ವಿಷಯಕ್ಕೆ ಹೋಗು

ಕೆ. ಎಂ. ಬಿನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆ. ಎಂ. ಬಿನು
೨೦೦೬ ರಲ್ಲಿ ಕೆ.ಎಂ.ಬಿನು
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಕಲಾಯತುಮ್ಕುಝಿ ಮ್ಯಾಥ್ಯೂಸ್ ಬಿನು
ರಾಷ್ರೀಯತೆ ಭಾರತ
ಜನನ (1980-12-20) ಡಿಸೆಂಬರ್ ೨೦, ೧೯೮೦ (ವಯಸ್ಸು ೪೩)
ಇಡುಕ್ಕಿ, ಕೇರಳ, ಭಾರತ
ಎತ್ತರ1.78 m (5 ft 10 in)[]
ತೂಕ67 kg (148 lb; 10.6 st)
Sport
ದೇಶಭಾರತ
ಕ್ರೀಡೆಓಟ
ಸ್ಪರ್ಧೆಗಳು(ಗಳು)೪೦೦ ಮೀ, ೮೦೦ ಮೀ
ಕ್ಲಬ್ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್
ನಿವೃತ್ತಿಹೊಂದಿಲ್ಲ

ಕಲಾಯತುಮ್ಕುಳಿ ಮ್ಯಾಥ್ಯೂಸ್ ಬಿನು (ಜನನ ೨೦ ಡಿಸೆಂಬರ್ ೧೯೮೦) ಇವರು ಕೇರಳದ ಒಬ್ಬ ಭಾರತೀಯ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್. ಇವರು ೪೦೦ ಮೀಟರ್ ಮತ್ತು ೮೦೦ ಮೀಟರ್‌ ಓಟದಲ್ಲಿ ವಿಶೇಷ ಪರಿಣತರು. ೨೦ ಆಗಸ್ಟ್ ೨೦೦೪ ರಂದು ೨೦೦೪ ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿರಲ್ಲಿ ನಡೆದ 400 ಮೀಟರ್‌ಗಳ ಓಟವನ್ನು ೪೫.೪೮ ಸೆಕೆಂಡುಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದರು. ಇದನ್ನು ಮೊಹಮ್ಮದ್ ಅನಾಸ್ ೧೫.೩೨ ಸೆಕೆಂಡ್‌ಗಳು ಕಾಮನ್‌ವೆಲ್ತ್ ಆಟದಲ್ಲಿ, ಗೋಲ್ಡ್ ಕೋಸ್ಟ್ ೨೦೧೮ ಸೆಕೆಂಡ್‌ನಲ್ಲಿ ಮುರಿದರು.[].

ಬಿನು, ೧೯೬೦ ರ ರೋಮ್ ಒಲಿಂಪಿಕ್ಸ್‌ನಲ್ಲಿ ೪೫.೭೩ ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ದಾಖಲೆ ಸ್ಥಾಪಿಸಿದ್ದ ಭಾರತದ ಮಿಲ್ಕಾ ಸಿಂಗ್ ದಾಖಲೆ ಯನ್ನು ಮುರಿದರು.[] ಸತತ ೪೪ ವರ್ಷದ ವರಗೆ ಮಿಲ್ಕಾ ಸಿಂಗ್ ಅವರ ದಾಖಲೆ ಅವಿಚ್ಛಿನ್ನವಾಗಿತ್ತು.

ಇವರು ಮತ್ತು ಇವರ ಅಕ್ಕ ಕೆ.ಎಂ.ಬೀನಮೋಳ್ ಅವರು ಪ್ರಮುಖ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಒಡಹುಟ್ಟಿದವರು ಎಂಬ ಇತಿಹಾಸ ನಿರ್ಮಿಸಿದರು. ಇವರಿಬ್ಬರು ಬುಸಾನ್ ಏಷ್ಯನ್ ಕ್ರೀಡಾಕೂಟದಲ್ಲಿ (೨೦೦೨) ಪದಕಗಳನ್ನು ಗೆದ್ದರು. ಪುರುಷರ ೮೦೦ ಮೀಟರ್ಸ್ ಓಟದಲ್ಲಿ ಬಿನು ಬೆಳ್ಳಿ ಗೆದ್ದರೆ, ಮಹಿಳೆಯರ ವಿಭಾಗದಲ್ಲಿ ಅವರ ಸಹೋದರಿ ಚಿನ್ನದ ಪದಕ ಗೆದ್ದಿದ್ದಾರೆ. [] ಭಾರತೀಯ ಅಥ್ಲೆಟಿಕ್ಸ್‌ನಲ್ಲಿನ ಈ ಸಾಧನೆಗಾಗಿ ಬಿನು ೨೦೦೬ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು. []

ಜೀವನಚರಿತ್ರೆ

[ಬದಲಾಯಿಸಿ]

ಕೇರಳದ ಇಡುಕ್ಕಿ ಜಿಲ್ಲೆಯವರಾದ ಬಿನು ಅವರು ೨೦ ಡಿಸೆಂಬರ್ ೧೯೮೦ ರಂದು ಜನಿಸಿದರು. ಅವರ ಸಹೋದರಿ ಬೀನಾಮೋಲ್ ಅವರ ಮಾರ್ಗದರ್ಶನದಲ್ಲಿಅವರು ಅಥ್ಲೆಟಿಕ್ಸ್ ಅನ್ನು ತಮ್ಮ ವೃತ್ತಿಯಾಗಿ ಮಾಡಿಕೊಂಡರು. ಸಹೋದರಿ ಬೀನಾಮೋಲ್‌ಗೆ ತರಬೇತಿ ನೀಡಿದ್ದ ಉಕ್ರೇನ್‌‌ನಿನ ಯೂರಿ ಅವರು ಬಿನು ಅವರಿಗೂ ಸಹ ತರಬೇತಿ ನೀಡಿದರು. []

ಉಲ್ಲೇಖಗಳು

[ಬದಲಾಯಿಸಿ]
  1. "Mathews Binu Biography and Statistics". Sports Reference LLC. Archived from the original on 2020-04-18. Retrieved 2009-09-06.
  2. "Athens 2004: India's Binu qualifies for semis". The Indian Express. 2004-08-21. Archived from the original on 29 September 2012. Retrieved 2009-09-06.
  3. Kumar, Pradeep (2004-08-21). "Milkha will reward Binu". The Times of India. Retrieved 2009-09-06.
  4. "KM Binu adds silver to kitty". The Tribune. 2002-10-10. Retrieved 2009-09-06.
  5. "Arjuna award will motivate me: Binu". The Hindu. Chennai, India. 2007-08-12. Archived from the original on 2012-08-24. Retrieved 2009-09-06.
  6. "Distance stars on a heady high". The Hindu. Chennai, India. 2002-09-02. Archived from the original on 2002-11-24. Retrieved 2009-09-06.