ಕೊಳವಿ ಗೊರವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಳವಿ ಗೊರವ
ಆಷವ, ಆಂಟೇರಿಯೊ , ಕೆನಡಾ
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
C. melodus
Binomial name
Charadrius melodus
(Ord, 1824)
Subspecies
  • C. m. circumcinctus
  • C. m. melodus

ಕೊಳವಿ ಗೊರವ ( ಆಂಗ್ಲ ಹೆಸರು: Piping Plover, ವೈಜ್ಞಾನಿಕ ಹೆಸರು: Charadrius melodus), ಮೈನ ಘಾತ್ರದ ಒಂದು ಚಿಕ್ಕ ಹಕ್ಕಿ. ಇದು ಉತ್ತರ ಅಮೇರಿಕ ಖಂಡದ ಸಮುದ್ರ ಹಾಗು ಪಂಚ ಮಹಾ ಸರೋವರಗಳ ತೀರ ಪ್ರದೇಶದಲ್ಲಿನ ಮರಳು ಹಾಗು ಸಣ್ಣ ಕಲ್ಲುಗಳ ನಡುವೆ ಗೂಡು ಮಾಡಿ, ತೀರದಲ್ಲೇ ನಡೆದಾಡುತ್ತ ಕೀಟಗಳು ಮತ್ತು ಚಿಕ್ಕ ಅಕಶೇರುಕಗಳನ್ನು ಸೇವಿಸಿ ಜೀವಿಸುತ್ತದೆ. ಕತ್ತಿನ ಸುತ್ತ ಹಾರದಂತಹ ಕಪ್ಪು ಬಣ್ಣದ ಪಟ್ಟೆ, ಹಣೆಯಮೇಲಿಂದ, ಕಣ್ಣಿನಿಂದ ಕಣ್ಣಿಗೆ ಹರಡಿರುವ ನೀಳವಾದ ಕಪ್ಪು ಕಿರು ಪಟ್ಟೆ, ಹಳದಿ-ಕೇಸರ ಬಣ್ಣದ ನೀಳವಾದ ಕಾಲುಗಳುಳ್ಳ ಈ ಹಕ್ಕಿಯ ಗಂಡುಗಳಲ್ಲಿ ಮಾತ್ರ, ಸಂತಾನ ಪ್ರಕ್ರಿಯಾ ಸಮಯದಲ್ಲಿ ಕೊರಳ ಕಪ್ಪು ಪಟ್ಟೆ ಎದೆಯ ವರೆಗೂ ಹರಡುತ್ತದೆ - ಇದೊಂದೇ ಗಂಡು ಮತ್ತು ಹೆಣ್ಣು ಹಕ್ಕಿಗಳ ಮೇಲ್ಮೈನಲ್ಲಿನ ವ್ಯತ್ಯಾಸ.

ತೀರದಲ್ಲಿ ಅಚಲವಾಗಿ ನಿಂತಾಗ ಈ ಪಕ್ಷಿಗಳು ತೀರದ ಮಣ್ಣು ಮತ್ತು ಕಲ್ಲಿನ ಬಣ್ಣಗಳಲ್ಲೊಂದಾಗಿ ಮಾಯವಾಗುತ್ತವೆ. ಇವುಗಳ ಬಣ್ಣ ತೀರದ ಪರಿಸರಕ್ಕೆ ಎಷ್ಟರಮಟ್ಟಿಗೆ ಹೋಲುತ್ತದೆ ಎಂದರೆ ತೀರದಲ್ಲಿ ಇವುಗಳ ಸ್ಥಾನ ನೋಟಕ್ಕೆ ಸಿಲುಕುವ ಮುನ್ನ ಕರೆಯ ಅಲನೆ ಇಂದ ಗುರುತಿಸಬೇಕಾಗುತ್ತದೆ.

ತುಸು ದೂರ ಓಡಿ, ತುಸುಕಾಲ ನಿಲ್ಲುವ ತೆರದಿ ಈ ಹಕ್ಕಿ ತೀರದಲ್ಲಿನ ಮರಳು/ಕಲ್ಲಿನಲ್ಲಿ ಆಹಾರವನ್ನು ಹುಡುಕುತ್ತಾ ಸಂಚರಿಸುತ್ತದೆ.

ಇವುಗಳು ಹಾರುವುದಕ್ಕಿಂತಲೂ ನಡೆಯುವ ಅಥವ ಓಡುವ ಪ್ರವೃತಿ ಹೊಂದಿವೆ.

ಇವುಗಳ ಒಟ್ಟು ಸಂತತಿ ಕೇವಲ ೬೫೦೦ ರಷ್ಟು. ೨೦೦೩ ರಲ್ಲಿ ನಡೆಸಿದ ಗಣನೆಯ ಪ್ರಕಾರ ಅಮೇರಿಕಾ ಖಂಡದ ಆಟ್ಲಾಂಟಿಕ್ ತೀರದಲ್ಲಿ ೩೩೫೦ ಅಂದರೆ ಒಟ್ಟು ಸಂತತಿಯಲ್ಲಿನ ೫೨% ರಷ್ಟು ಇವೆ .[೧].

ಕಡಲ ಹಾಗು ಮಹಾ ಸರೋವರಗ ಮರಳಿನ ಹಾಗು ನುಣುಪು ಕಿರುಗಲ್ಲಿನ ತೀರಗಳು ಇವುಗಳ ಪ್ರಧಾನ ಸಂತಾನ ಅಭಿವೃದ್ಧಿ ಕ್ಷೇತ್ರಗಳು. ನೀರಿನ ಅಂಚಿನಲ್ಲಿನ ಕೀಟಗಳು ಮತ್ತು ಕಡಲ ಅಕಶೇರುಕಗಳೇ ಇದರ ಪ್ರಮುಖ ಆಹಾರ.

ವಿವರ[ಬದಲಾಯಿಸಿ]

ಅಮೇರಿಕದ ಆಟ್ಲಾಂಟಿಕ್ ತೀರ, ಕೇಪ್ ಮೇ, ನ್ಯೂಜರ್ಸಿ

ಕೊಳವಿ ಗೊರವದ ಘಾತ್ರ ಮೈನ ಹಕ್ಕಿಯಷ್ಟೇ ಇದ್ದರೂ ಅದರ ದೇಹ, ಕುತ್ತಿಗೆ ಮತ್ತು ಕೊಕ್ಕುಗಳು ದಪ್ಪವಾಗಿರುತ್ತದೆ. ತೀರದ ಮರಳು ( ಮಂದ ತಿಳಿ- ಕಂದು)ಬಣ್ಣದ ದೇಹ, ನೀಳ ಕಾಲುಗಳು, ಕಪ್ಪು ತುದಿಯ ಹಳದಿ ಕೊಕ್ಕು, ಕಣ್ಣಿನಿಂದ ಕಣ್ಣಿಗೆ ನೆತ್ತಿಯ ಮೇಲೆ ಹಾದು ಹೋಗುವ ಕಪ್ಪು ಪಟ್ಟೆ. ಸಂತಾನ ಅಭಿವೃದ್ಧಿ ಕಾಲದಲ್ಲಿ ವಿಸ್ತರಿಸುವ ಕೊರಳಲ್ಲಿ ಕಪ್ಪು ಹಾರ, ಅನ್ಯ ಕಾಲಗಳಲ್ಲಿ ಪ್ರಮುಖವಾಗಿ ತೋರುವುದಿಲ್ಲ.[೨] Its bill is orange with a black tip. It ranges from 15–19 cm (5.9–7.5 in) in length, with a wingspan of 35–41 cm (14–16 in) and a mass of 42–64 g (1.5–2.3 oz).[೩]

ಕೊಳವಿ ಗೊರವಗಳಲ್ಲಿ ಎರಡು ಉಪ-ಪ್ರಜಾತಿಗಳಿವೆ. ಖಂಡದ ಪೂರ್ವ ಸಂತತಿಗಳನ್ನು ‘ಚಾರ್ಡ್ರಿಯಸ್ ಮೆಲೋಡಸ್ ಮೆಲೋಡಸ್’ (Charadrius melodus melodus) ಮತ್ತು ಖಂಡದ ಮಧ್ಯ (mid-west) ಭಾಗದ ಸಂತತಿಯನ್ನು ‘ಚಾರ್ಡ್ರಿಯಸ್ ಮೆಲೋಡಸ್ ಸರ್ಕಂಸಿನಿಸ್ಟಸ್` (Charadrius melodus circumcinctus). ಸರ್ಕಂಸಿನಿಸ್ಟಸ್ ಉಪ-ಪ್ರಜಾತಿಯ ಕೊಳವಿ ಗೊರವಗಳ ಬಣ್ಣ ಮೆಲೋಡಸ್ ಗಳಿಗಿಂತಲು ತುಸು ಘಾಡ. ಸರ್ಕಂಸಿನಿಸ್ಟಸ್ ಉಪ-ಪ್ರಜಾತಿಯ ಗಂಡಿನ ನೆತ್ತಿ ಹಾಗು ಕೊರಳಿನ ಕಪ್ಪು ಪಟ್ಟೆಗಳು ಮತ್ತು ಕೊಕ್ಕಿನ ಬುಡದ ಕಪ್ಪು ಬಣ್ಣದ ವೃದ್ಧಿ ಸಂತಾನಾಭಿವೃದ್ಧಿ ಕಾಲದಲ್ಲಿ ಪ್ರಧಾನವಾಗಿ ತೋರುತ್ತದೆ.

