ಕೆಂಪು ಮೂಲಂಗಿ

ವಿಕಿಪೀಡಿಯ ಇಂದ
Jump to navigation Jump to search
ಕೆಂಪು ಮುಲಂಗಿ
BunchCarrots.jpg
Harvested carrots
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Angiosperms
(unranked): Eudicots
(unranked): Asterids
ಗಣ: Apiales
ಕುಟುಂಬ: Apiaceae
ಕುಲ: Daucus
ಪ್ರಭೇದ: D. carota
ದ್ವಿಪದ ಹೆಸರು
Daucus carota subsp. sativus
(Hoffm.) Schübl. & G. Martens

ಕೆಂಪು ಮುಲಂಗಿ, ಒಂದು ಮೂಲ ತರಕಾರಿ , ಸಾಮಾನ್ಯವಾಗಿ ಕಿತ್ತಳೆ ನೇರಳೆ ಬಣ್ಣದಲ್ಲಿ, ಕೆಂಪು, ಬಿಳಿ ಮತ್ತು ಹಳದಿ ಪ್ರಭೇದಗಳ ಅಸ್ತಿತ್ವದಲ್ಲಿವೆ . ಇದು ತಾಜಾ ಒಂದು ಗರಿಗರಿಯಾದ ವಿನ್ಯಾಸ ಹೊಂದಿದೆ . ಇದು ಯುರೋಪ್ ಮತ್ತು ನೈರುತ್ಯ ಏಷ್ಯಾದಲ್ಲಿ ಕಾಡು ಕ್ಯಾರಟ್ ಡೌಕಸ್ ಕಾರೊಟ ಒಂದು ಒಗ್ಗಿಸಿದ ರೂಪ. ದೇಶೀಯ ಕ್ಯಾರೆಟ್ ಆಯ್ದ ಅದರ ಬಹಳವಾಗಿ ವಿಸ್ತರಿಸಿದ ಮತ್ತು ಹೆಚ್ಚು ರುಚಿಕರ , ಕಡಿಮೆ ವುಡಿ ರೀತಿಯ ಖಾದ್ಯ ಟ್ಯಾಪ್ ರೂಟ್ ಬೆಳೆಯುತ್ತದೆ . ಸಂಯುಕ್ತ ರಾಷ್ಟ್ರ ಸಂಘದ ಆಹಾರ ಮತ್ತು ಕೃಷಿ ಸಂಸ್ಥೆ (ಎಫ಼್‍ಎಒ) ಕ್ಯಾಲೆಂಡರ್ 2011 ( ಈ ಸಸ್ಯಗಳು ಉದ್ದೇಶಗಳಿಗಾಗಿ ವರದಿ ಎಫ್ಎಒ ಸೇರಿಸಬಹುದು) ಕ್ಯಾರೆಟ್ ಮತ್ತು ಟರ್ನಿಪ್ ವಿಶ್ವದ ಉತ್ಪಾದನೆ ಬಹುತೇಕ 35,658 ದಶಲಕ್ಷ ಟನ್ ಎಂದು ವರದಿ. ಅರ್ಧದಷ್ಟು ಚೀನಾ ಬೆಳೆದ. ಕ್ಯಾರೆಟ್ ವ್ಯಾಪಕವಾಗಿ ವಿಶೇಷವಾಗಿ ಸಲಾಡ್ ತಯಾರಿಕೆಯಲ್ಲಿ , ಅನೇಕ ಅಡುಗೆಗಳನ್ನು ಬಳಸಲಾಗುತ್ತದೆ , ಮತ್ತು ಕ್ಯಾರೆಟ್ ಸಲಾಡ್ ಅನೇಕ ಪ್ರಾದೇಶಿಕ ಪಾಕಪದ್ಧತಿಗಳು ಒಂದು ಸಂಪ್ರದಾಯದ ಅವು.ಉತ್ತರ ಭಾರತದಲ್ಲಿ ಮತ್ತು ಬೇರೆ ದೇಶಗಳಲ್ಲೂ ಕೆಂಪು ಮುಲಂಗಿಗೆ ಗಜ್ಜರ್,ಗಾಜರ್,ಕ್ಯಾರೆಟ್ ಎಂಬ ಹೆಸರುಗಳು ಇವೆ.ಕೆಂಪು ಮುಲಂಗಿ ಅಂಬೆಲ್ಲಿಫ಼ೆರೇ ಕುಟುಂಬದ ಒಂದು ಸಸ್ಯವಾಗಿದೆ.ಮೆಡಿರೇನಿಯನ್ ಪ್ರದೇಶ ಮತ್ತು ಮಧ್ಯ ಏಷ್ಯಾ ಕೆಂಪು ಮುಲಂಗಿನ ತವರೂರು ಎಂದು ಹೇಳುತ್ತಾರೆ.ಈ ಪ್ರದೇಶಗಳಲ್ಲಿ ೨೦೦೦ ವರ್ಷಗಳಿಂದ ಬೆಳಸುತ್ತಿದ್ದಾರೆ.ಕೆಂಪು ಮುಲಂಗಿನ ಮೂಲದ ಬಗೆಗೆ ಸಸ್ಯವಿಜ್ಞಾನಿಗಳ ಪ್ರಕಾರ ಮಧ್ಯ ಏಷ್ಯಾದ ಅದರಲ್ಲೂ ಮುಖ್ಯವಾಗಿ ಪಂಜಾಬ್ ಮತ್ತು ಕಶ್ಮೀರ ಪ್ರದೇಶವು ಕೆಂಪು ಮುಲಂಗಿನ ಮೂಲ ಸ್ಥಳವಾಗಿದೆ.ಇದರೊಂದಿಗೆ ಏಷ್ಯಾ,,ಯುರೊಪ್,ಉತ್ತರ ಆಫ್ರಿಕ ಮತ್ತು ಮೆಡಿಟರೇನಿಯನ್ ಸುತ್ತಲಿರುವ ಪ್ರದೇಶಗಳು ಸಹ ಕೆಂಪು ಮುಲಂಗಿನ ಮೂಲ ಸ್ಥಳಗಳಾಗಿರುವ ಸಾಧ್ಯಾತೆಗಳಿವೆ.

