ಗಂವ್ಹಾರ

ವಿಕಿಪೀಡಿಯ ಇಂದ
Jump to navigation Jump to search


[೧] ಕ್ಷೇತ್ರ. ಗಂವ್ಹಾರ ಊರು ಗಂವ್ಹಾರ ತಾಲ್ಲೂಕು ಜೇವರ್ಗಿ ಜಿಲ್ಲಾ ಕಲಬುರ್ಗಿ

(ಗಂವ್ಹಾರದಿಂದ ವರದಿ ) - ಹೊಸ ಧರ್ಮ, ಹೊಸ ಸಂಪ್ರದಾಯಗಳು ನಮಗೆ ಬೇಕಿಲ್ಲ. ಸಮನ್ವಯ ಸಾರುವ ಮಠಗಳು ಬೇಕು ಎಂದು ಭದ್ರಾವತಿ ಪಾಂಡುರಮಗಾಶ್ರಮದ ಶ್ರೀ ನಾಮದೇವಾನಂದ ಭಾರತೀ ಸ್ವಾಮೀಜಿ ಹೇಳಿದರು. ಕೋಟಿ ಬಿಲ್ವ ಕಾರ್ಯಕ್ರಮದ ಮೂರನೇ ದಿನದ ಕಾರ್ಯಕ್ರಮದಲ್ಲಿ ನಾಥ ಪ್ರಶಸಿ...

ಶನಿವಾರ ಬೆಳಗ್ಗೆ ೮ಕ್ಕೆ ಬಿಲ್ವಾರ್ಚನೆ ಆರಂಭ

ಸಹಸ್ರಾರು ಭಕ್ತರು ಪರ ಶಿವನಿಗೆ ಕೋಟಿ ಬಿಲ್ವದಿಂದ ಅರ್ಚಿಸಲು ಸಿದ್ದರಾಗಿದ್ದಾರೆ. ಶನಿವಾರ ಬೆಳಗ್ಗೆ ೮ರಿಂದ ಕೋಟಿ ಬಿಲ್ವಾರ್ಚನೆ ಆರಂಭವಾಗಲಿದ್ದು, ಸರ್ವರೂ ಬಿಲ್ವದಿಮದ ಶಿವನಿಗೆ ಪೂಜೆ ಸಲ್ಲಿಸಬಹುದು. ಬೆಳಗ್ಗೆ ೭ಕ್ಕೆ ಮಾನಸ ಪೂಜೆ ನೆರವೆರಲಿದೆ. ೮ಕ್ಕೆ ರಾಮಚಂದ್ರಪುರ ಮಠದ ಶ್ರೀ ರಾಘವೇಶ...

ಅಪಾಯದಲ್ಲಿ ಬೇಕಿರುವುದು ಕರ್ಮಯೋಗ

ಗಂವ್ಹಾರದಿಂದ ವರದಿ - 'ನಾವಿಂದು ಅಪಾಯದ ಅಂಚಿನಲ್ಲಿದ್ದೇವೆ. ಈಗ ನಮಗೆ ಬೇಕಿರುವುದು ಭಕ್ತಿಯೋಗವಲ್ಲ, ಕರ್ಮಯೋಗ' ಎಂದು ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು. ಅವರು ಗಂವ್ಹಾರದಲ್ಲಿ ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. 'ಸೈನಿಕ ಮತ್ತು ಸಂತರು...

ಭುವಿಯ ಬೆಳಗಿದ ಬನ್ನಿ ಬಸವೇಶ್ವರರು[ಬದಲಾಯಿಸಿ]