ಉಪ-ಪ್ರಜಾತಿಗಳ ಹೆಸರಿನಲ್ಲಿ ಮೆಲೋಡಿಯಸ್ ಎಂಬಕ್ಕೆ ಮೂಲ ಇವುಗಳ ಕಿರು ಘಂಟಾ ನಾದದ ಕೂಗು.

“ಪೀ ಪೀ” ಎಂಬ ಓಟ ಕಿತ್ತುಲು ತಗ್ಗು ಧ್ವನಿಯ ಕರೆ ಇವುಗಳು ಹಾರುವಾಗ ಮತ್ತು ನಿಂತು ಗಮನಿಸುವಾಗ ಕೊಡುವು ಕರೆಯಾದರೆ. “ಪೀ ವೆರ್ಪ್” ಎಂಬುದನ್ನು ಎಚ್ಚರಿಕೆಯ ಕರೆಯಾಗಿ ಬಳಸುತ್ತವೆ.

ಮರಳು ಇಲ್ಲವೇ ನುಣುಪು ಜಲ್ಲಿ ತೀರದಲ್ಲಲ್ಲದೆ ಮಿಕ್ಕಲ್ಲಿಯೂ ತೋರದಿರುವ ಕೊಳವಿ ಗೊರವಗಳು ತಮ್ಮ ಗೂಡುಗಳನ್ನು ತೀರದ ಎತ್ತರ ಪ್ರದೇಶಗಳಲ್ಲಿನ ಹುಲ್ಲಿನ ಗುಚ್ಛ ಗಳಲ್ಲಿ, ಇಲ್ಲವೇ ನುಣುಪಾದ ಜಲ್ಲಿ ಕಲ್ಲುಗಳಲ್ಲಿ ಕಲ್ಲುಗಳನ್ನು ಸರಿರಿ, ತಗ್ಗುಗೊಳಿಸಿ ಗೂಡು ಮಾಡುತ್ತವೆ.

ವಲಸೆ ಮತ್ತು ಸಂತಾನ ಅಭಿವೃದ್ಧಿ[ಬದಲಾಯಿಸಿ]

೨ ದಿನದ ಮರಿ ಕೊಳವಿ ಗೊರವ.

ಅಮೇರಿಕಾ ಖಂಡದ ದಕ್ಷಿಣ, ಅಂದರೆ ಮೆಕ್ಸಿಕೋ ಕೊಲ್ಲಿ (Gulf of Mexico), ದಕ್ಷಿಣ ಅಟ್ಲಾಂಟಿಕ್ ತೀರ, ಮತ್ತು ಕೆರೆಬಿಯನ್ ದ್ವೀಪಗಳ ( Caribbean) ಕೊಳವಿಗೊರವಗಳು, ಬೇಸಿಗೆಯಲ್ಲಿ (ನಡು ಮಾರ್ಚ್ ತಿಂಗಳಲ್ಲಿ) ಉತ್ತರಕ್ಕೂ ಮತ್ತು ಚಳಿಗಾಲದಲ್ಲಿ ದಕ್ಷಿಣಕ್ಕೂ ವಲಸೆ ಹೋಗುತ್ತವೆ. ಕೆನಡಾದ ದಕ್ಷಿಣ ನ್ಯೂ-ಫೌಂಡ್- ಲ್ಯಾಂಡ್ (Newfoundland) ನಿಂದ ಅಮೇರಿಕಾದ, ದಕ್ಷಿಣ ಕ್ಯಾರೊಲೈನ ರಾಜ್ಯದ (South Carolina) ಉತ್ತರ ತೀರಪ್ರದೇಶಗಳ ವರೆಗೂ ಕೊಳವಿಗೊರವಗಳ ಸಂತನ ಅಭಿವೃದ್ಧಿ ಕ್ಷೇತ್ರ ವಿಸ್ಥರಿಸಿದೆ.[೪] ನಡು ಎಪ್ರಿಲ ಸಮಯದಲ್ಲಿ ಮೈಥುನ್ಯ ಮತ್ತು ಗೂಡು ಕಟ್ಟುವ ಕ್ರಿಯೆಗೆಳಲ್ಲಿ ತೊಡಗುತ್ತವೆ.