ಇತಿಹಾಸದ ಪೌಟದಲ್ಲಿ ಕೆಂಪು ಮೂಲಂಗಿ[ಬದಲಾಯಿಸಿ]

ಕೆಲವು ಸಸ್ಯವಿಜ್ಞಾನಿಗಳ ಪ್ರಕಾರ ಅಫಘಾನಿಸ್ತಾನವು ಕ್ಯಾರೆಟ್‍ನ ಮೂಲಸ್ಥಳವಾಗಿದೆ,ಇಲ್ಲಿ ೫೦೦೦ ವರ್ಷಗಳ ಹಿಂದಿನಿಂದಲೂ ಕ್ಯಾರೆಟ್ ಬೆಳೆಸುತ್ತಿದ್ದಾರೆ.ಒಂದು ವಿಶೇಷ ಸಂಗತಿಯೆಂದರೆ ಮೊದಮೊದಲು ಕ್ಯಾರೆಟ್‍ಗಳು ಬಿಳಿ,ನೀಲಿ,ಕೆಂಪು,ಅರಿಷಿನ,ಹಸಿರು ಮತ್ತು ಕಪ್ಪು ಬಣ್ಣದಲ್ಲಿದ್ದವು.ಈಗ ಇರಿವಂತಹ ಕಿತ್ತಳೆ ಬಣ್ಣದ ಕ್ಯಾರೆಟ್ ಬಹಳ ಹಿಂದೆ ಇರಲಿಲ್ಲ. ಕೃಷಿ ಮಾಡುತ್ತ ಕಿತ್ತಳೆ ಬಣ್ಣದ ಕ್ಯಾರೆಟ್ ಅಭಿವೃದ್ಧಿ ಹೊಂದಿತು.ಕ್ರಿ.ಪೂ.೨೦೦೦ ವರ್ಷಗಳಷ್ಟು ಹಿಂದಿನ ಈಜಿಪ್ತಿನ ದೇಗುಲಗಳ ಚಿತ್ರಗಳಲ್ಲಿ ಕ್ಯಾರೆಟ್ ಅನ್ನು ಹೋಲುವ ಗಿಡದ ಚಿತ್ರವಿದ್ದು ,ಇದನ್ನು ಕ್ಯಾರೆಟ್ ಎಂದು ಕೆಲವು ಈಜಿಪ್ತ್ ತಜ್ಞರು ಹೇಳುತ್ತಾರೆ.ಈಜಿಪ್ತಿನ ಪೆಪಿರಾಸ್‍ಗಳಲ್ಲಿ ಕ್ಯಾರೆಟ್ ಮತ್ತು ಅದರ ಬೀಜವನ್ನು ಔಷಧವಾಗಿ ಬಳಸುವ ವಿಧಾನಗಳನ್ನು ತಿಳಿಸಲಾಗಿದೆ.ಸ್ವಿಡ್ಜರ್ಲೆಂಡಿನ ಕೆರೆ ಪ್ರದೇಶಗಳ ಉತ್ಖನನ ಸ್ಥಳಗಳಲ್ಲಿ ಇತಿಹಾಸ ಪೂರ್ವ ಕಾಲದಲ್ಲಿ ಕ್ಯಾರೆಟ್ ಬೀಜವನ್ನು ಬಳಸುತ್ತಿದ್ದುದು ಪತ್ತೆಯಾಗಿದೆ.ನವಶೆಲಾಯುಗದ ಮನುಷ್ಯರು ವನ್ಯಪ್ರದಏಶಗಳಲ್ಲಿ ಬೆಳೆಯುತಿದ್ದ ಕ್ಯಾರೆಟ್ ಅನ್ನು ಉಪಯೋಗಿಸುತ್ತಿದ್ದರು.ಇಂಗ್ಲೆಂಡಿನಲ್ಲಿ ಎಲಿಜಿಬೆತ್ ರಾಣಿಯ ಆಳ್ವಿಕೆಯ ಕಾಲದಲ್ಲಿ ಇಂಗ್ಲೆಂಡಿನ ಮಹಿಳೆಯರು ತಮ್ಮ ಟೊಪ್ಪಿಗೆಗಲಳಿಗೆ ಕ್ಯಾರೆಟ್‍ನ್ನು ಸೇರಿಸಿ ಹೆಮ್ಮೆಯಿಂದ ನಡೆಯುತಿದ್ದರು.೧೨ನೆ ಶತಮಾನದಲ್ಲಿ ಮೊರಕ್ಕೋ ದೇಶದ ಆಕ್ರಮಣಕಾರರು ಅನಂತರ ಅರೆಬಿಯಾದ ವರ್ತಕರು ಕ್ಯಾರೆಟ್‍ನ ಬೀಜಗಳನ್ನು ಮೆಡಿಟರೇನಿಯನ್ ಪ್ರದೇಶದ ಸುತ್ತ ಪ್ರಸಾರ ಮಾಡಿದರು.ಹೀಗೆ ಕ್ಯಾರೆಟ್ ಯುರೋಪಿನ ಸ್ಪೈನ್‍ನಿಂದ ಹಾಲೆಂಡ್,ಫ಼್ರಾನ್ಸ್,,ಕೊನೆಗೆ ಇಂಗ್ಲೆಂಡ್‍ವರೆಗೆ ಪ್ರಸಾರಗೊಂಡು ಕೃಷಿ ಭೂಮಿಗೆ ಇಳಿಯಿತು.ಭಾರತಕ್ಕೆ ಕ್ಯಾರೆಟ್ ತೀರ ಹಿಂದೆ ಅಫ಼ಘಾನಿಸ್ತಾನದಿಂದ ಬಂದಿರಬಹುದೆಂದು ಸಸ್ಯವಿಜ್ಞಾನಿಗಳು ಹೇಳುತ್ತಾರೆ.

ಕೆಂಪು ಮುಲಂಗಿಗೆ ಬೇರೆ ಬೇರೆ ಹೆಸರುಗಳು[ಬದಲಾಯಿಸಿ]

ಕ್ಯಾರೆಟ್‍ಗೆ ಬೇರೆ ಬೇರೆ ಭಷೆಗಳಲ್ಲಿರುವ ಹೆಸರುಗಳು ಇವು :

