರಣೆಗಳನ್ನು ಗುರುತಿಸಲು ಪಾಲುದಾರರೊಂದಿಗೆ ಮತ್ತು ಸಮುದಾಯಗಳೊಂದಿಗೆ ಗೂಂಜ್ ಕೆಲಸ ಮಾಡುತ್ತದೆ. ನಂತರ ಗ್ರಾಮಸ್ಥರು ಬಾವಿಗಳನ್ನು ಅಗೆಯುತ್ತಾರೆ. ಕೊಳಗಳನ್ನು ಸ್ವಚ್ಛ ಗೊಳಿಸಿ ರಸ್ತೆಗಳನ್ನು ಸರಿಪಡಿಸಿ ಸಮುದಾಯದಲ್ಲಿ ಶಾಲೆಗಳನ್ನು ನಿರ್ಮಿಸುತ್ತಾರೆ. ಇದಕ್ಕಾಗಿ ಅವರಿಗೆ ಬಟ್ಟೆ, ಪಾತ್ರೆಗಳು, ಪೀಠೋಪಕರಣಗಳು ಮತ್ತು ಆಹಾರ ಧಾನ್ಯಗಳಂತಹ ವಸ್ತು ಸಂಪನ್ಮೂಲಗಳೊಂದಿಗೆ ಸರಿದೂಗಿಸಲಾಗುತ್ತದೆ.

ಕೇವಲ ಬಟ್ಟೆಯ ತುಂಡು ಅಲ್ಲ[ಬದಲಾಯಿಸಿ]

೨೦೦೪ ರಲ್ಲಿ ಗೂಂಜ್ ಹಳ್ಳಿ ಮತ್ತು ಕೊಳೆಗೇರಿಗಳಲ್ಲಿನ ಮಹಿಳೆಯರಿಗೆ ತ್ಯಾಜ್ಯ ಬಟ್ಟೆಯಿಂದ ತಯಾರಿಸಲ್ಪಟ್ಟ ಶುದ್ಧ ಬಟ್ಟೆಯ ಕರವಸ್ತ್ರವನ್ನು ಸುಲಭವಾಗಿ ಬಳಸಿಕೊಳ್ಳುವ (ಐದು ನೈರ್ಮಲ್ಯ ಕರವಸ್ತ್ರದ ಪ್ಯಾಕ್ಗೆ ೫ ರೂಪಾಯಿ) ಒದಗಿಸುವಿಕೆಯನ್ನು ಪ್ರಾರಂಭಿಸಿತು. ಈ ಮಹಿಳೆಯರಿಗೆ ಬಟ್ಟೆಯನ್ನು ನೀಡಿದ್ದು ಅವರಲ್ಲಿ ಘನತೆ ಮತ್ತು ಸ್ವಾಭಿಮಾನದ ಪ್ರಜ್ಞೆಯನ್ನು ಮೂಡಿಸಿತು. ಇಂದು ಮೈಪ್ಯಾಡ್ಸ್ ಎಂದು ಕರೆಯಲ್ಪಡುವ ಗೂಂಜ್ ಪ್ಯಾಡ್‌ಗಳು ಶೇಕಡಾ ೧೦೦ ರಷ್ಟು ಜೈವಿಕ ವಿಘಟನೀಯವಾಗಿದ್ದು ಅದನ್ನು ಮರುಬಳಕೆ ಅಥವಾ ವಿಲೇವಾರಿ ಮಾಡಬಹುದಾಗಿದೆ.

ಸ್ಕೂಲ್ ಟು ಸ್ಕೂಲ್[ಬದಲಾಯಿಸಿ]

ಈ ಕಾರ್ಯಕ್ರಮವು ಮಕ್ಕಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಗೂಂಜ್ ವಿನ್ಯಾಸಗೊಳಿಸಿದ ವಿಶಿಷ್ಟ ಶಾಲಾ ಕಿಟ್ ಅನ್ನು ಬಳಸುತ್ತದೆ. ನಗರ ಮಕ್ಕಳು ಶಾಲಾ ಕಿಟ್ ಅನ್ನು ರಚಿಸಲು ತಮ್ಮ ಹಳೆಯ ಶಾಲಾ ಸಾಮಗ್ರಿಗಳನ್ನು ಕೊಡುಗೆ ನೀಡುತ್ತಾರೆ. ಇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಾಗ ಹಳ್ಳಿ ಶಾಲೆಗಳಲ್ಲಿಯೂ ಮತ್ತು ಶಾಲಾ ಕಿಟ್ಗಳಲ್ಲಿಯೂ ಗೂಂಜ್ ಚಟುವಟಿಕೆಯ ಕೇಂದ್ರಗಳನ್ನು ರಚಿಸುತ್ತದೆ.

ಪ್ರಚಾರಗಳು[ಬದಲಾಯಿಸಿ]

ಏಕ್ ಜೋಡಿ ಕಪ್ಡ[ಬದಲಾಯಿಸಿ]

೨೦೧೦ ರಲ್ಲಿ ಏಕ್ ಜೊಡಿ ಕಪ್ಡಾ ಯೋಜನೆಯು ವರ್ಪೂಲ್ ಕಾರ್ಪೊರೇಷನ್ ಜೊತೆಗೆ ಪ್ರಾರಂಭವಾಯಿತು. [೬] ಅಲ್ಲಿ ದಾನದ ಉಡುಪುಗಳನ್ನು ಸಂಗ್ರಹಿಸಲು ಹಲವಾರು ಕೇಂದ್ರಗಳನ್ನು ತೆರೆಯಲಾಯಿತು.

ಶೇರ್ ದಿ ಲಾಂಗ್ವೇಜ್ ಆಫ್ ಲವ್[ಬದಲಾಯಿಸಿ]

೨೦೧೩ ರಲ್ಲಿ ಇದು ಗೂಂಜ್ ಸಹಯೋಗದೊಂದಿಗೆ ಜಾನ್ಸನ್ಸ್ ಬೇಬಿ ಇಂಡಿಯಾದ ಜಂಟಿ ಪ್ರಯತ್ನವಾಗಿದೆ. ಮಕ್ಕಳ ಬಟ್ಟೆ, ಆಟಿಕೆಗಳು, ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಲು ವಿವಿಧ ಡ್ರಾಪಿಂಗ್ ಕೇಂದ್ರಗಳನ್ನು ಇದು ಸ್ಥಾಪಿಸಿತು.

ಲುಕ್ ಗುಡ್ ಡು ಗುಡ್[ಬದಲಾಯಿಸಿ]

೨೦೧೬ ರಲ್ಲಿ ರೇಮಂಡ್ ಜೊತೆಗೆ ಲುಕ್ ಗುಡ್ ಡು ಗುಡ್ ಯೋಜನೆಯನ್ನು ಪ್ರಾರಂಭಿಸಲಾಯಿತು. ರೇಮಂಡ್ ಹಳೆಯ ಪ್ಯಾಂಟ್ಗೆ ಬದಲಾಗಿ ಹೊಸ ಜೋಡಿ ಪ್ಯಾಂಟ್ ಮೇಲೆ ಉಚಿತ ಕಸ್ಟಮ್ ಟೈಲರಿಂಗ್ ಸೇವೆಗಳನ್ನು ನೀಡಿತು. [೭]

ಫ್ಲಡ್ ರಿಲೀಫ್[ಬದಲಾಯಿಸಿ]

೨೦೧೩ ರ ಉತ್ತರಾಖಂಡ ಪ್ರವಾಹದ ಸಂದರ್ಭದಲ್ಲಿ ಗೂಂಜ್ "ಪ್ರವಾಹ ನಿವಾರಣೆ" ಕಾರ್ಯಕ್ರಮದೊಂದಿಗೆ ಪ್ರವಾಹ ಪರಿಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ೨೦೧೪ ರಲ್ಲಿ "ರಾಹತ್ ಪ್ರವಾಹ" ಎಂದು ಕರೆಯಲ್ಪಡುವ ಯೋಜನೆಯ ಮೂಲಕ ಕಾಶ್ಮೀರ ಪ್ರವಾಹ ಮತ್ತು ಭಾರತದಾದ್ಯಂತ ಜನರಿಂದ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಮೂಲಕ ೨೦೧೮ ರ ಕೇರಳದ ಪ್ರವಾಹ ಪರಿಹಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತು. [೮]

ಪ್ರಶಸ್ತಿಗಳು[ಬದಲಾಯಿಸಿ]

  • ೨೦೦೪ ರಲ್ಲಿ ಗೂಂಜ್ ತನ್ನ ಸ್ಕೂಲ್ ಟು ಸ್ಕೂಲ್ ಉಪಕ್ರಮಕ್ಕಾಗಿ "ಚೇಂಜ್ ಮೇಕರ್ಸ್ ಇನ್ನೋವೇಶನ್ ಪ್ರಶಸ್ತಿ"ಯನ್ನು ಗೆದ್ದಿತು.

ಉಲ್ಲೇಖ[ಬದಲಾಯಿಸಿ]

  1. https://www.thehindubusinessline.com/news/goonj-wins-social-entrepreneur-award/article20528009.ece
  2. https://en.wikipedia.org/wiki/Schwab_Foundation_for_Social_Entrepreneurship
  3. https://en.wikipedia.org/wiki/World_Economic_Forum
  4. "ಆರ್ಕೈವ್ ನಕಲು". Archived from the original on 2019-08-18. Retrieved 2019-08-18.
  5. https://web.archive.org/web/20120320014852/http://www.afaqs.com/perl/news/company_briefs/index.html?id=41507
  6. https://en.wikipedia.org/wiki/Whirlpool_Corporation
  7. https://www.financialexpress.com/archive/raymond-board-approves-foray-into-real-estate-sector/518380/0/
  8. https://en.wikipedia.org/wiki/2013_North_India_floods