ವಿಷಯಕ್ಕೆ ಹೋಗು

ಕೋಶಿಸ್ ಆಸ್ಪತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Koshys Hospital

ಕೋಶಿಸ್ ಆಸ್ಪತ್ರೆಯು ೨೦೦೧ ನೇ ಎಪ್ರಿಲ್ ಇಪ್ಪತ್ತೆಂಟನೆ ತಾರೀಖಿನಂದು ಸ್ಥಾಪಿಸಲಾಗಿದೆ. ಈ ಆಸ್ಪತ್ರೆಯು ಸರ್ಕಾರಕ್ಕೆ ಮೀಸಲಾಗಿಲ್ಲ. ಈ ಆಸ್ಪತ್ರೆಯು ಭಾರತದ ದೇಶದ, ಕರ್ನಾಟಕ ರಾಜ್ಯದ, ಬೆಂಗಳೂರಿನಲ್ಲಿದೆ. ಈ ಆಸ್ಪತ್ರೆಯು ಏಳು ಎಕ್ಕರೆಯಿದ್ದು, ಬೆಂಗಳೂರಿನ ರಾಘವೇಂದ್ರ ನಗರದಲ್ಲಿದೆ. ಈ ಆಸ್ಪತ್ರೆಯ ಅಧ್ಯಕ್ಷ ಶ್ರೀ.ಮಾನ್.ಕೋಶಿ, ವೈದ್ಯಕಿಯ ನಿರ್ದೇಶಕರು ಡಾ.ಸಂತೋಷ್ ಕೋಶಿ, ಮ್ಯಾನೆಜಿಂಗ್ ಡೈರೆಕ್ಟರ್ ಸತೀಶ್ ಕೋಶಿ. ಈ ಆಸ್ಪತ್ರೆಯಲ್ಲಿ ಇನ್ನೂರು ಜನ ಆಡಳಿತ ಮಂಡಳಿಯವರಿದ್ದು, ಇಪ್ಪತ್ತಾರು ವಿಭಾಗಗಳಿವೆ. ಇವರುಗಳಲ್ಲಿ ೧೪೦-೧೫೦ ರಷ್ಟು ಸ್ನಾತಕಪೂರ್ವ ವಿಧ್ಯಾಭ್ಯಾಸ ಮುಗಿಸಿರುವ ಹಾಗೂ ೪೦-೬೦ ರಷ್ಟು ಸ್ನಾತಕಪೂರ್ವ ವಿಧ್ಯಾಭ್ಯಾಸಕ್ಕಿಂತ ಹೆಚ್ಚು ಓದಿರುವ ಆಡಳಿತ ಮಂಡಳಿತಯವರಿದ್ದಾರೆ.

ಈ ಆಸ್ಪತ್ರೆಯ ವೆಬ್ಸೈಟ್: Website: koshyshospital.com Archived 2014-02-21 ವೇಬ್ಯಾಕ್ ಮೆಷಿನ್ ನಲ್ಲಿ.