 • ಸಸ್ಯವೈಜ್ಞಾನಿಕ ಹೆಸರು : ಡೌಕಸ್ ಕಾರೊಟ
 • ಇಂಗ್ಲಿಷ್ : ಕ್ಯಾರೆಟ್
 • ಕನ್ನಡ : ಗಜ್ಜರಿ,ಕೆಂಪು ಮುಲಂಗಿ,ಕ್ಯಾರೆಟ್
 • ಸಂಸ್ಕೃತ : ಗರ್ಜರ್,ಪಿಂಡಮೂಲ
 • ಗುಜರಾತಿ : ಗಾಜರ್
 • ಮರಾಠಿ : ಗಾಜರ್,ರೋಹಿಮೂಲ್
 • ಪಂಜಾಬಿ : ಗಾಜರ್
 • ತೆಲುಗು : ಗಜ್ಜರ್‍‍ಗಡ್ಡ
 • ತಮೀಳು : ಗಜ್ಜರಕಿಳಂಗು
 • ಕಾಶ್ಮೀರ : ಮೊರ್ಮುಜ್ಜ್
 • ಅರೇಬಿಕ್ : ಜ್ಯಾಜರ್
 • ಪರ್ಷಿಯನ್ : ಜರ್ದಕ್
 • ಫ಼್ರೆಂಚ್ : ಕರೋಟ್
 • ಜರ್ಮನ್ : ಕರೋಟ್ಟಿ

ಕೆಂಪು ಮುಲಂಗಿ ವೈವಿಧ್ಯ[ಬದಲಾಯಿಸಿ]

ಕೆಂಪು ಮುಲಂಗಿ ಗಿಡವು ಎಲ್ಲ ಗಿಡಗಳ ಹಾಗೆ ಆಹಾರವನ್ನು ತಯಾರಿಸುತ್ತವೆ.ಹೀಗೆ ತಯಾರಾದ ಆಹಾರವು ನೆಲದಾಳದ ಗೆಡ್ಡೇಗಳಲ್ಲಿ ಸಂಗ್ರಹಗೊಳ್ಳುತ್ತವೆ.ಕೆಂಪು ಮುಲಂಗಿನ ನಡುಭಾಗದ ದಿಂಡು ನಾರಿನಿಂದ ಕೂಡಿದ್ದು ಬಲಿತಾಗ ಸೇವನೆಗೆ ಯೋಗ್ಯವಾಗುವುದಿಲ್ಲ.ದಿಂಡಿನ ಸುತ್ತಲೂ ಇರುವ ತಿರುಳು ಗಿಡದ ಆಹಾರ ಸಂಗ್ರಹವಾಗಿದ್ದು ತಿನ್ನಲು ಯೋಗ್ಯವಾಗಿರುತ್ತದೆ.ಕೃಷಿ ಮಾಡಲಾಗುತ್ತಿರುವ ಕೆಂಪು ಮುಲಂಗಿ ಬಿಳಿ,ಅರಿಶಿನ,ಕಿತ್ತಳೆ,ಕೆಂಪು,ಗಾಢ ಕೆಂಪು,ನೀಲಿ ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಕಾಣಸಿಗುತ್ತದೆ.ಆದರೆ ಕೆಂಪು ಬಣ್ಣದ ಕಿತ್ತಳೆ ಬಣ್ಣದ ಕೆಂಪು ಮುಲಂಗಿಗೆ ಹೆಚ್ಚು ಮನ್ನಣೆ ಇದೆ.