ವಿಷಯಕ್ಕೆ ಹೋಗು

ಕೋಕರ್‌ನಾಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೋಕರ್‌ನಾಗ್ ಉದ್ಯಾನವನ

ಕೊಕರ್‌ನಾಗ್ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಅನಂತ್‍ನಾ‍ಗ್ ಜಿಲ್ಲೆಯ ಬ್ರೆಂಗ್ ಕಣಿವೆಯಲ್ಲಿನ ಒಂದು ಉಪಜಿಲ್ಲಾ ಪಟ್ಟಣ ಹಾಗೂ ಅಧಿಸೂಚಿತ ಪ್ರದೇಶ ಸಮಿತಿಯಾಗಿದೆ. ಈ ಸ್ಥಳವು ತನ್ನ ಉದ್ಯಾನವನಗಳು, ಅಕಲುಷಿತ ಸಿಹಿನೀರಿನ ಬುಗ್ಗೆಗಳು ಮತ್ತು ರೇನ್‍ಬೋ ಟ್ರೌಟ್ ಸಾಕಣೆ ಕೇಂದ್ರಗಳಿಗೆ ಹೆಸರುವಾಸಿಯಾಗಿದೆ. ಇದು ರಾಜ್ಯ ರಾಜಧಾನಿ ಶ್ರೀನಗರದಿಂದ ವಾರಾಂತ್ಯದ ಅತ್ಯಂತ ಜನಪ್ರಿಯ ರಜಾ ಸ್ಥಳಗಳಲ್ಲಿ ಒಂದಾಗಿದೆ.[]

ಕೋಕರ್ ಮತ್ತು ನಾಗ್ ಎಂಬ ಎರಡು ಪದಗಳಿಂದ ಈ ಹೆಸರು ಬಂದಿದೆ ಎಂಬುದು ಒಂದು ಸಿದ್ಧಾಂತ. ಕೋಕರ್ ಎಂದರೆ ಕಾಶ್ಮೀರಿಯಲ್ಲಿ ಕೋಳಿ ಮತ್ತು ನಾಗ್ ಎಂದರೆ ಸಂಸ್ಕೃತದಲ್ಲಿ ಬುಗ್ಗೆ. ದಟ್ಟವಾದ ಕಾಡಿನ ಗುಡ್ಡದ ಬುಡದಿಂದ ಬುಗ್ಗೆಗಳು ಚಿಮ್ಮುತ್ತವೆ ಮತ್ತು ಅಲ್ಲಿಂದ ಅದು ಕಾಲುವೆಗಳಾಗಿ ವಿಭಜಿಸುತ್ತದೆ. ಇದು ಕೋಳಿಯ ಪಂಜ-ಪಾದವನ್ನು ಹೋಲುತ್ತದೆ, ಆದ್ದರಿಂದ ಈ ಹೆಸರು.[] ಎರಡನೆಯ ಸಿದ್ಧಾಂತವೆಂದರೆ ಕೋಕರ್ ಎಂದರೆ 'ಕೋಳಿ' ಮತ್ತು ನಾಗ್ ಎಂದರೆ 'ಸರ್ಪ'. ಇನ್ನೊಂದು ಸಿದ್ಧಾಂತವೆಂದರೆ ಕೋಕರ್‌ನಾಗ್ ಪದವು ಕೊಹ್ (ಪರ್ವತ) ಕಾನ್ (ನಿಂದ ಅಥವಾ ಕೆಳಗೆ) ನಾಗ್ (ಬುಗ್ಗೆ) ದಿಂದ ಹುಟ್ಟಿಕೊಂಡಿದೆ.[]

ಕೋಕರ್‌ನಾಗ್‍ನ್ನು ಐನ್ ಅಕ್ಬರಿಯಲ್ಲಿಯೂ ಉಲ್ಲೇಖಿಸಲಾಗಿದೆ. ಅದರಲ್ಲಿ ಕೋಕರ್‌ನಾಗ್‍ನ ನೀರು ಹಸಿವು ಮತ್ತು ಬಾಯಾರಿಕೆ ಎರಡನ್ನೂ ತೃಪ್ತಿಗೊಳಿಸುತ್ತದೆ ಮತ್ತು ಇದು ಅಜೀರ್ಣಕ್ಕೆ ಒಂದು ಪರಿಹಾರವೂ ಆಗಿದೆ ಎಂದು ಹೇಳಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Kokernag". Department of Tourism, Government of J&K. Retrieved 18 April 2018.
  2. ೨.೦ ೨.೧ Tourism, Jammu and Kashmir. "Kokernag". J & K Tourism. Archived from the original on 19 February 2014. Retrieved 5 February 2014. ಉಲ್ಲೇಖ ದೋಷ: Invalid <ref> tag; name "jktourism" defined multiple times with different content
  3. Khan, Ruhail (2017-07-06). Who Killed Kasheer? (in ಇಂಗ್ಲಿಷ್). Notion Press. ISBN 9781947283107.


ಹೊರಗಿನ ಕೊಂಡಿಗಳು

[ಬದಲಾಯಿಸಿ]