ವಿಷಯಕ್ಕೆ ಹೋಗು

ಗುರುರಾಜ್ ಪೂಜಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರುರಾಜ್ ಪೂಜಾರಿ
೨೦೧೬ರ ಸೌತ್ ಏಶಿಯನ್ ಗೇಮ್ಸ್ ನಲ್ಲಿ ಗುರುರಾಜ್ ಪೂಜಾರಿ ಪುರುಷರ 56 kg ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು
Personal information
Birth nameಪಿ. ಗುರುರಾಜ
Nationalityಭಾರತೀಯ
Born (1992-08-15) 15 August 1992 (age 33)
ವಂಡ್ಸೆ, ಕರ್ನಾಟಕ, ಭಾರತ[]
Alma materಎಸ್.ಡಿ.ಎಂ. ಕಾಲೇಜು, ಉಜಿರೆ
Height1.55 m (5 ft 1 in) (2018)
Weight56 kg (123 lb) (2018)
Sport
Countryಭಾರತ
Sportವೇಯ್ಟ್ ಲಿಫ್ಟಿಂಗ್
Medal record
ಪುರುಷರ ವೇಯ್ಟ್ ಲಿಫ್ಟಿಂಗ್
Representing ಭಾರತ

ಕಾಮನ್ವೆಲ್ತ್ ಗೇಮ್ಸ್

Silver medal – second place2018 ಗೋಲ್ಡ್ ಕೋಸ್ಟ್ವೆಯ್ಟ್ ಲಿಫ್ಟಿಂಗ್ ಪುರುಷರ 56 kg
Bronze medal – third place2022 ಬರ್ಮಿಂಗ್ಹ್ಯಾಮ್ವೇಯ್ಟ್ ಲಿಫ್ಟಿಂಗ್ ಪುರುಷರ 61 kg

ಕಾಮನ್ವೆಲ್ತ್ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್


Gold medal – first place2016 ಪೆನಾಂಗ್56 kg
Silver medal – second place2021 ತಾಷ್ಕೆಂಟ್61 kg
Bronze medal – third place2017 ಗೋಲ್ಡ್ ಕೋಸ್ಟ್56 kg

ಗುರುರಾಜ್ ಪೂಜಾರಿ ಕಾಮನ್‍ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಭಾರತದ ವೆಯ್ಟ್ ಲಿಫ್ಟರ್. ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಕುಂದಾಪುರ ಮೂಲದವರಾಗಿರುವ ಇವರು ಭಾರತೀಯ ವಾಯುಸೇನೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಬಾಲ್ಯ ಮತ್ತು ಹಿನ್ನೆಲೆ

[ಬದಲಾಯಿಸಿ]

ಟ್ರಕ್ ಚಾಲಕನ ಮಗನಾಗಿರುವ ಗುರುರಾಜನಿಗೆ ಒಟ್ಟು ನಾಲ್ವರು ಸಹೋದರರು. ಬಡತನದಲ್ಲೇ ಬಾಲ್ಯವನ್ನು ಕಳೆದ ಗುರುರಾಜ ಪೂಜಾರಿ, 2008ರಲ್ಲಿ ಸುಶೀಲ್ ಕುಮಾರ್ ಒಲಂಪಿಕ್ ಪದಕ ಗೆದ್ದಿದ್ದನ್ನು ಕಂಡು, ಪ್ರಭಾವಿತರಾಗಿ ಅವರೂ ದೇಶಕ್ಕೆ ಪದಕ ಗೆಲ್ಲಲೇಬೇಕು ಎಂದು ದೃಢಸಂಕಲ್ಪ ಮಾಡಿದರು. ಕುಸ್ತಿಯಲ್ಲಿ ಮೊದಲು ಅಭ್ಯಾಸ ಪ್ರಾರಂಭಿಸಿದ ಗುರುರಾಜ, ನಂತರ ಶಾಲೆಯ ಶಿಕ್ಷಕರ ಸಲಹೆಯ ಮೇರೆಗೆ, ವೇಟ್‌ಲಿಫ್ಟಿಂಗ್​ನಲ್ಲಿ ತೊಡಗಿಕೊಂಡರು.

ವೃತ್ತಿಜೀವನ

[ಬದಲಾಯಿಸಿ]

ಸಂಪೂರ್ಣವಾಗಿ ವೇಯ್ಟ್ ಲಿಫ್ಟರ್ ಆಗಿ ತರಬೇತಿ ಪಡೆಯಲು ಆರಂಭಿಸಿದ ಗುರುರಾಜ್, 2018ರ ಕಾಮನ್ವೆಲ್ತ್ ಟೂರ್ನಿಯಲ್ಲಿ ವೇಯ್ಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದರು. ಅವರಿಗೆ ಭಾರತೀಯ ಸೇನೆಯನ್ನು ಸೇರಬೇಕು ಎಂಬ ಆಸೆಯಿದ್ದರೂ, ಎತ್ತರದ ಕೊರತೆಯಿಂದಾಗಿ, ವಾಯುಸೇನೆಯಲ್ಲಿ ಉದ್ಯೋಗ ನೀಡಲಾಯಿತು. 2022ರ ಕಾಮನ್ವೆಲ್ತ್ ನಲ್ಲೂ ಇವರು ಪದಕ (ಕಂಚು) ಜಯಿಸಿದ್ದಾರೆ.

ಬಾಹ್ಯ ಸಂಪರ್ಕ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "CWG medal winner Gururaja Poojari hopes lift will lead to better life". The New Indian Express. Archived from the original on 3 ಆಗಸ್ಟ್ 2022. Retrieved 29 July 2022.