ಕೆಂಗಣ್ಣು
ಗೋಚರ
ಕೆಂಗಣ್ಣು ಎಂದರೆ ಅಸ್ವಸ್ಥತೆ ಅಥವಾ ಗಾಯದ ಕಾರಣ ಕೆಂಪಾಗಿ ಕಾಣುವ ಕಣ್ಣು. ಇದು ಸಾಮಾನ್ಯವಾಗಿ ಕಣ್ಣಿನ ಆರ್ದ್ರಚರ್ಮದ ಮೇಲ್ಮೈ ರಕ್ತನಾಳಗಳ ಒಳತುಂಬುವಿಕೆ ಮತ್ತು ಚಾಚಿಕೆ/ಎದ್ದುಕಾಣುವಿಕೆ. ಇದು ಈ ರಚನೆಗಳು ಅಥವಾ ಪಕ್ಕದ ರಚನೆಗಳ ಅಸ್ವಸ್ಥತೆಗಳಿಂದ ಉಂಟಾಗಿರಬಹುದು. ಎರಡು ಕಡಿಮೆ ಗಂಭೀರ ಆದರೆ ಹೆಚ್ಚು ಸಾಮಾನ್ಯ ಕಾರಣಗಳೆಂದರೆ ಕಂಜಂಕ್ಟಿವೈಟಿಸ್ ಮತ್ತು ಕಾಂಜಂಕ್ಟೈವಾದ ಕೆಳಗಿನ ರಕ್ತಸ್ರಾವ.[೧] ಇದರ ನಿರ್ವಹಣೆಯಲ್ಲಿ (ಶಿಫಾರಸು ಸೇರಿದಂತೆ) ತುರ್ತು ಕ್ರಮ ಬೇಕಾಗಿದೆಯೇ, ಅಥವಾ ಯಾವುದೇ ಹೆಚ್ಚುವರಿ ಸಂಪನ್ಮೂಲಗಳಿಲ್ಲದೆಯೇ ಚಿಕಿತ್ಸೆ ನಡೆಸಬಹುದೇ ಎಂದು ನಿರ್ಧಾರ ಮಾಡುವುದು ಸೇರಿದೆ. ಕಾಂಜಂಕ್ಟೈವಾದ ಕೆಳಗಿನ ರಕ್ತಸ್ರಾವವು ಕೆಲವೊಮ್ಮೆ ಎದ್ದುಕಾಣಬಹುದು, ಆದರೆ ಸಾಮಾನ್ಯವಾಗಿ ನಿರುಪದ್ರವಿಯಾಗಿರುತ್ತದೆ. ಇದು ಬಹುತೇಕ ವೇಳೆ ಚಿಕ್ಕ, ದುರ್ಬಲ ರಕ್ತನಾಳಗಳು ಅಪ್ರಯತ್ನಿತವಾಗಿ ಛಿದ್ರಗೊಳ್ಳುವುದರಿಂದ ಉಂಟಾಗುತ್ತದೆ, ಸಾಮಾನ್ಯವಾಗಿ ಕೆಮ್ಮು ಅಥವಾ ಸೀನಿನಿಂದ.
ಉಲ್ಲೇಖಗಳು
[ಬದಲಾಯಿಸಿ]