ಗುಲ್ಫ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವನ ಗುಲ್ಫ

ಗುಲ್ಫವು (ಪರಡು)[೧] ಪಾದ ಮತ್ತು ಕಾಲು ಸೇರುವ ಪ್ರದೇಶವಾಗಿದೆ.[೨] ಗುಲ್ಫವು ಮೂರು ಕೀಲುಗಳನ್ನು ಒಳಗೊಂಡಿದೆ: ಮುಖ್ಯ ಗುಲ್ಫ ಕೀಲು ಅಥವಾ ಟ್ಯಾಲೊಕ್ರೂರಲ್ ಜಾಯಿಂಟ್, ಪಾದದ ಕೆಳಗಿನ ಕೀಲು ಮತ್ತು ಕೆಳ ಟಿಬಿಯೊಫ಼ಿಬ್ಯುಲಾರ್ ಕೀಲು.[೩][೪][೫]

ಚಿಕಿತ್ಸಾ ಸಂಬಂಧಿ ಮಹತ್ವ[ಬದಲಾಯಿಸಿ]

ಆಘಾತಕಾರಿ ಗಾಯ[ಬದಲಾಯಿಸಿ]

ಎಲ್ಲ ಪ್ರಮುಖ ಕೀಲುಗಳ ಪೈಕಿ, ಗುಲ್ಫವು ಅತ್ಯಂತ ಸಾಮಾನ್ಯವಾಗಿ ಗಾಯಕ್ಕೀಡಾಗುತ್ತದೆ. ಭಾರ ಹೊರುವ ಸಮಯದಲ್ಲಿ ಕಾಲಿನ ಕೆಳಗೆ ಪಾದದ ಹೊರ ಮೇಲ್ಮೈಯು ತಿರುಚಿಕೊಂಡಾಗ, ಪಾರ್ಶ್ವ ಅಸ್ಥಿರಜ್ಜು ಎಳೆತ ಸಂಬಂಧಿ ಹಾನಿಗೆ ಒಳಪಡುತ್ತದೆ, ಏಕೆಂದರೆ ಇದು ಮಧ್ಯ ಅಸ್ಥಿರಜ್ಜಿಗಿಂತ ದುರ್ಬಲವಾಗಿದ್ದು ಟ್ಯಾಲೊಕ್ರೂರಲ್ ಕೀಲಿನ ಆಂತರಿಕ ಪರಿಭ್ರಮಣವನ್ನು ಪ್ರತಿರೋಧಿಸುತ್ತದೆ.

ಮೂಳೆ ಮುರಿತಗಳು[ಬದಲಾಯಿಸಿ]

ಗುಲ್ಫದ ಮುರಿತದ ಲಕ್ಷಣಗಳು ಗುಲ್ಫದ ಉಳುಕುಗಳನ್ನು (ನೋವು) ಹೋಲಬಹುದು, ಆದರೆ ಸಾಮಾನ್ಯವಾಗಿ ಹೋಲಿಕೆಯಲ್ಲಿ ಇವು ಸಾಮಾನ್ಯವಾಗಿ ಹೆಚ್ಚು ಗಂಭೀರವಾಗಿರುತ್ತವೆ. ಕೇವಲ ಅಸ್ಥಿರಜ್ಜಿನ ಗಾಯದ ಉಪಸ್ಥಿತಿಯಲ್ಲಿ ಗುಲ್ಫದ ಕೀಲು ಸ್ಥಾನಪಲ್ಲಟವಾಗುವುದು ಬಹಳ ಅಪರೂಪವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Moore, Keith L.; Dalley, Arthur F.; Agur, A. M. R. (2013). "Lower Limb". Clinically Oriented Anatomy (7th ed.). Lippincott Williams & Wilkins. pp. 508–669. ISBN 978-1-4511-1945-9.
  2. WebMD (2009). "ankle". Webster's New World Medical Dictionary (3rd ed.). Houghton Mifflin Harcourt. p. 22. ISBN 978-0-544-18897-6.
  3. Milner, Brent K. (1999). "Musculoskeletal Imaging". In Gay, Spencer B.; Woodcock, Richard J. (eds.). Radiology Recall. Lippincott Williams & Wilkins. pp. 258–383. ISBN 978-0-683-30663-7.
  4. Williams, D. S. Blaise; Taunton, Jack (2007). "Foot, ankle and lower leg". In Kolt, Gregory S.; Snyder-Mackler, Lynn (eds.). Physical Therapies in Sport and Exercise. Elsevier Health Sciences. pp. 420–39. ISBN 978-0-443-10351-3.
  5. del Castillo, Jorge (2012). "Foot and Ankle Injuries". In Adams, James G. (ed.). Emergency Medicine. Elsevier Health Sciences. pp. 745–55. ISBN 978-1-4557-3394-1.
"https://kn.wikipedia.org/w/index.php?title=ಗುಲ್ಫ&oldid=965115" ಇಂದ ಪಡೆಯಲ್ಪಟ್ಟಿದೆ