ವಿಷಯಕ್ಕೆ ಹೋಗು

ಖಬರ್ ಲಹರಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಬರ್ ಲಹರಿಯಾ Khabar Lahariya
ವಿಧಗ್ರಾಮೀಣ ವಾರದ ಸುದ್ದಿಪತ್ರಿಕೆ
ಸ್ವರೂಪಬ್ರಾಡ್ಶೀಟ್
ಮುಖ್ಯ ಸಂಪಾದಕಮೀರಾ ಜತವ್
ಸ್ಥಾಪನೆ30 May 2002 ಚಿತ್ರಕೂಟ್, ಉತ್ತರ ಪ್ರದೇಶ, ಭಾರತ
ಪ್ರಧಾನ ಕಚೇರಿಕಾರ್ವಿ, ಚಿತ್ರಕೂಟ್, ಉತ್ತರ ಪ್ರದೇಶ
ಅಧಿಕೃತ ಜಾಲತಾಣkhabarlahariya.org

ಖಬರ್ ಲಹರಿಯಾ ಉತ್ತರ ಪ್ರದೇಶದಿಂದ ಪ್ರಸಾರವಾಗುವ ಒಂದು ಪತ್ರಿಕೆ.

ಗ್ರಾಮಂತರ ಪ್ರದೇಶಗಳಿಗಾಗಿ ಹಾಗೂ ಸ್ತ್ರೀಯರಿಗಾಗಿಯೇ ಮೀಸಲಾಗಿರುವ ಉತ್ತರ ಪ್ರದೇಶದ ವಾರಪತ್ರಿಕೆ. ಸುಮಾರು ೨೦,೦೦೦ ಕ್ಕೂ ಹೆಚ್ಚು ಪ್ರಸಾರವಿದೆ. ’ಯುನೆಸ್ಕೋ ಸಾಕ್ಷರತಾ ವಿಭಾಗದ ಪ್ರಶಸ್ತಿವಿಜೇತ,' ' ಖಬರ್ ಲಹರಿಯಾ,’ ಪತ್ರಿಕೆ, ನವ-ದೆಹಲಿಯಲ್ಲೂ ತನ್ನದೇ ಆದ ಓದುಗರ ವಲಯವೊಂದನ್ನು ಸೃಷ್ಟಿಸಿಕೊಂಡಿದೆ.

ಮಹಿಳೆಯರು ’ಖಬರ್ ಲಹರಿಯಾ,’ ದ ನಿರ್ಮಾತೃಗಳು

[ಬದಲಾಯಿಸಿ]

ಉತ್ತರ ಪ್ರದೇಶದ ಗ್ರಾಮೀಣ ಭಾರತದ ಕೆಳವರ್ಗದ ಸ್ತ್ರೀಯರು, "ಖಬರ್ ಲಹರಿಯಾ," ದ ನಿರ್ಮಾತೃಗಳು. ಪತ್ರಿಕೋದ್ಯಮ ತರಬೇತಿ ಪಡೆದ ಮಹಿಳೆಯರ ಗುಂಪಿನ ಕನಸಿನ ಕುಡಿ, ಈ ಪತ್ರಿಕೆಯೆಂಬುದನ್ನು ಮರೆಯುವಂತಿಲ್ಲ. ನವದೆಹಲಿ ಹಾಗೂ ಉತ್ತರ ಪ್ರದೇಶಗಳಲ್ಲಿ ಕಚೇರಿ ಹೊಂದಿರುವ ಲಿಂಗ ಮತ್ತು ಶಿಕ್ಷಣ ಆಧಾರಿತ, ’ ಕೇಂದ್ರ-ನಿರಂತರ್,’ ಆರಂಭಿಸಿದ ’ಖಬರ್ ಲಹರಿಯಾ,’ ಪತ್ರಿಕೆಗೆ ’ಕಿಂಗ್ ಸೆಜೊಂಗ್’ ಸಾಕ್ಷರತಾ ಪ್ರಶಸ್ತಿ,’ ಲಭಿಸಿದೆ. ಪ್ರಶಸ್ತಿಯ ಮೊತ್ತ, ೨೦ ಸಾವಿರ ಡಾಲರ್.

