ಕೆಂಫೆರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಂಫೆರಿಯ
Kaempferia rotunda
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Kaempferia

Synonyms[೧]
  • Zerumbet Garsault, invalid name
  • Monolophus Wall.
  • Tritophus T.Lestib.


ಕೆಂಫೆರಿಯ ಜಿಂಜಿಬರೇಸೀ ಕುಟುಂಬಕ್ಕೆ ಸೇರಿದ ಹೂಬಿಡುವ ಲಶುನ ಸಸ್ಯಜಾತಿ. ಇದಕ್ಕೆ ನೆಲ ಸಂಪಿಗೆ ಎಂಬ ಹೆಸರೂ ಇದೆ. ಸುಂದರವಾದ ಎಲೆ ಮತ್ತು ಹೂಗಳಿಗಾಗಿ ಇದನ್ನು ಕುಂಡಸಸ್ಯ ಇಲ್ಲವೆ ಅಂಚುಸಸ್ಯವಾಗಿ ಉದ್ಯಾನಗಳಲ್ಲಿ, ಮನೆಗಳಲ್ಲಿ ಬೆಳೆಸುತ್ತಾರೆ.ಇದು ಚೀನಾ,ಭಾರತ,ಮಲೇಷಿಯ ಮುಂತಾದ ದಕ್ಷಿಷ ಏಷ್ಯಾ ದೇಶಗಳಲ್ಲಿ ಕಂಡುಬರುತ್ತದೆ. .[೧][೨][೩]

ಲಕ್ಷಣಗಳು[ಬದಲಾಯಿಸಿ]

ಇದು ಏಕವಾರ್ಷಿಕ ಮೂಲಿಕೆ ಸಸ್ಯ. ಶುಂಠಿಗಿಡವನ್ನು ಇದು ಹೋಲುವುದು ಮಾತ್ರವಲ್ಲ, ಶುಂಠಿಯಂತೆ ಇದರ ಪ್ರಕಂದವೂ ಭೂಮಿಯಲ್ಲಿ ಹುದುಗಿಕೊಂಡಿದೆ. ಎಲೆಗಳ ಆಕಾರ ಕರನೆಯಂತೆ ಇಲ್ಲವೆ ಭರ್ಜಿಯಂತೆ. ಅವುಗಳ ಮೇಲ್ಭಾಗದಲ್ಲಿ ಬಿಳಿಯ ಗೆರೆಗಳೂ ತಳಭಾಗದ ಅಂಚಿನಲ್ಲಿ ಕಡುಗೆಂಪು ಇಲ್ಲವೆ ಊದಾ ಬಣ್ಣದ ಗೆರೆಗಳೂ ಇವೆ. ಹೂಗಳು ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಜೋಡಣೆಗೊಂಡಿವೆ. ಇವುಗಳ ಬಣ್ಣ ಬಿಳಿ, ಹಳದಿ, ನೇರಿಳೆ, ಊದಾ ಇತ್ಯಾದಿಯಾಗಿ ವೈವಿಧ್ಯಮಯ. ಹೂಗಳಿಗೆ ನವಿರಾದ ಸುವಾಸನೆಯೂ ಇದೆ.

ಪ್ರಭೇದಗಳು[ಬದಲಾಯಿಸಿ]

ಇದರಲ್ಲಿ ಈ ಕೆಳಗಿನ ಮುಖ್ಯ ಪ್ರಭೇದಗಳಿವೆ:

ಕೆಂಫೆರಿಯ ರೊಟಂಡ
  1. ಕೆಂಫೆರಿಯ ರೊಟಂಡ: ಈ ಪ್ರಭೇದಕ್ಕೆ ನೆಲಸಂಪಿಗೆ ಎಂಬುದು ಬಳಕೆಯ ಹೆಸರು. ಎಲೆಗಳು ಭರ್ಜಿಯಾಕಾರದವು. ಬಣ್ಣ ಕಡುಹಸುರು. ಇದರ ಹೂ ಬಿಡುವ ಶ್ರಾಯ ಏಪ್ರಿಲ್-ಮೇ ತಿಂಗಳುಗಳು. ಆಗ ಇದು ಭೂಮಿಗೆ ಸಮೀಪವಾಗಿ ನೀಲಿ ಮತ್ತು ಬಿಳಿ ಬಣ್ಣದ ಹೂಗಳನ್ನು ಬಿಡುತ್ತದೆ.
ಕೆಂಫೆರಿಯ ಗಲಾಂಗದ ಒಂದು ನಕ್ಷೆ.೧೮೦೫ರ ಬಟಾನಿಕಲ್ ಮ್ಯಾಗಜೈನ್ ಪತ್ರಿಕೆಯಿಂದ
  1. ಕೆಂಫೆರಿಯ ಗಲಾಂಗ: ಈ ಪ್ರಭೇದಕ್ಕೆ ಚಂದ್ರಮುಖಿ ಎಂಬುದು ಬಳಕೆಯ ಹೆಸರು. ಇದರ ಎಲೆಗಳಿಗೆ ತೊಟ್ಟಿಲ್ಲ. ಎಲೆ ಮತ್ತು ಬೇರುಗಳನ್ನು ಕೊಂಚ ಹಿಸುಕಿದರೆ ಹಿತಕರ ವಾಸನೆ ಬರುತ್ತದೆ. ಹೂಗಳ ಬಣ್ಣ ಬಿಳಿ.

ಸಸ್ಯಾಭಿವೃದ್ಧಿ[ಬದಲಾಯಿಸಿ]

ಇವುಗಳ ಪ್ರಕಂದದ ತುಂಡುಗಳಿಂದ ಕೆಂಫೆರಿಯ ಜಾತಿಯ ಸಸ್ಯಗಳನ್ನು ವೃದ್ಧಿ ಮಾಡಬಹುದು. ಫಲವತ್ತಾದ ಮತ್ತು ಹೆಚ್ಚು ತೇವಾಂಶದಿಂದ ಕೂಡಿದ ಮಣ್ಣು ಅಗತ್ಯ. ನಾಟಿಮಾಡಲು ಫೆಬ್ರುವರಿ ತಿಂಗಳು ಯೋಗ್ಯ ಕಾಲ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Kew World Checklist of Selected Plant Families
  2. Flora of China v 24 p 368, 山柰属 shan nai shu, Kaempferia Linnaeus, Sp. Pl. 1: 2. 1753.
  3. Techaprasan, J., Klinbunga, S., Ngamriabsakul, C. & Jenjittikul, T. (2010). Genetic variation of Kaempferia (Zingiberaceae) in Thailand based on chloroplast DNA (psbA-trnH and petA-psbJ) sequences. Genetics and Molecular Research 9: 1957-1973.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: