ವಿಷಯಕ್ಕೆ ಹೋಗು

ಗುಜ್ಜೆ ಸುಕ್ಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಜ್ಜೆಯ(ಹಲಸಿನ) ಮರ

ಗುಜ್ಜೆ ಅಂದರೆ ಹಲಸಿನ ಮರದಲ್ಲಿ ಆಗುವ ಎಲೆಯ ಕಾಯಿಗೆ ಗುಜ್ಜೆ ಹೇಳುತ್ತಾರೆ ಹಣ್ಣಾದ ಹಲಸಿನಕಾಯಿ ತಿನ್ನಲು ಭಾರಿ ರುಚಿ ಹಾಗೂ ಅದರಲ್ಲಿ ಅರೋಗ್ಯಕ್ಕೆ ಬೇಕಾಗುವ ಒಳ್ಳೆಯ ಸತ್ವ ಇದೆ.[] ಹಲಸಿನ ಮರದಲ್ಲಿ ಆಗುವ ಕಾಯಿಗೆ ಕಲ್ಲಿ, ಕಲ್ಲಿಗೆ, ಗುಜ್ಜೆ, ಹಲಸಿನ ಕಾಯಿ ಎಂದು ಹೇಳುತ್ತಾರೆ. ಕಲ್ಲಿಗೆಯಿಂದ ಸ್ವಲ್ಪ ದೊಡ್ಡ ಕಾಯಿಗೆ ಗುಜ್ಜೆ ಹೇಳುತ್ತಾರೆ ಇದರಿಂದ ಮಾಡಿದ ಪಲ್ಯಕೆ ಗುಜ್ಜೆ ಸುಕ್ಕ ಹೇಳುತ್ತಾರೆ .ಅದಕ್ಕೆ ಕಡ್ಲೆ ಸೇರಿಸಿದರೆ ಗುಜ್ಜೆ ಕಡ್ಲೆ ಸುಕ್ಕ ಹೇಳುತ್ತಾರೆ ಆಪುಂಡು[]'

ಗುಜ್ಜೆ ಕಡ್ಲೆ ಗಸಿ

[ಬದಲಾಯಿಸಿ]

ಹಲಸಿನ ಗುಜ್ಜೆಯಿಂದ ನಾನಾ ರೀತಿಯ ಖಾದ್ಯ ತಯಾರಿಸುತ್ತಾರೆ.ಗುಜ್ಜೆ ಗಸಿ ಮಾಡಲು ಹಲಸಿನ ಗುಜ್ಜೆಯನ್ನು ಸಿಪ್ಪೆ ತೆಗೆದು ಸಣ್ಣ ಸಣ್ಣದಾಗಿ ತುಂಡು ಮಾಡಿ ನೀರು ಸೇರಿಸಿ ಮೊದಲೆ ನೆನೆಸಿಟ್ಟ ಕಪ್ಪು ಕಡ್ಲೆಯನ್ನು ಸೇರಿಸಿ ಉಪ್ಪು ಚೆನ್ನಾಗಿ ಬೇಯಿಸ ಬೇಕು . ಆನಂತರ ಜೀರಿಗೆ, ಬೆಳ್ಳುಳ್ಳಿ, ಮೆಂತೆ ,ಕೊತ್ತಂಬರಿ ಬೇಸೊಪ್ಪು ,ಒಣ ಮೆಣಸು ಎಲ್ಲವನ್ನು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಹುರಿಯ ಬೇಕು ಅದೆಲ್ಲವನ್ನು ಸ್ವಲ್ಪ ಹುಣಸೆ ಸೇರಿಸಿ ನುಣ್ಣಗೆ ಪುಡಿ ಮಾಡಿ ಆನಂತರ ತೆಂಗಿನ ತುರಿ ಸೇರಿಸಿ ರುಬ್ಬಿಕೊಂಡು ಬೆಯಿಸಿದ ಕಡ್ಡೆ ಗುಜ್ಜೆಗೆ ಹಾಕಿ ಒಲೆಯಲ್ಲಿಟ್ಟು ಚೆನ್ನಾಗಿ ಕುದಿಸಿದರೆ ಗಸಿ ತಯಾರು.

