ಖೊಖೊ
![]() ಬೆಂಗಳೂರಿನ ರಾಮಕೃಷ್ಣ ಮಿಷನ್ ನ. SRVK ಶಾಲೆಯ ೨೦೦೯ – ರ ಸಾಲಿನ ಹೋಬಳಿ ಮಟ್ಟದ ಖೊಖೊ ಚ್ಯಾಂಪಿಯನ್ಸ್ ತಮ್ಮ ಪದಕಗಳೊಂದಿಗೆ . | |
ವಿಶೇಷಗುಣಗಳು | |
---|---|
ತಂಡ ಸದಸ್ಯರುಗಳು | 12 ಜನ ಒಂದು ತ೦ಡದಲ್ಲಿ 9 ಜನ ಆಟದಲ್ಲಿ |
ಬೆನ್ನು ಹತ್ತಿಹೋಗಿ ಮುಟ್ಟಿಸುವ ಆಟ. ಇದರಲ್ಲಿ ಒಂದು ತ೦ಡದಲ್ಲಿ 12 ಜನ ಆಟಗಾರರಿದ್ದು ಅದರಲ್ಲಿ 9 ಜನ ಆಟಗಾರರು ಆಟದಲ್ಲಿರುತ್ತಾರೆ. ಒಂದು ತ೦ಡದವರು ಮತ್ತೊ೦ದು ತ೦ಡದವರನ್ನು ಮುಟ್ಟಿಸಲು ಪ್ರಯತ್ನಿಸುತ್ತಾರೆ. ವಿರೋದಿ ತ೦ಡದವರಿಂದ ಅವರು ತಪ್ಪಿಸಿಕೊಳ್ಳುಲು ಪ್ರಯತ್ನಿಸುತ್ತಾರೆ. [೧] .ಕಬಡ್ಡಿ ಆಟವನ್ನು ಹೊರತು ಪಡಿಸಿದರೆ ದಕ್ಷಿಣ ಏಷ್ಯಾದಲ್ಲೆ ಇದೊ೦ದು ಜನಪ್ರಿಯ ಸಾ೦ಪ್ರದಾಯಕ ಬೆನ್ನು ಹತ್ತಿಹೋಗುವ ಆಟ. [೨] .ದಕ್ಷಿಣ ಏಷ್ಯಾ ದಲ್ಲೇ ಅಲ್ಲದೆ (ಮುಖ್ಯವಾಗಿ ಭಾರತ ಪಾಕೀಸ್ತಾನ)ಈ ಆಟವನ್ನು ದಕ್ಷಿಣ ಆಫ್ರಿಕಾದಲ್ಲೂ ಆಡುತ್ತಾರೆ.[೩]
ಆಟದ ನಿಯಮಗಳು[ಬದಲಾಯಿಸಿ]
- ಪ್ರತಿ ತ೦ಡದಲ್ಲೂ 12 ಜನ ಆಟಗಾರರಿರುತ್ತ್ತಾರೆ, 9 ಜನ ಆಟದಲ್ಲಿರುತ್ತಾರೆ.
- ಒಂದು ಪ೦ದ್ಯದಲ್ಲಿ 2 ಸರದಿಗಳಿರುತ್ತವೆ. ಒಂದು ಸರದಿಯಲ್ಲಿ ಬೆನ್ನಟ್ಟಿ ಹೋಗಿ ಮುಟ್ಟಿಸುವp ಮತ್ತೊಂದು - ವಿರುದ್ಧ ತಂಡದವರು ಬೆನ್ನು ಹತ್ತಿದಾಗ ಅವರಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸುವ ಬಗೆಗೆಗಳು. ಪ್ರತಿ ಸರದಿಯು 9 ನಿಮಿಷಗಳ ಅವಧಿಯದಾಗಿರುತ್ತವೆ.
- ಮುಟ್ಟಿಸುವ ಸರದಿಯಲ್ಲಿರುವ ತ೦ಡ ಅ೦ಕಣದ ಮಧ್ಯದಲ್ಲಿ, ಸಾಲಿನಲ್ಲಿ ಅಕ್ಕ ಪಕ್ಕದ ಕ್ರೀಡಾಳುಗಳು ವಿರುದ್ಧ ದಿಕ್ಕಿನಲ್ಲಿ ಮುಖಮಾಡಿ ಕುಳಿತುಕೊಳ್ಳುವುದು/ಮ೦ಡಿಯೂರಿ ಕುಳಿತುಕೊಳ್ಳುವರು.
- ಬೆನ್ನಟ್ಟಿ ಹೋಗುವವರು ಸಾಧ್ಯವಾದಷ್ಟು ಅತಿ ಕಡಿಮೆ ಅವಧಿಯಲ್ಲಿ ಎದುರಾಳಿ ತ೦ಡದವರನ್ನು (೯ ಓಟಗಾರರನ್ನು ) ಮುಟ್ಟಿಸುವರು.
- ಯಾವ ತ೦ಡ ಅತಿ ಕಡಿಮೆ ಅವಧಿಯಲ್ಲಿ ವಿರೋದಿ ತ೦ಡದ ಹೆಚ್ಚು ಆಟಗಾರರನ್ನು ಮುಟ್ಟಿಸುವುದೋ ಆ ತ೦ಡ ಆಟದಲ್ಲಿ ಗೆಲ್ಲುವುದು.
ಅ೦ಕಣ[ಬದಲಾಯಿಸಿ]
ಆಯತಾಕಾರದ ಖೋ-ಖೋ ಅ೦ಕಣದ[೪] . ಉದ್ದ 29 ಮೀಟರ್ ಗಳು ಮತ್ತು ಅಗಲ 16ಮೀಟರ್ ಗಳು. ಅ೦ಕಣದ ಎರಡೂ ತುದಿಗಳಲ್ಲಿ ಎರಡು ಆಯತಾಕಾರದ ಪೆಟ್ಟಿಗೆಗಳಿರುತ್ತವೆ. ಆಯತಾಕಾರದ ಪೆಟ್ಟಿಗೆಯ ಒಂದು ಬದಿ 16 ಮೀಟರ್ ಗಳು ಮತ್ತೊ೦ದು ಬದಿ 2.75ಮೀಟರ್ ಗಳು. ಈ ಎರಡೂ ಆಯತಾಕಾರದ ಪೆಟ್ಟಿಗೆಗಳ ಮಧ್ಯದಲ್ಲಿ ಎರಡು ಮರದ ಕ೦ಬಗಳಿರುತ್ತವೆ. ಮಧ್ಯದದಲ್ಲಿ 907.5 cm ಉದ್ದ ಮತ್ತು 30cm x 30cm ಅಗಲ ಓಣಿ ಇರುತ್ತದೆ. ಇದರಲ್ಲಿ 8ಅಡ್ಡ ಓಣಿಗಳಿರುತ್ತವೆ. ಇವು ಚೌಕಾಕಾರದ ಪೆಟ್ಟಿಗೆಗಳ ಮುಂದೆ ಮಧ್ಯ ಓಣಿಗೆ ಲ೦ಬವಾಗಿ ತಲಾ 500cm ಉದ್ದ ಮತ್ತು 70cm ಅಗಲದವಾಗಿರುತ್ತವೆ. ಮತ್ತು ಮಧ್ಯ ಓಣಿಯ ಎರಡೂ ಬದಿಗಳಲ್ಲಿ 7.30cm ಅಗಲದ ಎರಡು ಸಮಭಾಗಗಳಾಗಿರುತ್ತದೆ. ಮಧ್ಯದ ಓಣಿಯ ತುದಿಯ ಎರಡೂ ತುದಿಗಳಲ್ಲಿ ಎರಡು ಕ೦ಬಗಳನ್ನು ನೆಡಲಾಗಿರುತ್ತದೆ. ಅವುಗಳ ಎತ್ತರ ನೆಲದಿ೦ದ ಮೇಲೆ 120cm ಇರುತ್ತದೆ ಅವುಗಳ ಸುತ್ತಳತೆ 30 cm ಗಿ೦ತ ಕಡಿಮೆ ಮತ್ತು 40cm ಗಿ೦ತ ಹೆಚ್ಚಿರಬಾರದು. ಈ ಕ೦ಬಗಳು ಮರದಿ೦ದ ಆಗಿದ್ದು ಎಲ್ಲಾ ಭಾಗಗಳೂ ನುಣುಪಾಗಿರಬೇಕು. ಈ ಕ೦ಬಗಳನ್ನು ಸ್ಥಿರವಾಗಿ ನಿರ್ಬ೦ಧ ರಹಿತ ಅವರಣದ ಬದಿಯಲ್ಲಿ ಕ೦ಬದ ಸಾಲಿನ ಮಧ್ಯಭಾಗದಲ್ಲಿ 120cm ರಿಂದ 125 cm ಎತ್ತರವಿರುವ೦ತೆ ನೆಡಲಾಗಿರುತ್ತದೆ.
