ಕ್ರಿಕೆಟ್ ಬ್ಯಾಟ್
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
ಕ್ರಿಕೆಟ್ ಬ್ಯಾಟ್ ಎಂಬುದು ಒಂದು ವಿಶೇಷೀಕರಿಸಲ್ಪಟ್ಟ ಸಾಧನಾ ಅಂಗವಾಗಿದ್ದು, ಕ್ರಿಕೆಟ್ ಕ್ರೀಡೆಯಲ್ಲಿ ಚೆಂಡನ್ನು ಹೊಡೆಯಲು ಬ್ಯಾಟುಗಾರರು ಇದನ್ನು ಬಳಸುತ್ತಾರೆ. ಇದನ್ನು ಸಾಮಾನ್ಯವಾಗಿ ವಿಲೋ ಮರದಿಂದ ಮಾಡಲಾಗುತ್ತದೆ. ಇದರ ಬಳಕೆಯು ೧೬೨೪ರಲ್ಲಿ ಮೊದಲಿಗೆ ಉಲ್ಲೇಖಿಸಲ್ಪಟ್ಟಿತು.
ಕ್ರಿಕೆಟ್ ಬ್ಯಾಟ್ ಒಂದರ ಹಲಗೆ ಯು ಒಂದು ಮರದ ಫಲಕವಾಗಿದ್ದು, ಹೊಡೆಯುವ ಮುಖದ ಭಾಗದಲ್ಲಿ ಇದು ಸಾಮಾನ್ಯವಾಗಿ ಮಟ್ಟಸವಾಗಿರುತ್ತದೆ ಮತ್ತು ಹಿಮ್ಮೊಗದ (ಹಿಂಭಾಗ) ಭಾಗದಲ್ಲಿ ಒಂದು ಏಣನ್ನು ಹೊಂದಿರುತ್ತದೆ; ಚೆಂಡು ಸಾಮಾನ್ಯವಾಗಿ ಹೊಡೆಯಲ್ಪಡುವ ಬ್ಯಾಟಿನ ಮಧ್ಯಭಾಗದಲ್ಲಿ ಮರವು ಕೇಂದ್ರೀಕರಿಸಲ್ಪಟ್ಟಿರುವುದೇ ಈ ಏಣಿನ ಭಾಗವಾಗಿರುತ್ತದೆ. ಒಂದು ಟೆನಿಸ್ ಬ್ಯಾಟನ್ನು ಹೋಲುವ ರೀತಿಯಲ್ಲಿಯೇ, ಒಂದು ಉದ್ದವಾದ ಕೊಳವೆಯಾಕಾರದ ಬೆತ್ತದ ಹಿಡಿಕೆ ಗೆ ಹಲಗೆಯು ಒಂದು ಹೊಸೆದು ಅಂಟಿಸಿದ ಕೂಡಿಕೆ ಯ ಮೂಲಕ ಸಂಪರ್ಕಿಸಲ್ಪಟ್ಟಿರುತ್ತದೆ. ಹಿಡಿಕೆಗೆ ಅತಿ ಹತ್ತಿರದಲ್ಲಿರುವ ಹಲಗೆಯ ಅಂಚುಗಳು ಬ್ಯಾಟ್‌ನ ಭುಜಗಳು ಎಂದು ಕರೆಯಲ್ಪಡುತ್ತವೆ, ಮತ್ತು ಹಲಗೆಯ ತಳಭಾಗವು ಬ್ಯಾಟ್‌ನ ಚಾಚು (ಅಥವಾ ಕೆಳತುದಿ) ಎಂದು ಕರೆಯಲ್ಪಡುತ್ತದೆ.