ಗುಜ್ಜೆ ಸುಕ್ಕ ಮಾಡುವ ವಿಧಾನ

[ಬದಲಾಯಿಸಿ]

ಗುಜ್ಜೆಯನ್ನು ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡು ಮಾಡಿ ನೀರು ಸೇರಿಸಿ ಬೆಯಿಸಬೇಕು .ಬೆಯಿಸಿ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡ ಬೇಕು ಮತ್ತೆ ಅದನ್ನು ಕಡೆಯುವ ಕಲ್ಲಿನಲ್ಲಿ ಹಾಕಿ ಗುದ್ದಿ ಹುಡಿ ಮಾಡ ಬೇಕು ಮತ್ತೆ ಒಲೆಯಲ್ಲಿ ಒಂದು ಬಾಣಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಒಗ್ಗರಣೆಗೆ ಸಾಸಿವೆ ಹಾಕಿ ಪಟ ಪಟ ಒಡೆದ ಮೇಲೆ ಒಂದೆರಡು ಬ್ಯಾಡಗಿ ಮೆಣಸು ತುಂಡು ಮಾಡಿ ಹಾಕಬೇಕು ಆಮೇಲೆ ಹುಡಿ ಮಾಡಿಟ್ಟ ಗುಜ್ಜೆಯನ್ನು ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿ ಇಟ್ಟ ಮಸಾಲೆ ಅಂದರೆ ಜೀರಿಗೆ, ಬೆಳ್ಳುಳ್ಳಿ, ಮೆಂತೆ ,ಕೊತ್ತಂಬರಿ ಬೇಸೊಪ್ಪು , ಒಣ ಮೆಣಸು, ಇದೆಲ್ಲವನ್ನು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಅದಕ್ಕೆ ಸ್ವಲ್ಪ ಹುಣಸೆ ಹುಳಿ ಸೇರಿಸಿ ರುಬ್ಬಿ ಸಣ್ಣ ಪುಡಿ ಮತ್ತೆ ತುರಿದ ತೆಂಗಿನ ಕಾಯಿ ಹಾಕಿ ಸ್ವಲ್ಪ ತಿರುಗಿಸಿ ಮಸಾಲೆ ಮಾಡಿ ಗುಜ್ಜೆಗೆ ಹಾಕಿ ಬೆರೆಸಿ ನೀರಿನ ಅಂಶ ಆರುವ ತನಕ ಸೌಟಲ್ಲಿ ತಿರುಗಿಸಬೇಕು ಒಳ್ಳೆ ಕುದಿ ಬಂದಾಗ ಗುಜ್ಜೆ ಸುಕ್ಕ ತಯಾರಗಿರುತ್ತದೆ.[]

ಗುಜ್ಜೆ ಕಡ್ಲೆ ಸುಕ್ಕ(ಪಲ್ಯ)

[ಬದಲಾಯಿಸಿ]

ಗುಜ್ಜೆಯನ್ನು ಸಿಪ್ಪೆ ತೆಗೆದು ಸಣ್ಣ ಕೊಚ್ಚಿ ನೆನೆಸಿದ ಕಪ್ಪು ಕಡ್ಲೆನ ಸೇರಿಸಿ ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಬೇಕು.ಆಮೇಲೆ ಜೀರಿಗೆ, ಬೆಳ್ಳುಳ್ಳಿ, ಮೆಂತೆ ,ಕೊತ್ತಂಬರಿ ಬೇಸೊಪ್ಪು , ಒಣ ಮೆಣಸು, ಇದೆಲ್ಲವನ್ನು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಅದಕ್ಕೆ ಸ್ವಲ್ಪ ಹುಣಸೆ ಹುಳಿ ಸೇರಿಸಿ ರುಬ್ಬಿ ಸಣ್ಣ ಪುಡಿ ಮತ್ತೆ ತುರಿದ ತೆಂಗಿನ ಕಾಯಿ ಹಾಕಿ ಸ್ವಲ್ಪ ತಿರುಗಿಸಿ ಮಸಾಲೆ ಮಾಡಿ ಕಡ್ಲೆ ಗುಜ್ಜೆಗೆ ಹಾಕಿ ಬೆರೆಸಿ ನೀರಿನ ಅಂಶ ಆರುವ ತನಕ ಸೌಟಲ್ಲಿ ತಿರುಗಿಸ ಬೇಕು .ಒಳ್ಳೆ ಕುದಿ ಬಂದಾಗ ಒಲೆಯಿಂದ ಇಳಿಸಬೇಕು ಮೇಲಿನಿಂದ ಕರಿಬೇವಿನ ಒಗ್ಗರಣೆ ಕೊಟ್ಟರೆ ಬಹಳ ಪರಿಮಳವಾಗಿರುತ್ತದೆ

ಉಲ್ಲೇಖಗಳು

[ಬದಲಾಯಿಸಿ]