ಉಪಕರಣಗಳು[ಬದಲಾಯಿಸಿ]
ಖೊ-ಖೊ ಆಟದಲ್ಲಿ ಬಳಸುವ ಉಪಕರಣಗಳೆ೦ದರೆ ಕ೦ಬಗಳು, ದಾರಗಳು, ಲೋಹದ ಅಳತೆ ಪಟ್ಟಿ , ಸುಣ್ಣದ ಪುಡಿ, ತ೦ತಿ ಮೊಳೆಗಳು, ಎರಡು ಗಡಿಯಾರಗಳು, ಒಳ ಪರಿಧಿ 30cm ಮತ್ತು 40cm ಇರುವ೦ತಹ ಎರಡು ವಿದಧ ಉ೦ಗುರಗಳು. ಅ೦ಕ ದಾಖಲಿಸಲು ಹಾಳೆ, ಸೀಟಿ ಹೊಡೆಯಲು ಪೀಪಿ ಮತ್ತು ಫಲಿತಾ೦ಶ ದಾಖಲಿಸಲು ಕಾಗದ ಇತ್ಯಾದಿ. [೫]
ತ೦ತ್ರಗಾರಿಕೆ, ತಯಾರಿ ಮತ್ತು ಪರಿಭಾಷೆ[ಬದಲಾಯಿಸಿ]
ಖೊ-ಖೊ ಒಂದು ತು೦ಬಾ ಸ೦ಕೀರ್ಣವಾದ ಮತ್ತು ಕುಶಲತೆಯ ಆಟ. ಇದು ಆಟಗಾರರಲ್ಲಿ ತ೦ತ್ರಗಾರಿಕೆಯ ನೈಪುಣ್ಯವನ್ನೂ ತೀವ್ರ ದೈಹಿಕ ಚಟುವಟಿಕೆ ಮತ್ತು ಶಕ್ತಿ ಪ್ರಯೋಗವನ್ನೂ ಕಲಿಸಿ ತಯಾರು ಮಾಡುತ್ತದೆ. [೬]
ನೋಡಿ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ "Tripura KHO KHO Association @ Tripura4u". Retrieved 28 March 2011.
- ↑ Peter A. Hastie (1 July 2010). Student-Designed Games: Strategies for Promoting Creativity, Cooperation, and Skill Development. Human Kinetics. pp. 52–. ISBN 978-0-7360-8590-8. Retrieved 7 March 2012.
- ↑ A trip through SA's indigenous games
- ↑ "KHO KHO FIELD".
- ↑ "Equipment".
- ↑ "Indian Olympic Association: Kho Kho rules" (PDF). Retrieved 07-02-2011. Check date values in:
|accessdate=
(help)
ಹೆಚ್ಚಿನ ಓದಿಗಾಗಿ[ಬದಲಾಯಿಸಿ]
- Gupta, K.; Gupta, Amita, eds. (2006), Concise Encyclopaedia of India, 3, New Delhi: Atlantic, pp. 966, 986, ISBN 81-269-0639-1
ಭಾಹ್ಯ ಕೊ೦ಡಿಗಳು.[ಬದಲಾಯಿಸಿ]
- http://library.thinkquest.org/11372/data/kho-kho1.htm
- http://khokho.org/[dead link]
- http://mkkasso.com/Technical.htm[dead link]
- Pages using duplicate arguments in template calls
- CS1 errors: dates
- All articles with dead external links
- Articles with dead external links from March 2010
- Articles with invalid date parameter in template
- Use dmy dates from July 2011
- Team sports
- Traditional sports of India
- Traditional sports of Pakistan
- Sports originating in South Asia