ವಿಷಯಕ್ಕೆ ಹೋಗು

ಕೊಳಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಳಾಯಿ (ನಲ್ಲಿ, ನಳ) ದ್ರವ ಅಥವಾ ಅನಿಲದ ಬಿಡುಗಡೆಯನ್ನು ನಿಯಂತಿಸುವ ಕವಾಟ. ಸ್ನಾನ, ಸಿಂಕ್‍ಗಳು ಮತ್ತು ಬೇಸಿನ್‍ಗಳಿಗಾಗಿ ನೀರನ್ನು ಪ್ರತ್ಯೇಕ ಬಿಸಿ ಮತ್ತು ತಂಪು ನಲ್ಲಿಗಳಿಂದ ಒದಗಿಸಬಹುದು; ಈ ಏರ್ಪಾಟು ಹೆಚ್ಚು ಹಳೆಯದಾದ ಅನುಸ್ಥಾಪನೆಗಳಲ್ಲಿ ಸಾಮಾನ್ಯವಾಗಿದೆ, ವಿಶೇಷವಾಗಿ ಸಾರ್ವಜನಿಕ ಮಾರ್ಜನ ಕೋಣೆ/ಶೌಚಾಲಯಗಳು ಮತ್ತು ಗೃಹೋಪಯೋಗಿ ಕೋಣೆ/ದೋಬಿಖಾನೆಗಳಲ್ಲಿ. ಅಡಿಗೆಮನೆಗಳು ಮತ್ತು ಬಚ್ಚಲುಮನೆಗಳಲ್ಲಿ, ಮಿಶ್ರಣ ನಲ್ಲಿಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಸನ್ನಿವೇಶದಲ್ಲಿ, ಹೊರಗಂಡಿಯನ್ನು ಮುಟ್ಟುವ ಮೊದಲು ಎರಡು ಕವಾಟಗಳಿಂದ ಬಿಸಿ ಮತ್ತು ತಂಪು ನೀರನ್ನು ಮಿಶ್ರಣ ಮಾಡಲಾಗುತ್ತದೆ. ಇದರಿಂದ ಬಿಸಿ ಮತ್ತು ತಂಪು ನೀರಿನ ಪೂರೈಕೆಗಳ ನಡುವಿನ ಯಾವುದೇ ಉಷ್ಣಾಂಶದಲ್ಲಿ ನೀರು ಹೊರಬರಲು ಅವಕಾಶವಾಗುತ್ತದೆ. ಮಿಶ್ರಣ ನಲ್ಲಿಗಳನ್ನು ನ್ಯೂ ಬ್ರನ್ಸ್‌ವಿಕ್‍ನ ಥಾಮಸ್ ಕ್ಯಾಂಪ್‍ಬೆಲ್ ಆವಿಷ್ಕರಿಸಿ ೧೮೮೦ರಲ್ಲಿ ಸ್ವಾಮ್ಯದ ಸನ್ನದು ಪಡೆದುಕೊಂಡರು.[೧]

ಉಲ್ಲೇಖಗಳು[ಬದಲಾಯಿಸಿ]

  1. Mario Theriault, Great Maritime Inventions 1833–1950, Goose Lane, 2001, p. 33.
"https://kn.wikipedia.org/w/index.php?title=ಕೊಳಾಯಿ&oldid=892083" ಇಂದ ಪಡೆಯಲ್ಪಟ್ಟಿದೆ