ವಿಷಯಕ್ಕೆ ಹೋಗು

ಕೇರಳ ವಿಧಾನಸಭೆ ಚುನಾವಣೆ 2011

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹದಿಮೂರನೇ ವಿಧಾನಸಭೆ[ಬದಲಾಯಿಸಿ]

  • ಹದಿಮೂರನೇ ವಿಧಾನಸಭೆಯ ಚುನಾವಣೆ 13 ಏಪ್ರಿಲ್ 2011 ರಂದು ನಡೆಯಿತು. ಅದು ಕೇರಳದ 140 ಕ್ಷೇತ್ರಗಳಲ್ಲಿ ಸದಸ್ಯರನ್ನು ಚುನಾಯಿಸುವ ಕ್ರಿಯೆ. ಚುನಾವಣಾ ಫಲಿತಾಂಶಗಳು 13 ಮೇ 2011 ರಂದು ಪ್ರಕಟವಾಯಿತು. ಫಲಿತಾಂಶವನ್ನು ನೋಡಿದಾಗ ಯುಡಿಎಫ್ 4 ಸ್ಥಾನಗಳ ಅಂತರದಿಂದ ಎಲ್ಡಿಎಫ್’ನ್ನು ಪರಾಭವಗೊಳಿಸಿತು, ಕೇರಳದ ಚುನಾವಣೆಗಳ ಇತಿಹಾಸದಲ್ಲಿ ಇದು ಅತಿ ಕಠಿಣ ಸ್ಪರ್ದೆ ಎಂದು ಸಾಬೀತಾಯಿತು.
  • ಕೇರಳದಲ್ಲಿ 2 ಪ್ರಮುಖ ರಾಜಕೀಯ ಒಕ್ಕೂಟಗಳು ಇವೆ. ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ (ಯುಡಿಎಫ್) . ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಪಕ್ಷಗಳ ಒಕ್ಕೂಟವಾಗಿದೆ. ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಮುಖ್ಯವಾಗಿ ಎಡಪಂಥೀಯ ಪಕ್ಷಗಳ ಸಮ್ಮಿಶ್ರ ಕೂಟವಾಗಿದೆ. ಇದರಲ್ಲಿ ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (ಸಿಪಿಎಂ) ನೇತೃತ್ವ, . ಭಾರತೀಯ ಜನತಾ ಪಕ್ಷ (ಬಿಜೆಪಿ) ಕೂಡ ರಾಜ್ಯದಲ್ಲಿ ಸ್ಪರ್ಧಿಸಲು ಹಾಗು ತಮ್ಮ ಎನ್ಡಿಎ ಮೈತ್ರಿ ಪಕ್ಷವಾದ ಜನತಾ ದಳ (ಸಂಯುಕ್ತ) ದ ಜೊತೆ ಸೇರಿ, ಒಂದು ಸ್ಥಾನವನ್ನು ಅದಕ್ಕೆ ನೀಡಿ, 139 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಒಕ್ಕೂಟ ಮತ್ತು ಸ್ಪರ್ಧೆ[ಬದಲಾಯಿಸಿ]

ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್
ಕ್ರ.ಸಂ. ಪಕ್ಷ ನಾಯಕ ಸ್ಥಾನಕ್ಕೆ ಸ್ಪರ್ಧೆ ಗೆಲವು
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿ.ಎಂ.ಸುಧೀರನ್ 82 38 (+1)
2 ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ ಸೈಯದ್ ಹೈದರಾಲಿ ಶಿಹಾಬ್ 24 20
3 ಕೇರಳ ಕಾಂಗ್ರೆಸ್ (ಎಂ) ಕೆ.ಎಂ ಮಣಿ 15 9
4 ಕ್ರಾಂತಿಕಾರಿ ಸಮಾಜವಾದಿ ಪಕ್ಷ ಎ.ಎ. ಅಜೀಜ್
5 ಜನತಾ ದಳ (ಸಂಯುಕ್ತ) ಎಂ ಪಿ ವೀರೇಂದ್ರ ಕುಮಾರ್
6 ಕೇರಳ ಕಾಂಗ್ರೆಸ್ (ಜಾಕೋಬ್) ಜಾನಿ ನೆಲ್ಲೂರು 3 1
7 ಕಮ್ಯುನಿಸ್ಟ್ ಮಾರ್ಕ್ಸಿಸ್ಟ್ ಪಕ್ಷ (ಜಾನ್) ಸಿ ಪಿ ಜಾನ್
8 ಸಮಾಜವಾದಿ ಜನತಾ (ಡೆಮಾಕ್ರಟಿಕ್) 6 2
9 ಜನಾಧಿಪತ್ಯ ಸಂರಕ್ಷಣಾ ಸಮಿತಿ (ಎಸ್ಎಸ್ಎಸ್ 4 0
10 ಕಮ್ಯುನಿಸ್ಟ್ ಮಾರ್ಕಿಸ್ಟ್ ಪಕ್ಷ (ಸಿಎಂಪಿ) 3 0
11 ಕೇರಳ ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಬೇಬಿ ಜಾನ್) (ಆರ್ಎಸ್ಪಿ (ಬಿ)) 1 1
12 ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್ಎಸ್ಪಿ) 4 2
13 ಒಟ್ಟು - 139 72 (73?)
14 ಮತದಾರರು:23147871 8,002874 ಮತ ಗಳಿಕೆ 45.83%+2.85% ಸ್ಥಾನ ಲಾಭ+30

[೩][೪]

ಎಡ ಪ್ರಜಾಸತ್ತಾತ್ಮಕ ರಂಗ[ಬದಲಾಯಿಸಿ]