ವಿಲೋ ಮರದಿಂದ ಬ್ಯಾಟನ್ನು ಸಾಂಪ್ರದಾಯಿಕವಾಗಿ ನಿರ್ಮಿಸಲಾಗುತ್ತದೆ. ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ, ಕಚ್ಚಾ (ಕುದಿಸದ) ನಾರಗಸೆಯೆಣ್ಣೆಯಿಂದ ಉಪಚರಿಸಲ್ಪಟ್ಟ, ಕ್ರಿಕೆಟ್ ಬ್ಯಾಟ್ ವಿಲೋ (ಸ್ಯಾಲಿಕ್ಸ್ ಆಲ್ಬಾ ಪ್ರಭೇದ ಕೆರೂಲಿಯಾ ) ಎಂದೇ ಕರೆಯಲ್ಪಡುವ ಬಿಳಿಯ ವಿಲೋದ ಒಂದು ಬಗೆಯಿಂದ ಇದನ್ನು ನಿರ್ಮಿಸಲಾಗುತ್ತದೆ. ಈ ಎಣ್ಣೆಯು ಒಂದು ರಕ್ಷಣಾತ್ಮಕ ಪರಿಣಾಮವನ್ನು ಹೊಂದಿರುತ್ತದೆ. ಈ ಮರವು ಅತ್ಯಂತ ಗಡುಸಾಗಿರುತ್ತದೆ ಮತ್ತು ಆಘಾತ-ಪ್ರತಿರೋಧಕವಾಗಿರುತ್ತದೆ; ಕ್ರಿಕೆಟ್ ಚೆಂಡೊಂದು ಉನ್ನತ ವೇಗದಲ್ಲಿ ಬ್ಯಾಟಿಗೆ ಬಡಿದಾಗ ಅದು ಗಮನಾರ್ಹವಾಗಿ ನೆಗ್ಗಿಸಲ್ಪಡುವುದಿಲ್ಲ ಅಥವಾ ಸೀಳುಸೀಳಾಗುವಿಕೆಯನ್ನು ತೋರಿಸುವುದಿಲ್ಲ. ಇಷ್ಟಾಗಿಯೂ ಈ ಮರವು ತೂಕದಲ್ಲಿ ಹಗುರವಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದ ಈ ಮರವನ್ನೇ ಬ್ಯಾಟ್ ತಯಾರಿಕೆಗೆ ಬಳಸಲಾಗುತ್ತದೆ. ಹಿಡಿಕೆಯು ಹಲಗೆಯನ್ನು ಸಂಧಿಸುವ ಜಾಗದಲ್ಲಿ ಇದು ಮರದ ಸುರುಳಿಯ ವಿನ್ಯಾಸವೊಂದನ್ನು ಸಂಯೋಜಿಸುತ್ತದೆ. ಬೆತ್ತ ಹಿಡಿಕೆಯೊಂದು ಒಂದು ವಿಲೋ ಹಲಗೆಯೊಳಗೆ ಹೊಸೆದು ಅಂಟಿಸಿದ ಕೂಡಿಕೆಯಾಗಿ ಸಂಯೋಜಿಸಲ್ಪಟ್ಟಿರುವ ಪ್ರಸಕ್ತ ವಿನ್ಯಾಸವು ೧೮೮೦ರ ದಶಕದಲ್ಲಿ ಬೆಳಕಿಗೆ ಬಂದ ಚಾರ್ಲ್ಸ್ ರಿಚರ್ಡ್‌ಸನ್ ಎಂಬಾತನ ಆವಿಷ್ಕಾರವಾಗಿತ್ತು; ಈತ ಬ್ರೂನೆಲ್‌ನ ಓರ್ವ ವಿದ್ಯಾರ್ಥಿ ಹಾಗೂ ಸೆವರ್ನ್ ರೈಲ್ವೆ ಸುರಂಗದ ಮುಖ್ಯ ಎಂಜಿನಿಯರ್ ಆಗಿದ್ದ.[೧]
ಆಟದ ನಿಯಮಗಳು ಎಂದೇ ಚಿರಪರಿಚಿತವಾಗಿರುವ ಕ್ರಿಕೆಟ್‌ನ ಕಟ್ಟಳೆಗಳ[೨] ಪೈಕಿಯ ೬ನೇ ಕಟ್ಟಳೆಯು ಬ್ಯಾಟಿನ ಗಾತ್ರವನ್ನು ಸೀಮಿತಗೊಳಿಸಿದ್ದು, ಅದರ ಪ್ರಕಾರ ಬ್ಯಾಟು ೩೮ ಇಂಚು (೯೬೫ ಮಿ.ಮೀ.) ಉದ್ದವನ್ನು ಮೀರುವಂತಿಲ್ಲ ಹಾಗೂ ಹಲಗೆಯು ೪.