ಕ್ರಿಷಿ ತಾಪಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಖ್ಯ ಮೆನು ತೆರೆ ವಿಕಿಪೀಡಿಯ ಹುಡುಕು Show my notifications ಬದಲಾವಣೆಗಳು ನಂತರದ ಸಂಪಾದನೆ → Krishi Thapanda ೫,೫೪೨ BYTES ADDED, ೨೭ ನಿಮಿಷಗಳ ಹಿಂದೆ "Krishi Thapanda" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು

ಕ್ರಿಷಿ ತಾಪಂಡ
ಜನನ
ಉದ್ಯೋಗರೂಪದರ್ಶಿ, ನಟಿ
ಸಕ್ರಿಯ ವರ್ಷಗಳು೨೦೧೪ರಿಂದ ಇಲ್ಲಿಯವರೆಗು

ಕ್ರಿಷಿ ತಾಪಂಡ ಅವರು ರೂಪದರ್ಶಿಯಾಗಿದ್ದಾರೆ ಹಾಗು ಭಾರತೀಯ ನಟಿಯಾಗಿ ಕನ್ನಡ ಚಲನಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ. ಅವರು ೨೦೧೬ರಲ್ಲಿ ಅಕಿರ ಎಂಬ ಕನ್ನಡ ಚಲನಚಿತ್ರ ಮೂಲಕ ಚಿತ್ರರಂಗ ಪ್ರವೇಶಿಸಿದರು. ೨೦೧೬ರ 'ಎಸ್ಐಐಎಂಎ'ನ ಉತ್ತಮ ನಟಿ ಪ್ರಶಸ್ತಿಗಾಗಿ ಇವರು ನಾಮನಿರ್ದೇಶನಗೊಂಡಿದ್ದರು.

ಅವರು ೨೦೧೪ರ ಮಿಸ್ ಕರ್ನಾಟಕ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಇವರು ಕನ್ನಡದ ಬಿಗ್ ಬಾಸ್ ೫ನೇಯ ಆವೃತ್ತಿಯಲ್ಲಿ ಬಾಗವಹಿಸಿದ್ದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಕ್ರಿಷಿ ತಾಪಂಡ ಅವರು ೨೩ನೇ ಸೆಪ್ಟೆಂಬರ್ ರಂದು ಕೊಡಗಿನಲ್ಲಿ ಜನಿಸಿದರು. ಅವರು ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಚಿನ್ಮಯ ವಿದ್ಯಾಲ್ಯದಲ್ಲಿ ಹಾಗು ಡಿಪ್ಲೊಮಾ ಪದವಿಯನ್ನು(ಮಾಹಿತಿ ವಿಜ್ಞಾನ ) ಎಚ್ಏಎಲ್ ನಲ್ಲಿ ಪಡೆದರು.

ವೃತ್ತಿಜೀವನ[ಬದಲಾಯಿಸಿ]

ರೂಪದರ್ಶಿ ಹಾಗು ನಟಿಯಗಿ ಕಾರ್ಯ ನಿರ್ವಹಿಸುವಮುನ್ನ ಇವರು ಇಂಟರ್ಕಾಲ್ ಎಂಬಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.

೨೦೧೫-೨೦೧೬[ಬದಲಾಯಿಸಿ]

ಇಂಟರ್ಕಾಲ್ ಎಂಬಲ್ಲಿ ಕೆಲಸ ಮಾಡುವ ಸಮಯದಲ್ಲೆ 'ಕಹಿ' ಅನ್ನುವ ಕನ್ನಡ ಚಲನಚಿತ್ರದಲ್ಲಿ ನಟಿಸಲು ಅವಕಾಶ ದೊರೆಯಿತು. ಈ ಚಿತ್ರವು ನವೆಂಬರ್ ೨೦೧೬ರಲ್ಲಿ ಬಿಡುಗಡೆಗೊಂಡಿತು.

'ಕಹಿ' ಚಿತ್ರದ ಚಿತ್ರೀಕರಣ ಮೊದಲು ಶುರುವಾದದ್ದಾದ್ರು ಸಹ 'ಅಕಿರ' ಚಿತ್ರ ಮೊದಲು ಬಿಡುಗಡೆಯಾಯಿತು. 'ಅಕಿರ' ಚಿತ್ರವು ಮೇ ೨೦೧೬ರಲ್ಲಿ ಬಿಡುಗಡೆ ಗೊಂಡಿತು ಈ ಚಿತ್ರದಲ್ಲಿ ಇವರು ಲಾವಣ್ಯ ಅನ್ನುವ ಚಿತ್ರ ನಿರ್ದೇಶಕಿಯ ಪಾತ್ರವನ್ನು ಅಭಿನಯಿಸಿದರು.

೨೦೧೭-ಇಲ್ಲಿಯವರೆಗೆ[ಬದಲಾಯಿಸಿ]

ಈ ಎರಡು ಚಿತ್ರಗಳ ನಂತರ ಕ್ರಿಶಿ ಅವರು ವಿಜಯ್ ರಾಘವೇಂದ್ರ ಹಾಗು ಕಾರುಣ್ಯ ರಾಮ್ ಅವರೊಡನೆ 'ಎರಡು ಕನಸು' ಅನ್ನುವ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದರು. ಈ ಚಿತ್ರವು ಮಾರ್ಚ್ ೨೦೧೭ರಲ್ಲಿ ಬಿಡುಗಡೆಗೊಂಡಿತು.

ಜುಲೈ ೨೦೧೮ರಲ್ಲಿ ಬಿಡುಗಡೆಗೊಂಡ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಚಿತ್ರದಲ್ಲಿ 'ಪ್ರಮೇಯ' ಅನ್ನುವ ಪಾತ್ರವನ್ನು ಅಭಿನಯಿಸಿದರು.

ಚಲನಚಿತ್ರಗಳು[ಬದಲಾಯಿಸಿ]

ವರ್ಶ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿ
೨೦೧೫ ನಾಯೇ ತಮಿಳು ತಮಿಳು ಚಲನಚಿತ್ರ
೨೦೧೬ ಅಕಿರ ಲಾವಣ್ಯ ಕನ್ನಡ ನಾಮನಿರ್ದೇಶನ–

ಎಸ್ಐಐಎಂಏ ಅತ್ಯುತ್ತಮ ನಟಿ

೨೦೧೬ ಕಹಿ [೧]
೨೦೧೭ ಎರಡು ಕನಸು [೧]
೨೦೧೮ ಐರಾ
೨೦೧೮ ಕನ್ನಡಕ್ಕಾಗಿ ಒಂದನ್ನು ಒತ್ತಿ ಪ್ರಮೇಯ

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Kannada Movie Actress Krishi Thapanda | Nettv4u". nettv4u. Retrieved 2018-02-11.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Bha20991 ೮೫ EDITS

ವಿಕಿಪೀಡಿಯ ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 3.0" ರಡಿ ಲಭ್ಯವಿದೆ. ಗೋಪ್ಯತೆಡೆಸ್ಕ್‌ಟಾಪ್