ವಿಷಯಕ್ಕೆ ಹೋಗು

ಕೌಮಿ ತರಾನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೫೪ರಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಿದ ಅಹ್ಮದ್ ರಷ್ದಿ

ಕೌಮಿ ತರಾನಾ (ಉರ್ದು: قومی ترانہ [ˈqɔː.mi ˈt̪ə.rɑː.nɑ], ಅರ್ಥಾತ್ "ರಾಷ್ಟ್ರಗೀತೆ") ಅಥವಾ ಪಾಕ್ ಸರ್‍ಜ಼ಮೀ (ಉರ್ದು: پاک سرزمین [ˈpɑːk ˈsər.zə.miːn], ಅರ್ಥಾತ್ "ಪವಿತ್ರ ಭೂಮಿ"), ಪಾಕಿಸ್ತಾನದ ರಾಷ್ಟ್ರಗೀತೆಯಾಗಿದೆ. ೧೯೪೯ರಲ್ಲಿ ಅಹ್ಮದ್ ಘುಲಾಮ್ ಅಲಿ ಛಾಗ್ಲಾ ಸಂಗೀತ ಸಂಯೋಜಿಸಿದ್ದು, ಹಫೀಜ಼್ ಝಾಲಂಧರಿ ೧೯೫೨ರಲ್ಲಿ ಸಾಹಿತ್ಯ ರಚಿಸಿದರು. ಆಗಸ್ಟ್ ೧೯೫೪ರಲ್ಲಿ[೧] ರಚನೆಯನ್ನು ಪಾಕಿಸ್ತಾನವು ಅಧಿಕೃತ ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಂಡಿತು ಹಾಗೂ ಅದೇ ವರ್ಷ ಅಹ್ಮದ್ ರಷ್ದಿ, ಕೌಕಾಬ್ ಜಹಾನ್, ರಷೀದಾ ಬೇಗಮ್, ನಜಾಮ್ ಅರಾ, ನಸೀಮಾ ಷಹೀನ್, ಜ಼ವರ್ ಹುಸೇನ್, ಅಖ್ತರ್ ಅಬ್ಬಾಸ್, ಘುಲಾಮ್ ದಸ್ತಗೀರ್, ಅನ್ವರ್ ಜ಼ಹೀರ್ ಹಾಗೂ ಅಖ್ತರ್ ವಸೀ ಅಲಿ ಸೇರಿದಂತೆ ಹನ್ನೊಂದು ಪ್ರಮುಖ ಪಾಕಿಸ್ತಾನಿ ಗಾಯಕರು ರಾಷ್ಟ್ರಗೀತೆಯನ್ನು ಹಾಡಿದರು.[೨][೩]

ಪಾಕಿಸ್ತಾನ ಸರ್ಕಾರವು ಅಧಿಕೃತ ರಾಷ್ಟ್ರಗೀತೆನ್ನು ಸಂಯೋಜಿಸಲು ರಾಷ್ಟ್ರೀಯ ರಾಷ್ಟ್ರಗೀತೆ ಸಮಿತಿಯನ್ನು (ಎನ್‍ಎಸಿ) ೧೯೪೮ರ ಡಿಸಂಬರ್‍ನಲ್ಲಿ ಸ್ಥಾಪಿಸಿತು. ಶೇಖ್‍ ಮುಹಮ್ಮದ್‍ ಇಕ್ರಮ್‍ ಸಮಿತಿಯ ಅಧ್ಯಕ್ಷರಾಗಿದ್ದು, ಅಬ್ದುರ್‍ ರಬ್‍ ನಿಶ್ತಾರ್‍, ಅಹ್ಮದ್ ಛಾಗ್ಲಾ ಮತ್ತು ಹಫೀ‍ಜ಼್‍ ಝಾಲಂಧರಿ ಅವರೊಡನೆ ಇತರೆ ರಾಜಕಾರಣಿಗಳು, ಸಂಗೀತಕಾರರು ಹಾಗೂ ಕವಿಗಳು ಸದಸ್ಯರಾಗಿದ್ದರು. ಆರಂಭದಲ್ಲಿ ಸೂಕ್ತ ರಾಷ್ಟ್ರಗೀತೆಯನ್ನು ರಚಿಸುವಲ್ಲಿ ಸಮಿತಿಯು ಹಲವು ತೊಡಕುಗಳನ್ನು ಎದುರಿಸಬೇಕಾಯಿತು.