೨೫ ಇಂಚು (೧೦೮ ಮಿ.ಮೀ.) ಅಗಲವನ್ನು ಮೀರುವಂತಿಲ್ಲ. ಬ್ಯಾಟುಗಳು ವಿಶಿಷ್ಟವಾಗಿ ೨ ಪೌಂಡ್ ೮ ಔನ್ಸುಗಳಿಂದ ೩ ಪೌಂಡ್‌ಗಳವರೆಗೆ (೧.೧ರಿಂದ ೧.೪ ಕೆ.ಜಿ.) ತೂಗುತ್ತವೆಯಾದರೂ, ಇಲ್ಲಿ ಯಾವುದೇ ಪ್ರಮಾಣಕವಿಲ್ಲ. ಹಿಡಿತವನ್ನು ವರ್ಧಿಸುವುದಕ್ಕಾಗಿ ಒಂದು ರಬ್ಬರ್ ಅಥವಾ ಬಟ್ಟೆಯ ಸುತ್ತುಕೊಳವೆಯನ್ನು ಹಿಡಿಕೆಯ ಸುತ್ತ ಸಾಮಾನ್ಯವಾಗಿ ಸುತ್ತಲಾಗಿರುತ್ತದೆ ಹಾಗೂ ಬ್ಯಾಟಿನ ಮುಖವು ರಕ್ಷಣಾತ್ಮಕ ಒಂದು ತೆಳುವಾದ ಹೊದಿಕೆಯನ್ನು ಹೊಂದಿರಬಹುದಾಗಿರುತ್ತದೆ. ಕ್ರಿಕೆಟ್‌ನ ನಿಯಮಗಳಿಗೆ ಸಂಬಂಧಿಸಿದ ಅನುಬಂಧ E, ಹೆಚ್ಚು ನಿಖರವಾದ ವಿಶಿಷ್ಟ ವಿವರಣೆಗಳನ್ನು ವ್ಯವಸ್ಥಿತವಾಗಿ ನಿರೂಪಿಸುತ್ತದೆ.[೩] ಆಧುನಿಕ ಬ್ಯಾಟುಗಳು ಸಾಮಾನ್ಯವಾಗಿ ಯಂತ್ರ ನಿರ್ಮಿತವಾಗಿರುತ್ತವೆ; ಆದಾಗ್ಯೂ ಕೆಲವೊಂದು ಪರಿಣಿತರು (ಇಂಗ್ಲೆಂಡ್‌ನಲ್ಲಿ ೬ ಮಂದಿ ಮತ್ತು ಆಸ್ಟ್ರೇಲಿಯಾದಲ್ಲಿ ೨ ಮಂದಿ) ಈಗಲೂ ಕೈನಿಂದ-ಮಾಡಲಾಗುವ ಬ್ಯಾಟುಗಳನ್ನು ತಯಾರಿಸುತ್ತಾರೆ ಹಾಗೂ ಇದು ಬಹುತೇಕವಾಗಿ ವೃತ್ತಿಪರ ಆಟಗಾರರಿಗೆ ಮೀಸಲಾಗಿರುತ್ತದೆ. ಕ್ರಿಕೆಟ್ ಬ್ಯಾಟುಗಳನ್ನು ಕೈಯಲ್ಲಿ-ನಿರ್ಮಿಸುವ ಕಲೆಯನ್ನು ಪಾಡ್‌ಷೇವಿಂಗ್ ಎಂದು ಕರೆಯಲಾಗುತ್ತದೆ.
ಬ್ಯಾಟುಗಳು ಎಲ್ಲ ಕಾಲದಲ್ಲೂ ಆಕಾರದಲ್ಲಿರಲಿಲ್ಲ. ೧೮ನೇ ಶತಮಾನಕ್ಕೂ ಮುಂಚೆ, ಆಧುನಿಕ ಹಾಕಿ ಕೋಲುಗಳನ್ನು ಹೋಲುವ ರೀತಿಯಲ್ಲಿ ಬ್ಯಾಟುಗಳ ಆಕಾರವಿರುತ್ತಿತ್ತು. ಇದಕ್ಕೆ ಸದರಿ ಆಟದ ಪ್ರಸಿದ್ಧ ಮೂಲಗಳ ಒಂದು ಪರಂಪರೆಯೂ ಕಾರಣವಾಗಿರಬಹುದು. ಕ್ರಿಕೆಟ್ ಆಟದ ಮೊದಲ ಸ್ವರೂಪಗಳು ಈಗ ಕಾಲದ ಮೋಡಗಳಲ್ಲಿ ಮರೆಯಾಗಿ ಕಳೆದುಹೋಗಿವೆಯಾದರೂ, ಕುರಿ ಕಾಯುವವರ ಕೊಕ್ಕೆಕೋಲುಗಳನ್ನು ಬಳಸಿಕೊಂಡು ಆಟವನ್ನು ಮೊದಲು ಆಡಲಾಯಿತು ಎಂಬುದನ್ನು ಇಲ್ಲಿ ನೆನೆಸಿಕೊಳ್ಳುವುದು ಅಗತ್ಯ.
