ಕೊಂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಣಜದ ಕೊಂಡಿ, ತುದಿಯಲ್ಲಿ ವಿಷದ ಹನಿಯನ್ನು ಕಾಣಬಹುದು

ಕೊಂಡಿಯು ವಿವಿಧ ಪ್ರಾಣಿಗಳಲ್ಲಿ (ಸಾಮಾನ್ಯವಾಗಿ ಸಂಧಿಪದಿಗಳು) ಕಂಡುಬರುವ ಒಂದು ಚೂಪಾದ ಅಂಗ. ಇದು ಸಾಮಾನ್ಯವಾಗಿ ಮತ್ತೊಂದು ಪ್ರಾಣಿಯ ಬಾಹ್ಯಚರ್ಮವನ್ನು ಭೇದಿಸಿ ವಿಷವನ್ನು ಒಳಚುಚ್ಚುವ ಸಾಮರ್ಥ್ಯ ಹೊಂದಿದೆ. ಕೀಟದ ಕಡಿತವು ವಿಷದ ಒಳಚುಚ್ಚುವಿಕೆಯಿಂದ ಜಟಿಲವಾಗಿರುತ್ತದೆ, ಆದರೆ ಎಲ್ಲ ಕೊಂಡಿಗಳು ವಿಷಪೂರಿತವಾಗಿರುವುದಿಲ್ಲ. ವಿಷದ ನಿರ್ದಿಷ್ಟ ಘಟಕಗಳು ಅಲರ್ಜಿಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಇವು ಪ್ರತಿಯಾಗಿ, ಚಿಕ್ಕ ತುರಿಕೆಯ ಗುರುತು, ಅಥವಾ ಸ್ವಲ್ಪ ಉಬ್ಬಿದ ಚರ್ಮದ ಪ್ರದೇಶ; ಬೊಕ್ಕೆಗಳು ಹಾಗೂ ಗಟ್ಟಿಪದರದ ಗಾಯಗಳಿಂದ ಆವೃತಗೊಂಡ ಊದಿಕೊಂಡ ಚರ್ಮದ ದೊಡ್ಡ ಪ್ರದೇಶಗಳವರೆಗೆ ಬದಲಾಗುವ ಚರ್ಮದ ಗಾಯಗಳನ್ನು ಸೃಷ್ಟಿಸುತ್ತವೆ. ದೊಡ್ಡ ಕಣಜಗಳು, ಕೆಲವು ಇರುವೆಗಳು, ಶತಪದಿಗಳು ಮತ್ತು ಚೇಳುಗಳು ಕೂಡ ಕುಟುಕುತ್ತವೆ. ಕುಟುಕುವ ಕೀಟಗಳು ಚರ್ಮದ ನೋವುಳ್ಳ ಊತವನ್ನು ಉಂಟುಮಾಡುತ್ತವೆ, ಗಾಯದ ತೀವ್ರತೆಯು ಕೊಂಡಿ ಇರುವ ಸ್ಥಳ, ಕೀಟದ ಗುರುತು ಮತ್ತು ವ್ಯಕ್ತಿಯ ಸೂಕ್ಷ್ಮತೆಯ ಪ್ರಕಾರ ಬದಲಾಗುತ್ತದೆ.

"https://kn.wikipedia.org/w/index.php?title=ಕೊಂಡಿ&oldid=891788" ಇಂದ ಪಡೆಯಲ್ಪಟ್ಟಿದೆ