ಕ್ರೌಚಿಂಗ್ ಸ್ಪೈಡರ್, ಸ್ಯಾನ್ ಫ್ರಾನ್ಸಿಸ್ಕೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:HPIM2533.jpg
'ಈ ಕೀಟ ಶಿಲ್ಪ'ವನ್ನು, ಸ್ಯಾನ್ ಫ್ರಾನ್ಸಿಸ್ಕೊ'ನಗರದ ಕಡಲತೀರದಲ್ಲಿ ಇರಿಸಲಾಗಿತ್ತು'

ಕೀಟ ಶಿಲ್ಪಕ್ರೌಚಿಂಗ್ ಸ್ಪೈಡರ್,(Crouching Spider)[೧] 'ಸ್ಯಾನ್ ಫ್ರಾನ್ಸಿಸ್ಕೊನಗರದ ಆರ್ಟ್ ಕಮೀಶನ್ ನ ಸಾಂಸ್ಕೃತಿಕ ವ್ಯವಹಾರಗಳ ನಿರ್ದೇಶಕ', ಮಿ.ಲೂಯಿಸ್ ಆರ್.ಕ್ಯಾನ್ಸಲ್, ಏಪ್ರಿಲ್ ೧೪, ೨೦೦೯. ರಂದು, ಶ್ರೀಮತಿ. ಲೂಯಿಸ್ ಬೋರ್ಜ್ವಾ, ರವರ ಅನುಪಮ ಶಿಲ್ಪಕೃತಿ,ಯವನ್ನು ಅಲ್ಲಿಂದ ಹೊರಗೆತ್ತಿ ಬೇರೆಕಡೆ ಒಯ್ಯಲು ಸಮಯ ಒದಗಿಬಂದಿದೆ ಎಂದು ಘೋಷಿಸಿದರು. ಈ ಅಪರೂಪದ ಜನಪ್ರಿಯ ಒಂದೂವರೆ ಟನ್ ಕಂಚಿನ ಪ್ರತಿಮೆಯನ್ನು ಲೂಯಿಸ್ ಬೋರ್ಜ್ವಾ ರವರು ರ ೨೦೦೩ ರಲ್ಲಿ ಸಮಯದಲ್ಲಿ ನಿರ್ಮಿಸಿ, ನಗರದ ಜನರ ಮನೋರಂಜನೆಗಾಗಿ ನವೆಂಬರ್, ೨ ೨೦೦೭, ೮ ತಿಂಗಳು ಎರವಲಾಗಿ ಕೊಟ್ಟಿದ್ದರು. ಅದು ಎಲ್ಲರ ಆದರ ಗೌರವಗಳಿಗೆ ಪಾತ್ರವಾಗಿತ್ತು. ಪಿಯರ್ ೧೪ ರ, ಪ್ರವೇಶದ್ವಾರದಲ್ಲಿ ೯೭ ವರ್ಷದ ಹರೆಯದ ವಿಶ್ವದ ಅತಿ ಪ್ರತಿಭಾನ್ವಿತ ಇನ್ನೂ ಬದುಕುಳಿದಿರುವ ಶಿಲ್ಪಿಯೆಂದು ಹೆಸರಾದ ಕಲೆಗಾರ್ತಿಯಾಗಿದ್ದರು. ಜನಪ್ರಿಯ ಜೇಡರಹುಳುವಿನ ಕಲೆಯ ಶಿಲ್ಪದ ಸರಣಿಯಲ್ಲಿ ಸಿದ್ಧಿಯನ್ನು ಪಡೆದಿದ್ದರು.

ಕ್ರೌಚಿಂಗ್ ಸ್ಪೈಡರ್ ಕಣ್ಮರೆಯಾಯಿತು[ಬದಲಾಯಿಸಿ]