೧೯ನೇ ಶತಮಾನದಲ್ಲಿ ಕ್ರಿಕೆಟ್ ಆಟದ ನಿಯಮಗಳು ಸೂತ್ರೀಕರಿಸಲ್ಪಡುವವರೆಗೂ, ಆಟದಲ್ಲಿ ಸಾಮಾನ್ಯವಾಗಿ ಕೆಳಮಟ್ಟದ ಸ್ಟಂಪುಗಳನ್ನು ಬಳಸಲಾಗುತ್ತಿತ್ತು, ಚೆಂಡನ್ನು ಭುಜದ ಕೆಳಮಟ್ಟದಲ್ಲಿ ಬೌಲ್‌ಮಾಡಲಾಗುತ್ತಿತ್ತು (ಈಗ ಇದು ನಿಯಮಬಾಹಿರವಾಗಿದೆ), ಮತ್ತು ರಕ್ಷಣಾತ್ಮಕ ಪ್ಯಾಡುಗಳನ್ನು ಬ್ಯಾಟುಗಾರರು ಧರಿಸುತ್ತಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು] ಆಟವು ಬದಲಾಗುತ್ತಾ ಹೋದಂತೆ, ವಿಭಿನ್ನವಾದ ಆಕಾರವನ್ನು ಹೊಂದಿರುವ ಒಂದು ಬ್ಯಾಟು ಇದ್ದರೆ ಉತ್ತಮ ಎಂಬುದು ಕಂಡುಬಂತು.[ಸೂಕ್ತ ಉಲ್ಲೇಖನ ಬೇಕು] ಈಗಲೂ ಅಸ್ತಿತ್ವದಲ್ಲಿರುವ, ಅತಿಹಳೆಯ ಬ್ಯಾಟ್ ಎಂಬುದಾಗಿ ಸಾಮಾನ್ಯವಾಗಿ ಗುರುತಿಸಲ್ಪಟ್ಟಿರುವ ಬ್ಯಾಟು ೧೭೨೯ರಷ್ಟು ಹಿಂದೆಯೇ ರೂಪಿಸಲ್ಪಟ್ಟಿತು ಮತ್ತು ಲಂಡನ್‌ನಲ್ಲಿರುವ ಓವಲ್ ಕ್ರಿಕೆಟ್ ಮೈದಾನದಲ್ಲಿರುವ 'ಸ್ಯಾಂಡ್‌ಹ್ಯಾಂ ರೂಮ್'ನಲ್ಲಿ ಇದನ್ನು ಪ್ರದರ್ಶನಕ್ಕಿಡಲಾಗಿದೆ.[ಸೂಕ್ತ ಉಲ್ಲೇಖನ ಬೇಕು]
ನಿರ್ವಹಣೆ
[ಬದಲಾಯಿಸಿ]ಮೊದಲಿಗೆ ಖರೀದಿಸಿದಾಗ ಬಹುಪಾಲು ಬ್ಯಾಟುಗಳು ತತ್‌ಕ್ಷಣದ ಬಳಕೆಗಾಗಿ ಸಿದ್ಧವಾಗಿರುವುದಿಲ್ಲ; ಬ್ಯಾಟುಗಳ ಬಾಳಿಕೆಯನ್ನು ಗರಿಷ್ಠೀಕರಿಸುವ ದೃಷ್ಟಿಯಿಂದ, ಅವಕ್ಕೆ ತೈಲಲೇಪನದ ಮತ್ತು ಬಡಿದು ಒಳಕ್ಕೆ ತಳ್ಳುವಿಕೆಯ ಉಪಚಾರಗಳಿಗೆ ಒಳಪಡಿಸುವುದು ಅಗತ್ಯವಿರುತ್ತದೆ. ಈ ಪ್ರಕ್ರಿಯೆಯಲ್ಲಿ, ಬ್ಯಾಟುಗಳಿಗೆ ಕಚ್ಚಾ ನಾರಗಸೆಯೆಣ್ಣೆಯ ತೆಳುವಾದ ಪದರಗಳನ್ನು ಲೇಪಿಸುವುದು ಮತ್ತು ನಂತರದಲ್ಲಿ ಒಂದು ಹಳೆಯ ಕ್ರಿಕೆಟ್ ಚೆಂಡನ್ನು ಅಥವಾ ಕೊಡತಿಯಂಥ ಒಂದು ವಿಶೇಷ ಸುತ್ತಿಗೆಯನ್ನು ಬಳಸಿಕೊಂಡು ಅವುಗಳ ಮೇಲ್ಮೈಯನ್ನು ಬಡಿಯುವುದು ಸೇರಿರುತ್ತದೆ. ಈ ಕಾರ್ಯವಿಧಾನವು ಬ್ಯಾಟುಗಳ ಒಳಗಿರುವ ನವಿರಾದ ತಂತುಗಳನ್ನು ದಟ್ಟಗೊಳಿಸುತ್ತದೆ ಹಾಗೂ ಬ್ಯಾಟುಗಳು ಲಟ್ಟನೆ ಮುರಿಯುವ ಅಪಾಯವನ್ನು ತಗ್ಗಿಸುತ್ತದೆ.[೪]
ಕ್ರಿಕೆಟ್ ಬ್ಯಾಟ್‌ನಲ್ಲಿನ ಬದಲಾವಣೆಗಳು/ತಂತ್ರಜ್ಞಾನ
[ಬದಲಾಯಿಸಿ]ಆಸ್ಟ್ರೇಲಿಯಾದ ಕ್ರಿಕೆಟಿಗ ಡೆನಿಸ್ ಲಿಲ್ಲೀ ಅಲ್ಯೂಮಿನಿಯಂ ಲೋಹದ ಬ್ಯಾಟ್ ಒಂದನ್ನು ೧೯೭೯ರಲ್ಲಿ ಸಂಕ್ಷಿಪ್ತ ಅವಧಿಗೆ ಬಳಸಿದ್ದ. ಅಂಪೈರುಗಳೊಂದಿಗೆ ಒಂದಷ್ಟು ಚರ್ಚೆಯನ್ನು ನಡೆಸಿದ ನಂತರ, ಮತ್ತು ಈ ಬಳಕೆಯಿಂದಾಗಿ ಚೆಂಡಿಗೆ ಹಾನಿಯಾಗುತ್ತಿದೆ ಎಂಬುದಾಗಿ ಇಂಗ್ಲಿಷ್ ತಂಡದಿಂದ ದೂರುಗಳು ಬಂದ ನಂತರ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಿದ್ದ ಗ್ರೆಗ್ ಚಾಪೆಲ್ ಮರದ ಬ್ಯಾಟ್‌ಗೇ ಹಿಂದಿರುಗುವಂತೆ ಅವನನ್ನು ಒತ್ತಾಯಿಸಿದ.[೫] ಅದಾದ ನಂತರದ ಕೆಲವೇ ದಿನಗಳಲ್ಲಿ, ಕ್ರಿಕೆಟ್ ಆಟದ ನಿಯಮಗಳು ತಿದ್ದುಪಡಿ ಮಾಡಲ್ಪಟ್ಟವು ಹಾಗೂ ಬ್ಯಾಟ್ ಒಂದರ ಹಲಗೆಯನ್ನು ಸಂಪೂರ್ಣವಾಗಿ ಮರದಿಂದಲೇ ಮಾಡಿರಬೇಕು ಎಂದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ನಮೂದಿಸಲಾಯಿತು.[೨]
ಹಗುರತೂಕದ ಇಂಗಾಲ ಹಿಡಿಕೆಗಳನ್ನು ಹೊಂದಿರುವ ಬ್ಯಾಟುಗಳನ್ನು ಟೆಂಜಿನ್ ಮತ್ತು ಪ್ಯೂಮಾ ಕಂಪನಿಗಳು ಸೃಷ್ಟಿಸಿದ್ದು, ಇದರಿಂದಾಗಿ ಹಲಗೆಗೆ ಹೆಚ್ಚು ತೂಕವನ್ನು ಬಳಸಬಹುದಾಗಿದೆ. ೨೦೦೮ರಲ್ಲಿ, ಜೋಡಿ-ಪಾರ್ಶ್ವದ ಒಂದು ಬ್ಯಾಟನ್ನು ಗ್ರೇ-ನಿಕೋಲ್ಸ್ ಪರೀಕ್ಷಾ ಪ್ರಯೋಗಕ್ಕೆ ಒಳಪಡಿಸಿದ.[೬]