ಕೋಶಿಸ್ ಆಸ್ಪತ್ರೆಯು ೨೦೦೧ ನೇ ವರ್ಷದಲ್ಲಿ ಸ್ಧಾಪಿಸಲಾಯಿತು. ಈ ಆಸ್ಪತ್ರೆಯ ದೂರದೃಷ್ಟಿ ಹಾಗೂ ಮುಖ್ಯ ಗುರಿಯೆನೆಂದರೆ ಜನರಿಗೆ ಒಳ್ಳೆಯ ಗುಣಮಟ್ಟದ ಆರೋಗ್ಯವನು ಕಲ್ಲಿಸುವುದು. ಕಳೆದ ಆರು ವರ್ಷಗಳಿಂದ. ಈ ಆಸ್ಪತ್ರೆಯು ಸರ್ವಕ್ಷೇತ್ರ ಸಂಸ್ಧೆಯಾಗಿ ಜನರಿಗೆ ಸೇವೆಯನ್ನು ಮಾಡುತ್ತಿದೆ. ಒಳ್ಳೆಯ ಗುಣಮಟ್ಟದ ಸೇವೆಯನ್ನು ಸಲ್ಲಿಸುತ್ತಾ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಈ ಆಸ್ಪತ್ರೆಯು ಬೆಂಗಳೂರಿನ ಪೂರ್ವ ವಲಯದಲ್ಲಿದೆ. ಈ ಆಸ್ಪತ್ರೆಯ ಒಂದು ವಿಶೇಷತೆ ಎನೆಂದರೆ ಈ ಆಸ್ಪತ್ರೆಯು ಬೆಂಗಳೂರಿನಲ್ಲಿ ಮೊದಲನೇಯ ಆಸ್ಪತ್ರೆ ಗವಾಕ್ಷ ಹವಾ ನಿಯಂತ್ರತೆಯಿಂದ ಕೂಡಿದೆ ಎಂದು ಸಾಭಿತಾಗಿದ್ದು ಹಾಗೂ ಎಲ್ಲಾ ರೀತಿಯ ಉದ್ಯೋಗ ಸೌಕರ್ಯ್ಯಾಗಳನ್ನು ಹೊಂದಿದೆ. ಈ ಆಸ್ಪತ್ರೆಯು ಆನೇಕ ಅತ್ಯುತಮ ಉಪಕರಣಗಳ ಹೊಂದಿದೆ ಉದಾಹರಣೆಗೆ ಸ್ವತಂಚಾಲಿತ ವಿಶ್ಲೇ‍‌‍ಷಕಗಳು, ಎಕೋ ಕಾರ್ಡಿಯೊಗ್ರಾಫ್ಗಳು, ರೆಟಿನಾ ಲೇಸರಗಳು ಇತ್ಯಾದಿಗಳನ್ನು ಈ ಆಸ್ಪತ್ರೆಯು ಒಳಗೊಂಡಿದೆ. ಈ ಆಸ್ಪತ್ರೆಯು ಹಿಮೋ ಡಾಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿದೆ, ಈ ಕೇಂದ್ರವು ಕರ್ನಾಟಕ ನೊರ್ಪೋಂಲಜಿ ಕಸಿ ಸಂಸ್ಥೆಯ ಸಂಘದ ಜೋತೆಗೂಡಿ ಈ ಕೇಂದ್ರವನ್ನು ಸ್ಥಾಪಿಸಿದೆ.

ಹೀಮೊ(Haemo) ವಿಗಲನ ಕೇಂದ್ರ

[ಬದಲಾಯಿಸಿ]

ಕೋಶಿಸ್ ಆಸ್ಪತ್ರೆಯು ಒಂದು ಅತ್ಯುತ್ತಮ ವಿನಲನ ಕೇಂದ್ರವನ್ನು ಹೊಂದಿದೆ. ಇಲ್ಲಿ ಇತ್ತೀಚಿನ ಉಪಕರಣಗಳು ಮತ್ತು ಸೌಲಭ್ಯಗಳು ಇವೆ. ಈ ಆಸ್ಪತ್ರೆಯಲ್ಲಿ ಜನರಿಗೆ ಅರ್ಹ ವೈದ್ಯರು ಮತ್ತು ದಾದಿ ನೆರವಾಗುತ್ತಾಬ೦ದಿದ್ದಾರೆ. ಈ ವಿಭಾಗ ದಿನದ ೨೪ ಗ೦ಟೆಗಳ ಕಾಲ ಜನರಿಗೆ ಅತ್ಯುತ್ತಮ ಸೇವೆಯನ್ನು ರೋಗಿಗಳಿಗೆ ಕೊಡುತ್ತಾರೆ.

