ಕ್ಯಾರೆಟ್ ಹಲ್ವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯಾರೆಟ್ ಹಲ್ವಾ ಮುಖ್ಯವಾಗಿ ಉತ್ತರ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಸಂಬಂಧಿಸಲಾದ ಒಂದು ಸಿಹಿ ಡಿಜ಼ರ್ಟ್ ಪುಡಿಂಗ್. ಅದನ್ನು ತುರಿದ ಗಜ್ಜರಿಯನ್ನು ನಿರ್ದಿಷ್ಟ ಪ್ರಮಾಣದ ನೀರು, ಹಾಲು ಮತ್ತು ಸಕ್ಕರೆಯನ್ನು ಹೊಂದಿದ ಒಂದು ಪಾತ್ರೆಯಲ್ಲಿ ಇಟ್ಟು ಹಾಗೆಯೇ ನಿಯಮಿತವಾಗಿ ಕಲಕಿ ಬೇಯಿಸಿ ತಯಾರಿಸಲಾಗುತ್ತದೆ. ಅದನ್ನು ಹಲವುವೇಳೆ ಬಾದಾಮಿಗಳು ಮತ್ತು ಪಿಸ್ತಾಗಳ ಅಲಂಕರಣದ ಜೊತೆಗೆ ಬಡಿಸಲಾಗುತ್ತದೆ.