ಗಂಡು ಕೊಳವಿ ಗೊರವಗಳು ಕ್ಷೇತ್ರಾಧಿಪತ್ಯವನ್ನು ಸಾಧಿಸ ತೊಡಗಿ ಹೆಣ್ಣು ಹಕ್ಕಿಯೊಂದಿಗೆ ಒಡಗೂಡಳು ಸರಸದಲ್ಲಿ ತೊಡಗುತ್ತದೆ. ಕೊಕ್ಕಿನಿಂದ ಕಲ್ಲನ್ನು ಮೇಲೆಸೆಯುವುದು, ಗಾಳಿಯಲ್ಲಿ ಏರಿ ಧುಮುಕುವುದು .[೨] - ಇಂತಹ ಆಟದ ನಂತರ ಹೆಣ್ಣು ಹಕ್ಕಿಯ ಒಪ್ಪಿಗೆಯನ್ನು ಗಳಿಸಿಕೊಂಡ ನಂತರ, ಗಂಡು ತನ್ನ ಕ್ಷೇತ್ರದಲ್ಲಿನ ಎತ್ತರ ಪ್ರದೇಶಗಳಲ್ಲಿನ ಹುಲ್ಲು ಕುರುಚಲುಗಳಲ್ಲಿ, ಹಲವು ಪತಿಯಂತಹ ಹಳ್ಳಗಳನ್ನು ಕಾಲಿನಿಂದ ಕೆತ್ತ ತೋಡುತ್ತವೆ. ಹೆಣ್ಣು ಹಕ್ಕಿ ಇವುಗಳಲ್ಲಿ ಒಂದನ್ನು ಆರಿಸಿ ತೀರದ ಪರಿಸರಕ್ಕೆ ಹೊಂದುವಂತೆ ಅಲ್ಲಿಯ ಕಲ್ಲು, ಚಿಪ್ಪುಗಳಿಂದ ಗೂದನ್ನು ಮರೆಮಾಚುವಂತೆ ( camouflage) ಸಿಂಗರಿಸುತ್ತವೇ. ಹೀಗೆ ಸಿಂಗರಿಸಿದ ನಂತರ ಗಂಡು ಹಾಗು ಹೆಣ್ಣು ಹಕ್ಕಿಗಳು ಮೈತುನ್ಯ ನಡೆಸುತ್ತವೆ. ಮೈತುನ್ಯಕ್ಕೂ ಮುನ್ನ ಗಂಡು ತನ್ನ ಪರಾಕ್ರಮ ಪ್ರದರ್ಶನ ನಡೆಸುವಂತೆ ನೀಳವಾಗಿ ನಿಂತು, ನಂತರ ಗಮ್ಮತ್ತಿನಿಂದ ಹೆಣ್ಣಿನೆಡೆಗೆ ನಡೆದು, ಎದೆಯುಬ್ಬಿಸಿ, ಕಾಲನ್ನು ಬಡೆದು ಹೆಣ್ಣನ್ನು ಒಡಗೂಡುತ್ತದೆ. ಹೆಣ್ಣು ಹಕ್ಕಿ ಒಂದೊಂದು ದಿನದ ಅಂತರದಲ್ಲಿ ಮೊಟ್ಟೆಗಳನ್ನು ಇಡುತ್ತದೆ.

