ಕೃಷ್ಣ ಟಾಕೀಸ್ (ಚಲನಚಿತ್ರ)
Krishna Talkies | |
---|---|
ನಿರ್ದೇಶನ | Vijayanandha |
ನಿರ್ಮಾಪಕ | Govindaraju |
ಪಾತ್ರವರ್ಗ | |
ಸಂಗೀತ |
|
ಛಾಯಾಗ್ರಹಣ | ಅಭಿಷೇಕ್ ಕಾಸರಗೋಡು |
ಸಂಕಲನ | ಶ್ರೀಕಾಂತ್ |
ಸ್ಟುಡಿಯೋ | ಗೋಕುಲ ಎಂಟರ್ಟೇನರ್ಸ್ |
ಬಿಡುಗಡೆಯಾಗಿದ್ದು | ೧೬ ಏಪ್ರಿಲ್ ೨೦೨೧ |
ಕೃಷ್ಣ ಟಾಕೀಸ್ - ಇದು 2021 ರ ಕನ್ನಡ ಭಾಷೆಯ ಮಿಸ್ಟರಿ ಥ್ರಿಲ್ಲರ್ ಚಲನಚಿತ್ರವಾಗಿದ್ದು, ವಿಜಯ್ ಆನಂದ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಗೋವಿಂದರಾಜು ನಿರ್ಮಿಸಿದ್ದಾರೆ, ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ಸಂಯೋಜನೆ ಮತ್ತು ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣದೊಂದಿಗೆ ಇದು 16 ಏಪ್ರಿಲ್ 2021 ರಂದು ಭಾರತದಲ್ಲಿ ಬಿಡುಗಡೆಯಾಯಿತು.
ಕಥಾವಸ್ತು
[ಬದಲಾಯಿಸಿ]ಕೃಷ್ಣ ಟಾಕೀಸ್ ಎಂಬ ಹೆಸರಿನ ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲಿ 13ನೇ ನಂಬರ್ ಬಾಲ್ಕನಿ ಟಿಕೆಟ್ ಹೊಂದಿರುವ ಸಿನಿ ಪ್ರೇಕ್ಷಕರ ಮೇಲೆ ಕೊಲೆ, ಸಾವು ಮತ್ತು ಅಪಘಾತಗಳ ಸರಣಿಯ ನಿಗೂಢ ಬೆದರಿಕೆಗಳನ್ನು ಒಡ್ಡುತ್ತದೆ. ಅಜಯ್ ಎಂಬ ಪತ್ರಕರ್ತ ಸತ್ಯವನ್ನು ಬಿಚ್ಚಿಡಲು ಹೊರಡುತ್ತಾನೆ.
ಪಾತ್ರವರ್ಗ
[ಬದಲಾಯಿಸಿ]- ಅಜಯ್ ಪಾತ್ರದಲ್ಲಿ ಅಜಯ್ ರಾವ್
- ಅಪೂರ್ವ
- ಪರಿಮಳಾ ಪಾತ್ರದಲ್ಲಿ ಸಿಂಧು ಲೋಕನಾಥ್
- ಸೂರಿ ಪಾತ್ರದಲ್ಲಿ ಚಿಕ್ಕಣ್ಣ
- ಮಂಡ್ಯ ರಮೇಶ್
- ಶೋಬರಾಜ್
- ಪ್ರಮೋದ್ ಶೆಟ್ಟಿ* ಯಶ್ ಶೆಟ್ಟಿ
- ಮನೋಜ್ ಪಾತ್ರದಲ್ಲಿ ನಿರಂತರ್ ಎ
- ಪ್ರಕಾಶ್ ತೂಮಿನಾಡ್
- ಲಾಸ್ಯ ನಾಗರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ಚಿತ್ರಸಂಗೀತ
[ಬದಲಾಯಿಸಿ]ಸಂ. | ಹಾಡು | ಹಾಡುಗಾರರು | ಸಮಯ |
---|---|---|---|
1. | "ನೈಟಿ ಮಾತ್ರ ಹಾಕ್ಕೋಬೇಡ" | ನವೀನ್ ಸಜ್ಜು, ಶಶಾಂಕ್ ಶೇಷಗಿರಿ | |
2. | "ಮನಮೋಹನ" | ಅನ್ವೇಷಾ, ವಿಹಾನ್ ಆರ್ಯ |
ಚಿತ್ರವಿಮರ್ಶೆ
[ಬದಲಾಯಿಸಿ]ಟೈಮ್ಸ್ ಆಫ್ ಇಂಡಿಯಾ ಗಾಗಿ ಕೃಷ್ಣ ಟಾಕೀಸ್ ಅನ್ನು ವಿಮರ್ಶಿಸಿದ ಸುನಯನಾ ಸುರೇಶ್ ಐದರಲ್ಲಿ ಮೂರು ನಕ್ಷತ್ರಗಳನ್ನು ನೀಡಿದರು. ನೋಡಲು ಯೋಗ್ಯವಾದರೂ ಕೆಲವು ಎದ್ದು ಕಾಣುವ ಕೊರತೆಗಳನ್ನು ಕಡೆಗಣಿಸಬೇಕಾಗುತ್ತದೆ. [೧]
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ, ಎ.ಶಾರದಾ ಅವರು ಅಜಯ್ ರಾವ್ ಅವರ ಅಭಿನಯದ ಪ್ರಶಂಸೆಯೊಂದಿಗೆ ಐದರಲ್ಲಿ ಮೂರು ನಕ್ಷತ್ರಗಳನ್ನು ನೀಡಿದರು, ನಿರ್ದೇಶಕರ ಬಗ್ಗೆ ಬರೆಯುತ್ತಾ ಅವರು ಕೃಷ್ಣ ಟಾಕೀಸ್ ಸಾಕಷ್ಟು ಭಯಾನಕ ಡೋಸ್ ಹೊಂದಿರುವ ಆಸಕ್ತಿದಾಯಕ ಸಸ್ಪೆನ್ಸ್ ಥ್ರಿಲ್ಲರ್ ಎಂದು ಹೇಳುತ್ತಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ನಿರ್ದೇಶಕ ವಿಜಯ್ ಆನಂದ್, ಆಸಕ್ತಿದಾಯಕ ಚಿತ್ರವನ್ನು ಉತ್ತಮವಾಗಿ ನೀಡಿದ್ದಾರೆ. [೨] [೩] [೪] [೫] [೬]
ಉಲ್ಲೇಖಗಳು
[ಬದಲಾಯಿಸಿ]- ↑ "Krishna Talkies Movie Review : A thriller with a horror twist". The Times of India. Retrieved 16 April 2021.
- ↑ "Krishna Talkies: Ajay Rao's performances elevates this interesting thriller". The New Indian Express. Retrieved 17 April 2021.
- ↑ "'Krishna Talkies' movie review: Protagonist carries movie on his shoulder". newindianexpress. Retrieved 17 April 2021.
- ↑ "Krishna Talkies: ದಕ್ಷಿಣ ಭಾರತದಲ್ಲಿಯೇ ಇಂಥ ಸಿನಿಮಾ ಬಂದಿಲ್ಲ- ನಟ ಅಜಯ್ ರಾವ್!". vijaykarnataka com. Retrieved 16 April 2021.
- ↑ "Ajay Rao's 'Krishna Talkies' to release on April 16". indiatoday. Retrieved 31 March 2021.
- ↑ "This Week's Releases: 'Krishna Talkies' and 'Rewind'". TheTimesofIndia. 16 April 2021.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕೃಷ್ಣ ಟಾಕೀಸ್ at IMDb