೧೯೫೦ರ ಜನವರಿ ೩೦ರಲ್ಲಿ ಇಂಡೋನೇಷಿಯಾದ ಆಗಿನ ಅಧ್ಯಕ್ಷರಾದ ಸುಕಾರ್ನೋ ಪಾಕಿಸ್ತಾನಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಹಾಡಲು ಯಾವುದೇ ಅಧಿಕೃತ ರಾಷ್ಟ್ರಗೀತೆ ಲಭ್ಯವಿರಲಿಲ್ಲ. ನಂತರ ೧೯೫೦ರಲ್ಲಿ ಇರಾನಿನ ಷಾಹ, ಮೊಹಮ್ಮದ್ ರಜ಼ಾ ಫೆಹಲ್ವಿ ಅವರ ದಿಢೀರ್ ಭೇಟಿಯು ರಾಷ್ಟ್ರಗೀತೆ ಸಲುವಾಗಿ ಪಾಕಿಸ್ತಾನ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಹೇರಿತು. ಆಗಿನ ರಾಷ್ಟ್ರಗೀತೆ ರಚನಾ ಸಮಿತಿಯ ಅಧ್ಯಕ್ಷರೂ, ಶಿಕ್ಷಣ ಸಚಿವರೂ ಆಗಿದ್ದ ಫ಼ಜ಼್ಲೂರ್‍ ರಹಮಾನ್‍ ಹಲವಾರು ಕವಿಗಳು, ಸಂಯೋಜಕರನ್ನು ನಿಯೋಜಿಸಿದ್ದರೂ, ಅವರು ಅಲ್ಲಿಸಿದ ಯಾವುದೇ ಸಾಹಿತ್ಯವನ್ನು ಸೂಕ್ತವೆಂದು ಪರಿಗಣಿಸಲಾಗಲಿಲ್ಲ. ರಚನಾ ಸಮಿತಿಯು ಹತ್ತುಹಲವು ಸಂಗೀತ ಸಂಯೋಜನೆಗಳನ್ನು ಪರೀಕ್ಷಿಸಿ, ಅಂತಿಮವಾಗಿ ಅಹ್ಮದ್ ಜಿ ಛಾಗ್ಲಾ ಅವರು ಮಂಡಿಸಿದ ರಾಗವನ್ನು ಔಪಚಾರಿಕ ಅನುಮೋದನೆಗೆ ಸಲ್ಲಿಸಿತು. ೨೧ ಆಗಸ್ಟ್ ೧೯೪೯ರಂದು ಪಾಕಿಸ್ತಾನ ಸರ್ಕಾರವು ಛಾಗ್ಲಾರವರ ಸಂಯೋಜನೆಯನ್ನು ಅಧಿಕೃತ ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಂಡಿತು.

೧೯೫೦ರ ಮಾರ್ಚ್ ೧ರಂದು ಮೊದಲಬಾರಿಗೆ ವಿದೇಶಿ ಅಧ್ಯಕ್ಷರೊಬ್ಬರಿಗೆ ಪಾಕಿಸ್ತಾನ ನೌಕಾಪಡೆಯಿಂದ ಇರಾನಿನ ಷಾಹ ಅವರ ಭೇಟಿಯ ಸಂದರ್ಭದಲ್ಲಿ, ಯಾವುದೇ ಸಾಹಿತ್ಯವಿಲ್ಲದೆ, ಕೇವಲ ರಾಷ್ಟ್ರಗೀತೆಯ ಸಂಗೀತ ಸಂಯೋಜನೆಯನ್ನು ನುಡಿಸಲಾಯಿತು.

