ಗಾಳಗಾರ ಮೀನು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗಾಳಗಾರ ಮೀನು
(Angler fish)
Humpback anglerfish.png
ಮೆಲನೊಸೆಟಸ್ ಜಾನ್ಸನಿ ಪ್ರಜಾತಿಯ ಗಾಳಗಾರ ಮೀನು
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: animalia
ವಂಶ: ಬೆನ್ನೆಲುಬುಳ್ಳ ಪ್ರಾಣಿ (Chordata)
ಸೂಪರ್‌ವರ್ಗ: ಆಸ್ಟಿಯೊಇಕ್ತಿಸ್ (ಮೂಳೆಯುಳ್ಳ ಮೀನು)
ವರ್ಗ: ಆಕ್ಟಿನೊಟೆರಿಜಿ
ಗಣ: ಲೊಫ್ಲಿಫೊರ್ಮೆಸ್
Suborders

Antennarioidei
Lophioidei
Ogcocephalioidei
See text for families.

ಸಾಗರದಾಳದಲ್ಲಿ ಜೀವಿಸುವ ಅನೇಕ ಮೀನುಗಳಿಗೆ ಬಹಳ ದೊಡ್ಡ ತಲೆ ಮತ್ತು ಚಿಕ್ಕ ದೇಹಗಳಿರುತ್ತವೆ. ಆ್ಯಂಗ್ಲರ್ ಫಿಶ್ ಅಥವಾ ಗಾಳಗಾರ ಮೀನು ಮತ್ತು ಅದರ ಸಂಬಂಧಿಕ ಮೀನುಗಳು ಇವುಗಳಲ್ಲಿ ಪ್ರಮುಖವಾದವು. ಕೆಲವು ಮೀನುಗಳು ತಮಗಿಂತಲೂ ದೊಡ್ಡದಾದ ಮೀನುಗಳನ್ನು ನುಂಗಬಲ್ಲವು! ಗಾಳಗಾರ ಮೀನು ತಾನು ಬೇಟೆಯಾಡುವ ವಿಚಿತ್ರ ರೀತಿಯಿಂದ ಈ ಹೆಸರು ಸಂಪಾದಿಸಿದೆ. ಈ ಮೀನಿಗೆ ತಲೆಯ ಮೇಲೆ ಮೀನು ಹಿಡಿಯುವ ಉದ್ದವಾದ ಗಾಳದಂತಿರುವ ಮೂಲೆಯ ಕಡ್ಡಿಯೊಂದಿದೆ. ಈ ಕಡ್ಡಿಯ ತುದಿಯಲ್ಲಿ ಆಕರ್ಷಕವಾದ ಗಾಳಕ್ಕೆ ಸಿಕ್ಕಿಸಿದ ಹುಳುವಿನಂಥ ಮಾಂಸದ ತುಂಡಿದೆ. ತನ್ನ ಅಗಲವಾದ ಬಾಯ ಸನಿಹ ಈ ಗಾಳವನ್ನು ಆಡಿಸುತ್ತಾ ಸುಮ್ಮನೆ ನಿಲ್ಲುತ್ತದೆ. ಇತರ ಸಣ್ಣ ಮೀನುಗಳು ಮೋಸಹೋಗಿ ಗಾಳವನ್ನು ನುಂಗಲು ಬಂದಾಗ, ಗಾಳಗಾರ ಮೀನು ಅವನ್ನು ಹಿಡಿದು ನುಂಗುತ್ತದೆ.

ಗಾಳಗಾರ ಮೀನುಗಳು ಪ್ರಪಂಚದ ಎಲ್ಲಾ ಸಮುದ್ರಗಳಲ್ಲೂ ಕಂಡುಬರುತ್ತದೆ. ಕೆಲವು ಜಾತಿಗಳಲ್ಲಿ, ಗಂಡುಮೀನು ಹೆಣ್ಣಿನ ದೇಹಕ್ಕೆ ತನ್ನ ದವಡೆಗಳ ಸಹಾಯದಿಂದ ಸದಾ ಅಂಟಿಕೊಂಡೇ ಇರುತ್ತದೆ! ಇದು ಆಹಾರಕ್ಕಾಗಿ. ಹೆಣ್ಣಿನ ದೇಹದಿಂದ ಆಹಾರ ಪಡೆಯುವ ಗಂಡು, ಪ್ರತಿಯಾಗಿ ಅದರ ಮೊಟ್ಟೆಗಳನ್ನು ಫಲವಂತಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]