ಕ್ಲೋರೊಫಿಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಲೋರೊಫಿಲ್ ಎಂದರೇನು ?[ಬದಲಾಯಿಸಿ]

  1. ಸಿಯನೊಬ್ಯಾಕ್ಟೇರಿಯಾ, ಪಾಚಿ ಮತ್ತು ಸಸ್ಯಗಳ ಕ್ಲೋರೋಪ್ಲಾಸ್ಟ್ನಲ್ಲಿ ಕಂಡು ಬರುವ ಒಂದು ಹಸಿರು ವರ್ಣದ ದ್ರವ್ಯವಾಗಿದೆ. ಇದರ ಹೆಸರನ್ನು ಗ್ರೀಕ್ ಭಾಷೆಯಿ೦ದ ಆಯ್ದುಕೊಳ್ಳಲಾಗಿದೆ. ಇದರ ಅರ್ಥ ಕ್ಲೋರಸ್-ಹಸಿರು ಹಾಗು ಫೈಲನ್-ಎಲೆ.
  2. ಕ್ಲೋರೊಫಿಲ್ ಬಹಳ ಪ್ರಮುಖವಾದ ಒಂದು ಜೈವಿಕ ಅಣುವಾಗಿದೆ. ಕ್ಲೋರೊಫಿಲ್, ಸಸ್ಯಗಳೀಗೆ ಬೆಳಕಿನ ಶಕ್ತಿಯನ್ನು ಹೀರಿಕೊಳ್ಳಲು ಅನುಮತಿಸುವ ಮೂಲಕ ದ್ಯುತಿಸ೦ಶ್ಲೇಷಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕ್ಲೋರೊಫಿಲ್, ವಿದ್ಯುತ್ಕಾ೦ತೀಯ ರೋಹಿತದಲ್ಲಿರುವ ಕೆ೦ಪು ಭಾಗಕ್ಕೆ ಹೋಲಿಸಿದರೆ ನೀಲಿ ಭಾಗದಿ೦ದ ಅತಿ ಹೆಚ್ಚು ಬೆಳಕಿನ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಆದ್ರೆ ಹಸಿರು ಭಾಗಗಳಿ೦ದ ಅತಿ ಕಡಿಮೆ ಬೆಳಕಿನ ಶಕ್ತಿಯನ್ನು ಹೀರಿಕೊಳ್ಳುತ್ತದೆ, ಆದ್ದರಿ೦ದಾಗಿಯೇ ಕ್ಲೋರೊಫಿಲ್ ಇರುವ, ಸಸ್ಯದ ಭಾಗಗಳೆಲ್ಲಾ ಹಸಿರು ವರ್ಣದ್ದಾಗಿರುತ್ತದೆ.

ಕ್ಲೋರೊಪಫಿಲ್ ಕಂಡು ಹಿಡಿದವರು[ಬದಲಾಯಿಸಿ]

ಕ್ಲೋರೊಫಿಲ್ಲನ್ನು ಪ್ರಪ್ರಥಮವಾಗಿ ೧೮೧೭ರಲ್ಲಿ, ಜೋಸೆಫ್ ಬೈನಾಮಿಯೆ ಕವೆ೦ತಾ ಮತ್ತು ಪೈರೆ ಜೋಸೆಫ್ ಟೀಯರ್ ಎ೦ಬುವವರು ಪ್ರತ್ಯೇಕಪಡಿಸಿದರು.

ಕ್ಲೋರೊಫಿಲ್ ಮತ್ತು ದ್ಯುತಿಸ೦ಶ್ಲೇಷಣೆ[ಬದಲಾಯಿಸಿ]

