ವಿಷಯಕ್ಕೆ ಹೋಗು

ಕೆ. ಎಸ್. ನಾರಾಯಣಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ. ಎಸ್. ನಾರಾಯಣಾಚಾರ್ಯ[೩೦ ಅಕ್ಟೋಬರ್ ೧೯೩೩ - ೨೬ ನವೆಂಬರ್ ೨೦೨೧] ಇವರು ಕನ್ನಡದ ಭಾರತೀಯ ಸಂಸ್ಕೃತಿಯ ಲೇಖಕರು, ಪ್ರಚಾರಕರು ಮತ್ತು ಪ್ರವಚನಕಾರರು. ಇವರು ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದರು. ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಇವರು ಪ್ರವಚನಗಳಿಂದ ಲೇಖನದೆಡೆಗೂ ಮುಖ ಮಾಡಿದರು.

ಶಿಕ್ಷಣ[ಬದಲಾಯಿಸಿ]

ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ(೧೯೫೪), ಬಿ.ಎ(ಆನರ್ಸ್)(೧೯೫೭), ಎಂ.ಎ(ಇಂಗ್ಲಿಷ್)(೧೯೫೮) ಪದವಿಗಳು. "ಡಬ್ಲು. ಬಿ. ಯೇಟ್ಸ್ ಮತ್ತು ಟಿ. ಎಸ್. ಎಲಿಯೇಟ್ ರ ಕಾವ್ಯ್ದ ಮೇಲೆ ಭಾರತೀಯ ತತ್ವಶಾಸ್ತ್ರ ಪ್ರಭಾವ" ಇವರ ಪಿ.ಎಚ್.ಡಿ ಪ್ರಬಂಧ(೧೯೫೯-೬೧).

ಶೈಕ್ಷಣಿಕ ಸೇವೆ[ಬದಲಾಯಿಸಿ]

 • ೧೯೬೧ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕ
 • ೧೯೬೭ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಪ್ರವಾಚಕ
 • ೧೯೭೩ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕ
 • ೧೯೯೧ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನ ಪ್ರಾಚಾರ್ಯ
 • ೧೯೯೩ರಲ್ಲಿ ನಿವೃತ್ತಿ

ಪುಸ್ತಕಗಳು[ಬದಲಾಯಿಸಿ]

 • ವೇದ ಸಂಸ್ಕೃತಿಯ ಪರಿಚಯ(೧೦ ಸಂಪುಟ)
 • ಶ್ರೀ ರಾಮಾವತಾರ ಸಂಪೂರ್ಣವಾದಾಗ
 • ಶ್ರೀ ರಾಮಾಯಣ ಪಾತ್ರ ಪ್ರಪಂಚ
 • ಶ್ರೀ ಮಹಾಭಾರತ ಪಾತ್ರ ಪ್ರಪಂಚ
 • ಆ ಹದಿನೆಂಟು ದಿನಗಳು
 • ರಾಜಸೂಯದ ರಾಜಕೀಯ
 • ರಾಜಸೂಯ ತಂದ ಅನರ್ಥ
 • ಶ್ರೀ ಕೃಷ್ಣಾವತಾರ (೨ ಸಂ.)
 • ಅಗಸ್ತ್ಯ
 • ದಶಾವತಾರ
 • ಮಹಾಮಾತೆ ಕುನ್ತೀ ಕಂದೆರೆದಾಗ
 • ನಳ ದಮಯಂತಿ
 • ಆಚಾರ್ಯ ಚಾಣಕ್ಯ
 • ರಾಮಾಯಣ ಸಂಪೂರ್ಣವಾದಾಗ
 • ಶ್ರೀ ರಾಮಾಯಣಸಾಹಸ್ರೀ (೫ಭಾಗ)
 • ಶ್ರೀ ರಾಮಾಯಣದ ಮಹಾ ಪ್ರಸಂಗಗಳು
 • ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ದ
 • ಭಾರತೀಯ ಇತಿಹಾಸ ಪುರಾಣಗಳು
 • ಭಾರತ, ಇಸ್ಲಾಂ ಮತ್ತು ಗಾಂಧಿ
 • ಸಮಾಜ ಮತ್ತು ಆಧ್ಯಾತ್ಮೀಕರಣ
 • ಶ್ರೀ ಮಹಾಭಾರತ ಕಾಲ ನಿರ್ಣಯ
 • ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು -೧
 • ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು-೨
 • ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು-೩
 • ರಾಷ್ಟ್ರಾವಲೋಕನ
 • ವನದಲ್ಲಿ ಪಾಂಡವರು
 • ವಾಲ್ಮೀಕಿ ಯಾರು?

ಪ್ರಶಸ್ತಿ, ಬಿರುದುಗಳು[ಬದಲಾಯಿಸಿ]

 • 'ವಿದ್ವನ್ಮಣಿ', 'ವೇದಭೂಷಣ', 'ವಾಲ್ಮೀಕಿ ಹೃದಯಜ್ಞ', 'ರಾಮಾಯಣಾಚಾರ್ಯ', 'ಮಹಾಭಾರತಾಚಾರ್ಯ' ಮೊದಲಾದ ಬಿರುದುಗಳು ವಿವಿಧ ಮಠಾಧೀಶರಿಂದ.
 • ಗಮಕರತ್ನಾಕರ(ಗಮಕ ಸಮ್ಮೇಳನಾಧ್ಯಕ್ಷರಾಗಿ, ಸರಕಾರದಿಂದ).
 • ವೇದ ಸಂಸ್ಕೃತಿ ಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ(೧೯೭೩).
 • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೮)

ಸಧ್ಯದ ಕೈಂಕರ್ಯ[ಬದಲಾಯಿಸಿ]

ಸಮಗ್ರ ರಾಮಾಯಣ, ಮಹಾಭಾರತ, ಭಾಗವತಗಳ ಕಾದಂಬರೀಕರಣ. ದೇಶಾದ್ಯಂತ ರಾಮಾಯಣ, ಭಾರತ, ಗೀತೆ, ಭಾಗವತ, ಆಳ್ವಾರುಗಳ ಮೊದಲಾದ ಸಾಹಿತ್ಯ ಕುರಿತು ಕನ್ನಡ, ತಮಿಳು, ಆಂಗ್ಲಗಳಲ್ಲಿ ಪ್ರವಚನ. ಭಾರತೀಯ ಸಂಸ್ಕೃತಿ ಪ್ರಸಾರ, ಸಂಶೋಧನೆ.

ನಿಧನ[ಬದಲಾಯಿಸಿ]

೨೬ ನವೆಂಬರ್ ೨೦೨೧ ರ ಬೆಳಗಿನ ಜಾವ ೨ ಗಂಟೆಗೆ ಬೆಂಗಳೂರಿನಲ್ಲಿ ನಿಧನರಾದರು.[೧][೨]

ಉಲ್ಲೇಖಗಳು[ಬದಲಾಯಿಸಿ]

ಹೊರಕೊಂಡಿಗಳು[ಬದಲಾಯಿಸಿ]