ಒಂದು ಇಂಗಾಲ ತಂತು-ಬಲವರ್ಧಿತ ಪಾಲಿಮರ್, ಬ್ಯಾಟಿನ ಮುಖ್ಯಾಧಾರದ ಉದ್ದಕ್ಕೂ ಆಸರೆಯಾಗಿ ನಿಲ್ಲುವಂಥ ಹೊಸ ಬಗೆಯ ಬ್ಯಾಟ್ ಒಂದನ್ನು ೨೦೦೫ರಲ್ಲಿ ಕುಕಬರ ಕಂಪನಿಯು ಬಿಡುಗಡೆ ಮಾಡಿತು. ಬ್ಯಾಟಿನ ಮುಖ್ಯಾಧಾರ ಹಾಗೂ ಹಲಗೆಗೆ ಹೆಚ್ಚಿನ ಬೆಂಬಲವನ್ನು ಒದಗಿಸುವುದಕ್ಕಾಗಿ, ತನ್ಮೂಲಕ ಬ್ಯಾಟಿನ ಬಾಳಿಕೆಯನ್ನು ದೀರ್ಘವಾಗಿಸುವುದಕ್ಕಾಗಿ ಇದನ್ನು ಬ್ಯಾಟಿಗೆ ಸೇರಿಸಲಾಗಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಹೊಸ ಬ್ಯಾಟನ್ನು ಬಳಸಿದ ಆಟಗಾರರಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮೊದಲಿಗನೆನಿಸಿದ್ದಾನೆ. ಆದಾಗ್ಯೂ, ಕ್ರಿಕೆಟ್ ಆಡುವಿಕೆಯ ತಂತ್ರಜ್ಞಾನದಲ್ಲಿನ ಈ ವಿನೂತನ ಪರಿಪಾಠವು ವಿವಾದಾತ್ಮಕವೆಂಬ ರೀತಿಯಲ್ಲಿ ICCಯಿಂದ [೭] ನಿಷೇಧಿಸಲ್ಪಟ್ಟಿತು; ಚೆಂಡಿನ ಹೊಡೆತದಲ್ಲಿ ಇದು ನಿಯಮಾನುಸಾರವಾಗಿರದೆ ಹೆಚ್ಚು ಶಕ್ತಿಯನ್ನು ನೀಡುತ್ತದೆ ಹಾಗೂ ಈ ಹೊಸ ತಂತ್ರಜ್ಞಾನಕ್ಕೆ ಎಲ್ಲಾ ಆಟಗಾರರೂ ಪ್ರವೇಶ ಲಭ್ಯತೆಯನ್ನು ಹೊಂದಿಲ್ಲದ ಕಾರಣದಿಂದ ಸ್ಪರ್ಧೆಯಲ್ಲಿ ಇದು ನಿಯಮಗಳಿಗೆ ಅನುಸಾರವಾಗಿಲ್ಲದ ರೀತಿಯಲ್ಲಿದೆ ಎಂಬುದಾಗಿ MCCಯು ಸಲಹೆ ನೀಡಿದ್ದು ಈ ನಿಷೇಧಕ್ಕೆ ಕಾರಣವಾಗಿತ್ತು. ಆದರೆ ಇದನ್ನು ಆಸ್ಟ್ರೇಲಿಯಾದ ಮಾಧ್ಯಮಗಳು ಹಗುರವಾಗಿ ತೆಗೆದುಕೊಳ್ಳಲಿಲ್ಲ. ಏಕೆಂದರೆ, ಪಾಂಟಿಂಗ್ ತನ್ನ ಹೊಸ ಬ್ಯಾಟನ್ನು ಬಳಸಲು ಆರಂಭಿಸಿದಾಗಿನಿಂದ ಬಹಳಷ್ಟು ರನ್ನುಗಳನ್ನು ಗಳಿಸಿದ್ದ ಹಾಗೂ ಅವನ ಬ್ಯಾಟಿನಲ್ಲಿದ್ದ 'ನಿಯಮಗಳಿಗೆ ಅನುಸಾರವಾಗಿಲ್ಲದ' ತಂತ್ರಜ್ಞಾನದ ಅಂಶವೇ ಇಂಥ ಬೃಹತ್ ರನ್ ಗಳಿಕೆಗೆ ಕಾರಣ ಎಂದು ಇಂಗ್ಲಿಷ್ ವರದಿಗಾರರು ಆರೋಪಿಸಿದ್ದರು.