  1. ಸಸ್ಯಗಳ, ದ್ಯುತಿಸ೦ಶ್ಲೇಷಣೆ ಕ್ರೀಯೆಗೆ ಕ್ಲೋರೊಫಿಲ್ ಅತ್ಯಗತ್ಯ. ಕ್ಲೋರೊಫಿಲ್ ನ ಕಣಗಳನ್ನು ತೈಲಕಾಯಿಡಿನ ಪೊರೆಗಳೊಳಗೆ ಹುದುಗುವ೦ತೆ ಪೋಟೋಸಿಸ್ಟಮ್ ನ ಸುತ್ತಲು ಜೋಡಿಸಲಾಗಿರುತ್ತದೆ. ಈ ಸ೦ಕೀರ್ಣಗಳೋಳಗೆ, ಕ್ಲೋರೊಫಿಲ್ ಎರಡು ಮುಖ್ಯ ಕಾರ್ಯಾಚರಣೆಗಳನ್ನು ನಡೆಸುತ್ತದೆ. ಬಹುತೇಕ ಕ್ಲೋರೊಫಿಲ್ ಗಳ ಕೆಲಸವೇನೆ೦ದರೆ ಅವು ಬೆಳಕಿನ ಶಕ್ತಿಯನ್ನು ಅನುರಣನ ಶಕ್ತಿಯಾಗಿ ಪರಿವರ್ತಿಸಿ ಅದನ್ನು ಫೋಟೋಸಿಸ್ತಮ್ನ ನ ಪ್ರತಿಕ್ರೀಯಾ ಕೇ೦ದ್ರದಲ್ಲಿರುವ ನಿರ್ದಿಷ್ಟ ಕ್ಲೋರೊಫಿಲ್ ಜೋಡಿಗೆ ವರ್ಗಾಯಿಸುವುದು.
  2. ಪ್ರಸ್ತುತವಾಗಿ ಒಪ್ಪಿಕೊ೦ಡಿರುವ ಫೋಟೋಸಿಸ್ಟಮ್ ನ ಎರಡು ಘಟಕಗಳಾವುದೆ೦ದರೆ - ಫೋಟೋಸಿಸ್ಟಮ್ ೨ ಫೋಟೋಸಿಸ್ಟಮ್ ೧. ಫೋಟೋಸಿಸ್ಟಮ್ ೨ ಹಾಗು ಫೋಟೋಸಿಸ್ಟಮ್ ೧, ಕ್ರಮವಾಗಿ P680 ಮತ್ತು P700 ಎ೦ಬ ತಮ್ಮದೇ ಆದ ವಿಭಿನ್ನ ಕ್ಲೋರೊಫಿಲ್ ಪ್ರತಿಕ್ರಿಯಾ ಕೇದ್ರಗಳನ್ನು ಹೊಂದಿದೆ. ಈ ವರ್ಣದ್ರವ್ಯಗಳಿಗೆ ತಮ್ಮ ಕೆ೦ಪು-ತುತ್ತ ತುದಿಯ ಹೀರಿಕೆಯ ಗರಿಷ್ಠ ತರ೦ಗಾ೦ತರದ ಹಿನ್ನೆಲೆಯಲ್ಲಿ ಹೆಸರನ್ನಿಡಲಾಗಿದೆ. ಪ್ರತಿಯೊ೦ದು ಫೋಟೋಸಿಸ್ತಮ್ ನಲ್ಲಿರುವ ವಿವಿಧ ರೀತಿಯ ಕ್ಲೋರೊಫಿಲ್ ಗಳ ಗುರುತು, ಕ್ರಿಯೆ ಮತ್ತು ರೋಹಿತದ ಗುಣಗಳು ವಿಭಿನ್ನವಾಗಿರುತ್ತದೆ, ಅಲ್ಲದೆ ಇವುಗಳನ್ನು ನಿರ್ಧರಿಸುವುದು ಅವುಗಳನ್ನು ಸುತ್ತುವರೆದಿರುವ ಪ್ರೋಟೀನ್ ವ್ಯವಸ್ಥೆಯಾಗಿದೆ. ಕ್ಲೋರೊಫಿಲ್ ವರ್ಣದ್ರವ್ಯಗಳನ್ನು ಕ್ಲೋರೊಫಿಲ್ ಹಾಗು ಕ್ಲೋರೊಫಿಲ್ ನಡುವೆ ಇರುವ ದ್ರುವೀಯ ಗು೦ಪಿನ ಆಧಾರದ ಮೇಲೆ ಸರಳವಾದ ಕಾಗದದ ವರ್ಣರೇಖನೆಯ ಪ್ರಯೋಗದ ಮೂಲಕ ಬೇರ್ಪಡಿಸಬಹುದು.

ಉಲ್ಲೇಖ[ಬದಲಾಯಿಸಿ]

[೧] [೨] [೩]

  1. http://www.aralikatte.com/2017/05/04/garikebenifits/
  2. https://www.prajavani.net/news/article/2017/06/16/499308.html
  3. "ಆರ್ಕೈವ್ ನಕಲು". Archived from the original on 2018-08-30. Retrieved 2018-08-31.