ಕೆರೂರು ವಾಸುದೇವಾಚಾರ್ಯ
ಗೋಚರ
ಕೆರೂರು ವಾಸುದೇವಾಚಾರ್ಯರು ೧೮೬೬ರಲ್ಲಿ ಬಾಗಲಕೋಟೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸಾಚಾರ್ಯ. ತಾಯಿ ಪದ್ಮಾವತಿ.
ಕನ್ನಡದ ನವೋದಯದ ಮೊದಮೊದಲ ಸಾಹಿತಿಗಳಲ್ಲಿ ಇವರೊಬ್ಬರು. ಕಾದಂಬರಿ ಅಲ್ಲದೆ ನಾಟಕಗಳನ್ನೂ ಸಹ ಅನುವಾದಿಸಿ, ಬರೆದು, ರಂಗದ ಮೇಲೆ ಆಡಿಸಿದ್ದಾರೆ.
ಕೃತಿಗಳು
[ಬದಲಾಯಿಸಿ]ಕಾದಂಬರಿಗಳು
[ಬದಲಾಯಿಸಿ]- ಇಂದಿರಾ - (೧೯೦೮) - ಈ ಕಾದಂಬರಿಯು ಬಾಲ್ಯ ವಿವಾಹ, ವಿಧವಾ ವಿವಾಹದ ಕಥಾವಸ್ತುವನ್ನು ಹೊಂದಿದೆ.
- ಯದುಮಹಾರಾಜ
- ಭ್ರಾತೃಘಾತಕ ಔರಂಗಜೇಬ
- ವಾಲ್ಮೀಕಿ ವಿಜಯ
- ಯವನ ಸೈರಂಧ್ರಿ
ನಾಟಕಗಳು
[ಬದಲಾಯಿಸಿ]- ನಳದಮಯಂತಿ
- ರುಕ್ಮಿಣಿ ಹರಣ
- ರಮೇಶ-ಲಲಿತ
- ಸುರತನಗರದ ಶ್ರೇಷ್ಠಿ (ಮೂಲ : ಷೇಕ್ಸ್ ಪಿಯರನ “ಮರ್ಚಂಟ್ ಆಫ್ ವೆನಿಸ್')
- ವಸಂತಯಾಮಿನಿ ಸ್ವಪ್ನಚಮತ್ಕಾರ (ಮೂಲ : ಷೇಕ್ಸ್ ಪಿಯರನ “ ಮಿಡ್ ಸಮರ್ ನೈಟ್ಸ್ ಡ್ರೀಮ್")
- ಪತಿ ವಶೀಕರಣ (ಆಲಿವರ್ ಗೋಲ್ಡ್ಸ್ ಸ್ಮಿತ್‍ನ "ಷಿ ಸ್ಟೂಪ್ಸ್ ಟು ಕಾಂಕರ್" ನಾಟಕವೊಂದರ ಅನುವಾದ)
ಕಥಾ ಸಂಕಲನ
[ಬದಲಾಯಿಸಿ]- ತೊಳೆದ ಮುತ್ತು
- ಪ್ರೇಮ ವಿಜಯ
- ಬೆಳಗಿದ ದೀಪಗಳು
- ಬೆಳ್ಳೀ ಚಿಕ್ಕೆ
ಪತ್ರಿಕೋದ್ಯಮ
[ಬದಲಾಯಿಸಿ]ಕೆರೂರು ವಾಸುದೇವಾಚಾರ್ಯರು “ಶುಭೋದಯ” ಹಾಗು “ಸಚಿತ್ರ ಭಾರತ” ಎನ್ನುವ ಎರಡು ಪತ್ರಿಕೆಗಳನ್ನು ಪ್ರಾರಂಭಿಸಿದರು.
ಇತರ ವಿಷಯಗಳು
[ಬದಲಾಯಿಸಿ]ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯ ಸಂಘವು ೧೯೬೪ ರಲ್ಲಿ ವಾಸುದೇವ ಪ್ರಶಸ್ತಿ ಎಂಬ ಸ್ಮಾರಕ ಸಂಪುಟವನ್ನು ಪ್ರಕಟಿಸಿತು.
ನಿಧನ
[ಬದಲಾಯಿಸಿ]ಕೆರೂರು ವಾಸುದೇವಾಚಾರ್ಯರು ೧೯೨೧ರಲ್ಲಿ ನಿಧನರಾದರು.