ವಿಷಯಕ್ಕೆ ಹೋಗು

ಕೇಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇಲ್ ಹಸಿರು ಅಥವಾ ನೇರಳೆ ಎಲೆಗಳಿರುವ, ಮತ್ತು ಮಧ್ಯದ ಎಲೆಗಳು ಶಿರವನ್ನು ರೂಪಿಸದ, ಬ್ರ್ಯಾಸಿಕಾ ಓಲರೇಸಿಯಾ ಸಸ್ಯ ಪ್ರಜಾತಿಯ ಒಂದು ತರಕಾರಿ. ಇದು ತರಕಾರಿಗಳ ಬಹುತೇಕ ದೇಶೀಕರಿಸಿದ ರೂಪಗಳಿಗಿಂತ ಕಾಡು ಎಲೆಕೋಸಿಗೆ ನಿಕಟವಾಗಿದೆ ಎಂದು ಪರಿಗಣಿಸಲಾಗುತ್ತದೆ. ಕೆಲವು ವಿಧಗಳು ಆರರಿಂದ ಏಳು ಅಡಿ ಎತ್ತರ ಮುಟ್ಟಬಹುದು; ಇತರ ವಿಧಗಳು ಒತ್ತಾಗಿರುತ್ತವೆ ಹಾಗೂ ಸಮಪಾರ್ಶ್ವವಾಗಿರುತ್ತವೆ ಮತ್ತು ತಿನ್ನಲು ಉತ್ತಮ ಗುಣಮಟ್ಟದ್ದಾಗಿರುತ್ತವೆ.

ಆರೋಗ್ಯ ಉಪಯೋಗಗಳು

[ಬದಲಾಯಿಸಿ]

ಹಸಿ ಕೇಲ್ ಎಲೆಯ ಸೇವನೆ

[ಬದಲಾಯಿಸಿ]

ಹಸಿ ಕೇಲ್ ಎಲೆಯನ್ನು ಹೆಚ್ಚು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಹಾನಿ ಉಂಟಾಗುವುದು. ಇದರ ಸೇವನೆಯಿಂದಾಗಿ ಒಂದೇ ಸಮನೆ ಹಾರ್ಮೋನ್‍ಗಳಲ್ಲಿ ವ್ಯತ್ಯಾಸ ಉಂಟಾಗುವುದು. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸುವುದು. ಜೊತೆಗೆ ತೂಕ ಹೆಚ್ಚಳ, ಚಯಾಪಚಯ ಕ್ರಿಯೆಯಲ್ಲಿ ಅಡೆತಡೆ, ಜೀರ್ಣ ಕ್ರಿಯೆಯಲ್ಲಿ ತೊಂದರೆ ಸೇರಿದಂತೆ ಇನ್ನಿತರ ಸಮಸ್ಯೆ ಉಂಟಾಗುವುದು. ಹಾಗಂತ ಈ ಎಲೆಯನ್ನು ತಿನ್ನಬಾರದು ಎಂದಲ್ಲ. ಇದನ್ನು ಹಸಿಯಾದ ರೂಪದಲ್ಲಿ ಸೇವಿಸುವುದಕ್ಕಿಂತ ಬೇಯಿಸಿ ಸೇವಿಸಿದರೆ ಹೆಚ್ಚು ಪೋಷಣೆ ದೊರೆಯುವುದು.

ವಿಟಮಿನ್ ಕೆ1

[ಬದಲಾಯಿಸಿ]

ಪ್ರತಿ ದಿನ ಒಂದು ಬಾರಿಯಾದರೂ ವಿಟಮಿನ್ ಕೆ ಹೊಂದಿರುವ ಆಹಾರವನ್ನು ಸ್ವೀಕರಿಸಲು ಸಲಹೆ ನೀಡಲಾಗುವುದು. ಬೇಯಿಸಿದ ಕೇಲ್ ಎಲೆಯಲ್ಲಿ ಸಮೃದ್ಧವಾದ ವಿಟಮಿನ್ ಕೆ ಇರುತ್ತದೆ. ವಿಟಮಿನ್ ದೇಹದಲ್ಲಿ ಇರುವ ಪ್ರೋಟೀನ್‍ಗಳನ್ನು ಸಕ್ರಿಯಗೊಳಿಸಿ, ರಕ್ತ ಹೆಪ್ಪುಗಟ್ಟುವಿಕೆಗೆ ಅತ್ಯಗತ್ಯವಾದ ಕ್ಯಾಲ್ಸಿಯಮ್ ಅನ್ನು ಸಕ್ರಿಯಗೊಳ್ಳುವಂತೆ ಮಾಡುವುದು.

