ವಿಷಯಕ್ಕೆ ಹೋಗು

ಗುನ್ನಾಂಪಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುನ್ನಾಂಪಟ್ಟೆಯು (ಬೇಗಡೆ) ಹಿಮದ ಪರಿಣಾಮವನ್ನು ಅನುಕರಿಸುವ ಒಂದು ಬಗೆಯ ಅಲಂಕಾರಿಕ ವಸ್ತು. ಇದು ಒಂದು ದಾರಕ್ಕೆ ಲಗತ್ತಿಸಿದ ಹೊಳಪಿನ ವಸ್ತುವಿನ ತೆಳು ಪಟ್ಟಿಗಳನ್ನು ಹೊಂದಿರುತ್ತದೆ. ಇದು ಮೂಲತಃ ಕ್ರಿಸ್ಮಸ್ ಅಲಂಕಾರಕ್ಕಾಗಿ ಲೋಹೀಯ ಹಾರವಾಗಿತ್ತು. ಗುನ್ನಾಂಪಟ್ಟೆಯ ಆಧುನಿಕ ಉತ್ಪಾದನೆಯು ಸಾಮಾನ್ಯವಾಗಿ ಪ್ಲಾಸ್ಟಿಕ್ಕನ್ನು ಒಳಗೊಳ್ಳುತ್ತದೆ. ಇದನ್ನು ವಿಶೇಷವಾಗಿ ಕ್ರಿಸ್ಮಸ್ ಮರಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಇದನ್ನು ಚಾವಣಿಗಳಿಂದ ಇಳಿಬಿಡಬಹುದು ಅಥವಾ ಪ್ರತಿಮೆಗಳು, ದೀಪದ ಕಂಬಗಳು, ಇತ್ಯಾದಿಗಳ ಸುತ್ತ ಸುರುಳಿ ಸುತ್ತಬಹುದು. ಆಧುನಿಕ ಗುನ್ನಾಂಪಟ್ಟೆಯನ್ನು ಜರ್ಮನಿಯ ನ್ಯುರೆಂಬರ್ಗ್‌ನಲ್ಲಿ ೧೬೧೦ರಲ್ಲಿ ಆವಿಷ್ಕರಿಸಲಾಯಿತು. ಮೂಲತಃ ಇದನ್ನು ಬೆಳ್ಳಿಯ ಚೂರುಗಳಿಂದ ತಯಾರಿಸಲಾಗುತ್ತಿತ್ತು.

ಭಾರತದಲ್ಲಿ ಗುನ್ನಾಂಪಟ್ಟೆಯು ಪ್ರತಿಮೆಗಳ ಮೇಲಿನ ಅಲಂಕಾರ, ವಿವಾಹಗಳು ಹಾಗೂ ಇತರ ಸಮಾರಂಭಗಳಿಗೆ ಹಾರಗಳು, ಮತ್ತು ಕುದುರೆಗಳು ಹಾಗೂ ಆನೆಗಳಿಗೆ ಅಲಂಕಾರಿಕ ಸಜ್ಜುಗಳು ಸೇರಿದಂತೆ, ಅನೇಕ ಸಾಂಪ್ರದಾಯಿಕ ಉಪಯೋಗಗಳನ್ನು ಹೊಂದಿದೆ.[೧] ವಿವಿಧ ಬಗೆಗಳ ಗುನ್ನಾಂಪಟ್ಟೆಗಳು ಫ಼್ಲೈ ಟೈಯಿಂಗ್‍ನಲ್ಲಿ ಬಳಸಲಾದ ಜನಪ್ರಿಯ ವಸ್ತುಗಳಾಗಿವೆ.

ಉಲ್ಲೇಖಗಳು[ಬದಲಾಯಿಸಿ]

  1. Mukerjee, Radhakamal (1916). The foundations of Indian economics. Longmans, Green and Co. pp. 220.