ಕೇಶವ ಪೂಜಾರಿ ರೇಷ್ಮೆ ಬೆಳೆಗಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೇಷ್ಮೆ ಬೆಳೆಯ ಸಾಧಕ: ಕೇಶವ ಪೂಜಾರಿ ಧಕ್ಷಿಣ ಕನ್ನಡ ಜಿಲ್ಲೆಯು ಅಡಿಕೆ ಬೆಳೆಗೆ ಮಾತ್ರ ಸೀಮಿತ ಎನ್ನುವ ಮಾತಿದೆ ಆದರೆ ಇದೆ ಭಾಗದ ರೈತನಾದ ಕೇಶವ ಪೂಜಾರಿಯವರು ಕಳೆದ ಎಂಟು (೮) ವರ್ಷಗಳಿಂದ ರೇಷ್ಮೆ ಬೆಳೆಯನ್ನು ಬೆಳೆದು ಈ ಭಾಗದ ಮೊದಲ ರೇಷ್ಮೆ ಬೆಳೆಗಾರ ಎನಿಸಿಕೂಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ನಾಳ ಗ್ರಾಮದ ನಿವಾಸಿಯಾಗಿದ್ದ ಕೇಶವ ಪೂಜಾರಿಯವರು ಮೂಲತಃ ರೈತ ಕುಟುಂಬದಿಂದ ಬಂದವರಾಗಿದ್ದಾರೆ.

ಕೇಶವ ಪೂಜಾರಿಯವರು ತುಂಬಾ ಸರಳ ಕೃಷಿಕಾರ ಇವರು ತಮ್ಮ ಕೃಷಿ ಕೆಲಸಕ್ಕೆ ಯಾವತ್ತು ಕೂಲಿ ಕೆಲಸಗಾರರನ್ನು ನೆಂಬಿಕೂಂಡವರಲ್ಲ. ತಮ್ಮ ಕುಟುಂಬ ಸಧಸ್ಯರ ಶ್ರಮ ಬಲದೂಂದಿಗೆ ಈ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದು ತಮ್ಮ ಈ ಸಾಧನೆಗೆ ಕುಟುಂಬಸ್ತರೆ ಕಾರಣ ಎನ್ನುತ್ತಾರೆ, ಕೇಶವ ಪೂಜಾರಿಯವರು ಈ ರೇಷ್ಮೆ ಬೆಳೆಯು ಒಂದು ಲಾಭದಾಯಕ ಕೃಷಿ ಎನ್ನುತ್ತಾರೆ. ಈ ನಮ್ಮ ಧಕ್ಷಿಣ ಕನ್ನಡ ಭಾಗದಲ್ಲಿ ಈ ಬೆಳೆ ಬೆಳೆಯುವುದು ತುಂಬ ಸರಳ ಹಾಗೂ ಇದಕ್ಕೆ ಖರ್ಚು ಸಹ ತುಂಬಾ ಕಡಿಮೆ ಈ ಬೆಳೆಗೆ ಸಂಬಂದಿಸಿದ ಎಲ್ಲಾ ಮಾಹಿತಿಯನ್ನು ರೇಷ್ಮೆ ಇಲಾಖೆ ನೀಡುತ್ತದೆ ಹಾಗೂ ರೇಷ್ಮೆ ಹುಳುಗಳನ್ನು ನೀಡುತ್ತದೆ ಜೊತೆಗೆ ‍ ಔಷದಿಗಳ ಬಗ್ಗೆ ಮಾಹಿತಿ ನೀಡಿ ಕಾಲಕಾಲಕ್ಕೆ ಹುಳುಗಳನ್ನು ಪರಿಕ್ಷಿಸಲು ಬರುತ್ತಾರೆ. ಹುಳುಗಳ ಸಾಕಣಿಕೆಗೆ ಒಂದು ಉಗ್ರಣ ವ್ಯವಸ್ತೆ ಇದ್ದರೆ ಸಾಕು ಎನ್ನುತ್ತಾರೆ ಕೇಶವ ಪೂಜಾರಿಯವರು.