(12 May) 'ನಮ್ಮ ನಾಡಿನ ಪಂಚ ಪೀಠಗಳಲ್ಲಿ ಕಾಶೀ ಪೀಠವೂ ಒಂದು. ಧರ್ಮದ ಪ್ರಸಾರ ಮಾಡುತ್ತ ಜನತೆಯ ಕಾಳಿಕೆಯನ್ನು ಕಳೆಯುವದು ಈ ಪೀಠಗಳ ಮೂಲ ಉದ್ದೇಶ. ಅಂತೆಯೇ ಕಾಶೀ ಪೀಠದ 60ನೆಯ ಪೀಠಾಧಿಪತಿ ಶ್ರೀ 1008 ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಲೋಕ ಸಂಚಾರ ಮಾಡುತ್ತ, ಭಕ್ತಕುಲದ ಮಲೀನತೆಯನ್ನು ತೊಳೆಯುತ್ತ ಸಗರ ನಾಡಿಗೆ ಬರುತ್ತಾರೆ. ಸಗರ ನಾಡು ಪ್ರಾಕೃತಿಕವಾಗಿ ಸಂಪದ್ಭರಿತವಾದುದು. ಸೃಷ್ಟಿಯ ಸೊಬಗನ್ನು ಹೊತ್ತು ನಿಂತಿರುವ ಗಂವ್ಹಾರ ಶ್ರೀಗಳ ಮನವನ್ನು ಸೂರೆಗೊಳ್ಳುತ್ತದೆ.. ಗಂವ್ಹಾರದ ಗವಿಯೊಂದರಲ್ಲಿ ತಪಸ್ಸನ್ನು ಗೈದು ಸಿದ್ದಿಯನ್ನು ಸಂಪಾದಿಸಿಕೊಳ್ಳುವರು. ತಾವು ಸಂಪಾದಿಸಿದ ಅನರ್ಘ್ಯ ಜ್ಞಾನದ ಸವಿಯನ್ನು ಭಕ್ತವೃಂದಕ್ಕೆ ಉಣಬಡಿಸುತ್ತ ಧರ್ಮ ಪ್ರಸಾರ ಮಾಡುತ್ತಿರುವಾಗ ಒಂದು ಘಟನೆ ನಡೆಯುತ್ತದೆ. ಫರೋಜಾಬಾದ ಇಬ್ರಾಹಿಂ ಬಾದಷಹ ತನ್ನ ಪಡೆಯೊಂದಿಗೆ ಬೇಟೆಯಾಡುತ್ತ ಸಗರ ನಾಡಿಗೆ ಬರುವನು. ಪುಣ್ಯ ಪುರುಷರು ಮೆಟ್ಟಿದ ಧರೆಯಲ್ಲಿ ದೊರೆ ಬೇಟೆಗೆ ತೊಡಗಿದಾಗ ಬಾದಷಹ ಒಳಗೊಂಡಂತೆ ಇಡೀ ಪಡೆಯ ಕಣ್ಣುಗಳು ಕುರುಡಾಗುತ್ತವೆ. ಆಗ ಕಂಗಾಲಾದ ದೊರೆಗೆ ಮಹಾತ್ಮರ ಮಹಿಮೆಯನ್ನು ಅಲ್ಲಿನ ಜನತೆ ತಿಳಿಸುತ್ತಾರೆ. ದೊರೆ ನೇರ ಹೋಗಿ ಶಿವಾಚಾರ್ಯರ ದರ್ಶನ ಪಡೆದು, ತಪ್ಪನ್ನು ಮನ್ನಿಸುವಂತೆ ಕಾಲಿಗೆರಗುವನು. ಭೂಮಿ ತಪದ ತಾಣವಾಗಿದೆ. ಹಿಂಸೆ ಮಾಡುವದು ತರವಲ್ಲ. ಕೊಂದು ತಿನ್ನುವದು ಧರ್ಮವಲ್ಲವೆಂದು ಗುರುಗಳು ತಿಳಿ ಹೇಳುತ್ತಾರೆ. ಸಂತುಷ್ಟನಾದ ಬಾದಷಹ ತನ್ನ ರಾಜ್ಯದಲ್ಲಿ ಕೆಲ ಸೀಮೆಗಳನ್ನು ಗುರುಗಳಿಗೆ ನೀಡಿ, ಮಠವನ್ನು ಕಟ್ಟಿಸಿಕೊಟ್ಟು ಕೃತಾರ್ಥನಾಗುತ್ತಾನೆ. ಹೀಗೆ ತಮ್ಮ ನಾಡರಸದಿಂದ ರಾಜ್ಯಮಾನ್ಯ ಸ್ವೀಕರಿಸಿದ ಗುರುಗಳು, ಗಂವ್ಹಾರ ಮಠವನ್ನು ಪೀಠವನ್ನು ಶಾಖಾಮಠವೆಂದು ಸ್ಥಾಪಿಸುವರು. ತಮ್ಮ ಅನುಪಮ ಲೀಲಾ ಕಾರ್ಯಗಳೊಂದಿಗೆ ಭಕ್ತರನ್ನು ಉದ್ಧರಿಸಿದ ಗುರುಗಳು ಬನ್ನಿ ಗಿಡದ ಬುಡದಲ್ಲಿ ತಪಗೈದುದರಿಂದ ಬನ್ನಿ ಬಸವಾರ್ಯರೆಂದು ಜನವಾಣಿಯಲ್ಲಿ ಪ್ರಚಲಿತರಾಗುತ್ತಾರೆ. ಇದೇ ಬನ್ನಿ ಬಸವಾರ್ಯರು ಕಾಶಿಯಿಂದ ತಮ್ಮ ಜೊತೆಯಲ್ಲಿ ಕರೆತಂದ ನಾಲ್ವರತು ಶಿಷ್ಯರಲ್ಲಿ ಬುಕ್ಕಸಾಗರಕ್ಕೊಬ್ಬ, ಜಾಲಹಳ್ಳಿಗೊಬ್ಬ, ಗಿರಿಸಾಗರಕ್ಕೊಬ್ಬ ಮತ್ತು ಗಂವ್ಹಾರಕ್ಕೊಬ್ಬರನ್ನು ನೇಮಿಸುತ್ತಾರೆ. ಗಂವ್ಹಾರ ಮಠಕ್ಕೆ ನೇಮಕಗೊಂಡರೇ ಬಸವಣ್ಣ ದೇವರು. ಅನಂತ ಪವಾಡಗಳನ್ನು ಮಾಡಿದ ಬನ್ನಿಬಸವಾರ್ಯರು ಸಗರ ನಾಡಿನಲ್ಲಿ ತುಂಬ ಖ್ಯಾತನಾಮರಾಗುತ್ತಾರೆ. ಸಗರ ನಾಡಿನ ದೊರೆಯ ಮಗಳು ಕ್ರೂರವ್ಯಾಧಿಯಿಂದ ಬಳಲುತ್ತಿರುತ್ತಾಳೆ. ಅರಸ ತನ್ನ ಮಗಳನ್ನು ಗುರುಗಳ ಹತ್ತಿರ ಕರೆತರುತ್ತಾನೆ. ಗುರುಗಳ ದಿವ್ಯ ದರ್ಶನದಿಂದ ಅರಸನ ಮಗಳ ಕ್ರೂರವ್ಯಾಧಿ ತೊಲಗಿ ಹೋಗುತ್ತದೆ. ಅವಳನ್ನೇ ಗುರುಗಳು ಬಸವಣ್ಣ ದೇವರಿಗೆ ಕೊಟ್ಟು ಮದುವೆ ಮಾಡಿ, ಗೃಹಸ್ಥಾಶ್ರಮವನ್ನು ವಹಿಸಿಕೊಡುತ್ತಾರೆ. ಗುರುಗಳು ಗಂವ್ಹಾರದಲ್ಲಿಯೇ ಲಿಂಗೈಕ್ಯರಾದುದರಿಂದ ಅಲ್ಲಿಯೇ ಸಮಾಧಿ ಕಟ್ಟಲಾಗಿದ್ದು, ಅದೇ ಇಂದಿನ ಬನ್ನಿ ಬಸವವೇಶ್ವರ ದೇವಾಲಯ. ಬಸವಣ್ಣ ದೇವರು ಗಂವ್ಹಾರ ಮಹಾ ಮಠದ ಪರಂಪರೆಯನ್ನು ಮುನ್ನಡೆಸುತ್ತ, ಧರ್ಮ ಪ್ರಸಾರದಲ್ಲಿ ತೊಡಗುತ್ತಾರೆ. ಅವರಿಗೆ ಇಬ್ಬರು ಮಕ್ಕಳು ಜನಿಸುತ್ತಾರೆ. ಒಬ್ಬ ತಂದೆಯಂತೆ ಗೃಹಸ್ಥನಾದರೆ, ಮತ್ತೊಬ್ಬ ಶಿವಯೋಗಿಯಾಗುತ್ತಾನೆ. ಹೀಗೆ ಗಂವ್ಹಾರ ಮಠದಲ್ಲಿ ಹಲವಾರು ಮಹಾತ್ಮರು ಬಾಳಿ, ಬದುಕಿ ಮಠದ ಉನ್ನತಿಯನ್ನು ಎತ್ತಿ ಹಿಡಿದರು. ಅವರಲ್ಲಿ ವೃಷಭಲಿಂಗ ಎಂಬುವರು ತುಂಬಾ ಪ್ರಸಿದ್ಧರು ಅವರು 14 ವರ್ಷಗಳ ಕಾಲ ಬ್ರಹ್ಮ ರಾಕ್ಷಸನಿಂದ ವಿದ್ಯೆಯನ್ನು ಸಂಪಾದಿಸಿದರೆಂಬ ಐತಿಹ್ಯವಿದೆ. ವೃಷಭಲಿಂಗರು ಕವಿಯಾಗಿದ್ದು, ಬಂಥನಾಳ ವೃಷಭಲಿಂಗೇಶ್ವರ ಪುರಾಣ, ರೇವಣಸಿದ್ಧೇಶ್ವರ ಪುರಾಣ, ಮುಂತಾದ ಮಹಾಕೃತಿಗಳನ್ನು ರಚಿಸಿದರು. ಇಂಥ ಅಗಾಧವಾದ ಪಾಂಡಿತ್ಯದ ಗಣಿಯಾಗಿದ್ದ ದಿವ್ಯಮೂರ್ತಿ ವೃಷಭಲಿಂಗರ ಪುಣ್ಯೋದರದಲ್ಲಿ ಜನಿಸಿದರೇ ಶ್ರೀ ಬನ್ನಯ್ಯ ಶಾಸ್ತ್ರಿಗಳು ಮತ್ತು ಶ್ರೀರಾಚೋಟಿ ಶಿವಾಚಾರ್ಯರು ಇವರಲ್ಲಿ ಶ್ರೀ ಬನ್ನಯ್ಯ ಶಾಸ್ತ್ರಿಗಳು ಸದಾಚಾರ ಸಂಪನ್ನರಾಗಿ ಸದ್ಗಹಸ್ಥರಾಗಿರುತ್ತಾರೆ. ಆದರೆ ಶ್ರೀ ರಾಚೋಟಿ ಶಿವಾಚಾರ್ಯರು ಗೃಹಸ್ಥಾಶ್ರಮ ನಿರಾಕರಿಸಿ, ತ್ರಿಕಾಲ ಪೂಜಾ ನಿಷ್ಠರಾಗಿ, ಅನುಪಮವಾದ ಜ್ಞಾನ ಸಂಪಾದಿಸಿ, ತಪೋಬಲದಿಂದ ಶಿವಯೋಗಿಗಳಾಗಿ ಜನಮಾನಸದ ಆಧ್ಯಾತ್ಮಿಕ ಗುರುಗಳಾಗುತ್ತಾರೆ. ಶ್ರೀ ಬನ್ನಯ್ಯ ಶಾಸ್ತ್ರಿಗಳಿಗೆ ಪೌಢವಯಸ್ಸು ಪ್ರಾಪ್ತವಾದಾಗ, ನೆಂಟರ ಊರಾದ ಅಳ್ಳಗಿಯ ಹಿರೇಮಠದ ನೀಲಮ್ಮ ಎಂಬ ಸಾಧ್ವಿ ಶಿರೋಮಣಿಯ ಜೊತೆಯಲ್ಲಿ ಮದುವೆ ನೆರವೇರಿಸುತ್ತಾರೆ. ಗಂವ್ಹಾರ ಸ್ಥಳ ಗಂವ್ಹಾರ ಪಂಚಾಯಿತಿ ಗಂವ್ಹಾರ ಹೋಬಳಿ ಆಂದೋಲ ತಾಲೂಕ ಜೇವರ್ಗಿ ಜಿಲ್ಲಾ ಕಲಬುರ್ಗಿಅಬ್ಬೆ ತುಮಕೂರು, ಯಾದಗಿರಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮ. ಯದಗಿರಿಯಿಂದ 10 ಕಿಲೋಮೀಟರು ಚಿತ್ತಾಪುರ ಮಾರ್ಗದಲ್ಲಿ ಬರುತ್ತದೆ.

ಈ ಗ್ರಾಮವು ಶ್ರೀ ವಿಶ್ವರಾಧ್ಯರ ದೇವಾಲಯಕ್ಕೆ ಸುಪ್ರಸಿದ್ಧ. ಇಲ್ಲಿ ಶರಣ ಸಕ್ಕರೆಪ್ಪ ಗೌಡರ ಸಮಾಧಿಯೂ ಇದೆ. ಸಕರೆಪ್ಪ ಗೌಡರ ಸಮಾಧಿಯ ಮೇಲೆ ಶ್ರೀ ವಿಶ್ವರಾಧ್ಯರ ಮೂರ್ತಿಯು ಸ್ಥಾಪಿಸಲಾಗಿದೆ.

ಅಬ್ಬೆತುಮಕೂರಿನ ಶ್ರೀ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಠದ ಈಗಿನ ಪೀಠಾಧಿಪತಿಗಳು, ಶ್ರೀ ಶ್ರೀ ಶಟಸ್ಥಲ ಬ್ರಹ್ಮಿ ಆಚಾರ್ಯ ರತ್ನ ಡಾ||ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಜಿ.

ಶ್ರೀ ವಿಶ್ವರಾಧ್ಯರು ಚನ್ನಯ್ಯ ಶಾಸ್ತ್ರೀಗಳು ಮತ್ತು ನೀಲಮ್ಮಾ ದಂಪತಿಗಳ ಮಗನಾಗಿ ೧೮೮೦ ವಿಕ್ರಮ ಸಂವತ್ಸರ ಚೈತ್ರ ಶುದ್ಧ ತದಿಗೆ ಗುರುಮಠ ಪ್ರಾತಃ ಕಾಲದ ಶುಭಗಳಿಗೆಯಲ್ಲಿ ಜನಿಸಿದರು. ವಿಶ್ವಾರಾಧ್ಯರು ಬೆಳೆಯುತ್ತಾ ರಾಚೋಟ ಎಂಬ ಗುರುವಿನಲ್ಲಿ ವಿದ್ಯೆಯನ್ನು ಕಲಿತರು. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಬಾಲಕನಾಗಿದ್ದಾಗಲೇ ವಿಶ್ವರಾಧ್ಯರು ಅನೇಕ ನೀತಿಗಳನ್ನು ತೋರಿಸುತ್ತಾ ವಿದ್ಯೆಯಲ್ಲಿ ಪಾರಂಪರಾಗ ತೊಡಗಿದ್ದಾರೆ.

ಸದ್ಗುರು ವಿಶ್ವಾರಾಧ್ಯರ ಜನ್ಮಸ್ಥಳ ಗುಲ್ಬರ್ಗಾ ಜಿಲ್ಲೆಯ, ಜೇವರಗಿ ತಾಲೂಕಿನ ಗಂವ್ಹಾರ ಗ್ರಾಮ. ಪ್ರತಿ ವರ್ಷವೂ, ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನ ಶ್ರೀ ವಿಶ್ವರಾಧ್ಯ ಮಠದ ಪೀಠಾಧಿಪತಿ ಡಾ||ಗಂಗಾಧರ ಸ್ವಾಮೀಜಿಗಳ ನೇತೃತ್ವದಲ್ಲಿ ಸಹಸ್ರಾರು ಭಕ್ತರು ಗಂವ್ಹಾರದಿಂದ ಅಬ್ಬೆತುಮಕೂರಿಗೆ ಪಾದಯಾತ್ರೆ ಮಾಡುತ್ತಾರೆ. ಡೊಳ್ಳು ಕುಣಿತ, ಕಂಸಾಳೆ ನೃತ್ಯ, ವೇಷಗಾರರ ಆಟ ಜನರ ಮನವನ್ನು ರಂಜಿಸಿತ್ತವೆ.

ಇಲ್ಲಿ ಶ್ರೀ ವಿಶ್ವರಧ್ಯರ ಜಾತ್ರೆಯು ಪ್ರತಿ ವರ್ಷವೂ ಶಿವರಾತ್ರಿಯ ನಂತರ 5 ದನೇ ದಿನ ಜರಗುತ್ತದೆ. ಸಿದ್ದಿ ಪುರುಷ ವಿಶ್ವಾರಾಧ್ಯರ ಧರ್ಮಪತ್ನಿ ಬಸವಾಂಬೆ ತಾಯಿಯ ಜಾತ್ರೆಯೂ ಸಡಗರ ಸಂಭ್ರಮದಿಂದ ಭಕ್ತರು ಆಚರಿಸಿಸುತ್ತಾರೆ. ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯುತ್ತದೆ. ಪಲ್ಲಕ್ಕಿ ಉತ್ಸವ ಸಂದರ್ಭದಲ್ಲಿ ನಡೆಯುವ ಪುರವಂತಿಕೆ ನೋಡುಗರ ಮೈ ನವಿರೇಳಿಸುತ್ತದೆ.ರಾಜ್ಯ ಕರ್ನಾಟಕ

  1. ನಿಂಗಣ್ಣ
"https://kn.wikipedia.org/w/index.php?title=ಗಂವ್ಹಾರ&oldid=814538" ಇಂದ ಪಡೆಯಲ್ಪಟ್ಟಿದೆ