ಕ್ಷುದ್ರ ಅಗ್ನಿಮಂಥ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಕ್ಷುದ್ರ ಅಗ್ನಿಮಂಥ
Arni (Clerodendrum phlomidis) at Sindhrot near Vadodara, Gujrat Pix 048.jpg
Egg fossil classification
Kingdom:
Order:
Family:
Genus:
Species:
C. phlomidis
Binomial nomenclature
Clerodendrum phlomidis

ಕ್ಷುದ್ರ ಅಗ್ನಿಮಂಥವು ಎನ್ನುವುದು ಲಾಮಾಸಿಯ ಕುಟುಂಬದಲ್ಲಿ ಹೂಬಿಡುವ ಸಸ್ಯಗಳ ಜಾತಿಯಾಗಿದೆ. ಕ್ಲೆರೊಡೆಂಡ್ರಮ್ ಫ್ಲೋಮಿಡಿಸ್ ಎನ್ನುವುದು ಇದರ ವೈಜ್ಞಾನಿಕ ಹೆಸರು. ಸಸ್ಯವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಈ ಸಸ್ಯವನ್ನು ಆರ್ನಿಯೆಂದು ಕರೆಯಲಾಗುತ್ತದೆ. ಇದು ಭಾರತ ಮತ್ತು ಶ್ರೀಲಂಕಾದಲ್ಲಿ ಬೆಳೆಯುವ ಸಾಮಾನ್ಯವಾದ ದೊಡ್ಡ ಪೊದೆಸಸ್ಯವಾಗಿದೆ.

ಸಾಮಾನ್ಯ ಹೆಸರು[ಬದಲಾಯಿಸಿ]

  • ಸಂಸ್ಕೃತ ಹೆಸರು: ಅಗ್ನಿಮಾಂತ, ಜಯ, ಶ್ರೀಪ್ರಣಿ, ಗನಿಕರಕ, ಜಯಂತಿ, ತಾರ್ಕರಿ, ನಾಡೇ.
  • ಹಿಂದಿ ಹೆಸರು: ಉರ್ನಿ, ಅರ್ನಾ, ಅರ್ನಿ[೧]

ವಿವರಣೆ[ಬದಲಾಯಿಸಿ]

ಈ ಮೂಲಿಕೆ ವರ್ಬೇನೇಸಿಯ ಅಥವಾ ಲಮಾಸಿಯೇ ಕುಟುಂಬಕ್ಕೆ ಸೇರಿದೆ. ಎಲೆಗಳು ಅಂಡಾಕಾರವಾಗಿರುತ್ತದೆ. ಹೂಗಳು ಸಣ್ಣದಾಗಿ ದುಂಡಗಿರುತ್ತವೆ. ಹೂವುಗಳು ಆಗಸ್ಟ್ ನಿಂದ ಫೆಬ್ರವರಿಯ ಸಮಯದಲ್ಲಿ ಅರಳುತ್ತವೆ. ಹೂವುಗಳು ಬಿಳಿ ಅಥವಾ ಗುಲಾಬಿ ಬಣ್ಣದ್ದಾಗಿರುತ್ತವೆ ಮತ್ತು ಅವು ಬಹಳ ಪರಿಮಳಯುಕ್ತವಾಗಿವೆ.[೨]

ಉಪಯೋಗ[ಬದಲಾಯಿಸಿ]

  1. ದಶಮೂಲಿಕ ಔಷಧಗಳಲ್ಲಿ ಇದನ್ನು ಬಳಸುತ್ತಾರೆ.
  2. ಎಲೆಗಳನ್ನು ಪುಡಿಮಾಡಿ ಪಡೆದ ತಿರುಳು ಬಾಹ್ಯ ಊತದ ಚಿಕಿತ್ಸೆಗೆ ಬಳಸುತ್ತಾರೆ.[೩][೪]

ಉಲ್ಲೇಖ[ಬದಲಾಯಿಸಿ]

  1. http://www.efloraofgandhinagar.in/
  2. http://www.flowersofindia.net/catalog/slides/Arni.html
  3. http://www.planetayurveda.com/library/agnimantha-clerodendrum-phlomidis
  4. https://web.b.ebscohost.com/abstract?direct=true&profile=ehost&scope=site&authtype=crawler&jrnl=09736808&AN=89252750&h=%2fP7%2fDHadSFuuXyEwCSCj3cZVjf0JqdqTmg%2bmmp98eo9fnfYdOlI9oVx6YvAkI%2b8KEzxPRE4ej0m1ZmpyRuJK9Q%3d%3d&crl=f&resultNs=AdminWebAuth&resultLocal=ErrCrlNotAuth&crlhashurl=login.aspx%3fdirect%3dtrue%26profile%3dehost%26scope%3dsite%26authtype%3dcrawler%26jrnl%3d09736808%26AN%3d89252750