ವಿಷಯಕ್ಕೆ ಹೋಗು

ಕ್ಯಾರಿ ಮುಲ್ಲಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಯಾರಿ ಬ್ಯಾಂಕ್ಸ್ ಮುಲ್ಲಿಸ್
೨೦೦೬ ರಲ್ಲಿ ಮುಲ್ಲಿಸ್
ಜನನ(೧೯೯೪-೧೨-೨೮)೨೮ ಡಿಸೆಂಬರ್ ೧೯೯೪
ಮರಣAugust 7, 2019(2019-08-07) (aged 74)
ನ್ಯೂಪೋರ್ಟ್ ಬೀಚ್, ಕ್ಯಾಲಿಫೋರ್ನಿಯಾ, ಯು.ಎಸ್.
ಕಾರ್ಯಕ್ಷೇತ್ರಅಣು ಜೀವಶಾಸ್ತ್ರ
ಅಭ್ಯಸಿಸಿದ ವಿದ್ಯಾಪೀಠಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಎಸ್, ೧೯೬೬)
ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲಿ (ಪಿಹೆಚ್‌ಡಿ, ೧೯೭೩)
ಮಹಾಪ್ರಬಂಧಸ್ಕಿಜೋಕಿನೆನ್: ರಚನೆ ಮತ್ತು ಸಂಶ್ಲೇಷಿತ ಕೆಲಸ (೧೯೭೩)
ಶೈಕ್ಷಣಿಕ ಸಲಹೆಗಾರರುಜೆ. ಬಿ. ನೀಲ್ಯಾಂಡ್ಸ್
ಪ್ರಸಿದ್ಧಿಗೆ ಕಾರಣಪಾಲಿಮರೇಸ್ ಚೈನ್ ರಿಯಾಕ್ಷನ್ ಆವಿಷ್ಕಾರ

ಕ್ಯಾರಿ ಬ್ಯಾಂಕ್ಸ್ ಮುಲ್ಲಿಸ್ (ಡಿಸೆಂಬರ್ ೨೮, ೧೯೪೪ - ಆಗಸ್ಟ್ ೭, ೨೦೧೯) ಅವರು ಒಬ್ಬ ಅಮೇರಿಕನ್ ಜೀವರಸಾಯನಶಾಸ್ತ್ರಜ್ಞ. ಕ್ಯಾರಿ ಮುಲ್ಲಿಸ್ ಅವರು ರಸಾಯನಶಾಸ್ತ್ರದಲ್ಲಿ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ತಂತ್ರದ ಆವಿಷ್ಕಾರಕ್ಕಾಗಿ ೧೯೯೩ ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಪ್ರಶಸ್ತಿಯನ್ನು ಅವರು ಮೈಕೆಲ್ ಸ್ಮಿತ್ ಅವರೊಂದಿಗೆ ಹಂಚಿಕೊಂಡರು. ಅದೇ ವರ್ಷದಲ್ಲಿ ಅವರಿಗೆ ಜಪಾನ್ ಪ್ರಶಸ್ತಿಯನ್ನು ಸಹ ನೀಡಲಾಯಿತು.

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಮುಲ್ಲಿಸ್ ಅವರು ಡಿಸೆಂಬರ್ ೨೮, ೧೯೪೪ ರಂದು ಬ್ಲೂ ರಿಡ್ಜ್ ಪರ್ವತಗಳ ಬಳಿ ಇರುವ ಉತ್ತರ ಕೆರೊಲಿನಾದ ಲೆನೊಯಿರ್‌ನಲ್ಲಿ ಜನಿಸಿದರು.[] ಮುಲ್ಲಿಸ್ ಅವರ ತಂದೆ ವಸೆಸಿಲ್ ಬ್ಯಾಂಕ್ಸ್ ಮುಲ್ಲಿಸ್ ಮತ್ತು ತಾಯಿ ಬರ್ನಿಸ್ ಬಾರ್ಕರ್ ಮುಲ್ಲಿಸ್. ಮುಲ್ಲಿಸ್ ಕುಟುಂಬವು ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ಹಿನ್ನೆಲೆಯನ್ನು ಹೊಂದಿತ್ತು. ಬಾಲ್ಯದಲ್ಲಿ ಮುಲ್ಲಿಸ್ ಅವರು ಗ್ರಾಮಾಂತರ ಪ್ರದೇಶದಲ್ಲಿನ ಜೀವಿಗಳನ್ನು ವೀಕ್ಷಿಸಲು ಆಸಕ್ತಿ ಹೊಂದಿದ್ದರು ಎಂದು ಸ್ವತಃ ಮುಲ್ಲಿಸ್ ಅವರೇ ಹೇಳಿದ್ದಾರೆ. ಮುಲ್ಲಿಸ್ ಅವರು ದಕ್ಷಿಣ ಕೆರೊಲಿನಾದ ಕೊಲಂಬಿಯಾದಲ್ಲಿ ಬೆಳೆದರು. ಅಲ್ಲಿ ಅವರು ಡ್ರೆಹೆರ್ ಹೈಸ್ಕೂಲ್‌ಗೆ ಸೇರಿದರು.[] ೧೯೬೨ ರಲ್ಲಿ ಪದವಿ ಪಡೆದರು.

ಮುಲ್ಲಿಸ್ ಅವರು ೧೯೬೬ ರಲ್ಲಿ ಅಟ್ಲಾಂಟಾದ ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ರಸಾಯನಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಅನ್ನು ಪಡೆದರು. ಆ ಸಮಯದಲ್ಲಿ ಅವರು ತಮ್ಮ ಮೊದಲ ಪತ್ನಿ ರಿಚರ್ಡ್ಸ್ ಹ್ಯಾಲಿಯನ್ನು ವಿವಾಹವಾದರು ಮತ್ತು ವ್ಯಾಪಾರವನ್ನು ಪ್ರಾರಂಭಿಸಿದರು.[] ೧೯೭೩ರಲ್ಲಿ ಜೆ.ಬಿ. ನೀಲ್ಯಾಂಡ್ಸ್‌ನ ಪ್ರಯೋಗಾಲಯದಲ್ಲಿ ಬ್ಯಾಕ್ಟೀರಿಯಾದ ಕಬ್ಬಿಣದ ಸಾಗಣೆಯ ಅಣುಗಳ ಸಂಶ್ಲೇಷಣೆ ಮತ್ತು ರಚನೆಯ ಮೇಲೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಬರ್ಕ್ಲಿ (ಯುಸಿ ಬರ್ಕ್ಲಿ) ನಲ್ಲಿ ಜೈವಿಕ ರಸಾಯನಶಾಸ್ತ್ರದಲ್ಲಿ ತಮ್ಮ ಪಿಎಚ್‌ಡಿ ಮಾಡಿದರು. ೧೯೬೮ ರಲ್ಲಿ ಖಗೋಳ ಭೌತಶಾಸ್ತ್ರ ಕ್ಷೇತ್ರದಲ್ಲಿ ನೇಚರ್‌ನಲ್ಲಿ ಏಕೈಕ ಲೇಖಕರ ಲೇಖನವನ್ನು ಪ್ರಕಟಿಸಿದರು.

ಮುಲ್ಲಿಸ್ ಅವರು ಬ್ಯಾಕ್ಟೀರಿಯಾದ ಸೈಡೋಫೋರ್ ಸ್ಕಿಜೋಕಿನೆನ್ ರಚನೆಯ ಮೇಲೆ ಡಾಕ್ಟರೇಟ್ ಪದವಿಯನ್ನು ಪಡೆದರು. ಪದವಿಯ ನಂತರ ೧೯೭೩ ರಿಂದ ೧೯೭೭ ರವರೆಗೆ ಮುಲ್ಲಿಸ್ ಕಾನ್ಸಾಸ್ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಪೀಡಿಯಾಟ್ರಿಕ್ ಕಾರ್ಡಿಯಾಲಜಿಯಲ್ಲಿ ಪೋಸ್ಟ್‌ಡಾಕ್ಟರಲ್ ಫೆಲೋಶಿಪ್‌ಗಳನ್ನು ಪೂರ್ಣಗೊಳಿಸಿದರು. ೧೯೭೭ ರಿಂದ ೧೯೭೯ ರವರೆಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಔಷಧೀಯ ರಸಾಯನಶಾಸ್ತ್ರ ಮಾಡಿದರು.

ವೃತ್ತಿ

[ಬದಲಾಯಿಸಿ]

ಮುಲ್ಲಿಸ್ ಅವರು ತಮ್ಮ ಸ್ನೇಹಿತ ಥಾಮಸ್ ವೈಟ್ ಮೂಲಕ ಕ್ಯಾಲಿಫೋರ್ನಿಯಾದ ಎಮೆರಿವಿಲ್ಲೆ ಅಲ್ಲಿ ಸೆಟಸ್ ಕಾರ್ಪೊರೇಷನ್‌ ಎಂಬ ಜೈವಿಕ ತಂತ್ರಜ್ಞಾನ ಕಂಪನಿ ಕೆಲಸ ಪಡೆದರು. ಮುಲ್ಲಿಸ್ ಅವರು ಪೋಸ್ಟ್‌ಡಾಕ್ಟರಲ್ ಕೆಲಸದ ಸಮಯದಲ್ಲಿ ಎರಡು ವರ್ಷಗಳ ಕಾಲ ಬೇಕರಿಯನ್ನು ನಿರ್ವಹಿಸಿದರು. ಯುಸಿ ಬರ್ಕ್ಲಿ ಸ್ನೇಹಿತ ಮತ್ತು ಸಹೋದ್ಯೋಗಿ ಥಾಮಸ್ ವೈಟ್ ಅವರು ಮುಲ್ಲಿಸ್‌ಗೆ ಕ್ಯಾಲಿಫೋರ್ನಿಯಾದ ಎಮೆರಿವಿಲ್ಲೆ ಎಂಬ ಜೈವಿಕ ತಂತ್ರಜ್ಞಾನ ಕಂಪನಿ ಸೆಟಸ್ ಕಾರ್ಪೊರೇಶನ್‌ನಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿದರು. ಮುಲ್ಲಿಸ್ ಅವರು ಏಳು ವರ್ಷಗಳ ಕಾಲ ಸೆಟಸ್‌ನಲ್ಲಿ ಡಿಎನ್‌ಎ ರಸಾಯನಶಾಸ್ತ್ರಜ್ಞರಾಗಿ ಕೆಲಸ ಮಾಡಿದರು. ಡಿಎನ್‌ಎ ಸಂಶ್ಲೇಷಣೆ ಪ್ರಯೋಗಾಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ನಂತರ ಸಂಸ್ಥೆಯ ಆಣ್ವಿಕ ಮತ್ತು ಜೈವಿಕ ಸಂಶೋಧನೆಯ ನಿರ್ದೇಶಕರಾಗಿದ್ದರು. ೧೯೮೩ ರಲ್ಲಿ ಮುಲ್ಲಿಸ್ ಅವರು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಕಾರ್ಯವಿಧಾನವನ್ನು ಕಂಡುಹಿಡಿದರು.

೧೯೮೬ ರಲ್ಲಿ ಸೆಟಸ್‌ನಿಂದ ರಾಜೀನಾಮೆ ಪಡೆದ ನಂತರ ಮುಲ್ಲಿಸ್ ಅವರು ಎರಡು ವರ್ಷಗಳ ಕಾಲ ಸ್ಯಾನ್ ಡಿಯಾಗೋದಲ್ಲಿ ಕ್ಸಿಟ್ರೊನಿಕ್ಸ್ ಗಾಗಿ ಆಣ್ವಿಕ ಜೀವಶಾಸ್ತ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಅನಂತರ, ನ್ಯೂಕ್ಲಿಯಿಕ್ ಆಸಿಡ್ ರಸಾಯನಶಾಸ್ತ್ರದಲ್ಲಿ ಬಹು ನಿಗಮಗಳು ಮತ್ತು ಸಂಸ್ಥೆಗಳಿಗೆ ಸಲಹೆಗಾರರಾಗಿ ಕೆಲಸ ಮಾಡಿದರು. ೧೯೯೨ ರಲ್ಲಿ ಕ್ಯಾಲಿಫೋರ್ನಿಯಾದ ಲಾ ಜೊಲ್ಲಾದಲ್ಲಿ ಅಟಾಮಿಕ್ ಟ್ಯಾಗ್‌ಗಳನ್ನು ಸ್ಥಾಪಿಸಿದರು. ಮುಲ್ಲಿಸ್ ಅವರು ಯುಎಸ್‌ಎ ವಿಜ್ಞಾನ ಮತ್ತು ಇಂಜಿನಿಯರಿಂಗ್ ಉತ್ಸವದ ಸಲಹಾ ಮಂಡಳಿಯ ಸದಸ್ಯರಾಗಿದ್ದರು.