ಸಂತಾನ ಅಭಿವೃದ್ಧಿ ಸಮಯದಲ್ಲಿ ಜೋಡಿ ಹಕ್ಕಿಗಳು ಎರಡು ಇಲ್ಲವೇ ಮೂರು, ಕೆಲವೊಮ್ಮೆ ನಾಲ್ಕು ಬಾರಿ ಸಂಸಾರ ಹೂಡಬಹುದು. ಪ್ರತೀ ವರ್ಷದ ಮೊದಲ ಪ್ರಯತ್ನದ ಗೂಡುಗಳಲ್ಲಿ ೪ ಮೊಟ್ಟೆಗಳನ್ನು ಇಡುವುದು ಸಾಮಾನ್ಯ. ನಂತರದ ಪ್ರಯತ್ನಗಳಲ್ಲಿ ೨ ಅಥವಾ ೩ ಮೊಟ್ಟೆಗಳನ್ನು ಇಡುತ್ತವೆ. ತಂದೆ ಹಾಗು ತಾಯಿ ಹಕ್ಕಿಗಳೆರಡೂ ಕಾವಿಡುವ ಕಾರ್ಯವನ್ನು ವಹಿಸುತ್ತವೆ, ೨೭ ದಿನಗಳ ನಂತರ ಕಾವಿಟ್ಟ ಮೊಟ್ಟೆಗಳು ಮರಿಯಾಗುತ್ತವೆ.

ಮೊಟ್ಟೆಯಿಂದ ಹೊರಬಿದ್ದ ಮರಿ ಕೆಲವೇ ಘಂಟೆಗಳಲ್ಲಿ ಆಹಾರವನ್ನು ಹುಡಿಕಿ ತಿನ್ನುವ ಸಾಮರ್ಥ್ಯ ಗಳಿಸುತ್ತವೆ. ಈಗ ಮರಿಗಳನ್ನು ಕಾಪಾದುವುದಷ್ಟೇ ಪೋಷಕರ ಕೆಲಸ. ಅಪಾಯ ಕಂಡೊಡನೆ ಕರೆ ಕೊಟ್ಟು ಮರಿಗಳನ್ನು ಕರೆದು ಅವುಗಳನ್ನು ಕಾಲನಡುವೆ ಬರಮಾಡಿಕೊಂಡು ಅವುಗಳ ಮೇಲೆ ಕೂರುವ ತೆರದಲ್ಲಿ ರಕ್ಷಣೆಯ ಕಾರ್ಯವನ್ನು ನಿಭಾಯಿಸುತ್ತವೆ. ಮೊಟ್ಟೆ ಮತ್ತು ಮರಿಗಳಿಂದ ಹಂತಕರ ಗಮನವನ್ನು ಬೇರೆಡೆ ಸೆಳೆಯಲು ತಾಯಿ ಮತ್ತು ತಂದೆ ಹಕ್ಕಿಗಳು ರೆಕ್ಕೆ ಮುರಿದಂತೆ ನಾಟಕವಾಡಿ ಹಂತಕರ ಮುಂದೆ ಓಡಾಡಿ ಹಂತಕರ ಗಮನವನ್ನು ತಮ್ಮೆಡೆಗೆ ಸೆಳೆಯುವುದೂ ಒಂದು ವಿಧಾನ.[೨] ಮರಿಗಳ ಮೈಬಣ್ಣ ತೀರದ ಪರಿಸರಕ್ಕೆ ಬಹಳವಾಗಿ ಹೋಲುವುದರಿಂದ ಆಪತ್ತಿನ ಸುಳಿವಾಗುತ್ತಿದಂತೆ ಸ್ಥಿರವಾಗಿ ನಿಂತು ಪರಿಸರಕ್ಕೆ ಬೆರೆಯುವುದರ ಮೂಲಕವೂ ಮರಿಗಳು ಆಪತ್ತಿನಿಂದ ಪಾರಾಗುತ್ತವೆ. ಮರಿಗಳು ೩೦ ದಿನಗಳಲ್ಲಿ ಹಾರಲು ಸಮರ್ಥವಾಗುತ್ತವೆ.

ಕೊಳವಿಗೊರವಗಳ ಸಂತತಿ ಆತಂಕದಲ್ಲಿರುವುದರಿಂದ ಪರಿಸರ ಸಂರಕ್ಷಕರು ಪರಭಕ್ಷಕರಿಂದ ಇವುಗಳ ಗೂದನ್ನು ರಕ್ಷಿಸಲು ಗೂಡಿನ ಸುತ್ತಲೂ ಬಲೆಯಂತಹ ಬೇಲಿಯನ್ನು ಇಡುತ್ತರೆ. ಇದರಿಂದ ಕೊಳವಿ ಗೊರವಗಳಿಗಿಂತ ದೊಡ್ಡ ಪ್ರಾಣಿ ಪಕ್ಷಿಗಳಾವುವೂ ಬೇಲಿ ತೂರಿ ಒಳಬರಲಾಗುವುದಿಲ್ಲ. ಕೊಳವಿಗೊರವಗಳ ಸಂತತಿಗೆ ಮಾನವನಲ್ಲದೆ, ಬೆಕ್ಕು, ರಾಕೂನ್, ನರಿ ಮತ್ತು ಕಾಗೆಗಳೇ ಮೊದಲಾದ ಪರಭಕ್ಷಕರಿಂದ ಆಪತ್ತು. ಚಂಡ ಮಾರುತಗಳು, ಬಿರುಗಾಳಿ, ಏರುವ ಅಲೆಗಳು ಮೊದಲಾದವೇ ಕೊಳವಿಗೊರವಗಳ ಸಂತಿತಿಗೆ ಪರಿಸರ ಒಡ್ಡಬಹುದಾದ ಆಪತ್ತು. ಮಾನವನು ಒಡ್ಡುವ ಉದ್ದೇಶ/ಅನುದ್ದೇಶ ತೊಂದರೆಗಳಿಂದ ಕೊಳವಿ ಗೊರವಗಳು ತಮ್ಮ ಗೂಡು ಮತ್ತು ಮರಿಗಳನ್ನು ತೊರೆಯುವುದುಂಟು ಹಾಗಾಗಿ ಇವುಗಳ ಗೂಡು ಮತ್ತು ಮರಿಗಳಿಂದ ಮಾನವರು ದೂರವಿರುವುದೇ ಒಳಿತು.

ಜಾಡುಂಗರವನ್ನು ಕಾಲಿಗೆ ತೊಟ್ಟಿರುವ ಕೊಳವಿಗೊರವದ ೨ ವಾರದ ಮರಿ.

ಚಳಿಗಾಲಕ್ಕೆ ಮುನ್ನ, ಆಗಷ್ಟ್ ನಿಂದ ನಡು-ಸೆಪ್ಟೆಂಬರ ವರೆಗೆ ಇವು ದಕ್ಷಿಣಕ್ಕೆ ವಲಸೆ ಪ್ರಾರಂಭಿಸುತ್ತವೆ.

ನಡತೆ[ಬದಲಾಯಿಸಿ]

ಪೋಷಕ ಮತ್ತು ಮರಿ ಹಕ್ಕಿಗಳು - ಅಮೇರಿಕದ ಆಟ್ಲಾಂಟಿಕ್ ತೀರ, ಕೇಪ್ ಮೇ, ನ್ಯೂಜರ್ಸಿ

ಕೊಳವಿ ಗೊರವಗಳು ತೀರ ಪ್ರದೇಶದ ಪರಿಸರಕ್ಕೆ ಹೋಲುವ ಬಣ್ಣ ಹೊಂದಿರುವುದರಿಂದ ಒಮ್ಮೆಲೇ ನೋಟಕ್ಕೆ ತೋರುವುದಿಲ್ಲ. ಮರಳು ಮತ್ತು ನುಣುಪು ಜಲ್ಲಿ ಕಲ್ಲಿನ ತೀರಗಳಲ್ಲದೆ ಬೇರೆಡೆ ಇವುಗಳನ್ನು ಕಾಣುವುದು ವಿರಳ.