ಸಂಗೀತ[ಬದಲಾಯಿಸಿ]

ಕೌಮಿ ತರಾನಾ ಹಿಂದೂಸ್ತಾನಿ ಸಂಯೋಜನೆಯಾಗಿದ್ದರೂ, ವಿದೇಶಿ ಬ್ಯಾಂಡ್‍ಗಳು ಸುಲಭವಾಗಿ ನುಡಿಸುವಂಥಹುದ್ದಾಗಿದೆ. ರ‍ಚನೆಯ ಸಂಗೀತವು ಅದರ ಸಂಯೋಜಕ ಛಾಗ್ಲಾ ಅವರಿಗಿದ್ದ ಪೂರ್ವ ಮತ್ತು ಪಾಶ್ಚಾತ್ಯ ಸಂಗೀತಗಳ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತವೆ. ರಾಷ್ಟ್ರಗೀತೆಯನ್ನು ೮೦ಸೆಕೆಂಡುಗಳ ಕಾಲ ನುಡಿಸಿದ್ದು, ೨೧ ಸಂಗೀತ ವಾದ್ಯಗಳು ಮತ್ತು ೩೮ ವಿವಿಧ ಸ್ವರಗಳ ಬಳಕೆ ಮಾಡಿಕೊಳ್ಳಲಾಗಿದೆ.[೪]

ಸಾಹಿತ್ಯ[ಬದಲಾಯಿಸಿ]

೧೯೫೨ರಲ್ಲಿ ಪಾಕಿಸ್ತಾನಿ ಕವಿ ಹಫ಼ೀಜ಼್ ಝಾಲಂಧರಿ ಬರೆದಿರುವ ಉರ್ದು ಸಾಹಿತ್ಯವು ಪರ್ಷಿಯನ್ ಭಾಷೆಯೊಂದಿಗೆ ಸಾಕಷ್ಟು ಸಾಮ್ಯತೆಹೊಂದಿದ್ದು, ಎರಡೂ ಭಾಷಿಕರಿಗೆ ಅರ್ಥವಾಗುವಂತಿದೆ. ಗೀತೆಯಲ್ಲಿರುವ ಮೂರು ಚರಣಗಳಲ್ಲಿ ಯಾವುದೇ ಚರಣವು ಪುನರಾವರ್ತಿಸುವುದಿಲ್ಲ. ಗೀತೆಯಲ್ಲಿರುವ ಬಹುತೇಕ ಶಬ್ದಗಳು ಪರ್ಷಿಯನ್ ಭಾಷೆಯದ್ದಾಗಿದ್ದು, 'کا' (ಕಾ, /'kɑː/) ಏಕೈಕ ಉರ್ದು ಪದವಾಗಿದೆ.[೫][೬][೭][೮][೯]

