ಕೇರಳ ಎಕ್ಸ್ಪ್ರೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇರಳ ಎಕ್ಸ್ಪ್ರೆಸ್ ದಹಲಿ ಮತ್ತು ಕೇರಳ ರಾಜ್ಯದ ತಿರುವನಂತಪುರ ಸೆಂಟ್ರಲ್ ನಡುವೆ ಓಡುವ ಭಾರತೀಯ ರೈಲ್ವೆ ಇಲಾಖೆಯ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು. 60 ಕಿಮೀ / ಗಂ ಸರಾಸರಿ ವೇಗದಲ್ಲಿ 3,032 ಕಿಲೋಮೀಟರ್ ದೂರವನ್ನು 40 ನಿಲುಗಡೆಗಳನ್ನೊಳಗೊಂಡು ತಿರುವನಂತಪುರದಿಂದ ದೆಹಲಿಗೆ ಸಾಗುತ್ತದೆ . [೧] ಈ ರೈಲು ಭಾರತದಲ್ಲಿನ ಎರಡನೇ ದೀರ್ಘ ಕಾಲ ನಡೆಯುತ್ತಿರುವ ದೈನಂದಿನ ಸೂಪರ್ಫಾಸ್ಟ್ ರೈಲು ಎಂಬ ದಾಖಲೆಯನ್ನು ಹೊಂದಿದೆ.

ಇತಿಹಾಸ[ಬದಲಾಯಿಸಿ]

ಇದು ಜೋಲರ್ಪೆಟ್ಟಾಯಿ ಜೆಎನ್ ನಲ್ಲಿ ಇಬ್ಭಾಗಿಸುವಿಕೆಯ ಜೊತೆ, ತಿರುವನಂತಪುರ ಮತ್ತು ಬೆಂಗಳೂರಿನಿಂದ ದೆಹಲಿಗೆ ಆರಂಭಗೊಂಡ ಕೇರಳ ಕರ್ನಾಟಕ ಎಕ್ಸ್ಪ್ರೆಸ್ (ಕೆ.ಕೆ. ಎಕ್ಸ್ಪ್ರೆಸ್) ಎಂದು 1976 ರಲ್ಲಿ ಪರಿಚಯಿಸಲ್ಪಟ್ಟಿತು. ಆರಂಭದಲ್ಲಿ, ಇದರ ಇಡೀ ಪ್ರಯಾಣ 46.5 ಗಂಟೆಗಳ ದೀರ್ಘ ಕಾಲದ್ದಿದ್ದು ಕೇರಳ / ಕರ್ನಾಟಕ ಬೋಗಿಗಳನ್ನು ಜೋಡಣೆ /ವಿಭಜನೆ ಮಾಡುವ ಉದ್ದೆಶದಿದಂದ ಜೋಲರ್ಪೆಟ್ಟೈ ನಲ್ಲಿ ಸ್ಥಗಿತಗೊಳ್ಳುತ್ತಿತ್ತು. 1980 ರಲ್ಲಿ, ಎರಡು ರೈಲುಗಳು, ಕೇರಳ ಎಕ್ಸ್ಪ್ರೆಸ್ ಮತ್ತು ಕರ್ನಾಟಕ ಎಕ್ಸ್ಪ್ರೆಸ್ ಎಂದು ವಿಭಜನೆ ಮಾಡಲಾಯಿತು ಮತ್ತು ಕೇರಳ ಎಕ್ಸ್ಪ್ರೆಸ್ ಅನ್ನು ಪುನಃ ಪಾಲ್ಘಾಟ್ ಜೆಎನ್ನಲ್ಲಿ ಪ್ರತ್ಯೇಕಮಾಡಲಾಗಿ ಮತ್ತು ಅದರ ಒಂದು ಭಾಗ ಮಂಗಳೂರಿನತ್ತ ಹರಿಯಿತು . ಇದು ಕೊಚ್ಚಿನ್ ಬಂದರಿಗೆ ಹೋಗುವ ರೈಲಿನ ಒಂದು ಭಾಗವಾಗಿ ಮತ್ತು ಮಂಗಳೂರು ಇತರ ಶೋರ್ನೂರ್ ನಲ್ಲಿ ಇಬ್ಭಾಗವಾದ ಇದು ಜಯಂತಿ ಜನತಾ ಜೊತೆ ಸರಿಸಮಾನವಾಗಿ ಇತ್ತು. ನಂತರ, ಈ ಎರಡು ರೈಲುಗಳನ್ನು ಕೇರಳ ಮಂಗಳಾ ಎಕ್ಸ್ಪ್ರೆಸ್ ಎಂದು ವಿಲೀನಗೊಳಿಸಲಾಯಿತು. 1990 ರಲ್ಲಿ, ಮಂಗಳೂರಿಗೆ ಪ್ರತ್ಯೇಕ ರೈಲು ಪರಿಚಯಿಸಲಾಯಿತು ನಂತರ, ಇದರ ಪ್ರಸ್ತುತ ಮಾರ್ಗದಲ್ಲಿ ಚಲಾವಣೆ ಆರಂಭವಾಯಿತು. ಆರಂಭದಲ್ಲಿ ಇದು ಒಂದು ದೈನಂದಿನ ರೈಲಾಗಿತ್ತು ಮತ್ತು ತಮಿಳುನಾಡು ಎಕ್ಸ್ಪ್ರೆಸ್, ಆಂಧ್ರಪ್ರದೇಶ ಎಕ್ಸ್ಪ್ರೆಸ್ ಮತ್ತು ಕರ್ನಾಟಕ ಎಕ್ಸ್ಪ್ರೆಸ್ ಗಳು ಅದೇ ಸಮಯಕ್ಕೆ ಪ್ರಯಾಣ ಹಂಚಿಕೊಳ್ಳುತ್ತಿದ್ದವು. ಆದಾಗ್ಯೂ, ಒಂದು ದೈನಂದಿನ ರೈಲಾಗಿ ಪರಿವರ್ತನೆ ಹೊಂದಿದ ನಂತರ ತನ್ನ ಸ್ವಂತ ಸಮಯವನ್ನು ಪಡೆಯಿತು.[೨]

ಇದು ಮೂಲತಃ 125/126 ಸಂಖ್ಯೆಯನ್ನು ಹೊಂದಿತ್ತು ಮತ್ತು ನಂತರ 1989 ರಲ್ಲಿ ಭಾರತೀಯ ರೈಲ್ವೆ ನಾಲ್ಕು ಅಂಕಿಯ ಸಂಖ್ಯಾ ವ್ಯವಸ್ಥೆಯ ದತ್ತು ಪಡೆದ ನಂತರ 2625/2626 ಎಂದು ಬದಲಾಯಿಸಲಾಯಿತು . [೩] ಡಿಸೆಂಬರ್ 2010 ರಲ್ಲಿ, ಭಾರತೀಯ ರೈಲ್ವೆ ಐದು ಅಂಕಿಯ ಸಂಖ್ಯಾ ವ್ಯವಸ್ಥೆಯನ್ನು ಅಳವಡಿಸಿಕೊಂಡ ನಂತರ ಕೇರಳ ಎಕ್ಸ್ಪ್ರೆಸ್ ಪ್ರಸ್ತುತ ಕೆಳಕ್ಕೆ ಪ್ರಯಾಣಕ್ಕಾಗಿ ಮೇಲ್ಮುಖವಾಗಿ 12625 ಮತ್ತು 12626 ಕೆಳಮುಖ ಪ್ರಯಾಣಕ್ಕೆ ಅಂಕಿತವನ್ನು ನೀಡಲಾಗಿದೆ. [೪]

ಕೇರಳ ಎಕ್ಸ್ಪ್ರೆಸ್ ಹೆಚ್ಚು ಆಂಧ್ರಪ್ರದೇಶದ ಭಾಗವನ್ನು ಎಪಿ ಎಕ್ಸ್ಪ್ರೆಸ್ಗಿಂತಲು ಜಾಸ್ತಿ ವ್ಯಾಪಿಸುತ್ತದೆ, ಟಿಎನ್ ಎಕ್ಸ್ಪ್ರೆಸ್ ಗಿಂತ ಹೆಚ್ಚು ತಮಿಳುನಾಡಿನ ಆವರಿಸುತ್ತದೆ ಹೀಗಾಗಿ ದೆಹಲಿಗೆ ಹೋಗುವ ಮೂರು ದಕ್ಷಿಣ ಭಾರತದ ರಾಜ್ಯಗಳ ಪ್ರಯಾಣಿಕರು ಇದನ್ನು ಪೋಷಿಸುತ್ತಾರೆ. ದುರದೃಷ್ಟವಶಾತ್, ಕೇರಳ ಎಕ್ಸ್ಪ್ರೆಸ್‍ಗೆ ರಾಜಕೀಯ ಅಡ್ಡಬರುವಿಕೆಗಳಿಂದ ಹಲವಾರು ಸಣ್ಣ ನಿಲುಗಡೆಗಳನ್ನ ಇತ್ತೀಚಿನ ವರ್ಷಗಳಲ್ಲಿ ಪರಿಚಯಿಸಲಾಗಿದೆ ಇದನ್ನು ಟಿಎನ್ ಎಕ್ಸ್ಪ್ರೆಸ್ ಗಿಂತ ಹೆಚ್ಚು ಅನ್ಯಾಯವಾಗಿ ಕಾಣಲಾಗಿದ್ದು ಮತ್ತು ಕಡಿಮೆ ಆದ್ಯತೆಯನ್ನು ಪಡೆಯುವಂತೆ ಮಾಡಿದೆ. ಅಲ್ಲದೆ, ಕೇರಳ ಎಕ್ಸ್ಪ್ರೆಸ್ 60kmph ವೇಗದಲ್ಲಿ ಚಲಿಸಿದರೆ , ಟಿಎನ್ ಎಕ್ಸ್ಪ್ರೆಸ್ 67kmph ಸರಾಸರಿ ವೇಗ ಹೊಂದಿದೆ. ದೂರದ ಪ್ರಯಾಣಿಕರು ಇದು ತನ್ನ ಮೂಲದಿಂದ ಮದ್ಯಾಹ್ನ ಊಟದ ನಂತರ ಹೊರಟು 3 ನೇ ದಿನದ ಮದ್ಯಾಹ್ನದ ಊಟದ ಮೊದಲು ತನ್ನ ಗುರಿಯನ್ನು ತಲುಪುವ ಹಾಗೆ ವೇಗಗೊಳಿಸಲು ಕೇರಳ ಎಕ್ಸ್ಪ್ರೆಸ್ ರೈಲಿನ ವೇಗ ಹೆಚ್ಚಿಸಲು ರೈಲ್ವೆ ಬೋರ್ಡ್ ನಿಂದ ನಿರೀಕ್ಷಿಸುತ್ತಿದ್ದಾರೆ.

ಕೇರಳ ಎಕ್ಸ್ಪ್ರೆಸ್ ವೈಕಂ ರೈಲು ನಿಲ್ದಾಣದಲ್ಲಿ ನಿಲ್ಲುವ ಏಕ ಮಾತ್ರ ಎಕ್ಸ್ಪ್ರೆಸ್ ರೈಲು.

ಕೋಚ್ ಸಂಯೋಜನೆ[ಬದಲಾಯಿಸಿ]

ಇದು 7 ಎಸಿ ಕೋಚ್ಗಳು (2 ಎರಡನೇ ಶ್ರೇಣಿ ಎಸಿ, 5 ಮೂರುನೇ ಶ್ರೇಣಿ ಎಸಿ), 12 ಎಸ್ಎಲ್ ಬೋಗಿಗಳು , 4 ಜನರಲ್ ಬೋಗಿಗಳು ಮತ್ತು ಪ್ಯಾಂಟ್ರಿ ಕಾರ್ ಒಳಗೊಂಡ 24 ಬೋಗಿಗಳ ರೈಲು. ಈ ರೈಲು ಸಾಮಾನ್ಯವಾಗಿ ಈರೋಡ್ನ WAP 4 ಎಳೆಯುತ್ತದೆ ಮತ್ತು 110 ಕಿ.ಮೀ.ಯಾ ಒಂದು ಉನ್ನತ ವೇಗವನ್ನು ಹೊಂದಿದೆ.

ನಿಲುಗಡೆಗಳು[ಬದಲಾಯಿಸಿ]

ತಿರುವನಂತಪುರಂ,ಕೊಲ್ಲಂ,ಕಾಯಂಕುಲಂ,ಮವೆಲಿಕರ,ಚೆಂಗನ್ನೂರು,ತಿರುವಲ್ಲಚಂಗನ್ಸ್ಸೆರಿ, ಕೊಟ್ಟಾಯಂ ಎರ್ನಾಕುಲಂ, ಅಲುವಾ, ತ್ರಿಸ್ಸೂರು, ಒಟ್ಟಪ್ಪಲಂ, ಪಾಲಕ್ಕಾಡ, ಕೋಯಮತ್ತೂರು, ತಿರುಪ್ಪೂ, ರ್ಈರೋಡ, ಸೇಲಂ,ಜೋಲರ್ಪೆಟ್ಟಾಯಿ,ಕಟ್ಪಾಡಿ, ತಿರುಪತಿ, ರೇಣಿಗುಂಟಾ , ಗುದುರ್ ,ನೆಲ್ಲೂರು, ವಿಜಯವಾಡ, ವಾರಂಗಲ್, ಬಲ್ಲರ್ಶಃ , ಚಂದ್ರಾಪುರ, ನಾಗ್ಪುರ, ಭೋಪಾಲ್ , ಝಾನ್ಸಿ, ಗ್ವಾಲಿಯರ್, ಆಗ್ರಾ, ಮಥುರಾ, ಫರಿದಾಬಾದ್ (ನವ ದೆಹೆಲಿಗೆ ಹೋಗುವ ದಾರಿ ಮಾತ್ರ), ನವ ದೆಹಲಿ

ಉಲ್ಲೇಖಗಳು[ಬದಲಾಯಿಸಿ]

  1. "Stations between Thiruvananthapuram Central (Trivandrum) and New Delhi". indiarailinfo.com. Retrieved Aug 25, 2016.
  2. "Kerala Express Halt's". cleartrip.com. Archived from the original on ಏಪ್ರಿಲ್ 5, 2016. Retrieved Aug 25, 2016.
  3. "Old Train Numbers". IRFCA. Retrieved Aug 25, 2016. {{cite web}}: Italic or bold markup not allowed in: |publisher= (help)
  4. "Railways migrate to 5-digit number scheme to monitor trains". Times of India. 20 Dec 2010. Retrieved Aug 25, 2016. {{cite web}}: Italic or bold markup not allowed in: |publisher= (help)[ಶಾಶ್ವತವಾಗಿ ಮಡಿದ ಕೊಂಡಿ]