ಕಿತ್ತಳೆ ಬಣ್ಣದ ಕೆಂಪು ಮುಲಂಗಿನಲ್ಲಿ 'ಎ' ಜೀವಸತ್ವ ಸಮೃದ್ಧವಾಗಿರುವುದರಿಂದ ಕಿತ್ತಳೆ ಬಣ್ಣದ ಕೆಂಪು ಮುಲಂಗಿಯನ್ನು ಹೆಚಾಭೇಗಿ ಸವಿಸಬೇಕು.ಹಳದಿ ಬಣ್ಣದ ಕೆಂಪು ಮುಲಂಗಿನಲ್ಲಿ ಝಾಂತೋಫೈಲ್ಸ್ ಹೆಚ್ಚಾಗಿರುತ್ತದೆ ಇದು ಸಹ ಕಣ್ಣಿನ ಆರೋಗ್ಯವನ್ನು ಕಾಪಾಡುವುದಲ್ಲದೇ ಶ್ವಾಸಕೋಶ ಮತ್ತು ಇತರ ಅಂಗಾಂಗಗಳ ವಿರುದ್ಧ ರಕ್ಷಣೇಯನ್ನು ನೀಡುತ್ತದೆ.ಇಂತಹ ಕ್ಯಾರೆಟ್‍ನ ಮಧ್ಯಪ್ರಾಚ್ಯ ದೇಶಗಳು.ಕೆಂಪು ಕ್ಯಾರೆಟ್‍ನಲ್ಲಿ ಲೈಕೋಪೀನ್ ಸಮೃದ್ಧವಾಗಿರುತ್ತದೆ.ಇದೊಂದು ವರ್ಣಕಾರಕವಾಗಿದ್ದು, ಕ್ಯಾರೋಟಿನ್‍ನ ಮತ್ತೊಂದು ರೂಪವಗಿದೆ.ಪ್ರಾಸ್ಟೇಟ್‍ನಂತಹ ಕೆಲ ಬಗೆಯ ಕ್ಯನ್ಸರ್‍ಗಳ ವಿರುದ್ದ ಮತ್ತು ಹೃದಯ ರೋಗಗಳ ವಿರುದ್ಧ ಲೈಕೋಪೀನ್ ರಕ್ಷಣೆ ನೀಡುವುದು ಸಾಬೀತಾಗಿದೆ.ಕೆಂಪು ಕ್ಯಾರೆಟ್‍ನ ಮೂಲ ಭಾರತ ಮತ್ತು ಚೀನಾ.ಕ್ಯರೆಟ್‍ನ ಎಲೆಗಳಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ.ಇವನ್ನು ದನಕರುಗಳ ಮೇವಿನಲ್ಲಿ ಉಪಯೋಗಿಸಬಹುದು.ಕ್ಯಾರೆಟ್‍ನಲ್ಲಿರುವ ವರ್ಣಕಾರಕವನ್ನು ಪ್ರತ್ಯೇಕಿಸಿ ಹಲವು ರೀತಿಯಲ್ಲಿ ಉಪಯೋಗಿಸುತ್ತಾರೆ.ಬೆಣ್ಣೆಗೆ ನೈಸರ್ಗಿಕ ಬಣ್ಣವನ್ನು ಇದನ್ನು ಉಪಯೋಗಿಸುತ್ತಾರೆ.ಕ್ಯರೆಟ್ ಬೀಜವು ಕಾಮೋತ್ತೇಜಕ ಗುಣವನ್ನು ಹೊಂದಿದೆ.ಫ಼್ರಾನ್ಸ್ನಲ್ಲಿ ಬಹಳ ಹಿಂದಿನಿಂದ ಕ್ಯಾರೆಟ್ ಬೀಜದ ಎಣ್ಣೆಯ ತಯಾರಿಕೆ ಮತ್ತು ಬಳಕೆ ನಡೆದಿದೆ.