ಪಿಸಿಆರ್ (ಪಾಲಿಮರೇಸ್ ಚೈನ್ ರಿಯಾಕ್ಷನ್) ಮತ್ತು ಇತರ ಆವಿಷ್ಕಾರಗಳು

[ಬದಲಾಯಿಸಿ]

೧೯೮೩ರಲ್ಲಿ ಮುಲ್ಲಿಸ್ ಅವರು ಸೆಟಸ್ ಕಾರ್ಪೊರೇಶನ್‌ನಲ್ಲಿ ರಸಾಯನಶಾಸ್ತ್ರಜ್ಞನಾಗಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ ೧೬, ೧೯೮೩ ರಂದು ಮುಲ್ಲಿಸ್ ಪಿಸಿಆರ್ ಎಂಬ ಪ್ರಕ್ರಿಯೆಯನ್ನು ಕಂಡುಹಿಡಿದರು. ಈ ಪ್ರಕ್ರಿಯೆಗೆ ಮುಲ್ಲಿಸ್ ಅವರು ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು.

ಪಿಸಿಆರ್ ಎನ್ನುವುದು ಅಗತ್ಯವಾದ ಡಿಎನ್‌ಎ ವಿಭಾಗವನ್ನು ವರ್ಧಿಸುವ ಒಂದು ತಂತ್ರ. ಪಿಸಿಆರ್ ವರ್ಧಿಸಲು ಜೀನೋಮ್‌ನ ಒಂದು ಭಾಗವನ್ನು ಆಯ್ಕೆ ಮಾಡಲು ಪ್ರೈಮರ್‌ಗಳೆಂದು ಕರೆಯಲ್ಪಡುವ ಸಣ್ಣ ಸಂಶ್ಲೇಷಿತ ಡಿಎನ್‌ಎ ತುಣುಕುಗಳನ್ನು ಪಿಸಿಆರ್ ಒಳಗೊಂಡಿರುತ್ತದೆ. ನಂತರ ಆ ವಿಭಾಗವನ್ನು ವರ್ಧಿಸಲು ಡಿಎನ್‌ಎ ಸಂಶ್ಲೇಷಣೆಯ ಬಹು ಸುತ್ತುಗಳನ್ನು ಒಳಗೊಂಡಿರುತ್ತದೆ.

