ವಿಷಯಕ್ಕೆ ಹೋಗು

ಕೈವಾರ (ಉಪಕರಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೈವಾರವನ್ನು ಬಳಸುವುದು

ಕೈವಾರವು ವೃತ್ತಗಳು ಅಥವಾ ಚಾಪಗಳನ್ನು ಬರೆಯಲು ಬಳಸಬಹುದಾದ ತಾಂತ್ರಿಕ ರೇಖನ ಉಪಕರಣ. ವಿಭಾಜಕವಾಗಿ, ಇದನ್ನು ದೂರಗಳನ್ನು ಅಳೆಯುವ ಉಪಕರಣವಾಗಿ ಕೂಡ ಬಳಸಬಹುದು, ವಿಶೇಷವಾಗಿ ನಕ್ಷೆಗಳ ಮೇಲೆ. ಕೈವಾರವನ್ನು ಗಣಿತ, ನಕ್ಷೆ ತಯಾರಿಕೆ, ನೌಕಾಯಾನ ಮತ್ತು ಇತರ ಉದ್ದೇಶಗಳಿಗಾಗಿ ಬಳಸಬಹುದು. ಕೈವಾರವನ್ನು ಸಾಮಾನ್ಯವಾಗಿ ಲೋಹ ಅಥವಾ ಪ್ಲಾಸ್ಟಿಕ್‍ನಿಂದ ತಯಾರಿಸಲಾಗುತ್ತದೆ. ಇದು ತಿರುಗಣೆಯಿಂದ ಜೋಡಣೆಗೊಂಡಿರುವ ಎರಡು ಭಾಗಗಳನ್ನು ಹೊಂದಿರುತ್ತದೆ. ಬರೆಯಲಾದ ವೃತ್ತದ ತ್ರಿಜ್ಯವನ್ನು ಬದಲಿಸಲು ಅವಕಾಶ ನೀಡಲು ಈ ತಿರುಗಣೆಯನ್ನು ಹೊಂದಿಸಿಕೊಳ್ಳಬಹುದು. ಸಾಮಾನ್ಯವಾಗಿ ಒಂದು ಭಾಗವು ಅದರ ತುದಿಯಲ್ಲಿ ಚೂಪಾದ ಲೋಹದ ತುಂಡನ್ನು ಹೊಂದಿರುತ್ತದೆ. ಇನ್ನೊಂದು ಭಾಗವು ಪೆನ್ಸಿಲ್, ಅಥವಾ ಕೆಲವೊಮ್ಮೆ ಲೇಖನಿಯನ್ನು ಹೊಂದಿರುತ್ತದೆ. ಗಣಕೀಕರಣದ ಮೊದಲು, ಕೈಯಿಂದ ರೇಖನಕ್ಕಾಗಿ ಕೈವಾರ ಮತ್ತು ಇತರ ಉಪಕರಣಗಳನ್ನು ಹಲವುವೇಳೆ ಪರಸ್ಪರ ಬದಲಾಯಿಸಲಬಲ್ಲ ಭಾಗಗಳಿರುವ "ಬೌ ಸೆಟ್" ಆಗಿ ಕಟ್ಟಿಕೊಡಲಾಗುತ್ತಿತ್ತು. ಇಪ್ಪತ್ತನೇ ಶತಮಾನದ ಮಧ್ಯಭಾಗದ ವೇಳೆಗೆ, ಮಾದರಿ ವೃತ್ತಗಳು ಕೈವಾರಗಳ ಬಳಕೆಗೆ ಪೂರಕವಾಗಿದ್ದವು.