ಕೇಶವ ಪೂಜಾರಿಯವರು ಕೇವಲ ಒಂದುವರೆ ಎಕರೆ ಭೂಮಿಯಲ್ಲಿ ಈ ರೇಷ್ಮೆ ಬೆಳೆಯನ್ನು ಬೆಳೆದು ಅಧಿಕ ಲಾಭವನ್ನು ಕಂಡುಕೂಂಡರು ಪ್ರಾರಂಭದಲ್ಲಿ ಈ ಬೆಳೆಗೆ ವ್ಯಹಿಸಿದ ಹಣ ಕೇವಲ ೭೫ ಸಾವಿರ ರೂಪಾಯಿಗಳು ಮಾತ್ರ ಇದರಿಂದ ಬಂದ ಲಾಭ ೨ ಲಕ್ಷ ರೂಪಾಯಿ ಅಂದರೆ ಮೂರು ಪಟ್ಟು ಲಾಭ, ಈ ಲಾಭವನ್ನು ಅರಿತ ಇವರು ಈ ರೇಷ್ಮೆ ಬೆಳೆಯನ್ನು ಇನ್ನೂ ಈ ಭಾಗದಲ್ಲಿ ಹೆಚ್ಚು ಹೆಚ್ಚು ಬೆಳೆಯಬೇಕೆಂಬ ಉದ್ದೇಶದಿಂದ ತಮ್ಮ ಸುತ್ತ ಮುತ್ತಲಿನ ಇತರೆ ರೈತರಿಗೆ ಈ ಬೆಳೆಯ ಬಗ್ಗೆ ಮಾಹಿತಿಯನ್ನು ನೀಡತೂಡಗಿದರು ರೇಷ್ಮೆ ಬೆಳೆಯು ಒಂದು ಲಾಭದಾಯಕ ಬೆಳೆ ಎನ್ನುವುದನ್ನು ತಿಳಿಯ ಪಡಿಸಿದರು. ಇವರ ಮಾರ್ಗದರ್ಶನದ ಮೇರೆಗೆ ಇಂದು ಈ ಭಾಗದಲ್ಲಿ ಸುಮಾರು ೨೫ ಜನ ರೈತರು ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದು ಇದು ಕೇಶವ ಪುಜಾರಿಯವರ ಸಾಧನೆ ಎಂದೆಳಬಹುದು, ಇವರ ಈ ಸಾಧನೆಯನ್ನು ಗುರುತಿಸಿ ರೇಷ್ಮೆ ಇಲಾಖೆಯು "ಧಕ್ಷಿಣ ಕನ್ನಡ ಜಿಲ್ಲೆಯ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರೇಷ್ಮೆ ಹೇಗೆ ಬೆಳೆಸುತ್ತಾರೆ...?

ರೇಷ್ಮೆ ಕೃಷಿಯು ಒಂದು ಲಾಭದಾಯಕ ಬೆಳೆಯಾಗಿದ್ದು ಇದು ಬಹುವಾರ್ಷಿಕ ಬೆಳೆಯಾದೆ , ಹೀಗಾಗಿ ವರ್ಷದಲ್ಲಿ ೫_೬ ಬಾರಿ ರೇಷ್ಮೆ ಹುಳು ಸಾಕಣೆ ಮಾಡಬದು. ಹುಳುಗಳು ತಿಂದುಬಿಟ್ಟ ಸೂಪ್ಪು ಅಡಿಕೆ ಬೆಳೆಗೆ ಜೈವಿಕ ಗೂಬ್ಬರ ಹಾಗೂ ಮೀನಿನ ಆಹಾರವಾಗಿಯು ಉಪಯೋಗಿಬಹುದು. ಹುಳುಗಳು ತಿಂದುಬಿಟ್ಟ ಸೊಪ್ಪನ್ನು ದನಗಳ ಆಹಾರವಾಗಿಯೂ ಬಳಸಬಹುದು. ಒಂದು ನೂರು ಡಿ.ಎಫ್.ಎಲ್ ಗಳನ್ನು ಸಾಕಲು ೨೦ ಗುಂಟೆ ಹಿಪ್ಪು ನೇರಳೆಯನ್ನು ಬೆಳೆಸಬೇಕಾಗುತ್ತದೆ. ಈ ಕೃಷಿಗಾಗಿ ಚಾಕಿ ತಳಿಯಾದ ಎಸ್-೩೬ ಮತ್ತು ವಿಕ್ಟರಿ ಒನ್(ವಿ-೧) ಆಯ್ಕೆ ಮಾಡುವುದು ಸೂಕ್ತ. ಸಾಲಿನಿಂದ ಸಾಲಿಗೆ ಗಿಡದಿದ ಗಿಡಕ್ಕೆ ಮೂರಡಿ ಅಂತರವಿರಲ್ಲಿ. ಪ್ರತಿ ಎಕೆರೆಗೆ ಸಾಕಷ್ಡು ತಿಪ್ಪೆಗೊಬ್ಬರವನ್ನು ಹಾಕಬೇಕು. ಜತೆಗೆ ೧೨೦ ಕಿಲೋ ಸಾರಜನಕ, ೬೦ ಕಿಲೋ ರಂಜಕ ಮತ್ತು ೬೦ ಕಿಲೋ ಪೊಟ್ಯಾಷ್ ಒದಗಿಸುವ ರಸಗೊಬ್ಬರ ನೀಡಬೇಕು. ೧೨೦ ಕಿಲೋ ಸಾರಜನಕವನ್ನು ನಾಲ್ಕು ಹಂತದಲ್ಲಿ ಅಂದರೆ ಪ್ತತಿ ಕಟಾವಿನ ನಂತರ ೩೦ ಕಿಲೋದಂತೆ ಕೊಡಬೇಕು ಜತೆಗೆ ನೀರು ಸಹ ಅತ್ಯವಶ್ಯಕ.