ಉರ್ದು ಸಾಹಿತ್ಯ ಲಿಪ್ಯಂತರಣ ಭಾಷಾಂತರ
ಕನ್ನಡ ಇಂಗ್ಲೀಷ್ ಇಂಗ್ಲೀಷ್[೧೦]
پاک سرزمین شاد باد ಪಾಕ್ ಸರ್‍ಜ಼ಮೀನ್ ಷಾದ್‍ ಬಾದ್ Pāk sarzamīn shād bād May the holy land, stay glad;
كشورِ حسين شاد باد ಕಿಶ್ವರ್-ಎ-ಹಸೀನ್ ಷಾದ್‍ ಬಾದ್ Kishwar-i ḥasīn shād bād Beauteous realm, stay glad.
تُو نشانِ عزمِ عالی شان ತೂ ನಿಷಾನ್-ಎ-ಅಜ಼್ಮ್-ಎ-ಆಲೀ ಶಾನ್ Tū nishān-i ʿazm-i ʿālī shān Thou, the sign of high resolve
ارضِ پاکستان! ಅರ್ಜ಼್-ಎ-ಪಾಕಿಸ್ತಾನ್! Arẓ-i Pākistān! O Land of Pakistan!
مرکزِ یقین شاد باد ಮರ್ಕಜ಼್-ಎ-ಯಕೀನ್ ಷಾದ್‍ಬಾದ್ Markaz-i yaqīn shād bād Citadel of faith, stay glad.
پاک سرزمین کا نظام ಪಾಕ್ ಸರ್‍ಜ಼ಮೀನ್ ಕಾ ನಿಜ಼ಾಮ್ Pāk sarzamīn kā niz̤ām Order of the holy land,
قوّتِ اُخوّتِ عوام ಕುವ್ವತ್-ಎ-ಉಖುವ್ವತ್-ಎ-ಅವಾಮ್ Quwwat-i Ukhuwwat-i ʿawām Power of fraternity of the populace;
قوم، ملک، سلطنت ಕೌಮ್, ಮುಲ್ಕ್, ಸಲ್ತನತ್ Qaum, mulk, salt̤anat The nation, country, and domain;
پائنده تابنده باد! ಪಾಯಿಂದಾ ತಾಬಿಂದಾ ಬಾದ್! Pāyindah tābindah bād! Ever luminous remain!
شاد باد منزلِ مراد ಷಾದ್ ಬಾದ್ ಮನ್‍ಜ಼ಿಲ್-ಎ-ಮುರಾದ್ Shād bād manzil-i murād The cherished goal, stay glad.
پرچمِ ستاره و ہلال ಪರ್ಚ್ಚಿಮ್-ಎ-ಸಿತಾರಾ-ಒ-ಹಿಲಾಲ್ Parcam-i sitārah o-hilāl Flag with the star and crescent,
رہبرِ ترقّی و کمال ರೆಹ್‍ಬರ್-ಎ-ತರಕ್ಕೀ-ಒ-ಕಮಾಲ್ Rahbar-i taraqqī o-kamāl The leader of progress and ascent,
ترجمانِ ماضی، شانِ حال ತರ್ಜುಮಾನ್-ಎ-ಮಾಜ಼ೀ, ಶಾನ್-ಎ-ಹಾಲ್ Tarjumān-i māẓī, shān-i ḥāl Dragoman of past, the pride of present;
جانِ استقبال! ಜಾನ್-ಎ-ಇಸ್ತಖ್‍ಬಾಲ್! Jān-i istiqbāl! Soul of the future!
سایۂ خدائے ذوالجلال ಸಾಯಾಃ-ಇ-ಖುದಾ-ಇ-ಜ಼ೂ-ಇ-ಜಲಾಲ್ Sāyah-yi Khudā-yi Ẕū l-jalāl Shadow of the God of grandeur.
  1. "Information of Pakistan". Infopak.gov.pk. Archived from the original on 2007-10-26. Retrieved 2013-01-31.Check date values in: |access-date= (help)
  2. "Death Anniversary of Ahmed Rushdi". Duniya News. Archived from the original on 2016-01-14. Retrieved 1 September 2016.Check date values in: |access-date= (help)
  3. National Anthem.http://anisshakur.tripod.com/id129.html
  4. Information Ministry, Government of Pakistan. "Basic Facts". Archived from the original on 2006-04-13. Retrieved 2006-04-12.Check date values in: |access-date= (help)
  5. [೧] Archived 2017-07-02 ವೇಬ್ಯಾಕ್ ಮೆಷಿನ್ ನಲ್ಲಿ., National Anthem of Pakistan
  6. [೨], The National Anthem of Pakistan
  7. [೩], Switch to Urdu from English as official language a hurdle for Pakistan
  8. [೪], History cannot be falsely written and manufactured
  9. [೫] Archived 2017-01-27 ವೇಬ್ಯಾಕ್ ಮೆಷಿನ್ ನಲ್ಲಿ., Pakistan Basic Facts
  10. Pasha, Muhammad A. English Composition (Part II). Lahore: Command Publications.

ಬಾಹ್ಯ ಕೊಂಡಿಗಳು[ಬದಲಾಯಿಸಿ]