IPL ೨೦೧೦ರ ಅವಧಿಯಲ್ಲಿ ಮಾಂಗೂಸ್ ಹೆಸರಿನ ಹೊಸ ಬ್ಯಾಟ್ ತಯಾರಿಕಾ ಕಂಪನಿಯೊಂದು ಪುಟ್ಟ ಮಾಂಗೂಸ್ (ಮಿನಿ ಮಾಂಗೂಸ್) ಎಂದು ಕರೆಯಲ್ಪಡುವ ಕ್ರಿಕೆಟ್ ಬ್ಯಾಟಿನ ಹೊಸ ವಿನ್ಯಾಸವನ್ನು ಪ್ರಕಟಿಸಿತು. ಈ ಬ್ಯಾಟು ಒಂದು ಮೊಟಕಾದ ದಪ್ಪನಾದ ಹಲಗೆಯನ್ನು ಮತ್ತು ಉದ್ದವಾದ ಹಿಡಿಕೆಯನ್ನು ಹೊಂದಿದ್ದು, ಹಿಡಿಕೆಯೊಳಗೆ ಹೊಸೆದು ಅಂಟಿಸಿದ ಕೂಡಿಕೆಯನ್ನು ಅಳವಡಿಸಲಾಗಿದೆ; ಬ್ಯಾಟಿನ ಮುಖದಲ್ಲಿ ಹೆಚ್ಚಿನ ಹೊಡೆಯುವ ಪ್ರದೇಶವನ್ನು ಒದಗಿಸಲು, ದೊಡ್ಡ ಹೊಡೆತಗಳನ್ನು ಆಡುವುದಕ್ಕೆ ನೆರವಾಗಲು ಈ ವಿನ್ಯಾಸವನ್ನು ಮಾಡಲಾಗಿದೆ. ಅನನ್ಯವಾದ ಕಡಿಮೆ ಗುರುತ್ವ ಕೇಂದ್ರವು ಬ್ಯಾಟಿಗೆ ಸಾಕಷ್ಟು ಮಹತ್ತರವಾದ ಬ್ಯಾಟ್ ವೇಗವನ್ನು ನೀಡುವುದರಿಂದ ಹಾಗೂ ಒಂದು ಮೊಟಕಾದ ಹಲಗೆಯನ್ನು ಇದು ಹೊಂದಿರುವುದರಿಂದ, ಅದೇ ತೂಕಕ್ಕೆ ಸಂಬಂಧಿಸಿ ಹಲಗೆಯು ದಪ್ಪನಾಗಿರಬಹುದಾಗಿದೆ; ಅಂದರೆ, ಚೆಂಡಿನ ಹಿಂಭಾಗದಲ್ಲಿ ಬ್ಯಾಟಿನ ಭಾಗವು ಹೆಚ್ಚಿನ ಪ್ರಮಾಣದಲ್ಲಿದ್ದು, ಚೆಂಡನ್ನು ಮತ್ತಷ್ಟು ಹೊಡೆಯಲು ಇದರಿಂದ ಅವಕಾಶ ಸಿಗುತ್ತದೆ. ಈ ಬ್ಯಾಟನ್ನು ಆಂಡ್ರ್ಯೂ ಸಿಮಂಡ್ಸ್, ಮ್ಯಾಥ್ಯೂ ಹೇಡನ್, ಸ್ಟುವರ್ಟ್ ಲಾ ಮತ್ತು ಡ್ವೈನ್ ಸ್ಮಿತ್ ಈಗಾಗಲೇ ಬಳಸುತ್ತಿದ್ದಾರೆ. ಆದಾಗ್ಯೂ, ಇದರಲ್ಲೂ ಹಲವಾರು ನ್ಯೂನತೆಗಳಿವೆ. ಇದು ಮೊಟಕಾಗಿರುವುದರಿಂದ ರಕ್ಷಣಾತ್ಮಕ ಬ್ಯಾಟುಗಾರಿಕೆಗೆ ಇದು ಅಷ್ಟೊಂದು ಉಪಯುಕ್ತವಾಗಿಲ್ಲ ಮತ್ತು ಒಂದು ಹತ್ತಿರದೆಸೆತದ ಚೆಂಡನ್ನು (ಷಾರ್ಟ್‌ಬಾಲ್) ಎದುರಿಸುವಾಗು ಇದು ಅದೇ ರಕ್ಷಣೆಯನ್ನು ಒದಗಿಸುವುದಿಲ್ಲ. ಇದರರ್ಥ, ಇದು ಆಕ್ರಮಣಶೀಲ ಆಟಕ್ಕೆ ನೆರವಾಗುತ್ತದೆ, ಆದರೆ ರಕ್ಷಣಾತ್ಮಕ ಆಟಕ್ಕೆ ದುಬಾರಿಯಾಗಿ ಪರಿಣಮಿಸುತ್ತದೆ. ಟ್ವೆಂಟಿ-೨೦ ಪಂದ್ಯಗಳಲ್ಲಿನ ಇದರ ಉಪಯುಕ್ತತೆಗೆ ಈ ಅಂಶವೇ ನಿರ್ಬಂಧಿಸುತ್ತದೆ. ಏಕೆಂದರೆ, ಟ್ವೆಂಟಿ-೨೦ ಪಂದ್ಯಗಳಲ್ಲಿ ದಾಳಿಯೇ ಗುರಿಯಾಗಿರುತ್ತದೆ. ಆದರೆ ಟೆಸ್ಟ್ ಅಥವಾ ಚಾಂಪಿಯನ್‌ಗಿರಿ ಕ್ರಿಕೆಟ್‌ಗಳಲ್ಲಿ ಹಾಗಲ್ಲ, ಅಲ್ಲಿ ಸುದೀರ್ಘ ಇನ್ನಿಂಗ್ಸ್‌ಗೆ ಒಂದು ಹೆಚ್ಚು ನವಿರಾದ ವಿಧಾನದ ಅಗತ್ಯವಿರುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಕ್ರಿಕೆಟ್ ವೇಷಭೂಷಣ ಮತ್ತು ಸಾಧನ
ಉಲ್ಲೇಖಗಳು