ಕ್ರ.ಸಂ. ಪಕ್ಷ (LDF) ನಾಯಕ ಸ್ಥಾನಕ್ಕೆ ಸ್ಪರ್ಧೆ ಗೆಲವು
1 ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) k.ಬಾಲಕೃಷ್ಣನ್ 93 44
2 ಭಾರತದ ಕಮ್ಯುನಿಸ್ಟ್ ಪಕ್ಷ ಸಿಪಿಐ- ಕಣ್ಣಂ ರಾಜೇಂದ್ರನ್ 27 13
3 ಜನತಾ ದಳ (ಸೆಕ್ಯುಲರ್) ಮ್ಯಾಥ್ಯೂ ಟಿ ಥಾಮಸ್ 5 4
4 ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎನ್ಸಿಪಿ- ವಿಜಯನ್ 4 2
5 ಕೇರಳ ಕಾಂಗ್ರೆಸ್ (Skaria ಥಾಮಸ್) ಸ್ಕರಿಯ ಥಾಮಸ್ (2 ? )
6 ಕಾಂಗ್ರೆಸ್(S) i ಕಡನಪಲ್ಲ
7 ಕಮ್ಯುನಿಸ್ಟ್ ಮಾರ್ಕಿಸ್ಟ್ ಪಕ್ಷ ಕೆ.ಆರ್. ಅರವಿಂದಾಕ್ಷನ್
8 ಕೇರಳ ಕಾಂಗ್ರೆಸ್ (ಬಾಲಕೃಷ್ಣ ಪಿಳ್ಳೈ) ಆರ್ ಬಾಲಕೃಷ್ಣ ಪಿಳ್ಳೈ 3 0
9 ಭಾರತೀಯ ರಾಷ್ಟ್ರೀಯ ಲೀಗ್ ಎಸ್ ಎ ಪುಥಿಯಾ ವಲಪ್ಪಿಲ್ 3 0
10 ಸ್ವತಂತ್ರ 5 2
11 ಒಟ್ಟು 140 67 (68?)
12 ಮತದಾರರು: 23147871 7,846,703 ಮತ ಗಳಿಕೆ ಶೇ.44.94% (-3.69%) ಸ್ಥಾನ -30

[೩][೪]

ಫಲಿತಾಂಶಗಳು[ಬದಲಾಯಿಸಿ]

ಕೇರಳ 2011-ಚುನಾವಣೆ: UDF ವಿರುದ್ಧ LDF ಫಲಿತಾಂಶ
ಯುಡಿಎಫ್ (UDF) ವಿರುದ್ಧ ಎಲ್ಡಿಎಫ್(LDF) ಫಲಿತಾಂಶಗಳು
  • ಚುನಾವಣಾ ಸ್ಥಾನಿಕ ಎಲ್.ಡಿ.ಎಫ್ 68 ಸ್ಥಾನಗಳನ್ನು ಪಡೆದರೆ, ಯುಡಿಎಫ್ ಸಮ್ಮಿಶ್ರ ಒಕ್ಕೂಟ 72 ಸ್ಥಾನಗಳಲ್ಲಿ ವಿಜೇತ ವಾಯಿತು. ಇದು 140 ವಿಧಾನಸಭಾ ಸ್ಥಾನಗಳ ಪೈಕಿ ಒಂದು ದುರ್ಬಲ/ತೆಳು ಗೆಲುವು. ಯುಡಿಎಫ್ ಪ್ರಮುಖ ಮತ್ತಷ್ಟು ಉಪಚುನಾವಣೆ ನಂತರದ ನೆಯ್ಯತ್ತಿಂಕರ ಕ್ಷೇತ್ರದ ಸ್ಥಾನಿಕ ಶಾಸಕ ಆರ್ ಸೆಲ್ವರಾಜ್ ಯುಡಿಎಫ್'ಗೆ ಸೇರಲು ಎಲ್ಡಿಎಫ್'ಗೆ ರಾಜಿನಾಮೆ ನೀಡಿ ಮರು ಆಯ್ಕೆ ಪಡೆದರು; ಈ ಮೂಲಕ ಯುಡಿಎಫ್' 73 ಕ್ಕೆ ಬಲ ವಿಸ್ತರಿಸಿತು.
  • ಯುಡಿಎಫ್ ನಾಯಕ ಕಾಂಗ್ರೆಸ್'ನ ಉಮ್ಮನ್ ಚಾಂಡಿ ಅವರು ತನ್ನ ಇತರ ಆರು ಮಂತ್ರಿಗಳ ಜೊತೆ ಮೇ 18, 2011 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಇತರ ಹದಿಮೂರು ಸಚಿವರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು.

ಫಲಿತಾಂಶಗಳು ಸಾರಾಂಶ[ಬದಲಾಯಿಸಿ]

ಯು.ಡಿಎಫ್ ಎಲ್'ಡಿ'ಎಫ್ ಎನ'ಡಿ.ಎ. ಇತರೆ
72 68 0 0

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  • ೧.Kerala / Thiruvananthapuram News : Not eyeing specific posts: Kannanthanam". Chennai, India: The Hindu. 2011-03-29. Retrieved 2011-05-16.
  • ೨.KERALA ASSEMBLY ELECTIONS 2011". Mytips4help.blogspot.com. 2011-04-04. Retrieved 2011-05-16.
  • ೩.Election Commission India". Eci.nic.in. Retrieved 2011-05-16.
  • ೪. MJ Akbar (2011-04-01). "Assembly Elections 2011: Jaya Nadu and Mamata Bengal : The Big Story: India Today". Indiatoday.intoday.in. Retrieved 2011-05-16.