ಕೆಸುವಿನ ದಂಟಿನ ಪಲ್ಯ
ಮಳೆಗಾಲದಲ್ಲಿ ಬೆಳೆಯುವ ಒಂದು ರೀತಿಯ ಸಸ್ಯ, ಅದು ಕೆಸು. ಈ ಕೆಸುವಿನ ಎಲ್ಲಾ ಭಾಗಗಳನ್ನು ನಾವು ಉಪಯೋಗಿಸಬಹುದು. ಇದನ್ನು ಆಟಿ ತಿಂಗಳಲ್ಲಿ ಉಪಯೋಗಿಸುತ್ತಾರೆ. ಯಾಕೆಂದರೆ ಆಟಿ ತಿಂಗಳಲ್ಲಿ ಜೋರು ಮಳೆ ಬಂದು ಶರೀರದಲ್ಲಿ ತಂಪು ಜಾಸ್ತಿ ಆಗುತ್ತದೆ. ಆಗ ಈ ಕೆಸುವಿನ ದಂಟು, ಕೆಸುವಿನ ಎಲೆ ಕೆಸುವಿನ ಎಲೆ ಇದರಿಂದ ಅನೇಕ ಖಾದ್ಯ ಗಳನ್ನು ಮಾಡುತ್ತಾರೆ. ಈ ಕೆಸು ಶರೀರವನ್ನು ಬೆಚ್ಚಗೆ ಇಡುತ್ತದೆ. ಮಾತ್ರವಲ್ಲ ಇದರಲ್ಲಿ ತುಂಬಾ ಬಗೆಯ ಔಷಧೀಯ ಗುಣಗಳಿವೆ. ಕೆಸುವಿನ ದಂಟಿನಲ್ಲಿ ಬೀಜ ಆಗುವುದಿಲ್ಲ. ಆದರೆ ಅದು ಹೂ ಬಿಟ್ಟ ಕೂಡಲೇ ಬಾಡಿ ಭೂಮಿಗೆ ಸೇರುತ್ತವೆ. ಅದರ ಗಡ್ಡೆ ಭೂಮಿಯ ಅಡಿಯಲ್ಲಿ ಇರುತ್ತದೆ. ಮಳೆಗಾಲದಲ್ಲಿ ಇದರಿಂದ ತುಂಬಾ ಗಿಡಗಳು ಹುಟ್ಟುತ್ತವೆ. ಈ ಕೆಸುವಿನ ಗದ್ದೆಗಳನ್ನು ಆಯುರ್ವೇದ ಆಯುರ್ವೇದ ಚಿಕಿತ್ಸಾ ತತ್ತ್ವಗಳುಔಷಧ ಗಳಿಗೆ ಉಪಯೋಗಿಸುತ್ತಾರೆ. ಹಾಗಾಗಿ ಈ ಗಿಡ ತುಂಬಾ ವಿಶೇಷ ವಾಗಿದೆ. ಇದನ್ನು ತುಳುವಿನಲ್ಲಿ ತೇವುದ ದಂಟ್ ಎಂದು ಕರೆಯುತ್ತಾರೆ.ಕನ್ನಡಲ್ಲಿ ' ಕೆಸುವಿನ ದಂಟು ' [೧] ಅಂತ ಕರೆಯುತ್ತಾರೆ. ಶರೀರದಲ್ಲಿರುವ ಕಬ್ಬಿನಾಂಶ, ಅನಿಮೀಯ ಸಮಸ್ಯೆ, ಮತ್ತು ಶರರದಲ್ಲಿ ಚರ್ಮ ಸುಕ್ಕು ಕಟ್ಟುವುದಕ್ಕೆ ಈ ಕೆಸುವಿನ ದಂಟು ತುಂಬಾ ಪ್ರಯೋಜನ ಕಾರಿ. ಆಯುರ್ವೇದದ ಪ್ರಕಾರ ಕಿಡ್ನಿಯ ಕಲ್ಲು ಹೋಗಲು ಇದು ಉಪಕಾರಿಯಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ತುಂಬಾ ಇವೆ. ಇದರ ಎಲೆ ದಂಟು ಎಲ್ಲದರಲ್ಲಿ ಔಷಧೀಯ ಗುಣಗಳಿವೆ. ಶರೀರದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಕೆಸುವಿನ ದಂಟಿನ ಪಲ್ಯ
[ಬದಲಾಯಿಸಿ]- ಕೆಸುವಿನ ದಂಟು
- ಹಲಸಿನ ಬೀಜ
- ಬೆಲ್ಲ
- ಹುಳಿ
- ಮೆಣಸಿನ ಹುಡಿ
- ಅರಶಿನ ಹುಡಿ
- ಉಪ್ಪು
- ತುರಿದ ತೆಂಗಿನಕಾಯಿ
ಒಗ್ಗರಣೆಗ್
[ಬದಲಾಯಿಸಿ]- ಎಣ್ಣೆ
- ಕರಿಬೇವು
- ಸಾಸಿವೆ
ಮಾಡುವ ವಿಧಾನ
[ಬದಲಾಯಿಸಿ]ಕೆಸುವಿನ ದಂಟನ್ನು ಸಣ್ಣ ಸಣ್ಣದಾಗಿ ಹಚ್ಚಿಕೊಂಡು ಅದಕ್ಕೆ ಹಲಸಿನ ಬೀಜ ವನ್ನು ಸಣ್ಣದಾಗಿ ಹಚ್ಚಿಕೊಂಡು ಇಡಬೇಕು. ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಹಾಕಿ ಕರಿಬೇವಿನ ಎಲೆ ಹಾಕಿ, ಅದಕ್ಕೆ ಕೆಸುವಿನ ದಂಟು ಮತ್ತೆ ಹಲಸಿನ ಬೀಜ, ಸ್ವಲ್ಪ ನೀರು ಹಾಕಿ ಬೇಯಲು ಇಡಬೇಕು. ನಂತರ ಅದಕ್ಕೆ ಮೆಣಸಿನ ಹುಡಿ, ಅರಶಿನ ಹುಡಿ, ರುಚಿಗೆ ಉಪ್ಪು ಹಾಕಿ ನಂತರ ಹುಳಿ, ಬೆಲ್ಲ, ಎಲ್ಲಾ ಹಾಕಿ ಸರಿಯಾಗಿ ಬೇಯಿಸಿ, ಅದಕ್ಕೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಬೇಕು.
ಉಲ್ಲೇಖ
[ಬದಲಾಯಿಸಿ]- ↑ "kesuvina dantina sasive | colocasia stems curry with vegan yogurt". Swayampaaka - ಸ್ವಯಂ ಪಾಕ. ಅಕ್ಟೋ 10, 2023.
{{cite web}}
: Check date values in:|date=
(help)