ಆಯುರ್ವೇದದಲ್ಲಿ ಕೆಂಪು ಮುಲಂಗಿ[ಬದಲಾಯಿಸಿ]

ಆಯುರ್ವೇದದ ಗ್ರಂಥಗಳಲ್ಲಿ ಕ್ಯಾರೆಟ್‍ಗೆ ಗ್ರಂಜನ ಎಂಬ ಹೆಸರಿದೆ. ದ್ರವ್ಯಗುಣ ವಿಜ್ಞಾನದ ಕಂದಶಖ ವರ್ಗದ ಸಸ್ಯಗಳಲ್ಲಿ ಇದು ಬರುತ್ತದೆ.ಸಂಸ್ಕೃತದಲ್ಲಿ ಇದಕ್ಕೆ 'ಶಿಖಮೂಲಂ' ಎಂಬ ಹೆಸರು ಇದೆ.ಶಿಖೆ ಎಂದರೆ ತಲೆ ಕೂದಲು ಎಂದು ಅರ್ಥ.ಮೂಲ ಎಂದರೆ ಬೇರುಗಿಡವೆಂದು ಇದರ ಅರ್ಥ.ಊತದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕ್ಯಾರೆಟ್ ಒಳ್ಳೆಯದು ಎಂದಿದ್ದಾರೆ.ಉಸಿರಾಟದ ತೊಂದರೆ ಇದ್ದಾಗ ಮತ್ತು ಬಿಕ್ಕಳಿಕೆಯ ಸಮಸ್ಯೆ ಇದ್ದಾಗ ಕ್ಯಾರೆಟ್‍ನ್ನು ನೀರಿನಲ್ಲಿ ತೇಯ್ದು, ಅದನ್ನು ಮೂಗಿನಲ್ಲಿ ನಶ್ಯದಂತೆ ಬಳಸಬೇಕು ಎಂದು ಹೇಲಿದ್ದಾರೆ.ಮೂಲವ್ಯಾಧಿಯಿಂದ ಬಳಲುತ್ತಿರುವವರು ಹುಳಿ ಮೊಸರಿನಲ್ಲಿ ಕ್ಯಾರೆಟ್ ಬೇಯಿಸಿ,ದಾಳಿಂಬೆ ಮತ್ತು ತುಪ್ಪದೊಂದಿಗೆ ಸೇವಿಸಲು ಹೇಳಿದ್ದಾರೆ.ಮೊಸರಿನ ಕೆನೆಯ ಸಂಗಡ ಕ್ಯಾರೆಟನ್ನು ತಿಂದರೆ ಗಂಭೀರ ಸ್ವರೂಪದ ಮೂಲವ್ಯಾಧಿಗಳ ತೀವ್ರತೆ ಕಡಮೆಯಾಗುತ್ತದೆ.ರಾಜನಿಘಂಟು ಪ್ರಕಾರ ಕ್ಯಾರೆಟ್ ಮಧುರ ರಸ ಹೊಂದಿದೆ.ವಾಯು ಬಾಧೆಯನ್ನು ನಿಯಂತ್ರಿಸುತ್ತದೆ.

ಆರೋಗ್ಯಕ್ಕಾಗಿ ಕ್ಯಾರೆಟ್[ಬದಲಾಯಿಸಿ]

ತುಸು ಸಿಹಿಮಿಶ್ರ ಕಟು ರುಚಿ ಇರುವ ಕ್ಯಾರೆಟ್ ಒಂದು ಶುದ್ದೀಕಾರಕ ತರಕಾರಿ ಎಂದು ಹೆಸರು ಗಳಿಸಿದೆ.ಇದನ್ನು ಚೆನ್ನಾಗಿ ತೊಳೆದು ತಿನ್ನುವುದರಿಂದ ಬಾಯಿ ಸ್ವಚ್ಛವಾಗುದಷ್ಟೇ ಅಲ್ಲದೆ ತದನಂತರ ಜೀರ್ಣಾಂಗವ್ಯೂಹವಿಡೀ ಸ್ವಚ್ಛವಾಗುತ್ತದೆ.ಅಂತಿಮವಾಗಿ ಮಲಬದ್ದತೆಯಿಂದಲೂ ಮುಕ್ತಿ ಸಿಗುತ್ತದೆ.ಕ್ಯಾರೆಟ್‍ನಲ್ಲಿ ಕ್ಷಾರೀಯ ಅಂಶಗಳು ಹೆಚ್ಚಾಗಿರುವುದರಿಂದ ಇದು ರಕ್ತವನ್ನು ಶುದ್ಧೀಕರಿಸುತ್ತದೆ.ರಕ್ತಕ್ಕೆ ಪುನಶ್ಚೇತನ ನೀಡುತ್ತದೆ.ದೇಹದಲ್ಲಿ ಕ್ಷಾರ ಮತ್ತು ಆಮ್ಲೀಯತೆಯ ಸಮಸ್ಥಿತಿಯನ್ನು ಕಾಪಾಡುವಲ್ಲಿ ನೆರವಾಗುತ್ತದೆ.ಕ್ಯಾರೆಟ್‍ನಲ್ಲಿ ಸಾವಯವ ಪ್ರೋಟೀನು ಅಲ್ಲದೆ ಕಾರ್ಬೋಹೈಡ್ರೆಟ್ಸ್ಗಳು- ಪೊಟ್ಯಾಷಿಯಂ-ಕ್ಯಾಲ್ಸಿಯಂ-ರಂಜಕ-ಗಂಧಕ-ಕ್ಲೋರಿನ್-ಕಬ್ಬಿಣದಂತಹ ಖನಿಜಗಳು ಸಮೃದ್ಧವಾಗಿವೆ.ಅಲ್ಪಪ್ರಮಾಣದಲ್ಲಿ ಅಯೋಡಿನ್ ಸಹ ಇದೆ.ಈ ಪೋಷಕಾಂಷಗಳು ಕ್ಯ್ಯರೆಟ್‍ನ್ ಸಿಪ್ಪೆಯ ಬದಿಯಲ್ಲಿ ಕೇಂದ್ರೀಕೃತವಾಗಿರುತ್ತದೆ.ಆದ್ದರಿಂದ ಇವು ದೇಹಕ್ಕೆ ಲಭ್ಯವಾಗಬೇಕಾದರೆ ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು,ಸಿಪ್ಪೆ ತೆಗೆಯದೆಯೇ ಬಳಸುವುದು ಮುಖ್ಯ.. ಹಸಿ ಕ್ಯಾರೆಟ್ ತಿನ್ನುವುದರಿಂದ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದಷ್ಟೇ ಅಲ್ಲದೆ,ದೇಹದಲ್ಲಿರುವ ಜಂತುಹುಳುಗಳ ನಿವಾರಣೆಯೂ ಆಗುತ್ತದೆ.ಕ್ಯಾರೆಟ್‍ನಲ್ಲಿ 'ಎ' ಮತ್ತು 'ಸಿ' ಜೀವಸತ್ವಗಳು ಹೆಚ್ಚಾಗಿರುತ್ತವೆ.ಅಲ್ಲದೆ ಜೀವಸತ್ವ ಬಿ೧ ಮತ್ತು ಬಿ೨ ಗಳು ಸಹ ಇರುತ್ತವೆ.