ಆಹಾರ ಗುರುತಿಸಲು ನೋಟವನ್ನವಲಂಭಿಸಿರುವ ಇವು ಆಹಾರ ಹುಡುಕುವಾಗ ಓಡು-ನಿಲ್ಲು-ಅರಸು-ಮೆಲ್ಲು ಎಂಬ ಸೂತ್ರವನ್ನು ಬಳಸುತ್ತವಂತೆ ತೋರುತ್ತದೆ. ಇವು ದೊಡ್ಡ ಗುಂಪುಗಳಲ್ಲಿ ಕಾಣಿಸಿಕೊಳ್ಳುವುದು ವಿರಳ ಆದರೂ ಚಳಿಗಾಲದ ವಲಸಯ ಸಮಯದಲ್ಲಿ ವಿಶ್ರಾಂತಿಗೆ ಕೆಲವೊಮ್ಮೆ ಸುಮಾರು ೧೦೦ ಪಕ್ಷಿಗಳು ಒಂದೆಡೆ ಸೇರುತ್ತವೆ. ೨-೪ ಪಕ್ಷಿಗಳ ಗುಂಪು ಸಹಜವು. ತೀರಗಳಲ್ಲಿ ಇವುಗಳನ್ನು ಸಮೀಪಿಸಿದಾಗ ಹಾರುವುದಕ್ಕಿಂತಲೂ ಓದುವುದರ ಮೂಲಕ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತವೆ.[೫] ಇವು ಸಂತಾನ ಪಾಲನಾ ಕ್ರಿಯೇಯನ್ನು ನಿಭಾಯಿಸುವಾಗ ಉಗ್ರ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಸಂತತಿ - ಸ್ಥಿತಿ[ಬದಲಾಯಿಸಿ]

ವಿಶ್ವಾದ್ಯಂತ ಕೊಳವಿ ಗೊರವದ ಸಂತತಿ ಅಪತ್ತಿನ ಅಂಚಿನಲ್ಲಿದೆ ಎಂದು ಪರಿಗಣಿಸಲಾಗಿದೆ. ತನ್ನ ಸಹಜ ವ್ಯಾಪ್ತಿಯಿಂದಲೂ ಕಣ್ಮರೆಯಾಗುತ್ತಿರುವ ಕೊಳವಿ ಗೊರವಗಳನ್ನು ಅಮೇರಿಕಾದಲ್ಲಿ ಅಳಿವಿನಂಚಿನಲ್ಲಿದೆ ಎಂದು ಪರಿಗಣಿಸಲಾಗಿದೆ.[೬] ಕೆನಡಾ ದೇಶದ ಆಂಟಾರಿಯೊ ಮಹಾ ಸರೋವರದ ತೀರಗಳಲ್ಲಿ ಒಮ್ಮೆ ಅಪಾರವಾಗಿದ್ದ ಇದರ ಸಂತತಿ ಈಗ ಪೂರ್ತಿಯಾಗಿ ಕಣ್ಮರೆಯಾಗಿರುವ[೭]

ಇವುಗಳನ್ನು ಈಗ ಪೂರ್ವ ಕೆನಡಾದ ಸಾಗರದ ತೀರದಲ್ಲಷ್ಟೇ ಕಣಬಹುದಾಗಿದ್ದು ಇವುಗಳನ್ನು ಈ ದೇಶದಲ್ಲೂ ಆಳಿವಿನಂಚಿನಲ್ಲಿದೆ ಎಂದು ಪರಿಗಣಿಸಲಾಗಿದೆ .[೮]

ಐತಿಹಾಸಿಕ ಮತ್ತು ಈಗಿನ ಸಂರಕ್ಷಣ ಪ್ರಯತ್ನಗಳು[ಬದಲಾಯಿಸಿ]

ಅಮೇರಿಕಾದ ಡೆಲವೇರ್ ತೀರದಲ್ಲಿನ ಕೊಳವಿಗೊರವಗಳ ಸಂತಾನ ವ್ಯಾಪ್ತಿ ಕ್ಷೇತ್ರದ ಸಂರಕ್ಷಣೆ
ಚಿತ್ರ:Piping plover.JPG
ಕೆನಡಾದ ಪ್ರೆನ್ಸ್-ಎಡ್ವರ್ಡ್-ದ್ವೀಪದ ತೀರದಲ್ಲಿನ ಕೊಳವಿಗೊರವಗಳ ಸಂತಾನ ವ್ಯಾಪ್ತಿ ಕ್ಷೇತ್ರದ ಸಂರಕ್ಷಣಾ ಸೂಚಕ ಪಾಲಕ