ಮುಲ್ಲಿಸ್ ಅವರು ಯುವಿ-ಸೂಕ್ಷ್ಮ ಪ್ಲಾಸ್ಟಿಕ್ ಅನ್ನು ಸಹ ಕಂಡುಹಿಡಿದರು. ಅದು ಬೆಳಕಿಗೆ ಪ್ರತಿಕ್ರಿಯೆಯಾಗಿ ಬಣ್ಣವನ್ನು ಬದಲಾಯಿಸುತ್ತದೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಮುಲ್ಲಿಸ್ ಒಬ್ಬ ಸರ್ಫರ್ ಮತ್ತು ಸಂಗೀತಗಾರರಾಗಿದ್ದರು.[] ಹಾಗೆಯೇ ಅವರು ಗಿಟಾರ್ ವಾದಕ ಮತ್ತು ಗಾಯಕರಾಗಿದ್ದರು. ಮುಲ್ಲಿಸ್ ಅವರು ನಾಲ್ಕು ಬಾರಿ ವಿವಾಹವಾದರು. ಅವರ ಇಬ್ಬರು ಹೆಂಡತಿಯರಿಂದ ಅವರು ಮೂರು ಮಕ್ಕಳನ್ನು ಹೊಂದಿದ್ದರು. ಅವರ ಮರಣದ ಸಮಯದಲ್ಲಿ, ಅವರಿಗೆ ಇಬ್ಬರು ಮೊಮ್ಮಕ್ಕಳು ಇದ್ದರು. ಮುಲ್ಲಿಸ್ ಅವರು ನ್ಯುಮೋನಿಯಾದ ತೊಂದರೆಗಳಿಂದ ಕ್ಯಾಲಿಫೋರ್ನಿಯಾದ ನ್ಯೂಪೋರ್ಟ್ ಬೀಚ್‌ನಲ್ಲಿರುವ ತಮ್ಮ ಮನೆಯಲ್ಲಿ ಆಗಸ್ಟ್ ೭, ೨೦೧೯ ರಂದು ನಿಧನರಾದರು.[]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
  • ೧೯೯೦: ಅಮೇರಿಕನ್ ಸೊಸೈಟಿ ಆಫ್ ಹ್ಯೂಮನ್ ಜೆನೆಟಿಕ್ಸ್‌ನ ವಿಲಿಯಂ ಅಲನ್ ಸ್ಮಾರಕ ಪ್ರಶಸ್ತಿ, ಜರ್ಮನ್ ಸೊಸೈಟಿ ಆಫ್ ಕ್ಲಿನಿಕಲ್ ಕೆಮಿಸ್ಟ್ರಿಯ ಪ್ರೀಸ್ ಬಯೋಕೆಮಿಸ್ಚೆ ಅನಾಲಿಟಿಕ್ ಮತ್ತು ಬೋಹ್ರಿಂಗರ್ ಮ್ಯಾನ್‌ಹೈಮ್
  • ೧೯೯೧: ನ್ಯಾಷನಲ್ ಬಯೋಟೆಕ್ನಾಲಜಿ ಪ್ರಶಸ್ತಿ, ಗೈರ್ಡ್ನರ್ ಪ್ರಶಸ್ತಿ, ವರ್ಷದ ಆರ್ ಮತ್ತು ಡಿ ವಿಜ್ಞಾನಿ, ಫಿಲಡೆಲ್ಫಿಯಾದ ಸಿಟಿ ಟ್ರಸ್ಟ್‌ನ ಜಾನ್ ಸ್ಕಾಟ್ ಪ್ರಶಸ್ತಿ
  • ೧೯೯೨: ವರ್ಷದ ಕ್ಯಾಲಿಫೋರ್ನಿಯಾ ವಿಜ್ಞಾನಿ ಪ್ರಶಸ್ತಿ, ರಾಬರ್ಟ್ ಕೋಚ್ ಪ್ರಶಸ್ತಿ
  • ೧೯೯೩: ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ, ಜಪಾನ್ ಪ್ರಶಸ್ತಿ, ಥಾಮಸ್ ಎ. ಎಡಿಸನ್ ಪ್ರಶಸ್ತಿ
  • ೧೯೯೪: ಸೌತ್ ಕೆರೊಲಿನಾ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ, ಅಮೇರಿಕನ್ ಅಕಾಡೆಮಿ ಆಫ್ ಅಚೀವ್‌ಮೆಂಟ್‌ನ ಗೋಲ್ಡನ್ ಪ್ಲೇಟ್ ಪ್ರಶಸ್ತಿ
  • ೧೯೯೮: ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡರು, ರೊನಾಲ್ಡ್ ಎಚ್. ಬ್ರೌನ್ ಅಮೇರಿಕನ್ ಇನ್ನೋವೇಟರ್ ಪ್ರಶಸ್ತಿ
  • ೨೦೦೪: ಇಟಲಿಯ ಬೊಲೊಗ್ನಾ ವಿಶ್ವವಿದ್ಯಾಲಯದಿಂದ ಫಾರ್ಮಾಸ್ಯುಟಿಕಲ್ ಬಯೋಟೆಕ್ನಾಲಜಿಯಲ್ಲಿ ಗೌರವ ಪದವಿ
  • ೨೦೧೦: ಜೆಕ್ ರಿಪಬ್ಲಿಕ್‌ನ ಮಸಾರಿಕ್ ವಿಶ್ವವಿದ್ಯಾಲಯದಿಂದ ಜೈವಿಕ ವಿಜ್ಞಾನ ಕ್ಷೇತ್ರದಲ್ಲಿ ಗೌರವ ಡಾಕ್ಟರ್ ಗೌರವ ಪದವಿ

ಉಲ್ಲೇಖಗಳು

[ಬದಲಾಯಿಸಿ]
  1. https://www.nobelprize.org/prizes/chemistry/1993/mullis/biographical/
  2. https://www.nobelprize.org/prizes/chemistry/1993/mullis/lecture/
  3. https://classic.esquire.com/article/1994/7/1/is-kary-mullis-god-or-just-the-big-kahuna
  4. https://web.archive.org/web/20210923234455/https://www.washingtonpost.com/archive/lifestyle/1998/11/03/nobel-chemist-kary-mullis-making-waves-as-a-mind-surfer/31e7e720-44e4-49ff-8458-a9822cdcb47e/
  5. https://mynewsla.com/education/2019/08/08/nobel-winner-kary-banks-mullis-who-revolutionized-dna-research-dies-in-o-c/