ಸೇವೆಗಳು

[ಬದಲಾಯಿಸಿ]

ಕಾಯಿಲೆಗಳ ಸುಶೃಷೆ ಕಡೆಗೆ ಬಂದರೆ ಅಪಘಾತ ಅಥವಾ ಯಾವುದಾದರು ದೊಡ್ಡ ಕಾಯಿಲೆ ಬಂದಾಗ ಅವುಗಳ ಸುಶೃಷೆಯ ವ್ಯಚ್ಚ ಹೆಚ್ಚುತ್ತದೆ ಇದರಿಂದಾಗಿ ಆನೇಕ ಹಿಂದುಳಿದ ವರ್ಗದ ಜನರು ಆಸ್ಪತ್ರೆಗಳಿಗೆ ಹೋಗದೆ ತಮ್ಮ ಪ್ರಾಣವನ್ನು ಕಳೆದು ಕೊಳ್ಳುತ್ತಾರೆ. ಈ ಸಮಸ್ಯೆಯನ್ನು ಕೋಶಿಸ್ ಆಸ್ಪತ್ರೆಯು ತನ್ನ ಗಮನದಲ್ಲಿಟ್ಟು ಕೊಂಡು ಈ ವರ್ಗದ ಜನರಿಗೆ ತಮ್ಮ ಅಮುಲ್ಯವಾದ ಸೇವೆಯನ್ನು ಕಡಿಮೆ ವ್ಯಚ್ಚದಲ್ಲಿ ನೀಡುತ್ತಿದಾರೆ. ಇದರಿಂದಾಗಿ ಆನೇಕ ಜನರಿಗೆ ಈ ಕೋಶಿಸ್ ಆಸ್ಪತ್ರೆಯು ಬೆನ್ನೆಲುಬಾಗಿದೆ. ಈ ಕೋಶಿಸ್ ಆಸ್ಪತ್ರೆಯು ಸಮಾಜದ ಆರ್ಥಿಕ ಹಿಂದುಳಿದ ವರ್ಗದವರ ಕಡೆಗೆ ಹೆಚ್ಚಿನ ಗಮನ ಕೋಡುತ್ತಿದ್ದಾರೆ. ಏಕೆಂದರೆ ಈ ವರ್ಗದ ಜನರು ಅವರಿಗೆ ಬರುವ ಕಾಯಿಲೆಗಳಿಗೆ ಜೌಷಧಿತೆಗೆದು ಕೊಳದೇ ಸಾಯುವುದುಂಟು ಆದ್ದರಿಂದ ಇವರಿಗೆ ಕಡಿಮೆ ವ್ಯಚ್ಚದಲ್ಲಿ ರೋಗಗುಣ ಪಡಿಸುವ ಸೇವೆಯನ್ನು ಈ ಕೋಶಿಸ್ ಆಸ್ಪತ್ರೆ ಸಲ್ಲಿಸುತ್ತದೆ.

ಮೂತ್ರಪಿಂಡಗಳ ಕಸಿ

[ಬದಲಾಯಿಸಿ]

