ವಿಷಯಕ್ಕೆ ಹೋಗು

ಕೊಂಟಿ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಂಟಿ ಮೀನು
Osteochilus melanopleurus
Scientific classification
Synonyms

Osteocheilus (misspelling)

Osteochilus borneensis
Osteochilus enneaporos
Osteochilus kahajanensis
Osteochilus kappenii
Osteochilus schlegelii

ಕೊಂಟಿ ಮೀನುಒಂದು ಜಾತಿಯ ಸಿಹಿನೀರು ಮೀನು.

ವೈಜ್ಞಾನಿಕ ನಾಮ

[ಬದಲಾಯಿಸಿ]

ಸಿಪ್ರಿನಿಡೆ ಕುಟುಂಬಕ್ಕೆ ಸೇರಿದ ಆಸ್ಟಿಯೋಕೈಲಸ್ ಎಂಬ ಶಾಸ್ತ್ರೀಯ ಹೆಸರು[] | synonyms = Osteocheilus (misspelling). ಕೊಂಟಿ, ಕೀಲಿ ಕೊಂಟಿ, ಬಗರಿ ಕೊಂಟಿ ಮುಂತಾದ ಸ್ಥಳಿಯ ಹೆಸರುಗಳೂ ಇದಕ್ಕಿವೆ.

ಭೌಗೋಳಿಕ ಪ್ರದೇಶ

[ಬದಲಾಯಿಸಿ]

ಪಶ್ಚಿಮ ಏಷ್ಯಾ ಮತ್ತು ಭಾರತದ ಸಿಂಧ್ ಪ್ರದೇಶ, ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳು, ಹಾಗೂ ನೀಲಗಿರಿ ಬೆಟ್ಟಗಳ ಝರಿಗಳಲ್ಲಿ, ಇದರ ವ್ಯಾಪ್ತಿಯಿದೆ. ಕರ್ನಾಟಕದಲ್ಲಿ ಆಸ್ಟಿಯೋಕೈಲಸ್ ನ್ಯಾಶಿಯೈ, ಅ. ಥಾಮಸಿಯೈ, ಮತ್ತು ಆ. ಬ್ರವಿಡಾರ್ಸಾಲಿಸ್ ಎಂಬ ಮೂರು ಪ್ರಬೇಧಗಳಿವೆ.

ಲಕ್ಷಣಗಳು

[ಬದಲಾಯಿಸಿ]

ಇದು ಸುಮಾರು 12 ಸೆಂ,ಮೀ ಉದ್ದಕ್ಕೆ ಬೆಳೆಯುತ್ತವೆ. ಕೊಳವೆಯಂತಹ ದೇಹ, ಮೂತಿಯ ಕೆಳಬಾಗದಲ್ಲಿರುವ ಬಾಯಿ, ಕೆಳದವಡೆಯ ಒಳಭಾಗದಲ್ಲಿರುವ ಕೊಂಬಿನ ಪದರ, ಕೆಳದುಟಿ ಇಲ್ಲದಿರುವುದು, ಗಂಟಲಿನ (ಫ್ಯಾರಿಂಜಿಯಲ್) ಹಲ್ಲುಗಳು, ಮೀಸೆಗಳು (ಬಾರ್ಬಲ್)ಗಳಿರುವುದಿಲ್ಲ, ಯಾವುದೇ ನಿಯಮಬದ್ಧ ಜೋಡಣೆಯನ್ನು ತೋರದ ಸಣ್ಣ ಹುರುಪೆಗಳು, ಕಣ್ಣಿನಿಂದ ಬಾಲದರೆಕ್ಕೆವರೆಗೆ ಇರುವ ಕಪ್ಪು ಬಣ್ಣದ ಪಟ್ಟಿ, - ಇವು ಕೊಂಟಿ ಮೀನಿನ ಲಕ್ಷಣಗಳು.

ಸಂತಾನೋತ್ಪತ್ತಿ

[ಬದಲಾಯಿಸಿ]

ಇವುಗಳ ಸಂತಾನೋತ್ಪತ್ತಿಯ ಕಾಲ ಜೂನ್ - ಜುಲೈ ತಿಂಗಳುಗಳು.

ಉಲ್ಲೇಖಗಳು

[ಬದಲಾಯಿಸಿ]
  1. Eschmeyer, W. N. (2 June 2015). "Catalog of Fishes". California Academy of Sciences. Retrieved 25 June 2015.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: