ಕ್ಯಾಲ್‍ಜ಼ೋನ್
Jump to navigation
Jump to search
ಕ್ಯಾಲ್‍ಟ್ಸೋನೆ ಮಡಚಿದ ಪೀಟ್ಸಾದ ಆಕಾರ ಹೊಂದಿರುವ, ಅವನ್‍ನಲ್ಲಿ ಬೇಕ್ ಮಾಡಲಾದ ಒಂದು ಇಟ್ಯಾಲಿಯನ್ ಹೂರಣ ತುಂಬಿದ ಪೀಟ್ಸಾ. ಕ್ಯಾಲ್‍ಟ್ಸೋನೆ ನೇಪಲ್ಸ್‌ನಲ್ಲಿ ಹುಟ್ಟಿಕೊಂಡಿತು. ಒಂದು ಮಾದರಿ ಕ್ಯಾಲ್‍ಟ್ಸೋನೆಯನ್ನು ಉಪ್ಪಿರುವ ಬ್ರೆಡ್ ಕಣಕದಿಂದ ತಯಾರಿಸಲಾಗುತ್ತದೆ, ಅವನ್‍ನಲ್ಲಿ ಬೇಕ್ ಮಾಡಲಾಗುತ್ತದೆ ಮತ್ತು ಸಲಾಮಿ ಅಥವಾ ಹ್ಯಾಮ್, ಮೋಟ್ಸರೆಲಾ, ರೀಕಾಟಾ ಹಾಗೂ ಪಾರ್ಮೆಸಾನ್ ಅಥವಾ ಪೆಕರೀನೊ ಗಿಣ್ಣು, ಜೊತೆಗೆ ಮೊಟ್ಟೆ ಹೂರಣದಿಂದ ತುಂಬಲಾಗುತ್ತದೆ. ಕ್ಯಾಲ್‍ಟ್ಸೋನೆಯ ಮೇಲಿನ ಭಿನ್ನ ಪ್ರಾದೇಶಿಕ ವಿಧಗಳು ಹಲವುವೇಳೆ ಸಾಮಾನ್ಯವಾಗಿ ಪೀಟ್ಸಾ ಅಲಂಕರಣಗಳಿಗೆ ಸಂಬಂಧಿಸಲಾದ ಇತರ ಪದಾರ್ಥಗಳನ್ನು ಒಳಗೊಳ್ಳಬಹುದು. ಚಿಕ್ಕ ಕ್ಯಾಲ್‍ಟ್ಸೋನೆಗಳನ್ನು ಅವನ್‍ನಲ್ಲಿ ಬೇಕ್ ಮಾಡುವ ಬದಲು ಆಲಿವ ಎಣ್ಣೆಯಲ್ಲೂ ಕರಿಯಬಹುದು.[೧]