ವಿಷಯಕ್ಕೆ ಹೋಗು

ಕೈಲಾಸನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೈಲಾಸನಾಥ ಮಂದಿರವು ಒಂದೇ ಕಲ್ಲಿನಿಂದ ಕೆತ್ತಲಾಗಿರುವ ಭಾರತದ ಅತಿದೊಡ್ಡ ಪ್ರಾಚೀನ ಹಿಂದೂ ದೇವಾಲಯ . ಇದು ಮಹಾರಾಷ್ಟ್ರಎಲ್ಲೋರಾದಲ್ಲಿದೆ. ಇದರ ಗಾತ್ರ, ವಾಸ್ತುಶಿಲ್ಪ ಮತ್ತು ಶಿಲ್ಪಕಲಾಕೃತಿಗಳ ಕಾರಣದಿಂದಾಗಿ ಇದು ಭಾರತದ ಅತ್ಯಂತ ಗಮನಾರ್ಹವಾದ ಗುಹಾ ದೇವಾಲಯಗಳಲ್ಲಿ ಒಂದಾಗಿದೆ.

ಕೈಲಾಸನಾಥ ಮಂದಿರ (ಗುಹೆ ೧೬), ಎಲ್ಲೋರಾ
ಕೈಲಾಸನಾಥ ಮಂದಿರ (ಗುಹೆ ೧೬), ಎಲ್ಲೋರಾ 
 ಕೈಲಾಸನಾಥ ಮ೦ದಿರ
 ಕೈಲಾಸನಾಥ ಮ೦ದಿರ

ಕೈಲಾಸನಾಥ ದೇವಾಲಯವು (೧೬ನೇ ಗುಹೆ) ಎಲ್ಲೋರ ದೇವಾಲಯ ಸಂಕೀರ್ಣವೆಂದೇ ಹೆಸರಾದ ೩೨ ಗುಹಾಂತರ ದೇವಾಲಯಗಳಲ್ಲಿ ಒಂದು. ದೇವಾಲಯವು ದಕ್ಷಿಣ ಭಾರತದ ದೇವಾಲಯಗಳ ಶೈಲಿಯಲ್ಲಿದ್ದು ದ್ರಾವಿಡಿಯನ್ನರ ಕಲೆಯ ಪ್ರಶಂಸನೀಯ ಸಾಧನೆಯಾಗಿದೆ. ಈ ಯೋಜನೆಯನ್ನು ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿರುವ ಮಾನ್ಯಕೇತದಿಂದ ಆಡಳಿತ ಮಾಡಿದ ೮ ನೇ  ಶತಮಾನದ ರಾಷ್ಟ್ರಕೂಟ ರಾಜವಂಶದ ಕೃಷ್ಣ ೧ (757–773) ಇವರಿಂದ ಪ್ರಾರಂಭಿಸಲಾಯಿತು.

ಇತಿಹಾಸ

[ಬದಲಾಯಿಸಿ]

ಕೈಲಾಸ ದೇವಾಲಯದ ಕುರಿತು ಇತಿಹಾಸದ ದಾಖಲೆಗಳಲ್ಲಿ ಎಲ್ಲೂ ಮೀಸಲಾದ ಉಲ್ಲೇಖ ಇಲ್ಲವಾದ್ದರಿಂದ ಇದರ ನಿರ್ಮಾಣದ ಕುರಿತು ಅಷ್ಟೊಂದು ತಿಳಿದು ಬರುವುದಿಲ್ಲ. ಹೀಗಿದ್ದರೂ, ರಾಷ್ಟ್ರಕೂಟ ಅರಸನೋರ್ವ ಇದರ ನಿರ್ಮಾಣಕ್ಕೆ ತೊಡಗಿದ ಎಂದು ಸಂಶಯಾತೀತ ತೀರ್ಮಾನಕ್ಕೆ ಬರಲಾಗಿದೆ. ಶಾಸನಗಳೆರಡು "ಕೃಷ್ಣರಾಜ" ಎಂಬ ಹೆಸರನ್ನು ಈ ದೇವಾಲಯದೊಡನೆ ಜೋಡಿಸಿರುವ ಕಾರಣ, ರಾಷ್ಟ್ರಕೂಟ ಅರಸ ಮೊದಲನೇ ಕೃಷ್ಣ ಇದರ ನಿರ್ಮಾಣಕ್ಕೆ ತೊಡಗಿದ ಎಂದು ನಂಬಲಾಗಿದೆ ಇದು ಕ್ರಿ.ಶ 1078 ರಲ್ಲಿ ಸ್ಥಾಪನೆ ಆಗಿದೆ ಎಂದು ಹೇಳಲಾಗಿದೆ ..

ಕೈಲಾಸನಾಥ ಮಂದಿರದ ತಳನಕ್ಷೆ
ಕೈಲಾಸನಾಥ ಮಂದಿರದ ತಳನಕ್ಷೆ