ಶುಕ್ರವಾರ, ಏಪ್ರಿಲ್ ೨೪, ಕ್ರೌಚಿಂಗ್ ಸ್ಪೈಡರ್ ನ್ ಪ್ರತಿಭಾಗಗಳನ್ನೂ ಅತ್ಯಂತ ಎಚ್ಚರಿಕೆಯಿಂದ ಕಳಚಿ ೧೦ ಭಾಗಗಳನ್ನಾಗಿ ಮಾಡಿ ಅಮೆರಿದ ಹೂಸ್ಟನ್ ನಗರದ ಖಾಸಗೀ ಮ್ಯೂಸಿಯೆಮ್ ಕಂಡಿವೆ. ೨೦೦೮ ರ ಡಿಸೆಂಬರ್ ತಿಂಗಳಿನಲ್ಲಿ ಈ ಸುಪ್ರಸಿದ್ಧ, ೮ ಕಾಲಿನ ೨೩ ಅಡಿ ಎತ್ತರದ ಮಿಶ್ರಲೋಹದಿಂದ ಕೆತ್ತಿದ ಕೀಟ-ಶಿಲ್ಪವನ್ನು ಪೀಠದಿಂದ ಹೊರತೆಗೆದು ಅಮೆರಿಕದ 'ಹಿರ್ಶ್ ಹಾರ್ನ್ ಮ್ಯೂಸಿಯೆಮ್ ಮತ್ತು ಸ್ಕಲ್ಪ್ಚರ್ ಗಾರ್ಡನ್ ವಲಯ' ಕ್ಕೆಟೆಕ್ಸಾಸ್ ರಾಜ್ಯದ ಹೂಸ್ಟನ್ ನಗರದ ಖಾಸಗಿ ವಸ್ತು-ಸಂಗ್ರಹಾಲಯಕ್ಕೆ ಕೊಂಡೊಯ್ಯಲಾಯಿತು.[೨] ಅದೇ ಮ್ಯೂಸಿಯೆಮ್ ನಲ್ಲಿ ಬೋರ್ಜ್ವಾರ ೧೨೦ ಅಪರೂಪದ ಶಿಲ್ಪ ಕೃತಿಗಳು, ವರ್ಣಚಿತ್ರಗಳು, ಬೇರೆ ಚಿತ್ರಗಳು,ಒಳವಲಯವನ್ನು ಸೇರಿವೆ. ಕೆಲವು ಪ್ರದರ್ಶನಾಲಯದ ಗಾಜಿನ ಪೆಟ್ಟಿಗೆಗಳಲ್ಲಿ ಕಾಣಿಸಿದರೆ ಮತ್ತೆ ಕೆಲವು ಮೇಲ್ಛಾವಣಿಗೆ ನೇತುಹಾಕಿದ ಸ್ಥಿತಿಯಲ್ಲಿ ವಿರಾಜಮಾನವಾಗಿವೆ. ಶ್ರೀಮತಿ.ಬೋರ್ಜ್ವಾರವರು ತಮ್ಮ ಪ್ರಾರಂಭದ ಯುವ-ವಯಸ್ಸಿನ ಸಮಯದಲ್ಲಿ ಬಿಡಿಸಿದ ಚಿತ್ರಗಳು ಮತ್ತು ಕಲಾಪ್ರಕಾರ ಸರಣಿಗಳಲ್ಲಿ ಪ್ರಮುಖವಾದವುಗಳೆಂದರೆ,’ಫರ್ಸೊನಗೆಸ್, ಎಂಬ ಕೃತಿ, ಎಲ್ಲರ ಗಮನ ಸೆಳೆದಿದೆ. ದ್ವಿತೀಯ ವಿಶ್ವ ಯುದ್ಧದ ಬಳಿಕ ರಚಿಸಿದ ಕಲಾಕೃತಿಗಳು :

  • Spiral Woman,
  • Arch of Hesteria,
  • Janus Kings,
  • Torso of Self Portrait,
  • Mammelles.
  • Destruction of the Father.

ಪ್ರವಾಸೋದ್ಯಮವೇ ಜೀವಾಳ[ಬದಲಾಯಿಸಿ]

ಸ್ಯಾನ್ ಫ್ರಾನ್ಸಿಸ್ಕೊನಗರದ ಕಲಾ ಪ್ರದರ್ಶನದ ಇತಿಹಾಸ ಸರ್ವರಿಗೂ ಗೊತ್ತಿರುವ ಸಂಗತಿ. ಊರಿನ ಗಲ್ಲಿ-ಗಲ್ಲಿಗಳಲ್ಲಿ ಕಲೆಯ ಅಮೋಘ ಕಲಾ ವಸ್ತುಪ್ರದರ್ಶನಗಳು ಸದಾಕಾಲವೂ ನಡೆಯುತ್ತಲೇ ಇರುತ್ತವೆ.ವಿಶ್ವದ ಸುಪ್ರಸಿದ್ಧ ಶಿಲ್ಪಜ್ಞರ ಮೇರು ಕೃತಿಗಳ ಪ್ರದರ್ಶನದ ಏರ್ಪಾಡುಮಾಡಲಾಗುತ್ತದೆ. ಇದು ಕೆಲವು ತಿಂಗಳು ಅಥವಾ ವರ್ಷಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಸ್ವಲ್ಪ ಸಮಯದ ಬಳಿಕ ಮತ್ತೊಂದು ವಿಶೇಷ ಶಿಲ್ಪ ಆ ಜಾಗವನ್ನು ಆಕ್ರಮಿಸುತ್ತದೆ. ಈ ಪ್ರಕ್ರಿಯೆ ಸದಾಕಾಲದಲ್ಲೂ ಕಾಣಬರುತ್ತದೆ.ಇವೆಲ್ಲಾ ಅಮೆರಿಕದ ಪ್ರದರ್ಶನಾಲಯಗಳಲ್ಲಿ ಇಟ್ಟು ಪ್ರದರ್ಶಿಸಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೊನಗರದ ಸಮುದ್ರ ತಟದಲ್ಲಿನ ೧೪ ಪಿಯರ್ ದ್ವಾರದಿಂದ, ಎರಡೂವರೆ ಟನ್ ಪ್ರತಿಮೆಯನ್ನು ೨೦೦೯ ರ ಏಪ್ರಿಲ್ ೨೪ ರ, ಶುಕ್ರವಾರದಂದು,ಬೆಳಿಗ್ಯೆ ೯ ಕ್ಕೆ ಪ್ರಾರಂಭಿಸಿ, ೪ ಗಂಟೆಯಹೊತ್ತಿಗೆ ರವಾನಿಸುವ ಕೆಲಸ ವ್ಯವಸ್ಥಿತವಾಗಿ ಜರುಗಿತು ಸನ್.೨೦೦೭ ರಲ್ಲಿ ನಂಬರ್ ನಲ್ಲಿ ಇದೇ ಪ್ರತಿಮೆಯನ್ನು 'ಲೂಯಿಸ್' ರವರು ೮ ತಿಂಗಳು ಪ್ರದರ್ಶಿಸಲು ತೆರವುಮಾಡಿಕೊಟ್ಟಿದ್ದರು.

ಲೂಯಿಸ್ ಬೋರ್ಜ್ವಾರವರ ಪ್ರದರ್ಶನಗಳು[ಬದಲಾಯಿಸಿ]

೧೯೧೧ ರಲ್ಲಿ ಪ್ಯಾರಿಸ್ ನಲ್ಲಿ ಜನಿಸಿದ 'ಲೂಯಿಸ್ ಬೋರ್ಜ್ವಾ',ಅಮೆರಿಕದ ನ್ಯೂಯಾರ್ಕ್, ನಗರಕ್ಕೆ, ಸನ್. ೧೯೩೮ ರಲ್ಲಿ, ಪಾದಾರ್ಪಣೆಮಾಡಿದರು. ಅಮೆರಿಕಾದಲ್ಲೇ ತಮ್ಮ ೭ ದಶಕಗಳ ಸತತ ಕಲಾತಪಸ್ಸಿನ ವ್ಯವಸಾಯವನ್ನು ಆಚರಿಸಿ.ಅತ್ಯಂತ ಪ್ರಸಿದ್ಧರಾದರು. ಇದಕ್ಕೆ ಮೊದಲು ಅವರ ಕಲಾಕೃತಿಗಳು, ಟೇಟ್ ಮಾಡ್ರನ್,(ಲಂಡನ್), ಪ್ಯಾರಿಸ್, ನ್ಯೂಯಾರ್ಕ್, ಲಾಸ್ ಎಂಜಲೀಸ್, ಹಾಗೂ, ಈಗ, ವಾಶಿಂಗ್ಟನ್ ಡಿ.ಸಿ,ಯಲ್ಲಿ ಪ್ರದರ್ಶಿತಗೊಳ್ಳುತ್ತಿವೆ.

ಸ್ಯಾನ್ ಫ್ರಾನ್ಸಿಸ್ಕೊ ನಗರದ ಬಗ್ಗೆ ಆರ್ಟ್ ನಿರ್ದೇಶಕಿಯ ಜೊತೆ ಸಂವಾದ[ಬದಲಾಯಿಸಿ]

ಯು ಟ್ಯೂಬ್ ಸಂದರ್ಶನ

ಉಲ್ಲೇಖಗಳು[ಬದಲಾಯಿಸಿ]

  1. "Sanfransisco sentinel, May 6, 2015, LOUISE BOURGEOIS CROUCHING SPIDER WEAVES a mother's nurture to San Francisco". Archived from the original on ಸೆಪ್ಟೆಂಬರ್ 21, 2015. Retrieved ಮೇ 6, 2015.
  2. SF GATE, April,8, 2009, 'Crouching Spider' saying farewell to S.F.