ಕಣ್ಣಿನ ಆರೋಗ್ಯ ಕಾಯುವುದು

[ಬದಲಾಯಿಸಿ]

ದೃಷ್ಟಿ ದೋಷ ಅಥವಾ ದೃಷ್ಟಿ ಸಮಸ್ಯೆಯನ್ನು ಅನುಭವಿಸುತ್ತಿರುವವರು ಬೇಯಿಸಿದ ಕೇಲ್ ಎಲೆಯನ್ನು ಸ್ವೀಕರಿಸಬೇಕು. ಕೇಲ್ ಎಲೆಯಲ್ಲಿ ಕ್ಯಾರೊಟಿನೈಡ್, ಆಂಟಿ ಆಕ್ಸಿಡೆಂಟ್ ಮತ್ತು ಲ್ಯೂಟಿನ್ ಗುಣಗಳಿರುವುದರಿಂದ ಅದು ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸುವುದು.[]

ತೂಕ ಇಳಿಸಲು ಸಹಾಯ

[ಬದಲಾಯಿಸಿ]

ಈ ಎಲೆಯಲ್ಲಿ ಅಧಿಕ ಪ್ರಮಾಣದ ನಾರು, ನೀರಿನಂಶ ಮತ್ತು ಪ್ರೋಟೀನ್‍ಗಳು ಇರುವುದರಿಂದ ಜೀರ್ಣ ಕ್ರಿಯೆಯನ್ನು ಸುಧಾರಿಸುವುದು. ಜೊತೆಗೆ ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ನಿವಾರಿಸಿ, ಅನಗತ್ಯವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ದೀರ್ಘ ಸಮಯಗಳ ಕಾಲ ಹಸಿವನ್ನು ತಡೆಯುವುದರ ಜೊತೆಗೆ ದೇಹದ ತೂಕ ಇಳಿಸಲು ಸಹಾಯ ಮಾಡುವುದು.

ಉತ್ಕರ್ಷಣ ನಿರೋಧಕ ಗುಣದಿಂದ ಕೂಡಿದೆ

[ಬದಲಾಯಿಸಿ]

ಹಸಿರು ತರಕಾರಿಯಲ್ಲಿ ನೈಸರ್ಗಿಕವಾಗಿಯೇ ಆಂಟಿಆಕ್ಸಿಡೆಂಟ್‍ಗಳು ತುಂಬಿರುತ್ತವೆ. ಅದು ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ ಫಲವನ್ನು ನೀಡುವುದು. ಕೇಲ್ ಎಲೆಯಲ್ಲಿ ವಿಟಮಿನ್ ಸಿ, ಪಾಲಿಫಿನಾಲ್ ಮತ್ತು ಫ್ಲೇವನಾಯ್ಡ್ ಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆ ಕಾಣುವುದು. ಜೊತೆಗೆ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಇಡುತ್ತದೆ.

ವಿಟಮಿನ್ ಸಿ

[ಬದಲಾಯಿಸಿ]

ಇತರ ತರಕಾರಿಗಳಿಗೆ ಹೋಲಿಸಿದರೆ ಕೇಲ್ ಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ಕಾಲಜನ್ ಸಂಶ್ಲೇಷಣೆಯಂತಹ ಅನೇಕ ದೈಹಿಕ ಪ್ರಕ್ರಿಯೆಗಳಿಗೆ ವಿಟಮಿನ್ ಸಿ ಅತ್ಯಗತ್ಯ. ವಿಟಮಿನ್ ಸಿ ದೀರ್ಘಕಾಲದ ಕಾಯಿಲೆಗಳಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲೆಯನ್ನು ಗಣನೀಯವಾಗಿ ಬೇಯಿಸಿ ಸೇವಿಸುವುದರಿಂದ ದೇಹಕ್ಕೆ ಅಧಿಕ ಪ್ರಮಾಣದ ವಿಟಮಿನ್ ಸಿ ದೊರೆಯುವುದು.

ಕ್ಯಾನ್ಸರ್ ವಿರುದ್ಧ ಹೋರಾಡುವುದು

[ಬದಲಾಯಿಸಿ]

ಬೇಯಿಸಿದ ಕೇಲ್ ಎಲೆಯಲ್ಲಿ ಕ್ಯಾನ್ಸರ್‍ನಿಂದ ರಕ್ಷಿಸುವ ಕೆಲವು ಸಂಯುಕ್ತಗಳಿರುತ್ತವೆ. ಆ ಸಂಯುಕ್ತಗಳು ಒಂದು ಸಲ್ಫೋರಫೇನ್ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಲು ಪ್ರಚೋದಿಸುವುದು. ಬೇಯಿಸಿದ ಕೇಲ್ ಎಲೆ ಅಥವಾ ಕೇಲ್ ಎಲೆಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವನ್ನು ಉತ್ತಮವಾಗಿ ಇಡಬಹುದು. ಹಸಿಯಾದ ಕೇಲ್ ಎಲೆಯನ್ನು ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಎಂದು ಸಲಹೆ ನೀಡಲಾಗುವುದು.[]

ಉಲ್ಲೇಖಗಳು

[ಬದಲಾಯಿಸಿ]
  1. "Kale: Health benefits, nutrition, eating, and risks". www.medicalnewstoday.com (in ಇಂಗ್ಲಿಷ್). 17 January 2020. Retrieved 31 August 2024.
  2. "ಕೇಲ್ ಎಲೆಯನ್ನು ಬೇಯಿಸಿಯೇ ತಿನ್ನಬೇಕು ಏಕೆ ಗೊತ್ತಾ?". Vijay Karnataka. Retrieved 31 August 2024.
"https://kn.wikipedia.org/w/index.php?title=ಕೇಲ್&oldid=1243306" ಇಂದ ಪಡೆಯಲ್ಪಟ್ಟಿದೆ