ಗಳಗನಾಥ (ಹಾವೇರಿ ಜಿಲ್ಲೆ)
Galaganath
ಗಳಗನಾಥ | |
---|---|
town | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಹಾವೇರಿ |
ತಾಲೂಕು | ಹಾವೇರಿ |
ಲೋಕಸಭಾ ಕ್ಷೇತ್ರ | ಹಾವೇರಿ |
ಭಾಷೆ | |
• ಅಧಿಕೃತ | ಕನ್ನಡ |
Time zone | UTC+5:30 (IST) |
Vehicle registration | KA-27 |
Nearest city | ರಾಣಿಬೆನ್ನೂರು |
ಗಳಗನಾಥ (ಹಾವೇರಿ ಜಿಲ್ಲೆ) ಹಾವೇರಿ ಜಿಲ್ಲೆ ಹಾವೇರಿ ತಾಲ್ಲೂಕಿನಲ್ಲಿರುವ ಒಂದು ಪುಣ್ಯಕ್ಷೆತ್ರ. ಸುಂದರ ತಾಣ. ವರದಾ ಮತ್ತು ತುಂಗಭದ್ರಾ ನದಿಗಳ ಸಂಗಮಸ್ಥಳದಲ್ಲಿದೆ.
ಇಲ್ಲಿರುವ ಗಳಗೇಶ್ವರ ದೇವಸ್ಥಾನದಿಂದ ಈ ಸ್ಥಳಕ್ಕೆ ಗಳಗನಾಥ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು ಗಳಗೇಶ್ವರ ಮುನಿ ಸ್ಥಾಪಿಸಿದರೆಂದು ಪ್ರತೀತಿ. ಈ ದೇವಾಲಯ 28ಮೀ. ಉದ್ದ 14ಮೀ ಅಗಲವಿದೆ. ಇದರ ಮೇಲ್ಚಾವಣಿಯನ್ನು ನಾಲ್ಕು ಸುಂದರವಾದ ಸ್ತಂಭಗಳು ಅಂದವಾಗಿ ಎತ್ತಿ ಹಿಡಿದಿವೆ. ದೇವಾಲಯದ ಸುತ್ತಲೂ ಗೋಡೆಯ ಮೇಲೆ ಪೌರಾಣಿಕ ಕಥೆಗಳನ್ನು ಕೆತ್ತಲಾಗಿದೆ. ಈ ದೇವಾಲಯದ ಕಟ್ಟಡದ ವೈಶಿಷ್ಟ್ಯವೆಂದರೆ ಇದರ ಅಡಿಪಾಯ. ಇದರ ಆಕಾರ ಪಿರಿಮಿಡ್ನಂತಿದೆ. ನದಿಯ ನೆರೆಹಾವಳಿಯಿಂದ ಈ ದೇವಾಲಯವನ್ನು ರಕ್ಷಿಸಲು ಗೋಡೆಗಳನ್ನು ಕಟ್ಟಲಾಗಿದೆ. ಇಲ್ಲಿ ಒಂದು ಹನುಮಂತದೇವರ ಗುಡಿಯೂ ಇದೆ. ಈ ಊರಲ್ಲಿ ಕಲ್ಯಾಣ ಚಾಳುಕ್ಯರ ಆರು ಶಾಸನಗಳು ದೊರೆತಿವೆ. ಹೊಯ್ಸಳ ವಿಷ್ಣುವರ್ಧನ ಇಲ್ಲಿಂದ ದಾನಮಾಡಿದ ಸಂಗತಿ ತಿಳಿದುಬರುತ್ತದೆ. ಈ ಗ್ರಾಮದ ಸಮೀಪದಲ್ಲಿ ಅನೇಕ ಬೃಹತ್ ಶಿಲಾ ಸಮಾಧಿಗಳು ಬೆಳಕಿಗೆ ಬಂದಿವೆ. ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ಗಳಗನಾಥರು ಈ ಸ್ಥಳದವರು.
ಇತಿಹಾಸ
[ಬದಲಾಯಿಸಿ]ಶಾಸನಗಳಲ್ಲಿ ಈ ಸ್ಥಳವನ್ನು ಹುಲ್ಲುನಿ ಅಥವಾ ಪುಲ್ಲುನಿ ಎಂದು ಉಲ್ಲೇಖಿಸಲಾಗಿದೆ. ಇಲ್ಲಿರುವ ದೇವಾಲಯ ಪೂರ್ವಾಭಿಮುಖವಾಗಿದ್ದು ಗರ್ಭಗೃಹ, ಅಂತರಾಳ ಹಾಗು ಮುಖ ಮಂಟಪಗಳನ್ನು ಹೊಂದಿದೆ. ದೇವಾಲಯವು ನದಿ ದಂಡೆಯ ಮೇಲಿರುವುದರಿಂದ ಹಾಗು ಗರ್ಭಗೃಹದ ಮೇಲಿನ ಗೋಪುರ ಬೃಹತ್ತಾದ್ದರಿಂದ ಅದರ ಸುರಕ್ಷತೆತೆಗಾಗಿ ಗೋಪುರದ ಸುತ್ತಲೂ ಬಲವಾದ ಗೋಡೆಯನ್ನು ಕಟ್ಟಲಾಗಿದೆ.
ಶಿಲ್ಪಕಲೆ
[ಬದಲಾಯಿಸಿ]ಗರ್ಭಗೃಹದ ಲಿಂಗುವಿನ ಹೊರತಾಗಿ ಇಲ್ಲಿ ಅನೇಕ ಸುಂದರ ಕೆತ್ತನೆಗಳಿವೆ. ಈ ಕೆತ್ತನೆಗಳು ಶ್ರೀನಿವಾಸ ವಿ ಪಾಡಿಗಾರ್ ಅವರ ಪ್ರಕಾರ ಆಗಿನ ಸುಪ್ರಸಿದ್ಧ ಬಂಕೋಜ ಹಾಗು ಕೇಟೋಜ ಎಂಬುವವರ ಶೈಲಿಯನ್ನು ಹೋಲುತ್ತದೆ. ಅಂಥವುಗಳಲ್ಲೊಂದು ಸೂರ್ಯ ವಿಗ್ರಹ. ಕೈಯಲ್ಲಿ ಕಮಲವನ್ನು ಹಿಡಿದಿದ್ದು ಸಪ್ತಾಶ್ವಗಳ ಮೇಲೆ ಆರೂಢನಾಗಿದ್ದಾನೆ. ಉಷೆ-ಪ್ರತ್ಯುಷೆಯರು ಮಕರ ತೋರಣದಲ್ಲಿ ಇದ್ದಾರೆ. ಇದಲ್ಲದೆ ಎಂಟು ಕೈಗಳ ಮಹಿಷನನ್ನು ಕೊಲ್ಲುವ ಭಂಗಿಯಲ್ಲಿರುವ ಮಹಿಷಾಸುರ ಮರ್ದಿನಿ, ನಿಂತ ಭಂಗಿಯಲ್ಲಿರುವ ವಿಷ್ಣು(ಕ್ರಿ ಶ ೧೦೩೪), ಇದರ ಸುತ್ತಲೂ ಕೆತ್ತಿರುವ ದಶಾವತಾರ ಶಿಲ್ಪಗಳು ಹಾಗು ಇಲ್ಲಿನ ಅತ್ಯಂತ ಆಕರ್ಷಕ ಶಿಲ್ಪಗಳೊಲ್ಲೊಂದಾದ ಸರಸ್ವತಿ.