[ಬದಲಾಯಿಸಿ]- ↑ "Severn Tunnel (1)". Track Topics, A GWR Book of Railway Engineering. Great Western Railway. ೧೯೩೫ (repr. ೧೯೭೧). p. 179.
{{cite book}}
: Check date values in:|year=
(help)CS1 maint: year (link) - ↑ ೨.೦ ೨.೧ Website by the OTHER media (2008-10-01). "Law 6: Bats". Lords.org. Archived from the original on 2009-03-19. Retrieved 2009-11-15.
- ↑ Website by the OTHER media. "Laws of Cricket Appendix E - The bat". Lords.org. Archived from the original on 2012-11-24. Retrieved 2009-11-15.
- ↑ "Cricket equipment: Caring for your kit". BBC Sport. Retrieved 2010-11-14.
- ↑ "Bat maker defends graphite innovation". BBC Sport. 11 April 2005. Retrieved 2010-11-14.
- ↑ "Twenty20's latest swipe: a bat out of hell". Sydney Morning Herald. 13 November 2008. Retrieved 2009-11-15.
- ↑ "ICC and Kookaburra Agree to Withdrawal of Carbon Bat". NetComposites. 2006-02-19. Archived from the original on 2018-09-28. Retrieved 2018-09-28.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕೈನಿಂದ ಮಾಡಿದ ಕ್ರಿಕೆಟ್ ಬ್ಯಾಟ್‌ನ ವಿಡಿಯೋ Archived 2011-05-26 ವೇಬ್ಯಾಕ್ ಮೆಷಿನ್ ನಲ್ಲಿ.
- ಬ್ಯಾಟುಗಳಿಗಾಗಿ ವಿಲೋ ಮರಗಳನ್ನು ಬೆಳೆಯುವಿಕೆ Archived 2011-05-04 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 errors: dates
- CS1 maint: year
- Articles with multiple maintenance issues
- Pages using multiple issues with unknown parameters
- Articles with unsourced statements from October 2009
- Articles with invalid date parameter in template
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕ್ರಿಕೆಟ್ ಸಾಧನ
- ಬ್ಯಾಟಿಂಗ್ (ಕ್ರಿಕೆಟ್)