ಖನಿನೇತ್ರ
ಗೋಚರ
ಖನಿನೇತ್ರ ಎನ್ನುವವನು ಒಬ್ಬ ರಾಜ. ಸೂರ್ಯವಂಶದ ಇಕ್ಷ್ವಾಕು ಸಂತತಿಯ ವಿವಿಂಶನ ಮಗ. ಒಮ್ಮೆ ಪುತ್ರಪ್ರಾಪ್ತಿಗಾಗಿ ಪಿತೃದೇವತೆಗಳಿಗೆ ಮಾಂಸಾಹಾರದಿಂದ ಶ್ರಾದ್ಧ ಮಾಡಲು ಯೋಚಿಸಿ ಮಾಂಸವನ್ನು ತರಲು ಅರಣ್ಯಕ್ಕೆ ಹೋದ. ಅಲ್ಲಿ ಒಂದು ಜಿಂಕೆ ಈತನ ಮುಂದೆ ನಿಂತು `ನನಗೆ ಮಕ್ಕಳಿಲ್ಲ ಈ ದುಃಖವನ್ನು ಸಹಿಸಲಾರೆ, ನನ್ನನ್ನು ಕೊಲ್ಲು' ಎಂದಿತು. ಮತ್ತೊಂದು ಜಿಂಕೆ ಬಂದು `ನನಗೆ ಅಪಾರ ಮಕ್ಕಳಿವೆ, ಎಲ್ಲಿ ಯಾವಾಗ ಅವನ್ನು ಕ್ರೂರ ಜಂತುಗಳು ಹಿಡಿಯುವುವೋ ಎಂದು ಹೆದರುತ್ತಿದ್ದೇನೆ, ನನ್ನನ್ನು ಕೊಲ್ಲು' ಎಂದಿತು. ಹೀಗೆ ಜಿಂಕೆಗಳ ಆ ಮಾತುಗಳನ್ನು ಕೇಳಿ ಅವನ್ನು ಕೊಲ್ಲಲಾರದೆ ಹಿಂತಿರುಗಿ, ತಪಸ್ಸು ಮಾಡಿ ಮಕ್ಕಳನ್ನು ಪಡೆದ. ಪ್ರಜಾನುರಾಗವನ್ನು ಕಳೆದುಕೊಂಡ ಖನಿನೇತ್ರನನ್ನು ಪ್ರಜೆಗಳು ಗಾದಿಯಿಂದಿಳಿಸಿ ಅವನ ಮಗನಾದ ಕರಂದಮನಿಗೆ ಪಟ್ಟಗಟ್ಟಿದರು. ಇವನ ವಿಚಾರ ಮಾರ್ಕಂಡೇಯ ಪುರಾಣದಲ್ಲಿದೆ.[೧]
ಉಲ್ಲೇಖಗಳು
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: