ಕೆ. ಎಸ್. ನಾರಾಯಣಾಚಾರ್ಯ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕೆ. ಎಸ್. ನಾರಾಯಣಾಚಾರ್ಯ[೩೦ ಅಕ್ಟೋಬರ್ ೧೯೩೩ - ೨೬ ನವೆಂಬರ್ ೨೦೨೧] ಇವರು ಕನ್ನಡದ ಭಾರತೀಯ ಸಂಸ್ಕೃತಿಯ ಲೇಖಕರು, ಪ್ರಚಾರಕರು ಮತ್ತು ಪ್ರವಚನಕಾರರು. ಇವರು ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದರು. ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಇವರು ಪ್ರವಚನಗಳಿಂದ ಲೇಖನದೆಡೆಗೂ ಮುಖ ಮಾಡಿದರು.
ಶಿಕ್ಷಣ
[ಬದಲಾಯಿಸಿ]ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ(೧೯೫೪), ಬಿ.ಎ(ಆನರ್ಸ್)(೧೯೫೭), ಎಂ.ಎ(ಇಂಗ್ಲಿಷ್)(೧೯೫೮) ಪದವಿಗಳು. "ಡಬ್ಲು. ಬಿ. ಯೇಟ್ಸ್ ಮತ್ತು ಟಿ. ಎಸ್. ಎಲಿಯೇಟ್ ರ ಕಾವ್ಯ್ದ ಮೇಲೆ ಭಾರತೀಯ ತತ್ವಶಾಸ್ತ್ರ ಪ್ರಭಾವ" ಇವರ ಪಿ.ಎಚ್.ಡಿ ಪ್ರಬಂಧ(೧೯೫೯-೬೧).
ಶೈಕ್ಷಣಿಕ ಸೇವೆ
[ಬದಲಾಯಿಸಿ]- ೧೯೬೧ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕ
- ೧೯೬೭ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಪ್ರವಾಚಕ
- ೧೯೭೩ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕ
- ೧೯೯೧ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನ ಪ್ರಾಚಾರ್ಯ
- ೧೯೯೩ರಲ್ಲಿ ನಿವೃತ್ತಿ
ಪುಸ್ತಕಗಳು
[ಬದಲಾಯಿಸಿ]- ವೇದ ಸಂಸ್ಕೃತಿಯ ಪರಿಚಯ(೧೦ ಸಂಪುಟ)
- ಶ್ರೀ ರಾಮಾವತಾರ ಸಂಪೂರ್ಣವಾದಾಗ
- ಶ್ರೀ ರಾಮಾಯಣ ಪಾತ್ರ ಪ್ರಪಂಚ
- ಶ್ರೀ ಮಹಾಭಾರತ ಪಾತ್ರ ಪ್ರಪಂಚ
- ಆ ಹದಿನೆಂಟು ದಿನಗಳು
- ರಾಜಸೂಯದ ರಾಜಕೀಯ
- ರಾಜಸೂಯ ತಂದ ಅನರ್ಥ
- ಶ್ರೀ ಕೃಷ್ಣಾವತಾರ (೨ ಸಂ.)
- ಅಗಸ್ತ್ಯ
- ದಶಾವತಾರ
- ಮಹಾಮಾತೆ ಕುನ್ತೀ ಕಂದೆರೆದಾಗ
- ನಳ ದಮಯಂತಿ
- ಆಚಾರ್ಯ ಚಾಣಕ್ಯ
- ರಾಮಾಯಣ ಸಂಪೂರ್ಣವಾದಾಗ
- ಶ್ರೀ ರಾಮಾಯಣಸಾಹಸ್ರೀ (೫ಭಾಗ)
- ಶ್ರೀ ರಾಮಾಯಣದ ಮಹಾ ಪ್ರಸಂಗಗಳು
- ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ದ
- ಭಾರತೀಯ ಇತಿಹಾಸ ಪುರಾಣಗಳು
- ಭಾರತ, ಇಸ್ಲಾಂ ಮತ್ತು ಗಾಂಧಿ
- ಸಮಾಜ ಮತ್ತು ಆಧ್ಯಾತ್ಮೀಕರಣ
- ಶ್ರೀ ಮಹಾಭಾರತ ಕಾಲ ನಿರ್ಣಯ
- ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು -೧
- ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು-೨
- ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು-೩
- ರಾಷ್ಟ್ರಾವಲೋಕನ
- ವನದಲ್ಲಿ ಪಾಂಡವರು
- ವಾಲ್ಮೀಕಿ ಯಾರು?