’ಖಬರ್ ಲಹರಿಯಾ,’ ಹೇಗೆ ಪತ್ರಿಕೋದ್ಯಮದ ದಿಶೆಯನ್ನು ನಿಯಂತ್ರಿಸುತ್ತಿದೆ

[ಬದಲಾಯಿಸಿ]

ಪತ್ರಿಕೋದ್ಯಮದ ತರಬೇತಿ ನೀಡುವುದರ ಜೊತೆಗೆ, ಬರವಣಿಗೆಯ ಕೌಶಲ್ಯಕ್ಕೆ ಪುರಸ್ಕಾರ ನೀಡುವ, ವರದಿಗಾರಿಕೆಯ ಸಾಮರ್ಥ್ಯವನ್ನು ಉತ್ತಮಗೊಳಿಸುವಲ್ಲಿ, ತಯಾರುಮಾಡುತ್ತಿದೆ. ’ಖಬರ್ ಲಹರಿಯಾ,’ ದಲ್ಲಿ, 'ಗಣ್ಯರ ಸಂದರ್ಶನ', 'ಮಾಹಿತಿ ಕಲೆಹಾಕುವಿಕೆ', 'ಸಂಪಾದನ-ಕೌಶಲ್ಯ', ವನ್ನು ಹರಿತಗೊಳಿಸುವುದು, ಮುಂತಾದವುಗಳು, ಇದರಲ್ಲಿ ಸೇರಿದೆ.

’ಖಬರ್ ಲಹರಿಯಾ,’ ಪತ್ರಿಕೆಯಲ್ಲಿ ಕಾಣಬರುವ ವರದಿಗಳು

[ಬದಲಾಯಿಸಿ]

'ವಿಶೇಷ ವರದಿಗಳು' , 'ರಾಜಕೀಯ' , 'ಅಪರಾಧಗಳು', 'ಸಾಮಾಜಿಕ ಸಮಸ್ಯೆಗಳು', 'ಮನೋರಂಜನೆಯ ಪರಿಕರಗಳು' , ಇವೆ. ಅತಿ-ಹೆಚ್ಚು ಜನಸಂಖ್ಯೆಯನ್ನು ಹೊಂದಿದ, ಉತ್ತರ ಪ್ರದೇಶದ, ’ಚಿತ್ರಕೂಟ,’ ಮತ್ತು ’ಬಂಡಾ,’ ಜಿಲ್ಲೆಗಳ ಒಟ್ಟು ೪೦೦ ಗ್ರಾಮಗಳಿಗೆ ’ಖಬರ್ ಲಹರಿಯಾ,’ ತಲುಪುತ್ತಿದೆ.

ಬಣ್ಣಿಸುವ ರೀತಿ

[ಬದಲಾಯಿಸಿ]

’NGO ವೆಬ್ ಸೈಟ್,’ ಒದಗಿಸುವ ಮಾಹಿತಿ ಪ್ರಕಾರ, ೨೦೦೨ ರಲ್ಲಿ, ಚಿತ್ರಕೂಟದಲ್ಲಿ ಮೊದಲ ’ಖಬರ್ ಲಹರಿಯಾ,’ ಪತ್ರಿಕೆಯ ಪ್ರಕಟಣೆ ಆರಂಭವಾಯಿತು. ಮುಂದೆ ೨೦೦೬ ರಲ್ಲಿ, ಬಂಡಾ ಜಿಲ್ಲೆಯಲ್ಲಿ ಅದರ ಎರಡನೆಯ ಆವೃತ್ತಿ ಆರಂಭಗೊಂಡಿತು. ’ಬುಂದೇಲ್ ಖಂಡ್ ಓದುಗರಿಗೆ’, ಅಲ್ಲಿನ ಸ್ಥಳೀಯ ಭಾಷೆ, ’ಬುಂದೇಲಿ ಪ್ರಾಂತ ಭಾಷೆ,’ ಯಲ್ಲಿ ಪ್ರಕಟಗೊಳುತ್ತಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]