ಕ್ಯಾರೆಟ್‍ನ ಸೊಪ್ಪಿನಲ್ಲಿ ಜೀವಸತ್ವ ಬಿ೨ ಸಮೃದ್ಧವಾಗಿರುತ್ತವೆ.ಕ್ಯಾರೆಟ್‍ನಲ್ಲಿ 'ಎ' ಜೀವಸತ್ವವು ಹೆಚ್ಚಾಗಿದ್ದು, ಕ್ಷಾರೀಯ ಖನಿಜಗಳು ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.ಕಣ್ಣಿನ ತೊಂದರೆಗಳಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕರ.ಇದೇ ಕಾರಣಗಳಿಂದಾಗಿ ಉಸಿರಾಟದ ಸಮಸ್ಯೆಗಳು,ಹೊಟ್ಟೆಯ ತೋದರೆಗಳು,ಸಂಧಿವಾತ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಕ್ಯಾರೆಟ್ ಒಂದು ಔಷಧಯುಕ್ತ ಆಹರವಾಗಿದೆ.ಅಸ್ತಮಾ,ಅನೀಮಿಯಾ,ಇರುಳು ಕುರುಡು,ದೇಹದಲ್ಲಿ ಕಲ್ಲುಗಳಾಗುವುದು,ಅಸಿಡೋಸಿಸ್,ರಕ್ತಮಾಲಿನ್ಯ ಮತ್ತು ಚರ್ಮದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕ್ಯಾರೆಟ್ ಒಂದು ಒಳ್ಳೆಯ ಆಹಾರವಾಗಿದೆ.ಮೂತ್ರವಿಸರ್ಜನೆ ಮಾದುವಾಗ ಉರಿಯ ಅನುಭವ ಆಗುವವರಿಗೆ ಕ್ಯಾರೆಟ್ ಒಳ್ಳೆಯದು.ದೇಹದ ಚರ್ಮದ ಕಾಂತಿಯನ್ನು ಹೆಚ್ಚಿಸಲು ಕ್ಯಾರೆಟ್ ಸೇವನೆ ಮಾಡಬಹುದು.ಬಾಣಂತಿಯರು ಕ್ಯಾರೆಟ್ ರಸವನ್ನು ಸೇವಿಸುವುದರಿಂದ ಅವರ ಎದೆಹಾಲಿನ ಗುಣಮಟ್ಟವು ಚೆನ್ನಾಗಿರುತ್ತದೆ.ಹಾಲಿನಲ್ಲಿ ಇರುವುದಕ್ಕಿಂತ ೨೦ ಪಟ್ಟು ಹೆಚ್ಚು 'ಎ' ಜೀವಸತ್ವವು ಕ್ಯಾರೆಟ್‍‍ನಲ್ಲಿರುತ್ತದೆ. ಬೆಳವಣಿಗೆ ಕುಂಠಿತವಾಗಿರುವವರಿಗೆ,ನಿಶ್ಯಕ್ತಿಯಿಂದ ಬಳಲುತ್ತಿರುವವರಿಗೆ,ಹೊಟ್ಟೆಯ ತೊಂದರೆಗಳಿರುವವರಿಗೆ,ನಿದ್ರಾಹೀನತೆಯಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕ್ಯಾರೆಟ್ ರಸ ಪ್ರಯೋಜನಕರವಾಗಿದೆ.ಮೂಳೆ ಮತ್ತು ಹಲ್ಲಿನ ಬೆಳವಣಿಗೆಗೆ ಕ್ಯರೆಟ್ ಸಹಾಯ ಮಾಡುತ್ತದೆ.