೧೯ ಮತ್ತು ೨೦ ನೇ ಶತಮಾನದ ಪ್ರಾಂಭದ ವರೆಗೆ ಕೊಳವಿಗೊರವಗಳ ಪುಕ್ಕಗಳನ್ನು ಸಮಾಜದ ಉನ್ನತ ಸ್ಥಾನದ ಮಹಿಳೆಯರು ತಮ್ಮ ಟೋಪಿಗಳನ್ನು ಸಿಂಗರಿಸಿಕೊಳ್ಳಲು ಬಳಸುತ್ತಿದ್ದುದ್ದರಿಂದ ಇವುಗಳ ಸಂತತಿಗೆ ಮೊದಲ ಹೊಡೆತ ಬಿತ್ತು. 1918 ರಲ್ಲಿ ಜಾರಿಗೆ ಬಂದ ‘ವಲಸೆ ಹಕ್ಕಿಗಳ ಒಪ್ಪಂದ’ ದಿಂದ ಕೊಳವಿ ಗೊರವಿಗಳ ಸಂತತಿ ೧೯೩೦ ರ ವರೆಗೂ ಚೇತರಿಸಿಕೊಂಡಿತು.[೯] ನಂತರದಲ್ಲಿ ಪ್ರಗತಿಯ ಹೆಸರಿನಲ್ಲಿ ಅದ ಸರೋವರ-ತೀರದ ಅಭಿವೃದ್ಧಿಯಿಂದಾಗಿ ಇವುಗಳ ಅವಾಸಗಳು ಮಾಯವಾಗಿ ಮತ್ತು ತೀರಪ್ರದೇಶಗಳ ಮೇಲೆ ಮಾನವನ ದಾಳಿಯಿಂದಾಗಿ ಕೊಳವಿ ಗೊರವಗಳು ಪಂಚ ಮಹಾ ಸರೋವರಗ ತೀರಗಳಿಂದ ಮಾಯವಾಗ ತೊಡಗಿದವು.[೯][೧೦] ಈಗ ಪಂಚ ಮಹಾ ಸಾಗರಗಳ ತೀರದಲ್ಲಿ ಸುಮಾರು ೨೪ ಹಕ್ಕಿಗಳಷ್ಟೆ ಗೂಡು ಮಾಡುತ್ತವೆ .[೭]

ಕೊಳವಿ ಗೊರವಗಳ ಸಂತತಿಯನ್ನು ಅವನತಿಯ ದವಡೆಯಿಂದ ರಕ್ಷಿಸಲು ಇವುಗಳ ಸಂತಾನ ಅಭಿವೃದ್ಧಿ ಕಾಲದಲ್ಲಿ, ಪೂರ್ವ ಕೆನಡಾ ಹಾಗು ಅಮೇರಿಕಾದ ಕಡಲ ತೀರ ಪ್ರದೇಶಗಳಲ್ಲಿ ಕೆಲವು ಜಾಗಗಳಲ್ಲಿ ಮಾನವನ ಪ್ರವೇಶವನ್ನು ನಿಷೇಧಿಸಲಾಗಿದೆ.[೧೧]

ಮೂಲಗಳು[ಬದಲಾಯಿಸಿ]

  1. BirdLife International (2008) Species factsheet: Charadrius melodus. Downloaded from http://www.birdlife.org on 24/12/2008 [೧]
  2. ೨.೦ ೨.೧ ೨.೨ ""Piping Plover Fact Sheet, Lincoln Park Zoo"". Archived from the original on 2013-09-08. Retrieved 2013-10-24.
  3. CRC Handbook of Avian Body Masses by John B. Dunning Jr. (Editor). CRC Press (1992), ISBN 978-0849342585.
  4. "Fish and Wildlife Service Piping Plover". Archived from the original on 2010-03-10. Retrieved 2013-10-24.
  5. The Shorebird Guide, 2006, O'Brien, Michael, Richard Crossley, and Kenvin Karlson. Houghton Mifflin Company, New York
  6. "U.S. Fish and Wildlife Service". Archived from the original on 2009-04-29. Retrieved 2013-10-24.
  7. ೭.೦ ೭.೧ Ehrlich, Paul R.; Dobkin, David S.; Wheye, Darryl (1992). Birds in Jeopardy. Stanford, CA: Stanford University Press. p. 21. ISBN 0-8047-1967-5.
  8. "Species at Risk - Piping Plover melodus subspecies". Environment Canada. 2006-05-08. Archived from the original on 2005-08-03.
  9. ೯.೦ ೯.೧ New Jersey Division of Fish and Wildlife
  10. U.S. Fish & Wildlife Service Atlantic Coast Population Piping Plover Recovery Plan [೨] Archived 2009-05-08 ವೇಬ್ಯಾಕ್ ಮೆಷಿನ್ ನಲ್ಲಿ.
  11. Plymouth Beach Town Beach By-laws[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]