ಪ್ರಶಸ್ತಿ, ಬಿರುದುಗಳು
[ಬದಲಾಯಿಸಿ]- 'ವಿದ್ವನ್ಮಣಿ', 'ವೇದಭೂಷಣ', 'ವಾಲ್ಮೀಕಿ ಹೃದಯಜ್ಞ', 'ರಾಮಾಯಣಾಚಾರ್ಯ', 'ಮಹಾಭಾರತಾಚಾರ್ಯ' ಮೊದಲಾದ ಬಿರುದುಗಳು ವಿವಿಧ ಮಠಾಧೀಶರಿಂದ.
- ಗಮಕರತ್ನಾಕರ(ಗಮಕ ಸಮ್ಮೇಳನಾಧ್ಯಕ್ಷರಾಗಿ, ಸರಕಾರದಿಂದ).
- ವೇದ ಸಂಸ್ಕೃತಿ ಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ(೧೯೭೩).
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೮)
ಸಧ್ಯದ ಕೈಂಕರ್ಯ
[ಬದಲಾಯಿಸಿ]ಸಮಗ್ರ ರಾಮಾಯಣ, ಮಹಾಭಾರತ, ಭಾಗವತಗಳ ಕಾದಂಬರೀಕರಣ. ದೇಶಾದ್ಯಂತ ರಾಮಾಯಣ, ಭಾರತ, ಗೀತೆ, ಭಾಗವತ, ಆಳ್ವಾರುಗಳ ಮೊದಲಾದ ಸಾಹಿತ್ಯ ಕುರಿತು ಕನ್ನಡ, ತಮಿಳು, ಆಂಗ್ಲಗಳಲ್ಲಿ ಪ್ರವಚನ. ಭಾರತೀಯ ಸಂಸ್ಕೃತಿ ಪ್ರಸಾರ, ಸಂಶೋಧನೆ.
ನಿಧನ
[ಬದಲಾಯಿಸಿ]೨೬ ನವೆಂಬರ್ ೨೦೨೧ ರ ಬೆಳಗಿನ ಜಾವ ೨ ಗಂಟೆಗೆ ಬೆಂಗಳೂರಿನಲ್ಲಿ ನಿಧನರಾದರು.[೧][೨]
ಉಲ್ಲೇಖಗಳು
[ಬದಲಾಯಿಸಿ]- ↑ ಲೇಖಕ, ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಇನ್ನಿಲ್ಲ, ವಿಜಯ ಕರ್ನಾಟಕ, ೨೬ ನವೆಂಬರ್ ೨೦೨೧
- ↑ ಖ್ಯಾತ ವಿದ್ವಾಂಸ ಡಾ. ಕೆ.ಎಸ್. ನಾರಾಯಣಾಚಾರ್ಯ ನಿಧನ; ಸಿಎಂ ಬೊಮ್ಮಾಯಿ ಸಂತಾಪ, ಒನ್ ಇಂಡಿಯಾ ಕನ್ನಡ, ೨೬ ನವೆಂಬರ್ ೨೦೨೧
ಹೊರಕೊಂಡಿಗಳು
[ಬದಲಾಯಿಸಿ]- ಕೆ.ಎಸ್. ನಾರಾಯಣಾಚಾರ್ಯ[permanent dead link], 'ಕಣಜ' ಮಾಹಿತಿಕೋಶ
- ಸಂಸ್ಕೃತಿ ಸಂಪನ್ನ ನಾರಾಯಣಾಚಾರ್ಯ, ರವೀಂದ್ರ ಭಟ್ಟ, ಪ್ರಜಾವಾಣಿ, 09/30/2012