ಕರ್ನಾಟಕ ಸರ್ಕಾರದಿಂದ ಕೋಶಿಸ್ ಆಸ್ಪತ್ರೆ ಅನುಮೋದನೆಗೊಂಡಿದ್ದೆ. ಈ ಆಸ್ಪತ್ರೆಯು ಮೂತ್ರ ಪಿಂಡಗಳ ಕಸಿಗೆ ಹೆಸರು ವಾಸಿಯಾಗಿದೆ. ಈ ಆಸ್ಪತ್ರೆಯ ವೈದ್ಯರು ಸಾಕಷ್ಟು ಸಫಲವಾದ ಮೂತ್ರ ಪಿಂಡಗಳ ಕಸಿ ಮಾಡಿದ್ದಾರೆ. ಈ ವಿಭಾಗ ಬಹಳ ಒಳ್ಳೆಯ ಅಣಿಮಾಡುಗಳನ್ನು ಹಾಗೂ ಆಪರೇಷನ್ ಥಿಯೇಟರ್ಗಳನ್ನು ಹೊಂದಿದೆ ಮತ್ತು ಅರ್ಹ ದಾದಿಗಳು ಇದ್ದಾರೆ. ಈ ವೈದ್ಯಕೀಯ ಕೇಂದ್ರವು ಅತ್ಯುತ್ತಮ ವೈದ್ಯರು, ದಾದಿಗಳ, ಹಾಗೂ ತಜ್ಞತೆರಿಂದ ನಿರ್ವಹಣೆಯಾಗಿದೆ. ಕಳೆದ ಎರಡು ವರ್ಷಗಳ ಕಾಲದಿಂದ ಅತ್ಯುತ್ತಮ ವೈದ್ಯಕೀಯ ಕಾಳಜಿಯನ್ನು ಪ್ರತಿಯೊಬ್ಬ ರೋಗಿಗೂ ನೀಡಿ, ಪೂರ್ವ ಭಾಗದ ಪ್ರಖ್ಯತ ಆಸ್ಪತ್ರೆಯೆಂದು ಹೆಸರುವಾಸಿಯಾಗಿದೆ.

ವಿಶೇಷತೆ

[ಬದಲಾಯಿಸಿ]

ಕೋಶಿಸ್ ಆಸ್ಪತ್ರೆಯು ಒಂದು ಚಿಕ್ಕ ಶಸ್ತ್ರ ಚಿಕಿತ್ಸೆಯ ಕೊಠಡಿ ಹಾಗೂ ಎರಡು ದೊಡ್ಡ ಶಸ್ತ್ರ ಚಿಕಿತ್ಸೆ ಕೊಠಡಿಯನ್ನು ಒಳಗೊಂಡಿದೆ. ಶಸ್ತ್ರ ಚಿಕಿತ್ಸೆ ಕೊಠಡಿಗಳು ಸ್ಟೇಟ್ ಆಫ್ ದಿ ಆರ್ಟ ಉಪಕರಂಣಗಳಿದ್ದು ಹಾಗೂ ಸೇವೆಗಳಿಂದ ಕೂಡಿದೆ. ಇವರು ಲ್ಯಾಪರೋಸ್ಕೋಪಿಕ ಶಸ್ತ್ರ ಚಿಕಿತ್ಸೆಯನ್ನು ಹಾಗೂ ಆನೇಕ ಮುಖ್ಯ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಾರೆ. ಈ ಆಸ್ಪತ್ರೆಯಲ್ಲಿರುವ ತೀವ್ರ ನಿಗಾ ಘಟಕದಲ್ಲಿರುವ ವೈಧ್ಯರುಗಳು ಬಹು ಅನುಭವುಳ್ಳವರಾಗಿದ್ದು ಯಾವುದೇ ತೀವ್ರ ಕಾಯಿಲೇ ಅಥವ ಅಪಘಾತಕ್ಕಿಡಾದ ರೋಗಿಗಳಿಗೆ ಸುಶ್ರಿಷೆ ನೀಡಲು ಬಹು ಪರಿಣಿತರಾಗಿದ್ದಾರೆ ಹಾಗೂ ಇಲ್ಲಿನ ತೀವ್ರ ನಿಗಾ ಘಟಕ ಆನೇಕ ಅತ್ಯುತಮ ಸಲಿಕಣಗಳನ್ನು ಹೊಂದಿ ೨೪*೭ ಕಾಲ ಸೇವೆಯನ್ನು ನೀಡುತ್ತಿದೆ.

ವಿಭಾಗ

[ಬದಲಾಯಿಸಿ]

ಸಾಮಾನ್ಯ ವಿಶೇಷತೆ

[ಬದಲಾಯಿಸಿ]
  • ಸಾಮಾನ್ಯ ಔಷಧ.
  • ಸಾಮಾನ್ಯ ಮತ್ತು ಲ್ಯಾಪರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ.
  • ಪ್ರಸೂತಿಯ ಮತ್ತು ಗೈನಕಾಲಜಿ.
  • ಮಕ್ಕಳ ತಜ್ಞನ.
  • ಆರ್ಥೋಪೆಡಿಕ್ ಮತ್ತು ದೈಹಿಕ ಗಾಯ ಕಾಳಜಿ.
  • ಇಎನ್ಟಿ ಮತ್ತು ನೆಕ್.
  • ನೇತ್ರಶಾಸ್ತ್ರ.
  • ಚರ್ಮ ಮತ್ತು ಎಸ್ಟಿಡಿ.
  • ವಿಕಿರಣಶಾಸ್ತ್ರ ಮತ್ತು Sonology.
  • Anaesthesiology ಹಾಗೂ ತೀವ್ರ ನಿಗಾ.
  • ಮಕ್ಕಳ ತಜ್ಞನ Anaesthesiology.

ಸೂಪರ್ ವಿಶೇಷತೆ

[ಬದಲಾಯಿಸಿ]
  • Neonatology.
  • ಮಕ್ಕಳ ತಜ್ಞನ ಶಸ್ತ್ರ ಚಿಕಿತ್ಸೆ.
  • ಅಲ್ಲದ-ಆಕ್ರಮಣಶೀಲ ಕಾರ್ಡಿಯಾಲಜಿ.
  • ವೈದ್ಯಕೀಯ ತೀವ್ರ ನಿಗಾ ವಿಭಾಗ(MICU)/ಮಕ್ಕಳ ತಜ್ಞನ ತೀವ್ರ ನಿಗಾ ವಿಭಾಗ(PICU).
  • ನರ ಶಸ್ತ್ರ ಚಿಕಿತ್ಸೆ.
  • ನರಶಾಸ್ತ್ರ.
  • ಶಸ್ತ್ರಚಿಕಿತ್ಸಾ ಹಾಗೂ ವೈದ್ಯಕೀಯ ಆಂಕೊಲಜಿ.
  • ಗ್ಯಾಸ್ಟ್ರೊಎಂಟೊರಾಲಾಜಿ.
  • ಜಠರ-ಕರುಳಿನ ಶಸ್ತ್ರ ಚಿಕಿತ್ಸೆ.
  • ಮೂತ್ರಶಾಸ್ತ್ರ ಮತ್ತು andrology.
  • ಬಂಜೆತನ.
  • ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ.
  • ಒರಲ್ ಮತ್ತು Faciomaxillary ಶಸ್ತ್ರಚಿಕಿತ್ಸೆ.
  • ವಿಗಲನ.
  • ಮೂತ್ರಪಿಂಡಗಳ ಕಸಿ.

ತುರ್ತು ಸೇವೆಗಳು

[ಬದಲಾಯಿಸಿ]
  • ಹೃದಯ ಕಾಳಜಿ.
  • ಅಪಘಾತ ಮತ್ತು ದೈಹಿಕ ಗಾಯ ಕಾಳಜಿ, ಕೈಗಾರಿಕಾ ಮತ್ತು ರಸ್ತೆ ಸಂಚಾರ ಅಪಘಾತಗಳು.
  • ಸಾಮಾನ್ಯ ಶಸ್ತ್ರ ಚಿಕಿತ್ಸೆ.
  • ಪ್ರಸೂತಿಯ ಮತ್ತು ಗೈನಕಾಲಜಿ.
  • ನಿಯೊನಟಲ್ ತೀವ್ರ ನಿಗಾ ವಿಭಾಗ(NICU).
  • ವೈದ್ಯಕೀಯ ತೀವ್ರ ನಿಗಾ ವಿಭಾಗ
  • ವೈದ್ಯಕೀಯ ಕಾನೂನು ಪ್ರಕರಣಗಳ ಸಹ ಸ್ವೀಕರಿಸಲಾಗುತ್ತದೆ.